ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

2017​ನೇ ವರ್ಷ ಆರಂಭವಾಗುತ್ತಲೇ ವಿಜ್ಞಾನಿಗಳು ವಿಷಾದಕರವಾದ ಪ್ರಕಟನೆಯೊಂದನ್ನು ಮಾಡಿದರು. ಇಲ್ಲಿಯವರೆಗೆ ನಡೆದಿರದ ಮಹಾದುರಂತವು ಈ ಲೋಕದ ಮೇಲೆ ಬೇಗನೆ ಎರಗಲಿದೆ ಎಂದು ವಿಜ್ಞಾನಿಗಳ ಗುಂಪೊಂದು ಜನವರಿಯಲ್ಲಿ ತಿಳಿಸಿತು. ಮಾನವಕುಲವು ಸರ್ವನಾಶಕ್ಕೆ ಎಷ್ಟು ಹತ್ತಿರದಲ್ಲಿದೆ ಎಂದು ಚಿತ್ರಿಸಲು ಅವರು ಪ್ರಳಯ ದಿನದ ಗಡಿಯಾರವನ್ನು (ಡೂಮ್ಸ್‌ ಡೇ ಕ್ಲಾಕ್‌) ಉಪಯೋಗಿಸಿದರು. ಈ ವರ್ಷ ಅವರು ಈ ಗಡಿಯಾರದ ನಿಮಿಷದ ಮುಳ್ಳನ್ನು 30 ಸೆಕೆಂಡ್‌ ಮುಂದೆ ತಳ್ಳಿ, ಮಧ್ಯರಾತ್ರಿಗೆ ಎರಡೂವರೆ ನಿಮಿಷವಿರುವಂತೆ ಮಾಡಿದ್ದಾರೆ. ಇದರರ್ಥ ಕಳೆದ 60ಕ್ಕಿಂತ ಹೆಚ್ಚು ವರ್ಷಗಳಲ್ಲಿ ಲೋಕವು ಸರ್ವನಾಶಕ್ಕೆ ಯಾವತ್ತೂ ಇಷ್ಟು ಹತ್ತಿರವಿರಲಿಲ್ಲ!

ನಾವು ಈ ಲೋಕದ ಅಂತ್ಯಕ್ಕೆ ಎಷ್ಟು ಹತ್ತಿರ ಇದ್ದೇವೆ ಎಂದು ವಿಜ್ಞಾನಿಗಳು 2018​ರಲ್ಲಿ ಪುನಃ ಪರಿಶೀಲಿಸಲು ಯೋಜಿಸಿದ್ದಾರೆ. ಅವರು ಹಾಗೆ ಪರಿಶೀಲಿಸುವಾಗ ಪ್ರಳಯ ದಿನದ ಗಡಿಯಾರವು ಮಹಾದುರಂತ ತುಂಬ ಹತ್ತಿರವಿದೆ ಎಂದು ಆಗಲೂ ತೋರಿಸಲಿದೆಯಾ? ನಿಮಗೇನು ಅನಿಸುತ್ತದೆ? ಈ ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ? ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ ಅಂತ ನಿಮಗನಿಸಬಹುದು. ಈ ವಿಷಯದ ಬಗ್ಗೆ ಪರಿಣಿತರಿಗೇ ಭಿನ್ನಭಿನ್ನವಾದ ಅಭಿಪ್ರಾಯಗಳಿವೆ. ಆ ಪ್ರಳಯ ದಿನ ಬರುತ್ತದೆ ಎಂದು ಅನೇಕರು ನಂಬುವುದೂ ಇಲ್ಲ.

ಒಂದು ಒಳ್ಳೇ ಭವಿಷ್ಯ ಇದೆ ಎಂದು ಲಕ್ಷಾಂತರ ಜನರು ನಂಬುತ್ತಾರೆ. ಮಾನವಕುಲ ಮತ್ತು ಈ ಭೂಮಿ ಎಂದೆಂದಿಗೂ ಇರುವುದು ಮತ್ತು ನಮ್ಮ ಜೀವನದಲ್ಲಿ ಸಂತೋಷ ತುಂಬಿರುವುದು ಎನ್ನಲು ಆಧಾರಗಳಿವೆ ಎಂದು ಅವರು ಹೇಳುತ್ತಾರೆ. ಆ ಆಧಾರಗಳನ್ನು ನಂಬಬಹುದಾ? ಈ ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ? ಇಲ್ಲವಾ?