ಸೃಷ್ಟಿಕರ್ತನಿದ್ದಾನೆ ಅಂತ ನಂಬೋದು ಯಾಕೆ ಪ್ರಾಮುಖ್ಯ
ಈ ಪ್ರಶ್ನೆಗೆ ಉತ್ತರ ತಿಳಿಯಲೇಬೇಕಾ? ಪುರಾವೆಗಳು ಸರ್ವಶಕ್ತನಿದ್ದಾನೆ ಅಂತ ನಿಮಗೆ ಮನವರಿಕೆ ಮಾಡಿಸಿದ್ರೆ ಬೈಬಲನ್ನು ದೇವರೇ ಬರೆಸಿರೋದು ಅನ್ನೋದಕ್ಕಿರೋ ಆಧಾರವನ್ನೂ ಪರೀಕ್ಷಿಸಬೇಕು ಅಂತ ಅನಿಸಬಹುದು. ಬೈಬಲ್ ಹೇಳೋದನ್ನು ನಂಬೋದಾದರೆ ನಿಮಗೆ ಸಿಗುವ ಪ್ರಯೋಜನಗಳು . . .
ನಿಮ್ಮ ಜೀವನಕ್ಕೊಂದು ಅರ್ಥ ಸಿಗುತ್ತೆ
ಬೈಬಲ್ ಹೇಳುತ್ತೆ: “ಆತನು[ದೇವರು] ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು. ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”—ಅಪೊಸ್ತಲರ ಕಾರ್ಯ 14:17.
ಅರ್ಥ ಏನು?: ಈ ಭೂಮಿಯಲ್ಲಿ ಇರೋದೆಲ್ಲ ಸೃಷ್ಟಿಕರ್ತ ನಮಗೆ ಕೊಟ್ಟಿರೋ ಉಡುಗೊರೆ. ಇದನ್ನೆಲ್ಲ ಕೊಟ್ಟು ದೇವರು ಎಷ್ಟು ಕಾಳಜಿ ತೋರಿಸಿದ್ದಾನೆ ಅಂತ ಅರ್ಥಮಾಡಿಕೊಂಡ್ರೆ ಈ ಉಡುಗೊರೆಗೆ ಇನ್ನಷ್ಟು ಕೃತಜ್ಞತೆ ತೋರಿಸ್ತೀವಿ.
ನಿಮಗೆ ಪ್ರಯೋಜನ ಆಗೋ ಒಳ್ಳೇ ಸಲಹೆಗಳನ್ನು ಪಡೆಯುತ್ತೀರ
ಬೈಬಲ್ ಹೇಳುತ್ತೆ: “ನಿನಗೆ ನ್ಯಾಯ-ನೀತಿಯಿಂದ, ಭೇದಭಾವ ಮಾಡದೆ ಇರೋದು ಅಂದ್ರೇನು ಅಂತ ಅರ್ಥ ಆಗುತ್ತೆ, ಯಾವುದು ಒಳ್ಳೇ ದಾರಿ ಅಂತ ಗೊತ್ತಾಗುತ್ತೆ.”—ಜ್ಞಾನೋಕ್ತಿ 2:9.
ಅರ್ಥ ಏನು?: ಸಂತೋಷವಾಗಿರಲು ನಮಗೆ ಏನು ಬೇಕು ಅಂತ ಸೃಷ್ಟಿಕರ್ತನಿಗೆ ಗೊತ್ತು. ಹಾಗಾಗಿ ಬೈಬಲ್ ಕಲಿಯುವಾಗ ನಿಮಗೆ ತುಂಬ ಅಗತ್ಯವಾಗಿರುವ ವಿಷಯಗಳು ಯಾವುದು ಅಂತ ತಿಳಿಯುತ್ತೀರ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ತಿಳಿಯುತ್ತೀರ
ಬೈಬಲ್ ಹೇಳುತ್ತೆ: “ದೇವರ ಬಗ್ಗೆ ಹೆಚ್ಚು ಕಲಿತೀಯ.”—ಜ್ಞಾನೋಕ್ತಿ 2:5.
ಅರ್ಥ ಏನು?: ಸೃಷ್ಟಿಕರ್ತನಿದ್ದಾನೆ ಅಂತ ತಿಳಿಯುವಾಗ ತುಂಬ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯುತ್ತೀರ. ಅಂಥ ಕೆಲವು ಪ್ರಶ್ನೆಗಳು: ಜೀವನದ ಉದ್ದೇಶ ಏನು? ಇಷ್ಟೊಂದು ಕಷ್ಟ ಯಾಕಿದೆ? ಸತ್ತ ಮೇಲೆ ಏನಾಗುತ್ತೆ? ಈ ಪ್ರಶ್ನೆಗಳಿಗೆ ಬೈಬಲಲ್ಲಿ ಉತ್ತರ ಸಿಗುತ್ತೆ.
ಭವಿಷ್ಯದ ಮೇಲೆ ಭರವಸೆ ಇಡೋಕೆ ಸಹಾಯ ಮಾಡುತ್ತೆ
ಬೈಬಲ್ ಹೇಳುತ್ತೆ: “ಯೆಹೋವ ಹೇಳೋದು ಏನಂದ್ರೆ . . . ‘ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು, ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.’”—ಯೆರೆಮೀಯ 29:11.
ಅರ್ಥ ಏನು?: ಭವಿಷ್ಯದಲ್ಲಿ ದೇವರು ಕೆಟ್ಟತನ, ಕಷ್ಟ, ಮರಣ ತೆಗೆದುಹಾಕ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಆ ಮಾತಲ್ಲಿ ನಂಬಿಕೆ ಇಟ್ರೆ ಪ್ರತಿದಿನ ಬರೋ ಸಮಸ್ಯೆಗಳನ್ನು ಎದುರಿಸೋಕೆ ಆಗುತ್ತೆ.