ನನಗೆಷ್ಟು ಸಹಿಸಿಕೊಳ್ಳೋ ಶಕ್ತಿ ಇದೆ?
ಯುವ ಜನರ ಪ್ರಶ್ನೆಗಳು
ಯಾವುದೇ ಸನ್ನಿವೇಶ ಬಂದರೂ ಸಹಿಸಿಕೊಳ್ಳೋ ಶಕ್ತಿ ನಿಮಗೆ ಇದೆಯಾ? ಈ ಮುಂದಿನ ಸನ್ನಿವೇಶಗಳಲ್ಲಿ ಯಾವುದಾದರೂ ನಿಮಗೆ ಬಂದಿದೆಯಾ?
ನಿಮಗೆ ಇಷ್ಟ ಆದವರು ತೀರಿಕೊಂಡಿದ್ದಾರಾ?
ತುಂಬ ಸಮಯದಿಂದ ಹುಷಾರಿಲ್ಲದೆ ಇದ್ದೀರಾ?
ನೈಸರ್ಗಿಕ ವಿಪತ್ತು ಸಂಭವಿಸಿದೆಯಾ?
ಸಂಶೋಧಕರ ಪ್ರಕಾರ ಚಿಕ್ಕಚಿಕ್ಕ ಸಮಸ್ಯೆಗಳನ್ನ ಎದುರಿಸಬೇಕಾದರೂ ಸಹಿಸಿಕೊಳ್ಳೋ ಶಕ್ತಿ ಇರಬೇಕು. ಪ್ರತಿದಿನ ಬರೋ ಚಿಕ್ಕ ಸಮಸ್ಯೆ ಕೂಡ ನಿಮ್ಮ ಆರೋಗ್ಯವನ್ನ ಹಾಳು ಮಾಡಬಹುದು. ನಿಮ್ಮ ಸಮಸ್ಯೆ ತುಂಬ ಚಿಕ್ಕದಾಗಿರಲ್ಲಿ ಅಥವಾ ತುಂಬ ದೊಡ್ಡದಾಗಿರಲ್ಲಿ ನೀವಂತೂ ಸಹಿಸಿಕೊಳ್ಳೋ ಶಕ್ತಿಯನ್ನ ಬೆಳೆಸಿಕೊಳ್ಳಲೇಬೇಕು.
ಸಹಿಸಿಕೊಳ್ಳೋ ಶಕ್ತಿ ಅಂದರೇನು?
ಜೀವನದಲ್ಲಿ ಬರೋ ಬದಲಾವಣೆಗಳನ್ನ, ಸಮಸ್ಯೆಗಳನ್ನ ಎದುರಿಸೋ ಸಾಮರ್ಥ್ಯವೇ ಸಹಿಸಿಕೊಳ್ಳೋ ಶಕ್ತಿ ಆಗಿದೆ. ಬೇರೆಯವರಿಗೆ ಬರೋ ಹಾಗೆ ಇಂಥ ಸಾಮರ್ಥ್ಯ ಇರುವವರಿಗೂ ಸಮಸ್ಯೆಗಳು ಬರುತ್ತೆ. ಆದರೆ ಇದನ್ನ ಧೈರ್ಯವಾಗಿ ಎದುರಿಸಿದರೆ ಮುಂದೆ ಬರೋ ಸಮಸ್ಯೆಗಳನ್ನ, ದುಷ್ಪರಿಣಾಮಗಳನ್ನ ಬಲವಾಗಿ ಎದುರಿಸೋಕೆ ಆಗುತ್ತೆ.
ಸಹಿಸಿಕೊಳ್ಳೋ ಶಕ್ತಿ ಯಾಕೆ ಇರಬೇಕು?
ಯಾಕೆಂದ್ರೆ ಸಮಸ್ಯೆಗಳು ಎಲ್ಲರಿಗೂ ಬರುತ್ತೆ. ಬೈಬಲ್ ಹೀಗೆ ಹೇಳುತ್ತೆ: “ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, . . . ಜ್ಞಾನಿಗಳಿಗೆ ಯಶಸ್ಸು ಯಾವಾಗ್ಲೂ ಸಿಗಲ್ಲ. ಯಾಕಂದ್ರೆ ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ.” (ಪ್ರಸಂಗಿ 9:11) ಪಾಠ ಏನು? ಒಳ್ಳೆಯವರು ತಪ್ಪು ಮಾಡದಿದ್ದರೂ ಅವ್ರಿಗೆ ಕಷ್ಟ ಬರುತ್ತೆ.
ಸಹಿಸಿಕೊಳ್ಳುವಾಗ ಒಳ್ಳೇ ಆರೋಗ್ಯ ಇರುತ್ತೆ. ಒಬ್ಬ ಹೈಸ್ಕೂಲ್ ಸಲಹೆಗಾರ ಹೀಗೆ ಹೇಳ್ತಾರೆ: “ತುಂಬ ವಿದ್ಯಾರ್ಥಿಗಳು ನನ್ನ ಆಫೀಸಿಗೆ ಬೇಜಾರಿಂದ ಬಂದಿದ್ರು. ಯಾಕಂದ್ರೆ ಅವ್ರಿಗೆ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಿತ್ತು, ಸೋಶಿಯಲ್ ಮೀಡಿಯಾದಲ್ಲಿ ಯಾರೊ ಅವರ ಬಗ್ಗೆ ತಪ್ಪಾಗಿ ಬರೆದಿದ್ದರು. ಇದನ್ನ ಆ ವಿದ್ಯಾರ್ಥಿಗಳಿಗೆ ಸಹಿಸೋಕೆ ಆಗಲಿಲ್ಲ. ಇಂಥ ಸಮಸ್ಯೆ ಚಿಕ್ಕದು. ಆದ್ರೆ ವಿದ್ಯಾರ್ಥಿಗಳಿಗೆ ಅದನ್ನ ಎದುರಿಸೋದು ಹೇಗೆ ಅಂತ ಗೊತ್ತಿಲ್ಲ ಅಂದರೆ ಅವರು ಮಾನಸಿಕವಾಗಿ, ಭಾವನಾತ್ಮಕವಾಗಿ ಕಷ್ಟ ಪಡುತ್ತಾರೆ.” a
ಈಗ ಮತ್ತು ಮುಂದೆ ದೊಡ್ಡವರಾದಾಗ ಸಹಾಯ ಮಾಡುತ್ತೆ. ನಾವು ಅಂದ್ಕೊಂಡಿದು ಆಗಿಲ್ಲ ಅಂದರೆ ನಾವೇನು ಮಾಡಬೇಕು ಅಂತ ಡಾಕ್ಟರ್ ರಿಚರ್ಡ್ ಲರ್ನರ್ ಹೀಗೆ ಬರಿತ್ತಾರೆ: “ನಿಮಗೆ ಜೀವನದಲ್ಲಿ ಮುಂದೆ ಬರಬೇಕಂದರೆ, ಯಶಸ್ಸು ಸಿಗಬೇಕಂದರೆ ಅಡ್ಡಿತಡೆಗಳಿಂದ ಹೊರಬರಬೇಕು. ಹೊಸ-ಹೊಸ ಗುರಿಗಳನ್ನ ಇಡಬೇಕು. ಅಂದ್ಕೊಂಡಿದನ್ನ ಸಾಧಿಸೋಕೆ ಬೇರೆ-ಬೇರೆ ಮಾರ್ಗಗಳನ್ನ ಹುಡುಕಬೇಕು.” b
ಸಹಿಸಿಕೊಳ್ಳೋ ಶಕ್ತಿಯನ್ನ ನೀವು ಹೇಗೆ ಬೆಳೆಸಿಕೊಳ್ಳಬಹುದು?
ನಿಮ್ಮ ಸಮಸ್ಯೆಗಳು ಎಷ್ಟು ದೊಡ್ಡದು ಅಂತ ಅರ್ಥ ಮಾಡಿಕೊಳ್ಳಿ. ದೊಡ್ಡ ಸಮಸ್ಯೆ ಯಾವುದು ಚಿಕ್ಕ ಸಮಸ್ಯೆ ಯಾವುದು ಅಂತ ಗುರುತಿಸೋಕೆ ಕಲಿಯಿರಿ. ಬೈಬಲ್ ಹೀಗೆ ಹೇಳುತ್ತೆ: “ಮೂರ್ಖ ಕಿರಿಕಿರಿ ಆದ್ರೆ ತಕ್ಷಣ ತೋರಿಸಿಬಿಡ್ತಾನೆ, ಜಾಣ ಅವಮಾನ ಆದ್ರೆ ತಲೆ ಕೆಡಿಸ್ಕೊಳ್ಳಲ್ಲ.” (ಜ್ಞಾನೋಕ್ತಿ 12:16) ಪ್ರತಿಯೊಂದು ಸಮಸ್ಯೆ ಬಗ್ಗೆನೂ ಅತಿಯಾಗಿ ಯೋಚನೆ ಮಾಡಬೇಡಿ.
“ಸ್ಕೂಲಲ್ಲಿ ಮಕ್ಕಳು ಚಿಕ್ಕ ಸಮಸ್ಯೆಯನ್ನ ಸಹ ಏನೋ ದೊಡ್ಡದು ಅನ್ನೋ ತರ ಹೇಳ್ತಿದ್ರು. ನಂತ್ರ ಸೋಶಿಯಲ್ ಮೀಡಿಯಾದಲ್ಲಿರೋ ಅವ್ರ ಫ್ರೆಂಡ್ಸ್ ಸಹ ಆ ಸಮಸ್ಯೆ ಬಗ್ಗೆ ಕಂಪ್ಲೇಂಟ್ ಮಾಡೋ ಹಕ್ಕು ಅವ್ರಿಗಿದೆ ಅಂತ ಹೇಳಿದ್ರು. ಈ ವಿಷ್ಯದಿಂದ ನನ್ನ ಕ್ಲಾಸ್ನಲ್ಲಿ ಇರೋರಿಗೆ ತುಂಬ ಬೇಜಾರಾಯ್ತು. ಇದ್ರಿಂದ ಸಮಸ್ಯೆಗಳು ಬಂದಾಗ ಅದ್ರ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು ಅಂತ ಅವ್ರಿಗೆ ಅರ್ಥಮಾಡಿಕೊಳ್ಳೋಕೆ ಕಷ್ಟ ಆಯ್ತು.”—ಜೋಆ್ಯನ್.
ಬೇರೆಯವರಿಂದ ಕಲಿಯಿರಿ. ಬೈಬಲ್ನಲ್ಲಿರೋ ಒಂದು ವಿವೇಕದ ನುಡಿಮುತ್ತು ಹೀಗೆ ಹೇಳುತ್ತೆ: “ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ, ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.” (ಜ್ಞಾನೋಕ್ತಿ 27:17) ದೊಡ್ಡ-ದೊಡ್ಡ ಸಮಸ್ಯೆಗಳನ್ನ ಎದುರಿಸಿ ಬಂದವರಿಂದ ನಾವು ಒಳ್ಳೇ ಪಾಠಗಳನ್ನು ಕಲಿಬಹುದು.
“ನೀವು ಬೇರೆಯವರ ಹತ್ರ ಮಾತಾಡುವಾಗ ಅವರು ಈಗಾಗಲೇ ತುಂಬ ಸಮಸ್ಯೆಗಳನ್ನ ಎದುರಿಸಿ ಅದ್ರಿಂದ ಹೊರ ಬಂದಿದ್ದಾರೆ ಅಂತ ಗೊತ್ತಾಗುತ್ತೆ. ಸಮಸ್ಯೆ ಬಂದಾಗ ಅವರು ಏನ್ ಮಾಡಿದ್ರು, ಏನ್ ಮಾಡಿಲ್ಲ ಅಂತ ನೀವು ಅವರ ಹತ್ರ ಕೇಳಿ ತಿಳುಕೊಳ್ಳಿ.”—ಜೂಲಿಯ.
ತಾಳಿಕೊಳ್ಳಿ. ಬೈಬಲ್ ಹೀಗೆ ಹೇಳುತ್ತೆ: “ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ.” (ಜ್ಞಾನೋಕ್ತಿ 24:16) ನೀವು ಅಂದುಕೊಂಡಿದ್ದು ಆಗದೆ ಇದ್ದಾಗ ಅದನ್ನ ಜೀರ್ಣ ಮಾಡ್ಕೊಳ್ಳೋದು ಕಷ್ಟಾನೇ. ಹಾಗಾಗಿ ಏನಾದ್ರೂ ಕೆಟ್ಟದು ನಡೆದ್ರೆ ಆಶ್ಚರ್ಯ ಪಡಬೇಡಿ. ಮುಖ್ಯವಾದ ವಿಷ್ಯ ಏನಂದ್ರೆ ನೀವು ‘ಮತ್ತೆ ಏಳೋದೇ’ ಆಗಿದೆ.
“ನಿಮ್ಮ ಮನಸ್ಸಿಗೆ ಆದ ನೋವು ಗುಣ ಆಗಬೇಕಂದ್ರೆ ಮೊದಲು ಅದಕ್ಕಾದ ಗಾಯ ವಾಸಿ ಆಗಬೇಕು. ಇದೇ ಸರಿಯಾದ ವಿಧಾನ, ಅದಕ್ಕೆ ಸಮಯ ಹಿಡಿಯುತ್ತೆ. ನಾನು ಕಲಿತಿರೋ ಒಂದು ವಿಷ್ಯ ಏನಂದ್ರೆ, ಸಮಯ ಹೋಗ್ತಾ-ಹೋಗ್ತಾ ಎಲ್ಲ ಮರೆತು ಮನಸ್ಸು ಹಗುರವಾಗುತ್ತೆ.”—ಆಂಡ್ರೇಯ.
ಕೃತಜ್ಞತೆ ತೋರಿಸೋದನ್ನ ಕಲಿಯಿರಿ. ಬೈಬಲ್ ಹೀಗೆ ಹೇಳುತ್ತೆ: ‘ನೀವು ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ.’ (ಕೊಲೊಸ್ಸೆ 3:15) ನಿಮ್ಮ ಸಮಸ್ಯೆಗಳು ಎಷ್ಟೇ ದೊಡ್ಡದಾಗಿದ್ರು ಕೃತಜ್ಞತೆ ತೋರಿಸೋಕೆ ಖಂಡಿತ ಕಾರಣ ಇದ್ದೆ ಇರುತ್ತೆ. ಹಾಗಾಗಿ ನಿಮ್ಮ ಜೀವನದಲ್ಲಿ ನಿಮಗೆ ಖುಷಿ ಕೊಟ್ಟ ಯಾವುದಾದ್ರೂ ಮೂರು ವಿಷ್ಯಗಳನ್ನ ನೆನಪು ಮಾಡಿಕೊಳ್ಳಿ.
“ನಿಮಗೆ ಕಷ್ಟಗಳು ಬಂದಾಗ ‘ಎಲ್ಲನೂ ನನಗೇ ಯಾಕೆ ಬರುತ್ತೆ?’ ಅಂತ ಅನಿಸೋದು ಸಹಜ. ನೀವು ಅದನ್ನ ಸಹಿಸಿಕೊಳ್ಳಬೇಕಾದ್ರೆ ಮೂರು ಹೊತ್ತು ಸಮಸ್ಯೆ ಬಗ್ಗೆನೇ ಯೋಚಿಸುತ್ತಾ ಕೂರಬಾರದು. ಬದಲಿಗೆ ನಿಮಗೆ ಈಗಿರೋ ಮತ್ತು ನೀವು ಮುಂದೆ ಏನ್ ಮಾಡಬಹುದೋ ಆ ಒಳ್ಳೇ ವಿಷ್ಯಗಳ ಬಗ್ಗೆ ಯೋಚನೆ ಮಾಡಿ. ಅದಕ್ಕೆ ಕೃತಜ್ಞರಾಗಿರಿ.”—ಸಮಾಂತಾ.
ತೃಪ್ತಿಯಿಂದ ಇರೋಕೆ ಕಲಿಯಿರಿ. ಅಪೊಸ್ತಲ ಪೌಲ: “ಎಲ್ಲ ಸನ್ನಿವೇಶದಲ್ಲೂ ತೃಪ್ತಿಯಿಂದ ಇರೋದು ಹೇಗಂತ ಕಲಿತಿದ್ದೀನಿ” ಅಂತ ಹೇಳಿದ. (ಫಿಲಿಪ್ಪಿ 4:11) ಬಂದ ಕಷ್ಟಗಳನ್ನ ತಡೆಯೋಕೆ ಪೌಲನಿಗೆ ಆಗಲಿಲ್ಲ. ಆದ್ರೆ ಕಷ್ಟ ಬಂದಾಗ ಏನ್ ಮಾಡಬೇಕು ಅನ್ನೋದು ಅವನ ಕೈಯಲ್ಲಿತ್ತು. ಅವನು ತೃಪ್ತಿಯಿಂದ ಇರೋಕೆ ದೃಢತೀರ್ಮಾನ ಮಾಡಿದ್ದ.
“ನಾನೊಂದು ವಿಷ್ಯ ಕಲಿತೆ. ಏನಂದ್ರೆ, ಸಮಸ್ಯೆ ಬಂದಾಗ ನಾನು ಮೊದಮೊದಲು ಅದ್ರ ಕಡೆ ಪ್ರತಿಕ್ರಿಯಿಸೋ ವಿಧ ಯಾವಾಗ್ಲೂ ಸರಿ ಇರಲಿಲ್ಲ. ಹಾಗಾಗಿ ಏನೇ ಸನ್ನಿವೇಶ ಬಂದ್ರೂ ಸರಿಯಾದ ಮನೋಭಾವದಿಂದ ನಡ್ಕೊಬೇಕು ಅಂತ ಗುರಿ ಇಟ್ಟಿದ್ದೇನೆ. ಅದ್ರಿಂದ ನನಗೂ ಮತ್ತು ನನ್ನ ಜೊತೆ ಇರುವವರಿಗೂ ಪ್ರಯೋಜನ ಆಗುತ್ತೆ.”—ಮ್ಯಾಥ್ಯು.
ಪ್ರಾರ್ಥನೆ. ಬೈಬಲ್ ಹೀಗೆ ಹೇಳುತ್ತೆ: “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ. ನೀತಿವಂತ ಬಿದ್ದುಹೋಗೋಕೆ ಆತನು ಯಾವತ್ತೂ ಬಿಡಲ್ಲ.” (ಕೀರ್ತನೆ 55:22) ಪ್ರಾರ್ಥನೆ ಅನ್ನೋದು ನಿಮ್ಮ ಮನಸ್ಸಿಗೆ ಏನೋ ನೆಮ್ಮದಿ ಸಿಗಬೇಕು ಅನ್ನೋ ರೀತಿಯಲ್ಲಿ ಇರಬಾರದು. ಬದಲಿಗೆ “ನಿಮ್ಮ ಮೇಲೆ ತುಂಬ ಕಾಳಜಿ” ಇರೋ ಸೃಷ್ಟಿಕರ್ತನ ಜೊತೆ ಮನಸ್ಸು ಬಿಚ್ಚಿ ಮಾತಾಡೋ ರೀತಿ ಇರಬೇಕು.—1 ಪೇತ್ರ 5:7.
“ನಾನೊಬ್ಬನೇ ಹೊರಡಬೇಕಾಗಿಲ್ಲ. ನಾನು ನನ್ನ ಸಮಸ್ಯೆಗಳ ಬಗ್ಗೆ ಮನಸ್ಸು ಬಿಚ್ಚಿ ಮತ್ತು ಪ್ರಾಮಾಣಿಕವಾಗಿ ದೇವರ ಹತ್ರ ಹೇಳ್ತಿನಿ. ನಂತ್ರ ನನ್ನ ಆಶೀರ್ವದಿಸಿದ್ದಕ್ಕಾಗಿ ದೇವರಿಗೆ ಥ್ಯಾಂಕ್ಸ್ ಹೇಳ್ತಿನಿ. ಹೀಗೆ ದೇವರು ಕೊಟ್ಟ ಆಶೀರ್ವಾದದ ಮೇಲೆ ಮನಸ್ಸು ಇಟ್ಟಿದ್ದರಿಂದ ಸಮಸ್ಯೆಗಳ ಬಗ್ಗೆ ಇದ್ದ ಯೋಚನೆಯಿಂದ ಹೊರಬರೋಕಾಯ್ತು. ಹಾಗಾಗಿ ಪ್ರಾರ್ಥನೆ ಮಾಡೋದು ತುಂಬ ಮುಖ್ಯ!”—ಕಾರ್ಲೋಸ್.