ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಅಪ್ಪಅಮ್ಮ ಯಾಕೆ ನನ್‌ ಜೊತೆ ಯಾವಾಗ್ಲೂ ಜಗಳ ಆಡ್ತಾರೆ?

ಅಪ್ಪಅಮ್ಮ ಯಾಕೆ ನನ್‌ ಜೊತೆ ಯಾವಾಗ್ಲೂ ಜಗಳ ಆಡ್ತಾರೆ?

 ಜಗಳದ ಬಗ್ಗೆ ಕ್ವಿಜ಼್‌

  •   ಯಾರ ಜೊತೆ ಜಾಸ್ತಿ ಜಗಳ ಆಗುತ್ತೆ?

    •  ಅಪ್ಪ

    •  ಅಮ್ಮ

  •   ಎಷ್ಟು ಸಲ ಜಗಳ ಆಗುತ್ತೆ?

    •  ಯಾವಾಗ್ಲೋ ಒಂದು ಸಲ

    •  ಒಂದೊಂದು ಸಲ

    •  ಯಾವಾಗ್ಲೂ

  •   ಜಗಳ ಆದ್ಮೇಲೆ ಏನಾಗುತ್ತೆ?

    •  ಬೇಗ ಸಮಾಧಾನ ಮಾಡ್ಕೊಳ್ತೀವಿ.

    •  ತುಂಬಾ ಕೂಗಾಡಿದ ಮೇಲೆ ಸಮಾಧಾನ ಮಾಡ್ಕೊಳ್ತೀವಿ.

    •  ಎಷ್ಟೇ ಕೂಗಾಡಿದ್ರೂ ಸಮಾಧಾನನೇ ಆಗಲ್ಲ.

 ಅಪ್ಪಅಮ್ಮನ ಜೊತೆ ನಿಮಗೆ ಆಗಾಗ ಜಗಳ ಆಗ್ತಿದ್ರೆ ‘ತಪ್ಪು ಅವ್ರದ್ದೇ, ಅವ್ರೇ ಬದಲಾಗಬೇಕು’ ಅಂತ ನಿಮಗೆ ಅನಿಸಬಹುದು. ಆದ್ರೆ ಜಗಳನ ಕಮ್ಮಿ ಮಾಡೋಕೆ, ದೊಡ್ಡದೊಡ್ಡ ಜಗಳ ಆಗದಿರೋ ತರ ನೋಡ್ಕೊಳೋಕೆ ನೀವೂ ಕೆಲವು ವಿಷ್ಯ ಮಾಡಬಹುದು. ಅದೇನು ಅಂತ ನೋಡೋಣ.

 ಯಾಕೆ ಜಗಳ ಆಗ್ತಿದೆ?

  •   ಯೋಚಿಸೋ ರೀತಿ. ಬೆಳಿತಾ ಹೋದಂಗೆ ನೀವು ಯೋಚನೆ ಮಾಡೋ ರೀತಿನೂ ಬದಲಾಗುತ್ತೆ. ಇದ್ರಿಂದ ಯಾವುದು ಸರಿ ಯಾವುದು ತಪ್ಪು ಅಂತ ನೀವೇ ಡಿಸೈಡ್‌ ಮಾಡೋಕೆ ಶುರು ಮಾಡ್ತೀರ. ಆದ್ರೆ ನಿಮಗೆ ಸರಿ ಅನಿಸೋದು ಕೆಲವೊಂದು ಸಲ ನಿಮ್ಮ ಅಪ್ಪಅಮ್ಮಂಗೆ ಸರಿ ಅನಿಸಲ್ಲ. ಇದ್ರಿಂದ ಜಗಳ ಆಗಬಹುದು. ಆದ್ರೂ “ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ” ಅಂತ ಬೈಬಲ್‌ ಹೇಳುತ್ತೆ.—ವಿಮೋಚನಕಾಂಡ 20:12.

     ನಿಜ ಏನು ಗೊತ್ತಾ? ನಿಮಗೆ ಅನಿಸೋದನ್ನ ಅಪ್ಪಅಮ್ಮನಿಗೆ ಬೇಜಾರಾಗದೆ ಇರೋ ತರ ಹೇಳೋದೂ ಒಂದು ಕಲೆ! ಅದನ್ನ ನೀವು ಕಲಿಬೇಕು.

  •   ಫ್ರೀಡಮ್‌. ನೀವು ದೊಡ್ಡವರಾಗ್ತಾ ಹೋದಂಗೆ ಗ್ಯಾರಂಟಿ ನಿಮ್ಮ ಅಪ್ಪಅಮ್ಮ ನಿಮಗೆ ಫ್ರೀಡಮ್‌ ಕೊಡ್ತಾರೆ. ಆದ್ರೆ ಪ್ರಾಬ್ಲಮ್‌ ಏನು ಗೊತ್ತಾ? ಅವರು ನೀವು ಅಂದ್ಕೊಂಡಷ್ಟು ಫ್ರೀಡಮ್‌ ಕೊಡದೇ ಇರಬಹುದು ಅಥವಾ ನೀವು ಅಂದ್ಕೊಂಡ ತಕ್ಷಣ ಕೊಡದೇ ಇರಬಹುದು. ಆಗ ಜಗಳ ಆಗಬಹುದು. ಆದ್ರೂ “ನೀವು ನಿಮ್ಮ ಅಪ್ಪಅಮ್ಮನ ಮಾತು ಕೇಳಿ” ಅಂತ ಬೈಬಲ್‌ ಹೇಳುತ್ತೆ.—ಎಫೆಸ 6:1.

     ನಿಜ ಏನು ಗೊತ್ತಾ? ನಿಮ್ಮ ಅಪ್ಪಅಮ್ಮ ನಿಮಗೆ ಇನ್ನು ಜಾಸ್ತಿ ಫ್ರೀಡಮ್‌ ಕೊಡಬೇಕಂದ್ರೆ ಈಗಾಗ್ಲೇ ಕೊಟ್ಟಿರೋ ಫ್ರೀಡಮ್‌ನ ನೀವು ಸರಿಯಾಗಿ ಬಳಸ್ತಿರಬೇಕು.

 ನೀವೇನು ಮಾಡಬಹುದು?

  •   ನೀವು ಗಮನ ಕೊಡಿ. ಅಪ್ಪಅಮ್ಮಂದೇ ಎಲ್ಲ ತಪ್ಪು ಅಂತ ಹೇಳೋ ಬದಲು ಜಗಳ ಆದಾಗ ಸಮಾಧಾನ ಮಾಡೋಕೆ ನೀವೇನು ಮಾಡಬಹುದು ಅನ್ನೋದಕ್ಕೆ ಗಮನ ಕೊಡಿ. “ಅಪ್ಪಅಮ್ಮ ಹೇಳೋ ಮಾತಿಂದಾನೇ ಯಾವಾಗ್ಲೂ ಜಗಳ ಆಗುತ್ತೆ ಅಂತ ಅಂದ್ಕೊಬೇಡಿ. ಅವ್ರ ಮಾತಿಗೆ ತಿರುಗಿಸಿ ನೀವೇನು ಹೇಳ್ತೀರ ಅನ್ನೋದ್ರಿಂದಾನೂ ಜಗಳ ಆಗುತ್ತೆ! ಆದ್ರೆ ನೀವು ಸಮಾಧಾನವಾಗಿ ಮಾತಾಡೋದನ್ನ ಕಲಿತುಬಿಟ್ರೆ ಜಗಳ ಆಗೋ ಚಾನ್ಸಸ್‌ ಕಮ್ಮಿ ಆಗುತ್ತೆ” ಅಂತ ಜೆಫ್ರಿ ಅನ್ನೋ ಒಬ್ಬ ಯುವಕ ಹೇಳ್ತಾನೆ.

     ಬೈಬಲ್‌ ಹೀಗೆ ಹೇಳುತ್ತೆ: “ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.”—ರೋಮನ್ನರಿಗೆ 12:18.

  •   ಚೆನ್ನಾಗಿ ಕೇಳಿಸಿಕೊಳ್ಳಿ. “ಇದನ್ನ ಮಾಡೋಕಂತೂ ಸಿಕ್ಕಾಪಟ್ಟೆ ಕಷ್ಟ. ಆದ್ರೆ ಅಪ್ಪಅಮ್ಮ ಹೇಳೋದನ್ನ ಚೆನ್ನಾಗಿ ಕೇಳಿಸಿಕೊಂಡರೆ ಕೊನೆಗೆ ನಾವು ಹೇಳೋದನ್ನ ಅವರೂ ಕೇಳಿಸಿಕೊಳ್ತಾರೆ” ಅಂತ 17 ವರ್ಷದ ಸಮಂತ ಹೇಳ್ತಾಳೆ.

     ಬೈಬಲ್‌ ಹೀಗೆ ಹೇಳುತ್ತೆ: “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ.”—ಯಾಕೋಬ 1:19.

    ಜಗಳ ಅನ್ನೋದು ಬೆಂಕಿ ತರ. ಚಿಕ್ಕದಿರುವಾಗ್ಲೇ ಕಂಟ್ರೋಲ್‌ ಮಾಡಿಲ್ಲಾಂದ್ರೆ ಇಡೀ ಮನೆನ ಸುಟ್ಟುಬಿಡುತ್ತೆ.

  •   ನೀವಿಬ್ರೂ ಒಂದೇ ಟೀಮ್‌ ಅಂತ ಮರಿಬೇಡಿ. ನಿಮಗೆ ಬರೋ ಸಮಸ್ಯೆ ಕ್ರಿಕೆಟಲ್ಲಿ ಬರೋ ಬಾಲ್‌ ತರ. ನೀವೂ ಅಪ್ಪಅಮ್ಮ ಒಂದೇ ಟೀಮಲ್ಲಿ ಇದ್ದೀರ. ಆದ್ರಿಂದ ನೀವು ಆ ಬಾಲ್‌ನ ಹೊಡಿಬೇಕೇ ಹೊರತು ನೀವ್‌ನೀವೇ ಹೊಡೆದಾಡಬಾರದು. ಯಾಕಂದ್ರೆ “ಅಪ್ಪಅಮ್ಮನ ಇಷ್ಟ ನಿಮಗೆ ಒಳ್ಳೇದಾಗಬೇಕು ಅಂತಾನೇ, ನಿಮ್ಮಿಷ್ಟನೂ ನಿಮಗೆ ಒಳ್ಳೇದಾಗಬೇಕು ಅಂತಾನೇ. ಒಂದರ್ಥದಲ್ಲಿ ನಿಮ್ಮಿಬ್ರ ಗುರಿನೂ ಒಂದೇ” ಅಂತ ಆ್ಯಡಮ್‌ ಅನ್ನೋ ಯುವಕ ಹೇಳ್ತಾನೆ.

     ಬೈಬಲ್‌ ಹೀಗೆ ಹೇಳುತ್ತೆ: “ಶಾಂತಿಯಿಂದ ಇರೋಕೆ . . . ನಮ್ಮಿಂದ ಆಗೋದನ್ನೆಲ್ಲ ಮಾಡೋಣ.”—ರೋಮನ್ನರಿಗೆ 14:19.

  •   ಅವ್ರ ಪರಿಸ್ಥಿತಿನೂ ಅರ್ಥ ಮಾಡ್ಕೊಳ್ಳಿ. “ಅಪ್ಪಅಮ್ಮಂಗೂ ನೂರೆಂಟು ಚಿಂತೆಗಳಿರುತ್ತೆ, ನಮ್ಮ ತರಾನೇ ಅವ್ರಿಗೂ ತುಂಬ ಟೆನ್ಷನ್‌ ಇರುತ್ತೆ. ಇದನ್ನ ಅರ್ಥ ಮಾಡ್ಕೊಂಡಿದ್ರಿಂದ ನಮ್ಮ ಮಧ್ಯೆ ಜಗಳ ಕಮ್ಮಿ ಆಗಿದೆ” ಅಂತ ಸಾರಾ ಅನ್ನೋ ಯುವತಿ ಹೇಳ್ತಾಳೆ. ಕಾರ್ಲಾ ಅನ್ನೋ ಯುವತಿ ಹೀಗೆ ಹೇಳ್ತಾಳೆ, “ಒಂದುವೇಳೆ ನಂಗೆ ಒಂದು ಮಗು ಇದ್ದಿದ್ರೆ ಈ ಸನ್ನಿವೇಶದಲ್ಲಿ ನಾನೇನು ಮಾಡ್ತಿದ್ದೆ? ನನ್ನ ಮಗುಗೆ ಏನ್‌ ಮಾಡಿದ್ರೆ ಒಳ್ಳೇದಾಗುತ್ತೆ? ಅಂತ ಅಪ್ಪಅಮ್ಮನ ಜಾಗದಲ್ಲಿ ನನ್ನನ್ನೇ ನಾನು ಇಟ್ಕೊಂಡು ಯೋಚನೆ ಮಾಡ್ತೀನಿ. ಈ ತರ ಮಾಡ್ತಿರೋದ್ರಿಂದ ನಂಗೂ ತುಂಬಾ ಸಹಾಯ ಆಗ್ತಿದೆ.”

     ಬೈಬಲ್‌ ಹೀಗೆ ಹೇಳುತ್ತೆ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

  •   ಅವ್ರ ಮಾತು ಕೇಳಿ. ನೀವು ಅವ್ರ ಮಾತು ಕೇಳೋದು ಮುಖ್ಯ ಅಂತ ಬೈಬಲೂ ಹೇಳುತ್ತೆ. (ಕೊಲೊಸ್ಸೆ 3:20) ಈ ತರ ಮಾಡಿದ್ರೆ ನಿಮ್ಮ ಜೀವನ ಆರಾಮಾಗಿ ಇರುತ್ತೆ. “ಅಪ್ಪಅಮ್ಮ ಹೇಳಿದ ಮಾತು ಕೇಳಿದಾಗ ನನ್ನ ಜೀವನದಲ್ಲಿ ಟೆನ್ಷನ್‌ ಕಮ್ಮಿ ಇತ್ತು. ನನಗೋಸ್ಕರ ಅವರು ಈಗಾಗ್ಲೇ ತುಂಬಾ ತ್ಯಾಗ ಮಾಡಿದ್ದಾರೆ. ಅದ್ರ ಮುಂದೆ ನಾನು ಅವ್ರ ಮಾತು ಕೇಳೋದು ಅಷ್ಟೇನೂ ದೊಡ್ಡ ವಿಷ್ಯ ಅಲ್ಲ” ಅಂತ ಕೇರೆನ್‌ ಅನ್ನೋ ಯುವತಿ ಹೇಳ್ತಾಳೆ. ನೆನಪಿಡಿ, ಜಗಳ ಅನ್ನೋ ಕಾಯಿಲೆಗೆ ಮಾತು ಕೇಳೋದೇ ಮದ್ದು.

     ಬೈಬಲ್‌ ಹೀಗೆ ಹೇಳುತ್ತೆ: “ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ.”—ಜ್ಞಾನೋಕ್ತಿ 26:20.

 ಹೀಗೆ ಮಾಡಿ ನೋಡಿ. ನಿಮಗೆ ಅಪ್ಪಅಮ್ಮನ ಜೊತೆ ಮಾತಾಡೋಕೆ ಕಷ್ಟ ಆಗ್ತಿದ್ರೆ ನಿಮಗೇನು ಅನಿಸ್ತಿದೆ ಅಂತ ಒಂದು ಮೆಸೇಜ್‌ ಕಳಿಸಿ ಅಥವಾ ಒಂದು ಲೆಟರಲ್ಲಿ ಅದನ್ನ ಬರೆದು ಕೊಡಿ. “ಮಾತಾಡೋಕೆ ಮೂಡ್‌ ಇಲ್ಲದೇ ಇದ್ದಾಗ ನಾನು ಈ ತರ ಮಾಡ್ತೀನಿ. ಇದ್ರಿಂದ ಬಾಯಿಗೆ ಬಂದಿದ್ದನ್ನ ಹೇಳಿ, ಕಿರ್ಚಾಡಿ ಆಮೇಲೆ ಬೇಜಾರು ಮಾಡ್ಕೊಳೋದು ತಪ್ಪುತ್ತೆ” ಅಂತ ಅಲಿಸಾ ಅನ್ನೋ ಹುಡುಗಿ ಹೇಳ್ತಾಳೆ.