ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಕೋಪನ ಹೇಗೆ ಕಂಟ್ರೋಲ್‌ ಮಾಡ್ಲಿ?

ನಾನು ಕೋಪನ ಹೇಗೆ ಕಂಟ್ರೋಲ್‌ ಮಾಡ್ಲಿ?

 ಕ್ವಿಜ್‌

  •  ನಿಮಗೆ ಯಾವಾಗೆಲ್ಲ ಕೋಪ ಬರುತ್ತೆ?

    •  ಬರೋದೇ ಇಲ್ಲ

    •  ಯಾವಾಗಾದ್ರೂ ಅಪರೂಪಕ್ಕೆ

    •  ಪ್ರತಿ ದಿನ

  •  ನಿಮಗೆ ಎಷ್ಟು ಕೋಪ ಬರುತ್ತೆ?

    •  ಸ್ವಲ್ಪ

    •  ಜಾಸ್ತಿ

    •  ಕೆಂಡ ಕಾರುವಷ್ಟು

  •  ನೀವು ಯಾರ್‌ ಜೊತೆ ಜಾಸ್ತಿ ಕೋಪ ಮಾಡ್ಕೊತೀರಾ?

    •  ಅಪ್ಪ ಅಮ್ಮ

    •  ಒಡಹುಟ್ಟಿದವರು

    •  ಫ್ರೆಂಡ್ಸ್‌

 ನೀವು ಕೋಪನ ಕಂಟ್ರೋಲ್‌ ಮಾಡ್ಕೊಬೇಕು ಅಂತಿದ್ರೆ ಈ ಲೇಖನ ಖಂಡಿತ ನಿಮಗೆ ಸಹಾಯ ಮಾಡುತ್ತೆ. ಅದಕ್ಕೂ ಮೊದಲು, ಕೋಪ ಬರೋ ಸನ್ನಿವೇಶ ಇದ್ರೂ ಕೋಪ ಮಾಡ್ಕೊಳ್ಳದೆ ಸಮಾಧಾನವಾಗಿ ಇರೋದು ಯಾಕೆ ಮುಖ್ಯ ಅಂತ ನೋಡೋಣ.

 ಕೋಪನ ಯಾಕೆ ಕಂಟ್ರೋಲ್‌ ಮಾಡ್ಕೊಬೇಕು?

 ಒಳ್ಳೇ ಆರೋಗ್ಯಕ್ಕೆ. “ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ” ಅಂತ ಜ್ಞಾನೋಕ್ತಿ 14:30 ಹೇಳುತ್ತೆ. “ಒಂದುವೇಳೆ ನಾವು ಕೋಪ ಮಾಡಿಕೊಂಡ್ರೆ ಅದ್ರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತೆ” ಅಂತ ಜರ್ನಲ್‌ ಆಫ್‌ ಮೆಡಿಸಿನ್‌ ಆ್ಯಂಡ್‌ ಲೈಫ್‌ ಅನ್ನೋ ಪುಸ್ತಕ ಹೇಳುತ್ತೆ.

 ಫ್ರೆಂಡ್‌ಶಿಪ್‌ಗೆ. “ಕೋಪಿಷ್ಠನ ಸಹವಾಸ ಮಾಡಬೇಡ, ಮಾತುಮಾತಿಗೂ ಸಿಟ್ಟುಮಾಡ್ಕೊಳ್ಳೋ ವ್ಯಕ್ತಿ ಜೊತೆ ಸ್ನೇಹ ಬೆಳೆಸಬೇಡ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 22:24) ನೀವು ಯಾವಾಗ್ಲೂ ಕೋಪಮಾಡ್ಕೊಳ್ತಿದ್ರೆ ಜನ್ರು ನಿಮ್ಮ ಹತ್ರ ಬರೋಕೆ ಇಷ್ಟಪಡಲ್ಲ. “ನೀವು ಕೋಪನ ಕಂಟ್ರೋಲ್‌ ಮಾಡ್ಲಿಲ್ಲ ಅಂದ್ರೆ ನಿಮಗಿರೋ ಒಳ್ಳೇ ಸ್ನೇಹಿತರನ್ನ ಕಳ್ಕೊಂಡು ಬಿಡ್ತೀರ” ಅಂತ ಜಾಸ್ಮಿನ್‌ ಅನ್ನೋ ಯುವತಿ ಹೇಳ್ತಾರೆ.

 ನಿಮ್ಮ ಒಳ್ಳೇ ಹೆಸರಿಗೆ. “ನಿಮಗೆ ಯಾವಾಗ್ಲೂ ಮೂಗಿನ ತುದಿಲೇ ಕೋಪ ಇದ್ರೆ ಬೇರೆಯವ್ರು ಅದನ್ನ ಗಮನಿಸ್ತಾರೆ. ಇದ್ರಿಂದ ನಿಮ್ಮ ಹೆಸರು ಹಾಳಾಗುತ್ತೆ” ಅಂತ 17 ವರ್ಷದ ಈತನ್‌ ಹೇಳ್ತಾರೆ. ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ, ‘ಜನ ನನ್ನ ಬಗ್ಗೆ ಏನ್‌ ಅಂದ್ಕೊಬೇಕು ಅಂತ ನಾನು ಇಷ್ಟಪಡ್ತೀನಿ? ಯಾವಾಗ್ಲೂ ಶಾಂತವಾಗಿ, ಸಮಾಧಾನವಾಗಿರೋ ವ್ಯಕ್ತಿ ಅಂತನಾ ಅಥವಾ ಕೋಪದಿಂದ ಸಿಡುಕೋ ವ್ಯಕ್ತಿ ಅಂತನಾ? ಬೈಬಲ್‌ ಹೇಳೋದು, “ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ, ಮುಂಗೋಪಿ ತನ್ನ ಮೂರ್ಖತನವನ್ನ ತೋರಿಸಿ ಬಿಡ್ತಾನೆ.”—ಜ್ಞಾನೋಕ್ತಿ 14:29.

ಕೋಪದಿಂದ ಕೆಂಡಾಮಂಡಲ ಆಗೋರ ಜೊತೆ ಇರೋಕೆ ಯಾರೂ ಇಷ್ಟಪಡಲ್ಲ

 ನೀವೇನು ಮಾಡಬಹುದು?

 ಕೆಳಗಿರೋ ವಚನ ಮತ್ತು ಹೇಳಿಕೆಗಳನ್ನ ಓದಿ. ನಂತರ ಇರೋ ಪ್ರಶ್ನೆಗಳನ್ನ ಕೇಳ್ಕೊಳ್ಳಿ.

  •   ಜ್ಞಾನೋಕ್ತಿ 29:22: “ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ, ಮಾತುಮಾತಿಗೂ ಸಿಟ್ಟು ಮಾಡ್ಕೊಳ್ಳೋನು ತುಂಬ ತಪ್ಪುಗಳನ್ನ ಮಾಡ್ತಾನೆ.”

     “ನಾನು ಹದಿವಯಸ್ಸಲ್ಲಿದ್ದಾಗ ಕೋಪ ಕಂಟ್ರೋಲ್‌ ಮಾಡ್ಕೊಳ್ಳೋಕೆ ತುಂಬಾ ಕಷ್ಟ ಪಡ್ತಿದ್ದೆ. ನಮ್ಮ ಅಪ್ಪನ ಕಡೆಯವರಿಗೂ ಇದೇ ಸಮಸ್ಯೆ ಇತ್ತು. ನಮ್ಮ ವಂಶದಲ್ಲೇ ಈ ತೊಂದ್ರೆ ಇದೆ. ಅದಕ್ಕೆ ಕೋಪನ ಕಂಟ್ರೋಲ್‌ ಮಾಡೋದು ತುಂಬಾ ಕಷ್ಟ.”—ಕೆರಿ.

      ನನಗೆ ತಟ್ಟಂತ ಕೋಪ ಬರುತ್ತಾ? ನನ್ನಲ್ಲಿರೋ ಒಳ್ಳೇ ಗುಣಗಳನ್ನ ನಾನೇ ಬೆಳೆಸಿಕೊಂಡಿದ್ದು ಅಂತ ಹೇಳಿ ಕೋಪ ಮಾತ್ರ ನಮ್ಮ ವಂಶದಿಂದ ಬಂದಿದ್ದು ಅಂತ ಹೇಳ್ತಿನಾ?

  •    ಜ್ಞಾನೋಕ್ತಿ 15:1: “ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ, ಒರಟಾದ ಮಾತು ಕೋಪ ಬರಿಸುತ್ತೆ.”

     “ಭಾವನೆಗಳನ್ನ ಹತೋಟಿಯಲ್ಲಿ ಇಟ್ಕೊಳ್ಳೋದನ್ನ ಕಲಿಯೋದು ತುಂಬಾ ಮುಖ್ಯ. ನೀವು ಯಾವಾಗ್ಲೂ ಒಳ್ಳೇದನ್ನ ಯೋಚಿಸ್ತಾ ಸಮಾಧಾನವಾಗಿದ್ದರೆ ಕೋಪನ ಕಂಟ್ರೋಲ್‌ ಮಾಡೋದು ಒಂದು ಸಮಸ್ಯೆನೇ ಅಲ್ಲ.”—ಡೆರಿಲ್‌.

     ಯಾರಾದ್ರೂ ಕೋಪ ಬರಿಸಿದಾಗ ತಕ್ಷಣ ನಾನು ಹೇಗೆ ನಡ್ಕೊಳ್ತೀನಿ ಅನ್ನೋದು ಯಾಕೆ ತುಂಬಾ ಮುಖ್ಯ?

  •   ಜ್ಞಾನೋಕ್ತಿ 26:20: “ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ.”

     “ನಾನು ಸಮಾಧಾನವಾಗಿ ಇದ್ದಿದ್ರಿಂದ ಬೇರೆಯವ್ರ ಕೋಪ ತಣ್ಣಗಾಗಿದೆ. ಆಮೇಲೆ ಕೂತು ಒಬ್ರಿಗೊಬ್ರು ಬೇಜಾರಾಗದೇ ಇರೋ ತರ ಮಾತಾಡೋಕಾಗಿದೆ.”—ಜಾಸ್ಮಿನ್‌.

     ನನ್ನ ಮಾತು ಮತ್ತು ನಡತೆ ಉರಿಯೋ ಬೆಂಕಿಗೆ ತುಪ್ಪ ಸುರಿದ ತರ ಇರುತ್ತಾ?

  •   ಜ್ಞಾನೋಕ್ತಿ 22:3: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.”

     “ಕೆಲವೊಂದು ಸಲ ನಾನು ಆ ಜಾಗ ಬಿಟ್ಟು ಹೋಗಿಬಿಡ್ತೀನಿ. ಆಮೇಲೆ ಸ್ವಲ್ಪ ಟೈಮ್‌ ತಗೊಂಡು ಯಾಕೆ ಹೀಗೆ ಆಯ್ತು ಅಂತ ಯೋಚಿಸ್ತೀನಿ. ಇದ್ರಿಂದ ನಾನು ಸಮಾಧಾನವಾಗಿ ಇದ್ದಾಗ ಆ ಸಮಸ್ಯೆನ ಸರಿ ಮಾಡ್ಕೊಳೋಕೆ ಆಗಿದೆ.”—ಗ್ಯಾರಿ.

     ಇನ್ನೇನು ಜಗಳ ಶುರು ಆಗುತ್ತೆ ಅಂತ ಅನಿಸಿದಾಗ ಯಾರಿಗೂ ಬೇಜಾರಾಗದೇ ಇರೋ ತರ ಯಾವಾಗ ಜಾಗ ಖಾಲಿ ಮಾಡಿದ್ರೆ ಒಳ್ಳೇದು?

  •   ಯಾಕೋಬ 3:2: “ನಾವೆಲ್ಲ ತುಂಬ ಸಲ ತಪ್ಪು ಮಾಡ್ತೀವಿ.”

     “ನಾವು ಮಾಡಿದ ತಪ್ಪಿಗೆ ಪಶ್ಚಾತಾಪ ಪಡಬೇಕು ನಿಜ, ಆದ್ರೆ ಜೊತೆಗೆ ಪಾಠನೂ ಕಲಿಬೇಕು. ಮುಂದೆ ಇದೇ ತರ ಸನ್ನಿವೇಶ ಬಂದ್ರೆ ಮತ್ತೆ ಅದೇ ತಪ್ಪನ್ನ ಮಾಡದೇ ಇರೋ ತರ ನೋಡ್ಕೊಬೇಕು.”—ಕೆರಿ.

 ಕಿವಿ ಮಾತು: ಗುರಿ ಇಡಿ. ಇಷ್ಟು ಟೈಮ್‌ ವರೆಗೂ ಉದಾಹರಣೆಗೆ, ಒಂದು ತಿಂಗಳು ಕೋಪ ಮಾಡ್ಕೊಳ್ಳಲ್ಲ ಅಂತ ನಿರ್ಧಾರ ಮಾಡಿ. ಒಂದು ಡೈರಿಯಲ್ಲಿ ಅದನ್ನ ಎಷ್ಟು ಪಾಲಿಸ್ತಿದ್ದಿರಾ ಅಂತ ಬರೆದಿಟ್ಟು ನೋಡಿ.