ಈ ವಿಶ್ವ ನಮಗೆ ಏನು ಕಲಿಸುತ್ತೆ
ಈ ವಿಶ್ವ ಖಗೋಳ ಶಾಸ್ತ್ರಜ್ಞರನ್ನು ವಿಸ್ಮಯಗೊಳಿಸ್ತಾ ಇದೆ. ಈ ವಿಶ್ವವನ್ನು ಅಧ್ಯಯನ ಮಾಡೋಕೆ ಅವರ ಹತ್ರ ಹೆಚ್ಚು ಸಾಧನಗಳಿಲ್ಲ. ಆದರೂ ಇಲ್ಲಿ ತನಕ ಅವರು ಏನೆಲ್ಲ ಕಂಡುಹಿಡಿದಿದ್ದಾರೆ?
ಸುವ್ಯವಸ್ಥಿತವಾಗಿರೋ ವಿಶ್ವ. “ಗ್ಯಾಲಕ್ಸಿಗಳು ಆಕಾಶದಲ್ಲಿ ಅಸ್ತವ್ಯಸ್ತವಾಗಿಲ್ಲ ಬದಲಿಗೆ ಸುವ್ಯವಸ್ಥಿತವಾಗಿವೆ” ಅಂತ ಆ್ಯಸ್ಟ್ರೋನಮಿ ಮ್ಯಾಗಜಿ಼ನ್ ಹೇಳುತ್ತೆ. ಇದು ಹೇಗೆ ಸಾಧ್ಯ ಆಯ್ತು? ವಿಜ್ಞಾನಿಗಳು ಹೇಳೋದೇನಂದ್ರೆ ಡಾರ್ಕ್ ಮ್ಯಾಟರ್ ಅನ್ನೋ ಕಣ್ಣಿಗೆ ಕಾಣದ ಒಂದು ವಸ್ತುವಿನಿಂದ ಸಾಧ್ಯವಾಗಿದೆ. ಈ ಡಾರ್ಕ್ ಮ್ಯಾಟರನ್ನು “ಒಂದು ರೀತಿಯ ಕಾಣದ ಅಟ್ಟ ಎಂದು ಕರೆಯಲಾಗಿದೆ. ಗ್ಯಾಲಕ್ಸಿಗಳು, ಗ್ಯಾಲಕ್ಸಿ ಕ್ಲಸ್ಟರ್ಗಳು ಮತ್ತು ಗ್ಯಾಲಕ್ಸಿ ಸೂಪರ್ ಕ್ಲಸ್ಟರ್ಗಳು ಅದರದರ ಸ್ಥಾನದಲ್ಲಿ ಇರೋಕೆ ಈ ಡಾರ್ಕ್ ಮ್ಯಾಟರ್ ಸಹಾಯಮಾಡುತ್ತೆ.”
ಈ ವಿಶ್ವ ಹೇಗೆ ಇಷ್ಟೊಂದು ಸಂಘಟಿತವಾಗಿದೆ? ಇದು ತನ್ನಿಂದ ತಾನೇ ಆಗಿದ್ದಾ ಅಥವಾ ಒಬ್ಬ ಸೃಷ್ಟಿಕರ್ತ ಸಂಘಟಿಸಿದ್ದಾ? ಇದರ ಬಗ್ಗೆ ಅಲನ್ ಸ್ಯಾಂಡೇಜ್ ಹೇಳಿದ್ರು. ಇವರು “20 ನೇ ಶತಮಾನದ ಪ್ರಸಿದ್ಧ ಖಗೋಳ ಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು.” ದೇವರನ್ನು ಇವರು ನಂಬುತ್ತಿದ್ದರು.
ಅವರು ಹೇಳಿದ್ದು, “ಅಸ್ತವ್ಯಸ್ತವಾಗಿದ್ದ ವಿಷಯಗಳಿಂದ ಇಷ್ಟೊಂದು ಸುವ್ಯವಸ್ಥಿತವಾಗಿರೋ ವಿಶ್ವ ಬಂದಿರೋದು ಅಸಾಧ್ಯವಾದ ವಿಷಯ ಅಂತ ನನಗೆ ಅನಿಸುತ್ತೆ. ಹೀಗೆ ಇರಬೇಕಂದ್ರೆ ಏನೋ ಒಂದು ಕಾರಣ ಇದೆ.”
ಈ ವಿಶ್ವ ಜೀವಿಸಲು ಯೋಗ್ಯವಾಗಿದೆ. ದುರ್ಬಲ ಶಕ್ತಿ (ವೀಕ್ ಫೋರ್ಸ್) ಬಗ್ಗೆ ವಿಜ್ಞಾನಿಗಳು ಏನು ಹೇಳ್ತಾರೆ ಅಂತ ನೋಡಿ. ದುರ್ಬಲ ಶಕ್ತಿ ಸೂರ್ಯ ಸರಿಯಾದ ಪ್ರಮಾಣದಲ್ಲಿ ಉರಿಯೋಕೆ ಸಹಾಯಮಾಡುತ್ತೆ. ಈ ಶಕ್ತಿ ಇನ್ನೂ ದುರ್ಬಲವಾಗಿ ಇದ್ದಿದ್ರೆ ಸೂರ್ಯನೇ ಇರ್ತಿರಲಿಲ್ಲ. ಒಂದುವೇಳೆ ಆ ಶಕ್ತಿ ಹೆಚ್ಚಾಗಿ ಇದಿದ್ರೆ ಸೂರ್ಯ ಸುಟ್ಟು ಹೋಗ್ತಿದ್ದ.
ಈ ವಿಶ್ವದಲ್ಲಿರೋ ಅನೇಕ ನಿಯಮಗಳಲ್ಲಿ ದುರ್ಬಲ ಶಕ್ತಿ ಒಂದು. ವಿಜ್ಞಾನ ಬರಹಗಾರನಾದ ಅನಿಲ್ ಅನಂತಸ್ವಾಮಿ ಹೇಳೋದು ಈ ನಿಯಮಗಳಲ್ಲಿ ಒಂದು ನಿಯಮ ವಿಭಿನ್ನವಾಗಿದ್ದರೆ “ನಕ್ಷತ್ರಗಳು, ಗ್ರಹಗಳು ಮತ್ತು ಗ್ಯಾಲಕ್ಸಿಗಳು ಇರ್ತಾನೇ ಇರಲಿಲ್ಲ. ಜೀವನ ಅಸಾಧ್ಯವಾಗ್ತಿತ್ತು.”
ಈ ವಿಶ್ವದಲ್ಲಿ ಮನುಷ್ಯನಿಗಿರೋ ಮನೆ. ಭೂಮಿಯಲ್ಲಿ ಸರಿಯಾದ ವಾತಾವರಣ ಮತ್ತು ಸರಿಯಾದ ಪ್ರಮಾಣದ ನೀರಿದೆ. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಲ್ಲೋಕೆ ಸರಿಯಾದ ಗಾತ್ರದ ಚಂದ್ರನನ್ನು ಹೊಂದಿದೆ. ನ್ಯಾಷನಲ್ ಜಿಯೋಗ್ರಾಫಿಕ್ ಹೇಳುವಂತೆ “ಭೂವಿಜ್ಞಾನ, ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ಜಟಿಲ ಜಾಲ ಈ ಭೂಮಿಯಲ್ಲಿ ಮಾತ್ರ ಇದೆ. ಹಾಗಾಗಿ ಮನುಷ್ಯರಿಗೆ ಬದುಕೋಕೆ ಯೋಗ್ಯವಾಗಿರೋ ಒಂದೇ ಒಂದು ಸ್ಥಳ ಅದು ಭೂಮಿ.” *
ಒಬ್ಬ ಬರಹಗಾರ ಹೇಳೋ ಪ್ರಕಾರ ನಮ್ಮ ಗ್ಯಾಲಕ್ಸಿಯಲ್ಲಿರೋ ಸೌರವ್ಯೂಹ ವ್ಯವಸ್ಥೆ “ಬೇರೆ ನಕ್ಷತ್ರಗಳಿಂದ ದೂರದಲ್ಲಿದೆ.” ಹೀಗೆ ಇರುವುದರಿಂದಲೇ ಭೂಮಿಯಲ್ಲಿ ಜೀವರಾಶಿಗಳು ಇರೋದು. ಒಂದುವೇಳೆ ಭೂಮಿ ಬೇರೆ ನಕ್ಷತ್ರಗಳಿಗೆ ಹತ್ರ ಆಗಿದ್ದರೆ ಅಥವಾ ನಮ್ಮ ಗ್ಯಾಲಕ್ಸಿಯ ಮಧ್ಯದಲ್ಲಿ ಅಥವಾ ಅದರ ತುದಿಯಲ್ಲಿ ಇದಿದ್ದರೆ ಗ್ಯಾಲಕ್ಸಿಯ ವಿಕೀರಣದಿಂದ ಜೀವಿಸೋಕೆ ಆಗ್ತಿರಲಿಲ್ಲ. ಕೆಲವು ವಿಜ್ಞಾನಿಗಳು ಹೇಳೋ ಪ್ರಕಾರ ನಾವಿರೋದು ನಮ್ಮ ಗ್ಯಾಲಕ್ಸಿಯ ಬದುಕೋಕೆ ಯೋಗ್ಯವಾಗಿರೋ ಸ್ಥಳದಲ್ಲಿ.
ವಿಶ್ವ ಮತ್ತು ಅದರಲ್ಲಿರೋ ನಿಯಮಗಳ ಬಗ್ಗೆ ಅಧ್ಯಯನ ಮಾಡಿದ ಭೌತಶಾಸ್ತ್ರಜ್ಞ ಪೌಲ್ ಡೇವಿಸ್ ಹೇಳಿದ್ದೇನಂದರೆ, “ಈ ವಿಶ್ವದಲ್ಲಿ ನಮ್ಮ ಅಸ್ತಿತ್ವ ಆಕಸ್ಮಿಕವಾಗಿ ಆಗಿದ್ದು ಅಂತ ನಾನು ನಂಬಲ್ಲ. ನಾವು ಈ ಭೂಮಿಯಲ್ಲಿ ಇರೋದಕ್ಕೆ ಒಂದು ಉದ್ದೇಶ ಇದೆ.” ಈ ವಿಶ್ವವನ್ನು ಮತ್ತು ಮನುಷ್ಯರನ್ನು ದೇವರು ಸೃಷ್ಟಿ ಮಾಡಿದರು ಅಂತ ಡೇವಿಸ್ ಹೇಳುತ್ತಿಲ್ಲ. ಆದರೆ ನಿಮಗೆ ಏನನಿಸುತ್ತೆ? ಮನುಷ್ಯ ಬದುಕೋ ರೀತಿಯಲ್ಲಿ ಈ ವಿಶ್ವ ಮತ್ತು ಭೂಮಿಯನ್ನು ಮಾಡಿದ ಹಾಗೆ ಕಾಣುತ್ತೆ. ಹಾಗೆ ಅನಿಸೋಕೆ ಕಾರಣ ಅದನ್ನು ಆ ರೀತಿಯಲ್ಲಿ ರಚಿಸಿರೋದ್ರಿಂದನಾ?
^ ಪ್ಯಾರ. 8 ನ್ಯಾಷನಲ್ ಜಿಯೋಗ್ರಾಫಿಕ್ ಲೇಖನ, ಭೂಮಿಯನ್ನು ಮತ್ತು ಮನುಷ್ಯರನ್ನು ದೇವರೇ ಸೃಷ್ಟಿ ಮಾಡಿದ್ದು ಅಂತ ಹೇಳ್ತಿಲ್ಲ. ಬದಲಿಗೆ ಭೂಮಿ ಮನುಷ್ಯರಿಗೆ ವಾಸಿಸಲಿಕ್ಕೆ ಯೋಗ್ಯವಾಗಿರೋ ಸ್ಥಳ ಅಂತಷ್ಟೇ ಹೇಳ್ತಿದೆ.