ಮಾಹಿತಿ ಇರುವಲ್ಲಿ ಹೋಗಲು

ಸಾವಿರಾರು ಜನರು ಓದುಬರಹ ಕಲಿತರು

ಸಾವಿರಾರು ಜನರು ಓದುಬರಹ ಕಲಿತರು

2011ರಲ್ಲಿ ಯೆಹೋವನ ಸಾಕ್ಷಿಗಳು 5,700 ಜನರಿಗೆ ಓದಲು ಬರೆಯಲು ಕಲಿಸಿಕೊಟ್ಟರು.

ಘಾನ:

ಕಳೆದ 25 ವರ್ಷಗಳಲ್ಲಿ ನಾವು 9,000ಕ್ಕೂ ಹೆಚ್ಚು ಜನರಿಗೆ ಓದಲು ಬರೆಯಲು ಕಲಿಸಿಕೊಟ್ಟಿದ್ದೇವೆ.

ಜಾಂಬಿಯ:

2002ರಿಂದ ಈಚೆಗೆ ಸುಮಾರು 12,000ದಷ್ಟು ಮಂದಿ ತಮ್ಮ ಅಕ್ಷರಜ್ಞಾನದಲ್ಲಿ ಅಭಿವೃದ್ಧಿ ಮಾಡಿದ್ದಾರೆ. 82ರ ಹರೆಯದ ಆಗ್ನೆಸ್‌ ಎಂಬವರು ಹೇಳ್ತಾರೆ: “ಸಭೆಯಲ್ಲಿ ಓದುಬರಹ ಕಲಿಸೋ ತರಗತಿಗಳು ನಡೆಯುತ್ತೆ ಅಂತ ಕೇಳ್ದಾಗ ನನಗೆ ಎಷ್ಟು ಖುಷಿಯಾಯ್ತು ಗೊತ್ತಾ? ಮೊದಲ ಪಾಠ ನನ್ನ ಹೆಸರು ಬರೆಯೋಕೆ ಹೇಳಿಕೊಟ್ಟರು!”

ಪೆರು:

55ರ ಪ್ರಾಯದ ಯೆಹೋವನ ಸಾಕ್ಷಿಯೊಬ್ಬರು ಹೀಗೆ ಹೇಳ್ತಾರೆ: “ಅಪ್ಪಅಮ್ಮ ನನ್ನನ್ನು ಶಾಲೆಗೆ ಕಳಿಸಲಿಲ್ಲ. ನಾನು ಓದುಬರಹ ಕಲಿಯುತ್ತೇನೆ ಅಂತ ಕನಸುಮನಸ್ಸಲ್ಲೂ ಯೋಚಿಸಿರಲಿಲ್ಲ.”

ಮೊಜಾಂಬಿಕ್‌:

ಕಳೆದ 15 ವರ್ಷಗಳಲ್ಲಿ ಓದುಬರಹ ಕಲಿತವರ ಸಂಖ್ಯೆ 19,000. ಫೆಲೀಜಾರ್ಡ ಎಂಬವರು ಹೇಳ್ತಾರೆ: “ನಾನೀಗ ಬೇರೆಯವರ ಹತ್ರ ಬೈಬಲ್‌ ಬಗ್ಗೆ ಮಾತಾಡುವಾಗ ನಾನೇ ಬೈಬಲ್‌ ತೆರೆದು ವಚನ ಓದ್ತೀನಿ. ಅಕ್ಷರ ಕಲಿಯೋ ಮುಂಚೆ ಇದೆಲ್ಲ ಮಾಡಕ್ಕಾಗ್ತಿರಲಿಲ್ಲ.”

ಸಾಲೊಮನ್‌ ದ್ವೀಪಗಳು:

ನಮ್ಮ ಬ್ರಾಂಚ್‌ ಆಫೀಸ್‌ ಹೇಳುವುದು: “ಈ ದೂರದ ದ್ವೀಪಗಳಲ್ಲಿ ಇರುವ ಎಷ್ಟೋ ಜನರಿಗೆ ಶಾಲೆಗೆ ಹೋಗುವ ಅವಕಾಶನೇ ಇರುತ್ತಿರಲಿಲ್ಲ. ಅದರಲ್ಲೂ ಬರೀ ಕೆಲವೇ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಹಾಗಾಗಿ ನಾವು ನಡೆಸುವ ಈ ತರಗತಿಗಳಿಂದಾಗಿ ಮಹಿಳೆಯರಿಗೆ ಬಹಳ ಪ್ರಯೋಜನವಾಗುತ್ತಿದೆ. ಈ ಕೋರ್ಸ್‌ ಮುಗಿಯುವಾಗ ಅನೇಕರಲ್ಲಿ ಹೊಸ ಆತ್ಮವಿಶ್ವಾಸ ತುಂಬುತ್ತಿದೆ.”