ಇದನ್ನ ಮಾಡಿ ನೋಡಿ!
ಅಧ್ಯಯನ ಮಾಡುವಾಗ ನಿಮ್ಮ ಸುತ್ತಮುತ್ತ ಜಾಗ ಚೆನ್ನಾಗಿರೋ ತರ ನೋಡ್ಕೊಳ್ಳಿ
ಬೈಬಲನ್ನ ಚೆನ್ನಾಗಿ ಓದಿ, ಅಧ್ಯಯನ ಮಾಡೋಕೆ, ಅದ್ರಿಂದ ತುಂಬ ವಿಷ್ಯಗಳನ್ನ ಕಲಿಯೋಕೆ ನಿಮಗೆ ಇಷ್ಟ ಇದ್ಯಾ? ಹಾಗಿದ್ರೆ ಈ ಕೆಳಗಿನ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ:
-
ಒಳ್ಳೇ ಜಾಗ ಆರಿಸ್ಕೊಳ್ಳಿ. ನೀಟಾಗಿ ಇರೋ ಜಾಗದಲ್ಲಿ ಅಧ್ಯಯನ ಮಾಡೋಕೆ ಪ್ರಯತ್ನ ಮಾಡಿ. ನೀವು ಟೇಬಲ್ ಅಥವಾ ಡೆಸ್ಕ್ ಹತ್ರ ಕೂತ್ಕೊಂಡು ಅಧ್ಯಯನ ಮಾಡಬಹುದು ಅಥವಾ ಹೊರಗಡೆ ಒಂದು ಒಳ್ಳೇ ಜಾಗಕ್ಕೆ ಹೋಗಿ ಅಧ್ಯಯನ ಮಾಡಬಹುದು.
-
ನೀವೊಬ್ರೆ ಇರೋ ತರ ನೋಡ್ಕೊಳ್ಳಿ. “ಬೆಳಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ದೂರದ ಒಂದು ಜಾಗಕ್ಕೆ” ಹೋಗಿ ಪ್ರಾರ್ಥನೆ ಮಾಡ್ತಿದ್ದನು. (ಮಾರ್ಕ 1:35) ಒಂದುವೇಳೆ ನಿಮಗೆ ಈ ತರ ಮಾಡೋಕೆ ಆಗ್ತಿಲ್ಲಾಂದ್ರೆ ನಿಮ್ಮ ಕುಟುಂಬದವ್ರಿಗೆ ಅಥವಾ ನಿಮ್ಮ ಜೊತೆ ಇರೋರಿಗೆ ನೀವು ಯಾವಾಗೆಲ್ಲ ವೈಯಕ್ತಿಕ ಅಧ್ಯಯನ ಮಾಡ್ತೀರ ಅಂತ ತಿಳಿಸಿ. ಆ ಸಮಯದಲ್ಲಿ ಡಿಸ್ಟರ್ಬ್ ಮಾಡದೆ ಇರೋಕೆ ಅವ್ರ ಹತ್ರ ಕೇಳಿ.
-
ಚೆನ್ನಾಗಿ ಗಮನಕೊಡಿ. ನೀವು ಅಧ್ಯಯನ ಮಾಡೋಕೆ ಮೊಬೈಲ್ ಅಥವಾ ಟ್ಯಾಬ್ ಬಳಸ್ತಾ ಇದ್ರೆ ಅದನ್ನ ಸೈಲೆಂಟ್ನಲ್ಲಿ ಅಥವಾ ಏರೋಪ್ಲೇನ್ ಮೋಡ್ನಲ್ಲಿ ಇಡಿ. ನಿಮಗೆ ಯಾವುದಾದ್ರೂ ಕೆಲಸ ನೆನಪಿಗೆ ಬಂದ್ರೆ ಅದನ್ನ ಬರೆದಿಡಿ, ಅಧ್ಯಯನ ಮುಗಿದ ಮೇಲೆ ಅದನ್ನ ಮಾಡಿ. ನಿಮಗೆ ಚೆನ್ನಾಗಿ ಗಮನ ಕೊಡೋಕೆ ಆಗದೆ ಇದ್ರೆ ಒಂಚೂರು ಬ್ರೇಕ್ ತಗೊಂಡು ವಾಕಿಂಗ್ ಅಥವಾ ಎಕ್ಸರ್ಸೈಸ್ ಮಾಡಿ.