ಯುವಜನರ ಪ್ರಶ್ನೆಗಳು
ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 2: ಯಾವಾಗ್ಲೂ ನಿಯತ್ತಾಗಿರಿ
“ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋ ಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ” ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 84:11) ಹಾಗಾದ್ರೆ “ನಿಯತ್ತಿನ ದಾರಿಯಲ್ಲಿ” ನಡಿಯೋದು ಅಂದ್ರೇನು? ನಾವು ಸಮರ್ಪಣೆ ಮಾಡ್ಕೊಳ್ಳುವಾಗ ಯೆಹೋವನಿಗೆ ಕೊಟ್ಟ ಮಾತಿನ ತರನೇ ಜೀವನ ಮಾಡೋದು. (ಪ್ರಸಂಗಿ 5:4, 5) ಹಾಗಿದ್ರೆ ದೀಕ್ಷಾಸ್ನಾನ ಆದ್ಮೇಲೂ ನಿಯತ್ತಿನ ದಾರಿಯಲ್ಲಿ ನಡೆಯೋಕೆ ಏನು ಮಾಡಬೇಕು?
ಈ ಲೇಖನದಲ್ಲಿ
ಕಷ್ಟ ಬಂದಾಗ ಸಹಿಸ್ಕೊಳ್ಳಿ
ಮುಖ್ಯ ವಚನ: “ತುಂಬ ಕಷ್ಟಗಳನ್ನ ಎದುರಿಸಿ ನಾವು ದೇವ್ರ ಆಳ್ವಿಕೆಯಲ್ಲಿ ಸೇರಬೇಕು.”—ಅಪೊಸ್ತಲರ ಕಾರ್ಯ 14:22.
ಇದ್ರ ಅರ್ಥ ಏನು? ಯೇಸುವಿನ ಶಿಷ್ಯರಾಗಿರೋ ಎಲ್ರಿಗೂ ಒಂದಲ್ಲಾ ಒಂದು ಸಮಸ್ಯೆ ಬಂದೇ ಬರುತ್ತೆ. ಆದ್ರೆ ನೀವು ಕ್ರೈಸ್ತರಾಗಿರೋದಕ್ಕೆನೇ ಕೆಲವರು ನಿಮ್ಮನ್ನ ವಿರೋಧಿಸಬಹುದು, ನಿಮಗೆ ಹಿಂಸೆ ಕೊಡಬಹುದು. ಅಷ್ಟೇ ಅಲ್ಲ ಎಲ್ಲಾ ಜನ್ರಿಗೆ ಇರೋ ತರ ಕಾಯಿಲೆ, ಹಣದ ಸಮಸ್ಯೆನೂ ನಿಮಗೆ ಬರಬಹುದು.
ಏನಾಗಬಹುದು? ಕೆಲಮೊಮ್ಮೆ ನಿಮ್ಮ ಜೀವನದ ಸನ್ನಿವೇಶ ಬದಲಾಗಬಹುದು. ಆಗ ನೀವು ಏನು ಆಗಬಾರದು ಅಂತ ಅಂದ್ಕೊಂಡಿರುತ್ತಿರೋ ಅದೇ ಆಗಿ ಬಿಡಬಹುದು. ಈ ತರ ಕ್ರೈಸ್ತರಿಗೆ ಅಷ್ಟೇ ಅಲ್ಲ ಎಲ್ಲಾ ಜನ್ರಿಗೂ ಆಗುತ್ತೆ ಅಂತ ಬೈಬಲ್ ಹೇಳುತ್ತೆ.—ಪ್ರಸಂಗಿ 9:11.
ನೀವೇನು ಮಾಡಬಹುದು? ಕಷ್ಟಗಳು ಬರುತ್ತೆ ಅಂತ ನಿಮಗೆ ಗೊತ್ತಿರೋದ್ರಿಂದ ಅದನ್ನ ಎದುರಿಸೋಕೆ ಈಗಿಂದಾನೇ ತಯಾರಾಗಿ. ಇಂಥ ಕಷ್ಟಗಳು ಬಂದಾಗ ನಿಮ್ಮ ನಂಬಿಕೆ ಗಟ್ಟಿಮಾಡ್ಕೊಳ್ಳೋಕೆ ಮತ್ತು ಯೆಹೋವನ ಜೊತೆ ಸಹಾಯ ಕೇಳೋಕೆ ನಿಮಗೊಂದು ಅವಕಾಶ ಸಿಕ್ಕಿದೆ ಅನ್ನೋದನ್ನ ನೆನಪಲ್ಲಿಡಿ. (ಯಾಕೋಬ 1:2, 3) ಹೀಗೆ ನೀವು ಕಷ್ಟಗಳನ್ನ ಎದುರಿಸಿದ್ರೆ ಅಪೊಸ್ತಲ ಪೌಲನ ತರ “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ” ಅಂತ ಹೇಳೋಕೆ ಆಗುತ್ತೆ.—ಫಿಲಿಪ್ಪಿ 4:13.
ನಿಜ ಅನುಭವ: “ನಾನು ದೀಕ್ಷಾಸ್ನಾನ ತಗೊಂಡು ಸ್ವಲ್ಪ ಸಮಯ ಆದ್ಮೇಲೆ ನನ್ನ ಅಣ್ಣಂದಿರು ಸತ್ಯ ಬಿಟ್ಟು ಹೋದ್ರು. ಆಮೇಲೆ ನನ್ನ ಅಪ್ಪಅಮ್ಮನಿಗೆ ಹುಷಾರಿಲ್ಲದಂಗಾಯ್ತು. ನನ್ನ ಆರೋಗ್ಯನೂ ಹಾಳಾಯ್ತು. ಇದ್ರಿಂದ ನನ್ನ ಜೀವನದಲ್ಲಿ ಯೆಹೋವನ ಆರಾಧನೆ ಮಾಡೋದೇ ಮುಖ್ಯ ಅಂತ ನಾನು ಕೊಟ್ಟ ಮಾತನ್ನ ಮರೆತುಬಿಡಬಹುದಿತ್ತು. ಆದ್ರೂ ಈ ಎಲ್ಲ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಸಮರ್ಪಣೆಯಲ್ಲಿ ಕೊಟ್ಟ ಮಾತು ನನಗೆ ಸಹಾಯ ಮಾಡ್ತು.”—ಕೆರೆನ್.
ಟಿಪ್: ಯೋಸೇಫನ ಬಗ್ಗೆ ತಿಳ್ಕೊಳ್ಳಿ. ಆದಿಕಾಂಡ 37ನೇ ಅಧ್ಯಾಯದಲ್ಲಿ ಮತ್ತು 39ರಿಂದ 41ನೇ ಅಧ್ಯಾಯದಲ್ಲಿ ಅವನ ಜೀವನದಲ್ಲಿ ಏನೆಲ್ಲಾ ಆಯ್ತು ಅಂತ ಇದೆ. ಅದನ್ನ ನೀವು ಓದಬಹುದು. ಆಮೇಲೆ ಅವನು ನೆನಸದಿರೋ ಯಾವೆಲ್ಲ ಕಷ್ಟಗಳು ಅವನಿಗೆ ಬಂತು? ಅವನು ಅದನ್ನೆಲ್ಲ ಹೇಗೆ ನಿಭಾಯಿಸಿದ? ಯೆಹೋವ ಅವನಿಗೆ ಹೇಗೆ ಸಹಾಯ ಮಾಡಿದನು? ಅಂತೆಲ್ಲ ಯೋಚಿಸಿ.
ಸಹಾಯ ಬೇಕಾ?
ಓದಿ:
“ನನ್ನ ಹೆತ್ತವರೊಬ್ಬರ ಸಾವಿನ ನೋವನ್ನು ಹೇಗೆ ಸಹಿಸಲಿ?”
ಡೌನ್ಲೋಡ್ ಮಾಡಿ:
“ವೆನ್ ಎ ಪೇರೆಂಟ್ ಈಸ್ ಸಿಕ್” (ಇಂಗ್ಲಿಷ್)
ತಪ್ಪು ಮಾಡೋ ಆಸೆ ಬಂದಾಗ ಮಣಿಯಬೇಡಿ
ಮುಖ್ಯ ವಚನ: “ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ.”—ಯಾಕೋಬ 1:14.
ಇದ್ರ ಅರ್ಥ ಏನು? ಕೆಲವೊಮ್ಮೆ ನಮ್ಮೆಲ್ರಿಗೂ ತಪ್ಪಾದ ಆಸೆ ಬರುತ್ತೆ. ಆದ್ರೆ ನಾವು ಅದನ್ನ ಹತೋಟಿಯಲ್ಲಿ ಇಡೋಕೆ ಪ್ರಯತ್ನ ಮಾಡಬೇಕು. ಇಲ್ಲಾಂದ್ರೆ ತಪ್ಪು ಮಾಡಿಬಿಡಬಹುದು.
ಏನಾಗಬಹುದು? ದೀಕ್ಷಾಸ್ನಾನ ಆದ್ಮೇಲೂ ನಿಮಗೆ ‘ತಪ್ಪಾದ ಆಸೆಗಳು’ ಬರುತ್ತೆ. (2 ಪೇತ್ರ 2:18) ಉದಾಹರಣೆಗೆ ಮದುವೆಗೆ ಮುಂಚೆ ಸೆಕ್ಸ್ ಮಾಡಬೇಕು ಅಂತ ಅನಿಸಬಹುದು.
ನೀವೇನು ಮಾಡಬಹುದು? ಕೆಟ್ಟ ಆಸೆಗಳು ಬರೋ ಮುಂಚೆ, ಮಣಿಯದೆ ಇರೋಕೆ ತೀರ್ಮಾನ ಮಾಡಿದ್ರೆ ತಪ್ಪು ಮಾಡೋಕೆ ಹೋಗಲ್ಲ. “ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ” ಅಂತ ಯೇಸು ಹೇಳಿದನು. (ಮತ್ತಾಯ 6:24) ಹಾಗಾಗಿ ನಿಮ್ಮ ಯಜಮಾನ ಯಾರು ಅಂತ ನೀವೇ ತೀರ್ಮಾನ ಮಾಡಿ. ಆದ್ರೆ ಅದು ಯೆಹೋವ ಆಗಿದ್ರೆ ತುಂಬಾ ಒಳ್ಳೇದು. ಆದ್ರೆ ಒಂದು ವಿಷ್ಯ ನೆನಪಿಡಿ, ಎಷ್ಟೇ ಕೆಟ್ಟ ಆಸೆ ಬಂದ್ರೂ ಅದಕ್ಕೆ ಮಣಿಯದೆ ಒಳ್ಳೇ ತೀರ್ಮಾನ ಮಾಡೋಕೆ ನಿಮಗೆ ಖಂಡಿತ ಆಗುತ್ತೆ.—ಗಲಾತ್ಯ 5:16.
ಟಿಪ್: ನಿಮ್ಮಲ್ಲಿ ಯಾವೆಲ್ಲ ಒಳ್ಳೇ ಗುಣಗಳಿವೆ, ನಿಮ್ಮಲ್ಲಿ ಯಾವೆಲ್ಲ ಬಲಹೀನತೆಗಳಿವೆ ಅಂತ ತಿಳ್ಕೊಳ್ಳಿ. ಒಳ್ಳೇ ಗುಣ ಬೆಳೆಸ್ಕೊಳ್ಳೋಕೆ ಸಹಾಯ ಮಾಡೋರನ್ನ ಫ್ರೆಂಡ್ಸ್ ಮಾಡ್ಕೊಳ್ಳಿ. ಯಾವ ಜನ್ರ ಜೊತೆ ಇದ್ದಾಗ, ಯಾವ ಪರಿಸ್ಥಿತಿಯಲ್ಲಿ ಇದ್ದಾಗ ತಪ್ಪು ಮಾಡಬೇಕು ಅಂತ ಅನಿಸುತ್ತೋ ಅಂಥ ಸನ್ನಿವೇಶಗಳಿಂದ ದೂರ ಇರಿ.—ಕೀರ್ತನೆ 26:4, 5.
ಸಹಾಯ ಬೇಕಾ?
ಉತ್ಸಾಹ ಕಳ್ಕೊಬೇಡಿ
ಮುಖ್ಯ ವಚನ: ‘ನೀವು ಮಾಡ್ತಾ ಬಂದ ಹಾಗೆ ಕೊನೆ ತನಕ ಕಷ್ಟಪಟ್ಟು ಸೇವೆ ಮಾಡಿ. ಆಗ ನೀವು ಸೋಮಾರಿ ಆಗಲ್ಲ.’—ಇಬ್ರಿಯ 6:11, 12.
ಇದ್ರ ಅರ್ಥ ಏನು? ಯಾರು ತಮ್ಮ ಕೆಲಸನ ಗಮನ ಕೊಟ್ಟು ಮಾಡಲ್ವೋ ಅವರು ಹೋಗ್ತಾಹೋಗ್ತಾ ಸೋಮಾರಿಗಳಾಗಬಹುದು.
ಏನಾಗಬಹುದು? ದೀಕ್ಷಾಸ್ನಾನ ಆದ್ಮೇಲೆ ನಿಮಗೆ ತುಂಬ ಹುರುಪಿರುತ್ತೆ, ಉತ್ಸಾಹ ಇರುತ್ತೆ. ಯೆಹೋವನ ಮೇಲೆ ಪ್ರೀತಿನೂ ತುಂಬಿ ತುಳುಕ್ತಾ ಇರುತ್ತೆ. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಎಲ್ಲಾ ವಿಷ್ಯಕ್ಕೂ ಯೆಹೋವನ ಮಾತು ಕೇಳೋಕೆ ಕಷ್ಟ ಆಗಬಹುದು. ಇದ್ರಿಂದ ನಿಮಗೆ ಬೇಜಾರಾಗಬಹುದು ಮತ್ತು ಉತ್ಸಾಹನೂ ಕಳ್ಕೊಬಹುದು.—ಗಲಾತ್ಯ 5:7.
ನೀವೇನು ಮಾಡಬಹುದು? ಸರಿಯಾಗಿರೋದನ್ನ ಮಾಡೋಕೆ ನಿಮಗೆ ಕಷ್ಟ ಆಗಬಹುದು. ಆಗ್ಲೂ ಅದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇರಿ. (1 ಕೊರಿಂಥ 9:27) ಅಷ್ಟೇ ಅಲ್ಲ ಯೆಹೋವನ ಬಗ್ಗೆ ತಿಳ್ಕೊಳ್ಳಿ ಮತ್ತು ಆತನಿಗೆ ಪ್ರಾರ್ಥನೆ ಮಾಡಿ. ಆಗ ನೀವು ಆತನಿಗೆ ಇನ್ನೂ ಹತ್ರ ಆಗ್ತೀರ. ಅದ್ರ ಜೊತೆಗೆ ಯೆಹೋವನನ್ನ ಪ್ರೀತಿಸೋರ ಜೊತೆ ಸ್ನೇಹ ಬೆಳೆಸ್ಕೊಳ್ಳಿ.
ಟಿಪ್: ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ, ನಿಮಗೆ ಸಹಾಯ ಮಾಡೋಕೆ ರೆಡಿ ಇದ್ದಾನೆ ಅನ್ನೋದನ್ನ ಯಾವಾಗ್ಲೂ ನೆನಪಿಡಿ. ನಿಮಗೆ ಉತ್ಸಾಹ ತೋರಿಸೋಕೆ ಆಗಿಲ್ಲ ಅಂದ್ರೆ ನಿಮ್ಮ ಮೇಲೆ ನೀವು ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ “ಬಳಲಿದವನಿಗೆ [ದೇವರು] ಶಕ್ತಿ ಕೊಡ್ತಾನೆ, ನಿರ್ಬಲನಿಗೆ ಆತನು ತುಂಬ ಬಲ ಕೊಡ್ತಾನೆ” ಅಂತ ಬೈಬಲ್ ಹೇಳುತ್ತೆ. (ಯೆಶಾಯ 40:29) ಹಾಗಾಗಿ ನೀವು ಮತ್ತೆ ಉತ್ಸಾಹ ಪಡ್ಕೊಳ್ಳೋಕೆ ಪ್ರಯತ್ನ ಹಾಕಿದ್ರೆ ಯೆಹೋವ ನಿಮ್ಮನ್ನ ಖಂಡಿತ ಆಶೀರ್ವದಿಸ್ತಾನೆ.
ಸಹಾಯ ಬೇಕಾ?
ನಮಗಿರುವ ಪಾಠ: ನೀವು ಯೆಹೋವನಿಗೆ ನಿಯತ್ತಾಗಿ ಇದ್ರೆ ಆತನ ಮನಸ್ಸನ್ನ ಖುಷಿಪಡಿಸ್ತೀರ! (ಜ್ಞಾನೋಕ್ತಿ 27:11) ನೀವು ಆತನ ಸೇವಕರಾಗೋ ತೀರ್ಮಾನ ಮಾಡಿದ್ರೆ ಆತನಿಗೆ ತುಂಬ ಸಂತೋಷ ಆಗುತ್ತೆ. ಅಷ್ಟೇ ಅಲ್ಲ ಸೈತಾನ ನಿಮಗೆ ಎಷ್ಟೇ ಸಮಸ್ಯೆಗಳನ್ನ ತಂದ್ರೂ ಅದನ್ನ ಎದುರಿಸೋಕೆ ಯೆಹೋವ ಸಹಾಯ ಮಾಡ್ತಾನೆ.