ವಾಚಕರಿಂದ ಪ್ರಶ್ನೆಗಳು
“ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ [ಯೆಹೋವನು] ಅನುಮತಿಸುವುದಿಲ್ಲ” ಎಂದು ಅಪೊಸ್ತಲ ಪೌಲ ಹೇಳಿದ್ದಾನೆ. (1 ಕೊರಿಂ. 10:13) ಇದರರ್ಥ ಯಾವ್ಯಾವ ಕಷ್ಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ದೇವರು ಮುಂಚೆಯೇ ತೂಗಿನೋಡಿ ನಂತರ ಕಷ್ಟಗಳನ್ನು ಅನುಮತಿಸುತ್ತಾನೆ ಎಂದಾ?
ಈ ಅಭಿಪ್ರಾಯ ನಿಜವಾಗಿದ್ದರೆ ಜನರಲ್ಲಿ ಯಾವ ಭಾವನೆ ಮೂಡಬಹುದೆಂದು ನೋಡಿ. ಒಬ್ಬ ಸಹೋದರನ ಮಗ ಆತ್ಮಹತ್ಯೆ ಮಾಡಿಕೊಂಡಾಗ ಆ ಸಹೋದರ ಹೀಗೆ ಹೇಳಿದರು: ‘ನನ್ನ ಮಗ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗೂ ನನ್ನ ಹೆಂಡತಿಗೂ ಇದೆ ಅಂತ ಯೆಹೋವನಿಗೆ ಮೊದಲೇ ಗೊತ್ತಿತ್ತಾ? ದೇವರಿಗೆ ಇದು ಗೊತ್ತಿದ್ದರಿಂದ ಈ ಘಟನೆ ನಡೆಯುವಂತೆ ಬಿಟ್ಟನಾ?’ ಹಾಗಾದರೆ ದೇವರು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನಿಯಂತ್ರಿಸುತ್ತಾನೆ ಎಂದು ಇದರ ಅರ್ಥನಾ?
ಒಂದನೇ ಕೊರಿಂಥ 10:13ರಲ್ಲಿ ಪೌಲ ಹೇಳಿದ ಮಾತುಗಳ ಬಗ್ಗೆ ಇನ್ನೂ ಸ್ವಲ್ಪ ಸಂಶೋಧನೆ ಮಾಡಿದರೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದೇನೆಂದರೆ, ನಮಗೆ ಯಾವ ಕಷ್ಟಗಳನ್ನು ಸಹಿಸಿಕೊಳ್ಳಲು ಆಗುತ್ತದೆಂದು ಯೆಹೋವನು ಮೊದಲೇ ತೂಗಿನೋಡಿ ಕಷ್ಟಗಳನ್ನು ಅನುಮತಿಸುತ್ತಾನೆ ಎನ್ನುವುದಕ್ಕೆ ಬೈಬಲಲ್ಲಿ ಆಧಾರವಿಲ್ಲ. ಹೀಗನ್ನಲು ನಾಲ್ಕು ಕಾರಣಗಳಿವೆ.
ಮೊದಲನೇ ಕಾರಣ: ಯೆಹೋವನು ಮಾನವರಿಗೆ ಇಚ್ಛಾಸ್ವಾತಂತ್ರ್ಯ ಎಂಬ ಉಡುಗೊರೆ ಕೊಟ್ಟಿದ್ದಾನೆ. ಅಂದರೆ ಜೀವನದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ನಾವೇ ತೀರ್ಮಾನಿಸಬೇಕೆಂದು ಆತನು ಬಯಸುತ್ತಾನೆ. (ಧರ್ಮೋ. 30:19, 20; ಯೆಹೋ. 24:15) ನಾವು ಸರಿಯಾದ ಮಾರ್ಗದಲ್ಲಿ ನಡೆಯಲು ತೀರ್ಮಾನಿಸಿದರೆ ಯೆಹೋವನು ‘ನಮಗೆ ಬೇಕಾದ ಮಾರ್ಗದರ್ಶನ ಕೊಡುತ್ತಾನೆ.’ (ಜ್ಞಾನೋ. 16:9, ನೂತನ ಲೋಕ ಭಾಷಾಂತರ) ತಪ್ಪಾದ ಮಾರ್ಗದಲ್ಲಿ ನಡೆಯುವ ತೀರ್ಮಾನ ತೆಗೆದುಕೊಂಡರೆ ಕೆಟ್ಟ ಫಲಿತಾಂಶಗಳನ್ನು ನಾವು ಅನುಭವಿಸಲೇ ಬೇಕಾಗುತ್ತದೆ. (ಗಲಾ. 6:7) ಆದರೆ ನಮಗೆ ಯಾವ್ಯಾವ ಕಷ್ಟಗಳು ಬರಬೇಕು ಎಂದು ಯೆಹೋವನು ಮೊದಲೇ ತೀರ್ಮಾನಿಸುವುದಾದರೆ ನಮ್ಮ ಇಚ್ಛಾಸ್ವಾತಂತ್ರ್ಯಕ್ಕೆ ಆತನು ಬೆಲೆ ಕೊಡುವುದಿಲ್ಲ ಎಂದಾಗುತ್ತದೆ.
ಎರಡನೇ ಕಾರಣ: ‘ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ’ ಯೆಹೋವನು ನಮ್ಮನ್ನು ಕಾಪಾಡುವುದಿಲ್ಲ. (ಪ್ರಸಂ. 9:11, ನೂತನ ಲೋಕ ಭಾಷಾಂತರ) ಒಂದು ದುರಂತ ನಡೆಯುವಾಗ ನಾವಲ್ಲಿದ್ದರೆ ನಮಗೆ ಏಟಾಗಬಹುದು, ಜೀವವನ್ನೂ ಕಳೆದುಕೊಳ್ಳಬಹುದು. ಯೇಸು ಒಮ್ಮೆ, ಒಂದು ಬುರುಜು ಬಿದ್ದು 18 ಜನರು ಸಾವನ್ನಪ್ಪಿದ ಘಟನೆಯ ಬಗ್ಗೆ ಮಾತಾಡುತ್ತಿದ್ದಾಗ ಆ ದುರ್ಘಟನೆಗೆ ದೇವರು ಕಾರಣನಲ್ಲ ಎಂದು ಸೂಚಿಸಿದ್ದನು. (ಲೂಕ 13:1-5) ಅನಿರೀಕ್ಷಿತವಾಗಿ ನಡೆಯುವ ಘಟನೆಗಳಲ್ಲಿ ಯಾರು ಸಾಯುತ್ತಾರೆ, ಯಾರು ಉಳಿಯುತ್ತಾರೆ ಎಂದು ಆ ಘಟನೆ ನಡೆಯುವ ಮೊದಲೇ ದೇವರು ನಿರ್ಧರಿಸುವುದಿಲ್ಲವೆಂದು ಇದರಿಂದ ಗೊತ್ತಾಗುತ್ತದೆ.
ಮೂರನೇ ಕಾರಣ: ಸೈತಾನ ಹಾಕಿದ ಸವಾಲಿನಲ್ಲಿ ನಾವೆಲ್ಲರೂ ಒಳಗೂಡಿದ್ದೇವೆ. ಯೆಹೋವನ ಆರಾಧಕರ ಮೇಲೆ ಸೈತಾನ ಹಾಕಿದ ಯೋಬ 1:9-11; 2:4; ಪ್ರಕ. 12:10) ಒಂದುವೇಳೆ ಕೆಲವು ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ನಮಗಿಲ್ಲ ಎಂದು ಯೆಹೋವನು ಆ ಕಷ್ಟಗಳು ನಮಗೆ ಬರದಂತೆ ತಡೆದರೆ ಸೈತಾನನ ಆ ಮಾತು ನಿಜ ಎಂದಾಗುವುದಿಲ್ಲವೇ?
ಸವಾಲು ಏನೆಂದು ನಿಮಗೆ ನೆನಪಿದೆಯಾ? ನಮ್ಮ ಸ್ವಾರ್ಥಕ್ಕಾಗಿ ದೇವರನ್ನು ಆರಾಧಿಸುತ್ತೇವೆ, ಕಷ್ಟ ಬಂದರೆ ಯೆಹೋವನಿಗೆ ನಿಷ್ಠೆ ತೋರಿಸುವುದನ್ನು ಬಿಟ್ಟುಬಿಡುತ್ತೇವೆ ಎಂದು ಹೇಳಿದ್ದಾನೆ. (ನಾಲ್ಕನೇ ಕಾರಣ: ನಮ್ಮ ಜೀವನದಲ್ಲಿ ಆಗುವ ಪ್ರತಿಯೊಂದು ಘಟನೆಯನ್ನೂ ಯೆಹೋವನು ಮುಂಚೆಯೇ ತಿಳಿದುಕೊಳ್ಳುವುದಿಲ್ಲ. ನಮಗೆ ಯಾವ ಕಷ್ಟಗಳನ್ನು ಸಹಿಸಿಕೊಳ್ಳಲು ಆಗುತ್ತದೆ ಯಾವುದು ಆಗುವುದಿಲ್ಲ ಎಂದು ದೇವರು ತಿಳಿದುಕೊಳ್ಳಬೇಕಾದರೆ ಆತನು ನಮ್ಮ ಜೀವನದಲ್ಲಿ ನಡೆಯಲಿರುವ ಪ್ರತಿಯೊಂದು ವಿಷಯವನ್ನೂ ಮುಂಚೆಯೇ ತಿಳಿದುಕೊಳ್ಳಬೇಕಾಗುತ್ತದೆ ಎಂದಾಯಿತು. ಆದರೆ ದೇವರು ಹೀಗೆ ಮಾಡುತ್ತಾನೆಂದು ಬೈಬಲ್ ಹೇಳುವುದಿಲ್ಲ. ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂದು ನೋಡುವ ಸಾಮರ್ಥ್ಯ ದೇವರಿಗಿದೆ. (ಯೆಶಾ. 46:10) ಆದರೂ ಯಾವುದನ್ನು ನೋಡಬೇಕೆಂದು ಆತನು ಆಯ್ಕೆ ಮಾಡುತ್ತಾನೆ ಎಂದು ನಮಗೆ ಬೈಬಲಿನಿಂದ ಗೊತ್ತಾಗುತ್ತದೆ. (ಆದಿ. 18:20, 21; 22:12) ಹೀಗೆ ಯೆಹೋವನಿಗೆ ಭವಿಷ್ಯವನ್ನು ನೋಡುವ ಸಾಮರ್ಥ್ಯ ಇದ್ದರೂ ನಮ್ಮ ಇಚ್ಛಾಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತಾನೆ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳದೆ ತನ್ನ ಶಕ್ತಿ-ಸಾಮರ್ಥ್ಯವನ್ನು ಬಳಸುವ ದೇವರಾಗಿರುವ ಯೆಹೋವನಿಂದ ನಾವು ಇದನ್ನು ತಾನೇ ನಿರೀಕ್ಷಿಸುತ್ತೇವೆ?—ಧರ್ಮೋ. 32:4; 2 ಕೊರಿಂ. 3:17.
ಹಾಗಾದರೆ “ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ [ದೇವರು] ಅನುಮತಿಸುವುದಿಲ್ಲ” ಅಂದರೆ ಅರ್ಥವೇನು? ಕಷ್ಟಗಳು ಬರುವ ಮುಂಚೆ ಅಲ್ಲ ಕಷ್ಟಗಳು ಬಂದಾಗ ಯೆಹೋವನು ಏನು ಮಾಡುತ್ತಾನೆ ಎಂದು ಇಲ್ಲಿ ಪೌಲ ಹೇಳುತ್ತಿದ್ದಾನೆ. * ನಮಗೆ ಏನೇ ಕಷ್ಟ ಬಂದರೂ ಯೆಹೋವನ ಮೇಲೆ ನಮಗೆ ಭರವಸೆ ಇದ್ದರೆ ಆತನು ಸಹಾಯ ಮಾಡುತ್ತಾನೆ ಎನ್ನುವ ಆಶ್ವಾಸನೆಯನ್ನು ಈ ವಚನ ಕೊಡುತ್ತದೆ. (ಕೀರ್ತ. 55:22) ಪೌಲ ಬರೆದ ಈ ಆಶ್ವಾಸನೆಯ ಮಾತುಗಳು ಎರಡು ಮೂಲಭೂತ ಸತ್ಯಗಳ ಮೇಲೆ ಆಧರಿತವಾಗಿದೆ.
ಒಂದು, “ಮನುಷ್ಯರಿಗೆ ಸಹಜವಾಗಿರುವ” ಕಷ್ಟಗಳೇ ನಮಗೆ ಬರುತ್ತವೆ. ಸೈತಾನನ ಲೋಕದಲ್ಲಿ ಇರುವ ತನಕ ನಮಗೆ ಕಷ್ಟಗಳು ಬಂದೇ ಬರುತ್ತವೆ, ನಮ್ಮ ಜೀವನದಲ್ಲಿ ಕೆಲವೊಮ್ಮೆ ದುರಂತಗಳೂ ಆಗುತ್ತವೆ. ದೇವರ ಮೇಲೆ ಭರವಸೆ ಇಟ್ಟರೆ ಆ ಕಷ್ಟಗಳನ್ನು ಸಹಿಸಿಕೊಳ್ಳಲು ನಮ್ಮಿಂದ ಆಗುತ್ತದೆ. (1 ಪೇತ್ರ 5:8, 9) ಪೌಲನು 1 ಕೊರಿಂಥ 10:13 ಕ್ಕಿಂತ ಹಿಂದಿನ ವಚನಗಳಲ್ಲಿ ಇಸ್ರಾಯೇಲ್ಯರು ಅರಣ್ಯದಲ್ಲಿ ಪಟ್ಟ ಕಷ್ಟಗಳ ಬಗ್ಗೆ ಹೇಳಿದನು. (1 ಕೊರಿಂ. 10:6-11) ಆ ಕಷ್ಟಗಳು ಮನುಷ್ಯರಿಗೆ ಬಾರದಂಥ ಕಷ್ಟಗಳಾಗಿರಲಿಲ್ಲ. ಅಷ್ಟೇ ಅಲ್ಲ, ನಂಬಿಗಸ್ತ ಇಸ್ರಾಯೇಲ್ಯರಿಗೆ ಸಹಿಸಿಕೊಳ್ಳಲು ಆಗದಂಥ ಕಷ್ಟಗಳಾಗಿರಲಿಲ್ಲ. ಆದರೆ “ಅವರಲ್ಲಿ ಕೆಲವರು” ದೇವರಿಗೆ ಅವಿಧೇಯರಾದರು ಎಂದು ಪೌಲ ಆ ವಚನಗಳಲ್ಲಿ ನಾಲ್ಕು ಸಾರಿ ಹೇಳಿದನು. ಇಂಥವರು ಯೆಹೋವನ ಮೇಲೆ ಭರವಸೆ ಇಡದಿದ್ದ ಕಾರಣ ತಪ್ಪಾದ ಆಸೆಗಳಿಗೆ ಬಲಿಬಿದ್ದು ನಾಶವಾದರು.
ಎರಡು, “ದೇವರು ನಂಬಿಗಸ್ತನು.” “ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ” ದೇವರು ನಿಷ್ಠಾವಂತ ಪ್ರೀತಿ ತೋರಿಸುತ್ತಾನೆ. ಇದನ್ನು ಆತನು ಹಿಂದಿನ ಕಾಲದಲ್ಲಿ ತನ್ನ ಜನರನ್ನು ನೋಡಿಕೊಂಡ ರೀತಿಯಿಂದ ನಾವು ತಿಳಿದುಕೊಳ್ಳಬಹುದು. (ಧರ್ಮೋ. 7:9) ದೇವರು ಮಾತು ಕೊಟ್ಟಂತೆಯೇ ನಡೆದುಕೊಳ್ಳುತ್ತಾನೆ ಎಂದೂ ತಿಳಿದುಕೊಳ್ಳಬಹುದು. (ಯೆಹೋ. 23:14) ನಾವು ಈ ವಿಷಯದಲ್ಲಿ ಭರವಸೆ ಇಡಬಹುದು: (1) ನಮಗೆ ಬಂದಿರುವ ಕಷ್ಟ ಸಹಿಸಿಕೊಳ್ಳಲು ಆಗದಿರುವಷ್ಟರ ಮಟ್ಟಿಗೆ ಹೋಗುವಂತೆ ಆತನು ಬಿಡುವುದಿಲ್ಲ ಮತ್ತು (2) “ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.”
ಕಷ್ಟ ಬಂದಾಗ ಯೆಹೋವನ ಮೇಲೆ ಭರವಸೆ ಇಡುವವರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಹೇಗೆ ಸಿದ್ಧಪಡಿಸುತ್ತಾನೆ? ಆತನ ಚಿತ್ತವಿದ್ದರೆ ಆ ಕಷ್ಟವನ್ನೇ ತೆಗೆದುಹಾಕಬಹುದು. ಆದರೆ ಹೆಚ್ಚಾಗಿ, ನಮಗೆ ಬಂದ ಕಷ್ಟವನ್ನು ಸಹಿಸಿ ಜಯಿಸಲು ಏನು ಬೇಕೋ ಅದನ್ನು ಕೊಡುವ ಮೂಲಕ ‘ಮಾರ್ಗ ಸಿದ್ಧಪಡಿಸುತ್ತಾನೆ.’ ಇದನ್ನೇ ನಾವು ಪೌಲನ ಮಾತುಗಳಲ್ಲಿ ಗಮನಿಸುತ್ತೇವೆ: “ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ [ಯೆಹೋವನು] ಸಿದ್ಧಪಡಿಸುವನು.” ಆತನು ಇದನ್ನು ಮಾಡುವ ವಿಧಗಳನ್ನು ಮುಂದೆ ತಿಳಿಸಲಾಗಿದೆ.
-
“ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ.” (2 ಕೊರಿಂ. 1:3, 4) ಯೆಹೋವನು ಬೈಬಲ್, ಪವಿತ್ರಾತ್ಮ ಮತ್ತು ನಂಬಿಗಸ್ತ ಆಳು ಕೊಡುವ ಆಧ್ಯಾತ್ಮಿಕ ಆಹಾರದ ಮೂಲಕ ನಮ್ಮ ಮನಸ್ಸನ್ನು ಶಾಂತ ಮಾಡುತ್ತಾನೆ. ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತಾನೆ.—ಮತ್ತಾ. 24:45; ಯೋಹಾ. 14:16, ಪಾದಟಿಪ್ಪಣಿ; ರೋಮ. 15:4.
-
ಪವಿತ್ರಾತ್ಮದ ಮೂಲಕ ಮಾರ್ಗದರ್ಶಿಸುತ್ತಾನೆ. (ಯೋಹಾ. 14:26) ಕಷ್ಟಗಳು ಬಂದಾಗ ಬೈಬಲ್ ವೃತ್ತಾಂತಗಳನ್ನು ಮತ್ತು ತತ್ವಗಳನ್ನು ನೆನಪಿಸಿಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುತ್ತದೆ. ಇದರಿಂದ ನಮಗೆ ಸರಿಯಾದ ನಿರ್ಣಯಗಳನ್ನು ಮಾಡಲು ಆಗುತ್ತದೆ.
-
ದೇವದೂತರ ಮೂಲಕ ಸಹಾಯ ಮಾಡುತ್ತಾನೆ.—ಇಬ್ರಿ. 1:14.
-
ಸಹೋದರ ಸಹೋದರಿಯರ ಮೂಲಕ ಸಹಾಯ ಕೊಡುತ್ತಾನೆ. ಅವರ ಮಾತುಗಳು ಮತ್ತು ಕ್ರಿಯೆಗಳು ನಮಗೆ “ಬಲವರ್ಧಕ ಸಹಾಯ” ಕೊಡುತ್ತವೆ.—ಕೊಲೊ. 4:11.
ಹಾಗಾದರೆ 1 ಕೊರಿಂಥ 10:13ರಲ್ಲಿ ಪೌಲ ಹೇಳಿದ ಮಾತುಗಳ ಅರ್ಥವೇನು? ನಮಗೆ ಯಾವ ಕಷ್ಟಗಳು ಬರಬೇಕು ಎಂದು ಯೆಹೋವನು ತೀರ್ಮಾನಿಸುವುದಿಲ್ಲ. ಯೆಹೋವನ ಮೇಲೆ ಸಂಪೂರ್ಣ ಭರವಸೆ ಇಟ್ಟರೆ ನಮ್ಮ ಕಷ್ಟ ಸಹಿಸಿಕೊಳ್ಳಲು ಆಗದಿರುವಷ್ಟರ ಮಟ್ಟಿಗೆ ಹೋಗುವಂತೆ ಆತನು ಬಿಡುವುದಿಲ್ಲ. ಅವುಗಳನ್ನು ತಾಳಿಕೊಳ್ಳಲು ಶಕ್ತರಾಗುವಂತೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಯಾವಾಗಲೂ ಸಿದ್ಧಪಡಿಸುತ್ತಾನೆ. ಇದು ನಮಗೆ ಎಂಥಾ ಆಶ್ವಾಸನೆ ನೀಡುತ್ತದೆ ಅಲ್ಲವೇ!
^ ಪ್ಯಾರ. 2 “ಪ್ರಲೋಭನೆ” ಎಂಬ ಪದಕ್ಕೆ ಬಳಸಲಾಗಿರುವ ಗ್ರೀಕ್ ಪದಕ್ಕೆ “ಪರೀಕ್ಷೆ, ಕಷ್ಟ” ಎಂಬ ಅರ್ಥಗಳೂ ಇವೆ.