ಮಾಹಿತಿ ಇರುವಲ್ಲಿ ಹೋಗಲು

ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ಜನರು ಲೈಂಗಿಕ ಅನೈತಿಕತೆ ಅಥವಾ ‘ಹಾದರದಿಂದ ದೂರವಿರಬೇಕು’ ಅನ್ನೋದು ದೇವರ ಇಷ್ಟ. (1 ಥೆಸಲೊನೀಕ 4:3) ಬೈಬಲಲ್ಲಿ ಹೇಳಿರೋ ಪ್ರಕಾರ “ಲೈಂಗಿಕ ಅನೈತಿಕತೆ”ಯಲ್ಲಿ ವ್ಯಭಿಚಾರ, ಸಲಿಂಗಕಾಮ, ಮದ್ವೆಯಾಗದ ಗಂಡು ಹೆಣ್ಣಿನ ನಡುವೆ ನಡೆಯುವ ಲೈಂಗಿಕ ವಿಷಯಗಳು ಸೇರಿದೆ.

 ಒಂದು ಗಂಡು ಹೆಣ್ಣು ಒಟ್ಟಿಗೆ ಜೀವನ ಮಾಡಬೇಕಂದ್ರೆ ಅವ್ರು ಮದ್ವೆ ಆಗಬೇಕು ಅಂತ ದೇವರು ಯಾಕೆ ಇಷ್ಟಪಡ್ತಾರೆ?

  •   ಮದ್ವೆ ಏರ್ಪಾಡು ಮಾಡಿರೋದೇ ದೇವರು. ಮದ್ವೆ ಮಾಡುವ ಮೂಲಕ ಮೊದಲ ಗಂಡು ಹೆಣ್ಣನ್ನ ದೇವರು ಒಂದು ಮಾಡಿದ್ರು. (ಆದಿಕಾಂಡ 2:22-24) ಮದ್ವೆ ಮಾಡಿಕೊಳ್ಳದೆ ಗಂಡು ಹೆಣ್ಣು ಒಟ್ಟಿಗೆ ಇರೋದು ದೇವರಿಗೆ ಇಷ್ಟ ಇಲ್ಲ.

  •   ನಮಗೆ ಏನು ಒಳ್ಳೇದು ಅಂತ ದೇವರಿಗೆ ಗೊತ್ತು. ಗಂಡು ಹೆಣ್ಣಿನ ನಡುವೆ ಶಾಶ್ವತ ಬಂಧ ಇರಬೇಕು ಅಂತ ದೇವರು ಈ ಮದ್ವೆ ಏರ್ಪಾಡನ್ನ ಮಾಡಿದನು. ಇದ್ರಿಂದ ಕುಟುಂಬದಲ್ಲಿ ಎಲ್ರಿಗೂ ಪ್ರಯೋಜನ ಮತ್ತು ರಕ್ಷಣೆ ಸಿಗುತ್ತೆ. ಉದಾಹರಣೆಗೆ, ಒಂದು ಹೊಸ ಫರ್ನಿಚರನ್ನ ಜೋಡಿಸಬೇಕಾದ್ರೆ ಅದನ್ನ ಮಾಡಿದ ವ್ಯಕ್ತಿ ಕೊಡೋ ಸೂಚನೆಗಳನ್ನು ಪಾಲಿಸಬೇಕು. ಅದೇ ತರ ಕುಟುಂಬ ಚೆನ್ನಾಗಿರಬೇಕು ಅಂದ್ರೆ ಅದನ್ನ ಏರ್ಪಾಡು ಮಾಡಿರೋ ದೇವರ ಮಾತನ್ನ ಕೇಳಬೇಕು. ಯಾರು ದೇವರ ಮಾತನ್ನ ಕೇಳ್ತಾರೋ ಅವ್ರಿಗೆ ಯಾವಾಗ್ಲೂ ಒಳ್ಳೆದಾಗುತ್ತೆ.—ಯೆಶಾಯ 48:17, 18.

    ಹೊಸ ಫರ್ನಿಚರನ್ನ ಜೋಡಿಸಬೇಕಾದ್ರೆ ಅದನ್ನ ಮಾಡಿದ ವ್ಯಕ್ತಿ ಕೊಡೋ ಸೂಚನೆಗಳನ್ನು ಪಾಲಿಸಬೇಕು. ಅದೇ ತರ ಕುಟುಂಬ ಚೆನ್ನಾಗಿರಬೇಕು ಅಂದ್ರೆ ಅದನ್ನ ಏರ್ಪಾಡು ಮಾಡಿರೋ ದೇವರ ಮಾತನ್ನ ಕೇಳಬೇಕು

  •   ಮದ್ವೆ ಹೊರಗಿನ ಲೈಂಗಿಕತೆಯಿಂದ ಕೆಟ್ಟ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ. ಇದ್ರಿಂದ ಅನಾವಶ್ಯಕ ಬಸುರು, ಲೈಂಗಿಕವಾಗಿ ಹರಡೋ ಕಾಯಿಲೆಗಳು ಮತ್ತು ಖಿನ್ನತೆಗೆ ತುತ್ತಾಗಬಹುದು. a

  •   ದೇವರು ಗಂಡು ಮತ್ತು ಹೆಣ್ಣಿಗೆ ಲೈಂಗಿಕತೆ ಮೂಲಕ ಮಕ್ಕಳನ್ನ ಮಾಡ್ಕೊಳ್ಳೋ ಸಾಮರ್ಥ್ಯ ಕೊಟ್ಟನು. ದೇವರು ಜೀವವನ್ನ ಅಮೂಲ್ಯವಾಗಿ ನೋಡ್ತಾನೆ. ಸಂತಾನೋತ್ಪತ್ತಿಯ ಸಾಮರ್ಥ್ಯ ಆತನಿಂದ ಸಿಕ್ಕ ಅದ್ಭುತ ಉಡುಗೊರೆ. ಮದ್ವೆ ಏರ್ಪಾಡನ್ನ ಗೌರವಿಸೋ ಮೂಲಕ ನಾವು ಆ ಉಡುಗೊರೆಗೆ ಗೌರವ ಕೊಡ್ಬೇಕು ಅಂತ ದೇವರು ಇಷ್ಟಪಡ್ತಾನೆ.—ಇಬ್ರಿಯ 13:4.

 ಇಬ್ರಿಗೂ ಸೆಟ್ಟಾಗುತ್ತಾ ಅಂತ ತಿಳ್ಕೊಳಕ್ಕೆ ಮದ್ವೆ ಮುಂಚೆನೇ ಒಟ್ಟಿಗಿರೋದು ಸರಿನಾ?

 ಯಾವುದೇ ಒಪ್ಪಂದ ಇಲ್ಲದೆ ಮದ್ವೆಗೆ ಮುಂಚೆನೆ “ಸ್ವಲ್ಪ ದಿನ” ಒಟ್ಟಿಗೆ ಇರೋದ್ರಿಂದ ಕುಟುಂಬ ಜೀವನ ಚೆನ್ನಾಗಿರಲ್ಲ. ಮದ್ವೆ ಬಾಂಧವ್ಯದಲ್ಲಿ ಗಂಡ ಹೆಂಡ್ತಿ ಒಟ್ಟಿಗೆ ಸಮಸ್ಯೆಗಳನ್ನ ಎದುರಿಸೋದಾದ್ರೆ ಅವ್ರ ಜೀವನ ಚೆನ್ನಾಗಿರುತ್ತೆ. b ಬಾಂಧವ್ಯ ಬಲ ಆಗುತ್ತೆ.—ಮತ್ತಾಯ 19:6.

 ಮದ್ವೆ ಜೀವನ ಚೆನ್ನಾಗಿರಬೇಕು ಅಂದ್ರೆ ಗಂಡ ಹೆಂಡ್ತಿ ಏನು ಮಾಡಬೇಕು?

 ಎಲ್ಲರ ಮನೆ ದೋಸೆ ತೂತು ಅನ್ನೋ ಹಾಗೆ ಗಂಡ ಹೆಂಡ್ತಿ ಮಧ್ಯೆ ಸಮಸ್ಯೆಗಳು ಬಂದೇ ಬರುತ್ತೆ. ಆದ್ರೆ ಸಂಗಾತಿಗಳು ಬೈಬಲ್‌ ಹೇಳೋ ಬುದ್ಧಿ ಮಾತನ್ನ ಕೇಳಿದ್ರೆ ಖುಷಿ ಖುಷಿಯಾಗಿರಬಹುದು. ಅಂತ ಬುದ್ಧಿ ಮಾತುಗಳಲ್ಲಿ ಕೆಲ್ವು ಇಲ್ಲಿವೆ ನೋಡಿ.