ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಳಯ ದಿನದ ಗಡಿಯಾರ ಹೇಳುವಂತೆ ನಡೆಯುವುದಿಲ್ಲ, ಯಾಕೆಂದರೆ ದೇವರು ಭೂಮಿಗೂ ಮಾನವಕುಲಕ್ಕೂ ಉತ್ತಮ ಭವಿಷ್ಯ ಕೊಡುತ್ತೇನೆಂದು ಮಾತುಕೊಟ್ಟಿದ್ದಾನೆ

ಮುಖಪುಟ ಲೇಖನ | ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಏನು ಹೇಳುತ್ತದೆ?

ಈ ಲೋಕದ ಭಯಂಕರ ಸ್ಥಿತಿಯ ಬಗ್ಗೆ ಬೈಬಲ್‌ನಲ್ಲಿ ಅನೇಕ ಶತಮಾನಗಳ ಹಿಂದೆಯೇ ಮುಂತಿಳಿಸಲಾಗಿತ್ತು. ಜೊತೆಗೆ, ಮಾನವಕುಲಕ್ಕೆ ಸಿಗಲಿರುವ ಸುಂದರ ಭವಿಷ್ಯತ್ತಿನ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಲಾಗಿದೆ. ಬೈಬಲ್‌ ತಿಳಿಸುವ ಈ ವಿಷಯ ಪ್ರಾಮುಖ್ಯವಲ್ಲ ಎಂದು ತಳ್ಳಿ ಹಾಕಬಾರದು ಯಾಕೆಂದರೆ ಭವಿಷ್ಯತ್ತಿನ ಬಗ್ಗೆ ಅದರಲ್ಲಿ ತಿಳಿಸಲಾದ ಅನೇಕ ವಿಷಯಗಳು ಚಾಚೂತಪ್ಪದೆ ನೆರವೇರಿವೆ.

ಈ ಮುಂದಿನ ಬೈಬಲ್‌ ಪ್ರವಾದನೆಗಳನ್ನು ಪರಿಗಣಿಸಿ:

  • “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.”—ಮತ್ತಾಯ 24:7.

  • ‘ಆದರೆ ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು ಎಂಬುದನ್ನು ತಿಳಿದುಕೊ. ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ ಆಗಿರುವರು.’—2 ತಿಮೊಥೆಯ 3:1-4.

ಈ ಪ್ರವಾದನೆಗಳು ತೀರಾ ಹಾಳಾಗಿ ಹೋಗುತ್ತಿರುವ, ಅಂಕೆ ಮೀರಿರುವ ಲೋಕವನ್ನು ವರ್ಣಿಸುತ್ತದೆ. ನಮ್ಮ ಲೋಕ ಒಂದರ್ಥದಲ್ಲಿ ಅಂಕೆಮೀರಿ ಹೋಗುತ್ತಾ ಇದೆ ಎನ್ನುವುದು ನಿಜ; ಅದು ಮಾನವನ ಅಂಕೆಮೀರಿ ಹೋಗುತ್ತಿದೆ. ಬೈಬಲಿನ ಪ್ರಕಾರ, ಮಾನವನಿಗೆ ಈ ಲೋಕದ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ವಿವೇಕವೂ ಇಲ್ಲ, ಶಕ್ತಿಯೂ ಇಲ್ಲ. ಅದನ್ನು ಮುಂದಿನ ವಚನಗಳಲ್ಲಿ ಒತ್ತಿಹೇಳಲಾಗಿದೆ:

  • “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.”—ಜ್ಞಾನೋಕ್ತಿ 14:12.

  • ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’—ಪ್ರಸಂಗಿ 8:9.

  • ‘ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ. ಅವನು ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.’—ಯೆರೆಮೀಯ 10:23.

ಮಾನವನನ್ನು ಹೀಗೇ ಮನಸ್ಸಿಗೆ ಬಂದಂತೆ ನಡೆಯಲು ಬಿಡುವುದಾದರೆ ಈ ಲೋಕ ನಾಶವಾಗುವ ಸಾಧ್ಯತೆ ಇದೆ. ಆದರೆ ಹಾಗಾಗುವುದಿಲ್ಲ! ಯಾಕೆ? ಬೈಬಲ್‌ ಹೀಗೆ ಹೇಳುತ್ತದೆ:

  • ‘ದೇವರು ಭೂಮಿಯನ್ನು ಯುಗಯುಗಾಂತರಕ್ಕೂ ಕದಲದ ಹಾಗೆ ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ.’—ಕೀರ್ತನೆ 104:5.

  • “ಒಂದು ತಲಾಂತರವು ಗತಿಸುವದು, ಇನ್ನೊಂದು ತಲಾಂತರವು ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.”—ಪ್ರಸಂಗಿ 1:4.

  • “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

  • ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿ ಬೆಳೆಯುವುದು.’—ಕೀರ್ತನೆ 72:16.

ಬೈಬಲಿನ ಈ ವಚನಗಳು ಸ್ಪಷ್ಟವಾದ ಉತ್ತರಗಳನ್ನು ಕೊಡುತ್ತವೆ. ಮಾನವಕುಲವು ಮಾಲಿನ್ಯದಿಂದಾಗಲಿ, ಆಹಾರ-ನೀರಿನ ಕೊರತೆಯಿಂದಾಗಲಿ, ಭೌಗೋಳಿಕವಾಗಿ ಬರುವ ಕಾಯಿಲೆಗಳಿಂದಾಗಲಿ ನಾಶವಾಗುವುದಿಲ್ಲ. ಈ ಲೋಕ ನ್ಯೂಕ್ಲಿಯರ್‌ ಬಾಂಬ್‌ ಸ್ಫೋಟದಿಂದ ಸರ್ವನಾಶ ಆಗುವುದಿಲ್ಲ. ಯಾಕೆಂದರೆ ನಮ್ಮ ಭೂಮಿಯ ಭವಿಷ್ಯ ದೇವರ ನಿಯಂತ್ರಣದಲ್ಲಿದೆ. ದೇವರು ಮನುಷ್ಯನಿಗೆ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುವ ಅವಕಾಶ ಕೊಟ್ಟಿದ್ದಾನೆ. ಆದರೆ ತಾವು ಮಾಡುವ ನಿರ್ಧಾರಗಳ ಪರಿಣಾಮಗಳನ್ನೂ ಅನುಭವಿಸುವಂತೆ ಬಿಟ್ಟಿದ್ದಾನೆ. (ಗಲಾತ್ಯ 6:7) ಈ ಲೋಕವು, ನಿಯಂತ್ರಣವಿಲ್ಲದೆ ವೇಗವಾಗಿ ಚಲಿಸುತ್ತಾ ಇನ್ನೇನು ಅಪಘಾತಕ್ಕೀಡಾಗುವ ರೈಲಿನಂತಿಲ್ಲ. ಮನುಷ್ಯನು ಎಷ್ಟರಮಟ್ಟಿಗೆ ತಮಗೆ ತಾವೇ ಹಾನಿಮಾಡಿಕೊಳ್ಳಬಹುದು ಎನ್ನುವುದಕ್ಕೆ ದೇವರು ಮೇರೆಯನ್ನಿಟ್ಟಿದ್ದಾನೆ.—ಕೀರ್ತನೆ 83:18; ಇಬ್ರಿಯ 4:13.

ದೇವರು ಇದಕ್ಕಿಂತಲೂ ಹೆಚ್ಚನ್ನು ಮಾಡಲಿದ್ದಾನೆ. “ಮಹಾಸೌಖ್ಯ” ಅಂದರೆ ತುಂಬ ಶಾಂತಿಯಿರುವ ಪರಿಸ್ಥಿತಿಯನ್ನು ತರುತ್ತಾನೆ. (ಕೀರ್ತನೆ 37:11) ಈ ಲೇಖನದಲ್ಲಿ ತಿಳಿಸಲಾದ ವಿಷಯಗಳು ಮುಂದೆ ಸಿಗಲಿರುವ ಉತ್ತಮ ಭವಿಷ್ಯದ ನಸುನೋಟ ಅಷ್ಟೆ; ಅದಕ್ಕಿಂತ ಎಷ್ಟೋ ಹೆಚ್ಚಿನ ವಿಷಯಗಳು ಸಿಗಲಿವೆ. ಬೈಬಲನ್ನು ಕಲಿಯುವ ಮೂಲಕ ಲಕ್ಷಾಂತರ ಯೆಹೋವನ ಸಾಕ್ಷಿಗಳು ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿದ್ದಾರೆ.

ಯೆಹೋವನ ಸಾಕ್ಷಿಗಳು ಎಲ್ಲಾ ವಯಸ್ಸಿನ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಸ್ತ್ರೀ-ಪುರುಷರ ಲೋಕವ್ಯಾಪಕ ಸಮುದಾಯ ಆಗಿದ್ದಾರೆ. ಅವರು ಬೈಬಲಿನಲ್ಲಿ ತಿಳಿಸಲಾಗಿರುವ ಒಬ್ಬನೇ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಾರೆ. ಅವರು ಭವಿಷ್ಯದ ಕುರಿತು ಭಯಪಡುವುದಿಲ್ಲ. ಯಾಕೆಂದರೆ ಬೈಬಲ್‌ ಹೀಗನ್ನುತ್ತದೆ: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.”—ಯೆಶಾಯ 45:18.

ಈ ಲೇಖನದಲ್ಲಿ ಭೂಮಿ ಮತ್ತು ಮಾನವಕುಲದ ಭವಿಷ್ಯತ್ತಿನ ಕುರಿತು ಬೈಬಲ್‌ ತಿಳಿಸುವ ಕೆಲವು ವಿಷಯಗಳನ್ನು ಚರ್ಚಿಸಲಾಯಿತು. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯ ಪಾಠ 5​ನ್ನು ನೋಡಿ. ಇದು www.dan124.com/kn ನಲ್ಲಿ ಲಭ್ಯ

ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಎಂಬ ವಿಡಿಯೋ ಸಹ ನೋಡಿ. ಇದು www.dan124.com/kn ನಲ್ಲಿ ಲಭ್ಯ. (ಪ್ರಕಾಶನಗಳು > ವಿಡಿಯೊಗಳು ನೋಡಿ)