ಈ ಪ್ರಶ್ನೆ ಕೇಳಿ ನೋಡಿ!
ಮೇರಿ ಮತ್ತು ಅವಳ ಗಂಡ ಜಾನ್ a ಇರೋ ಕಡೆಗೆ ಫಿಲಿಪ್ಪೀನ್ಸ್‌ನಿಂದ ತುಂಬ ಜನ ಕೆಲಸ ಹುಡ್ಕೊಂಡು ಬರ್ತಾರೆ. ಇವ್ರಿಗೆಲ್ಲಾ ಸಾರೋದಂದ್ರೆ ಮೇರಿ ಮತ್ತು ಜಾನ್‌ಗೆ ತುಂಬಾ ಇಷ್ಟ. ಕೊರೋನಾ ಸಮಯದಲ್ಲಿ ಮೇರಿ ಬರೀ ಅವ್ರ ದೇಶದವ್ರಿಗಷ್ಟೇ ಅಲ್ಲ ಬೇರೆ ದೇಶದವ್ರಿಗೂ ಬೈಬಲ್ ಸ್ಟಡಿ ಮಾಡಿದ್ರು. ಇದೆಲ್ಲಾ ಹೇಗೆ ಸಾಧ್ಯ ಆಯ್ತು?
ಮೇರಿ ತನ್ನ ಬೈಬಲ್ ವಿದ್ಯಾರ್ಥಿಗಳ ಹತ್ರ “ಬೈಬಲ್ ಕಲಿಯೋಕೆ ಇಷ್ಟಪಡೋ ಯಾರಾದ್ರೂ ನಿಮಗೆ ಗೊತ್ತಾ?” ಅಂತ ಕೇಳ್ತಾಳೆ. ಅವರು ಗೊತ್ತು ಅಂದ್ರೆ, “ಪ್ಲೀಸ್, ನಂಗೆ ಅವ್ರನ್ನ ಪರಿಚಯ ಮಾಡಿಸ್ತೀರಾ?” ಅಂತ ಕೇಳ್ತಾಳೆ. ಈ ತರ ಪ್ರಶ್ನೆ ಕೇಳೋದ್ರಿಂದ ತುಂಬಾ ಒಳ್ಳೆ ಫಲಿತಾಂಶಗಳು ಸಿಕ್ಕಿದೆ. ಯಾಕಂದ್ರೆ ಸಾಮಾನ್ಯವಾಗಿ ಯಾರು ಬೈಬಲ್ ಕಲಿತಾರೋ ಅವರಿಗೆ ತಾವು ಕಲ್ತಿರೋದನ್ನ ತಮ್ಮ ಫ್ರೆಂಡ್ಸ್‌ಗೆ ಅಥವಾ ಸಂಬಂಧಿಕರಿಗೆ ಹೇಳಬೇಕು ಅನ್ನೋ ಆಸೆ ಇರುತ್ತೆ. ತನ್ನ ಬೈಬಲ್ ವಿದ್ಯಾರ್ಥಿಗಳಿಗೆ ಮೇರಿ ಈ ಪ್ರಶ್ನೆ ಕೇಳಿದ್ರಿಂದ ಏನಾಯ್ತು ಗೊತ್ತಾ?
ಮೇರಿ ತನ್ನ ವಿದ್ಯಾರ್ಥಿ ಜಾಸ್ಮಿನ್ ಹತ್ರ ಈ ಪ್ರಶ್ನೆ ಕೇಳಿದಾಗ ಅವಳು ನಾಲ್ಕು ಜನ್ರನ್ನ ಪರಿಚಯ ಮಾಡಿಸಿದಳು. ಅದ್ರಲ್ಲೊಬ್ಬಳು ಕ್ರಿಸ್ಟಿನ್. ಕ್ರಿಸ್ಟಿನ್‌ಗೆ ಬೈಬಲ್ ಕಲಿಯೋದು ಎಷ್ಟು ಇಷ್ಟ ಆಯ್ತು ಅಂದ್ರೆ ‘ವಾರದಲ್ಲಿ ಎರಡು ಸಲ ನಂಗೆ ಕಲಿಸಿಕೊಡ್ತೀರಾ?’ ಅಂತ ಕೇಳಿದಳು. ಮೇರಿ ಕ್ರಿಸ್ಟಿನ್‌ಗೂ “ಬೈಬಲ್ ಕಲಿಯೋಕೆ ಇಷ್ಟಪಡೋ ಯಾರಾದ್ರೂ ನಿಮಗೆ ಗೊತ್ತಾ?” ಅಂತ ಕೇಳಿದಳು. ಅದಕ್ಕೆ ಅವಳು, “ಹಾ ಗೊತ್ತು, ನಾನು ನನ್ನ ಫ್ರೆಂಡ್ಸ್‌ನ ಪರಿಚಯ ಮಾಡಿಸ್ತೀನಿ” ಅಂತ ಹೇಳಿ ನಾಲ್ಕು ಜನ್ರನ್ನ ಪರಿಚಯ ಮಾಡಿಸಿದಳು. ಅವರೂ ಬೈಬಲ್ ಕಲಿಯೋಕೆ ಶುರುಮಾಡಿದ್ರು. ಸ್ವಲ್ಪದಿನ ಆದ್ಮೇಲೆ ಕ್ರಿಸ್ಟಿನ್ ಮತ್ತೆ ಕೆಲವು ಫ್ರೆಂಡ್ಸ್‌ನ ಪರಿಚಯ ಮಾಡಿಸಿದಳು. ಆ ಫ್ರೆಂಡ್ಸ್ ಅವ್ರ ಫ್ರೆಂಡ್ಸ್‌ನ ಪರಿಚಯ ಮಾಡಿಸಿದ್ರು. ಹೀಗೆ ಅವ್ರೂ ಅವರ ಫ್ರೆಂಡ್ಸ್‌ನ ಪರಿಚಯ ಮಾಡಿಸ್ತಾ ಹೋದ್ರು.
ಬೈಬಲ್ ವಿದ್ಯಾರ್ಥಿಯಾಗಿದ್ದ ಕ್ರಿಸ್ಟಿನ್‌ಗೆ ಫಿಲಿಪ್ಪೀನ್ಸ್‌ನಲ್ಲಿರೋ ತನ್ನ ಕುಟುಂಬ ಸಹ ಬೈಬಲ್ ಕಲಿಬೇಕು ಅನ್ನೋ ಆಸೆ ಇತ್ತು. ಅದಕ್ಕೆ ಅವಳು ತನ್ನ ಮಗಳು ಆ್ಯಂಡ್ರಿಯಾ ಹತ್ರ ಅದ್ರ ಬಗ್ಗೆ ಮಾತಾಡಿದಳು. ಆದ್ರೆ ಆ್ಯಂಡ್ರಿಯಾಗೆ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೆ ಅಭಿಪ್ರಾಯ ಇರ್ಲಿಲ್ಲ. “ಅವರು ತುಂಬ ವಿಚಿತ್ರ ಜನ, ಅವರು ಯೇಸುನ ನಂಬೋದೇ ಇಲ್ಲ, ಬರೀ ಹಳೇ ಒಡಂಬಂಡಿಕೆನ ಓದ್ತಾರೆ” ಅಂತ ಅಂದ್ಕೊಂಡಿದ್ದಳು. ಆದ್ರೆ ಸಾಕ್ಷಿಗಳ ಜೊತೆ ಒಂದ್ಸಲ ಬೈಬಲ್ ಅಧ್ಯಯನ ಮಾಡಿದ ಮೇಲೆ ಅವಳಿಗಿದ್ದ ಅಭಿಪ್ರಾಯ ಎಲ್ಲಾ ಬದಲಾಯ್ತು. ಅವಳು ಸ್ಟಡಿಯಲ್ಲಿ ಪ್ರತಿ ಸಲ ಹೊಸ ವಿಷ್ಯ ಕಲಿತಾಗ “ಇದು ಬೈಬಲ್‌ನಲ್ಲಿ ಇದೆ ಅಂದ್ಮೇಲೆ ಇದೇ ಸತ್ಯ!” ಅಂತ ಹೇಳ್ತಿದ್ದಳು.
ಸ್ವಲ್ಪ ದಿನ ಆದ್ಮೇಲೆ ಆ್ಯಂಡ್ರಿಯಾ ಮೇರಿಗೆ ಮೂರು ಜನ್ರನ್ನ ಪರಿಚಯ ಮಾಡಿಸಿದಳು. ಅವರೂ ಬೈಬಲ್ ಕಲಿಯೋಕೆ ಶುರುಮಾಡಿದ್ರು. ಆ್ಯಂಡ್ರಿಯಾಗೆ ಆ್ಯಂಜೆಲಾ ಅನ್ನೋ ಆಂಟಿ ಇದ್ದಳು. ಅವ್ರಿಗೆ ಕಣ್ಣು ಕಾಣಿಸ್ತಿರಲಿಲ್ಲ. ಆ್ಯಂಡ್ರಿಯಾಗೆ ಮೇರಿ ಬೈಬಲ್ ಸ್ಟಡಿ ಮಾಡ್ತಿದ್ದಾಗ ಆ್ಯಂಜೆಲಾ ಕೂಡ ಕೇಳಿಸ್ಕೊಳ್ತಿದ್ರು. ಇದು ಮೇರಿಗೆ ಗೊತ್ತಿರಲಿಲ್ಲ. ಒಂದಿನ ಆ್ಯಂಡ್ರಿಯಾ ಹತ್ರ ಆ್ಯಂಜೆಲಾ “ನಂಗೆ ಮೇರಿನ ಪರಿಚಯ ಮಾಡಿಸ್ತೀಯಾ, ನಾನೂ ಬೈಬಲ್ ಸ್ಟಡಿ ತಗೊಬೇಕು” ಅಂದಳು. ಆ್ಯಂಜೆಲಾ ಕಲ್ತಿದ್ದೆಲ್ಲಾ ಅವಳಿಗೆ ತುಂಬಾ ಇಷ್ಟ ಆಯ್ತು. ಕೆಲವು ದಿನಗಳಲ್ಲೇ ಎಷ್ಟೋ ವಚನಗಳನ್ನ ಬಾಯಿಪಾಠ ಮಾಡಿದಳು. ಒಂದು ವಾರದಲ್ಲಿ ನಾಲ್ಕು ಸಲ ಬೈಬಲ್
ಕಲಿಯೋಕೆ ಇಷ್ಟಪಟ್ಟಳು. ಆಮೇಲೆ ಆ್ಯಂಡ್ರಿಯಾಳ ಸಹಾಯದಿಂದ ಆ್ಯಂಜೆಲಾ ತಪ್ಪದೆ ಆನ್‌ಲೈನಲ್ಲಿ ಮೀಟಿಂಗ್ ಅಟೆಂಡ್ ಮಾಡೋಕೆ ಶುರು ಮಾಡಿದಳು.ಕ್ರಿಸ್ಟಿನ್ ಬೈಬಲ್ ಸ್ಟಡಿ ಮಾಡ್ತಿರೋವಾಗ ಅವಳ ಗಂಡ ಜೋಶುವ ಕೂಡ ಅಲ್ಲೇ ಹತ್ರದಲ್ಲೇ ಇರ್ತಿದ್ದರು. ಅದಕ್ಕೆ ಮೇರಿ “ನಿಮಗೂ ಬೈಬಲ್ ಕಲಿಯೋಕೆ ಇಷ್ಟಾನಾ?” ಅಂತ ಕೇಳಿದಳು. ಆಗ ಅವರು “ನೀವು ಹೇಳೋದನ್ನೆಲ್ಲ ಕೇಳಿಸಿಕೊಳ್ತೀನಿ, ಹಾಗಂತ ನೀವು ನಂಗೆ ಪ್ರಶ್ನೆ ಕೇಳಬಾರದು. ಪ್ರಶ್ನೆ ಕೇಳಿದ್ರೆ, ಎದ್ದು ಹೋಗಿ ಬಿಡ್ತೀನಿ ನೋಡಿ” ಅಂತ ಹೇಳಿದರು. ಆದ್ರೆ ಸ್ಟಡಿ ಶುರು ಆಗಿ ಐದೇ ನಿಮಿಷದಲ್ಲಿ ಕ್ರಿಸ್ಟಿನ್‌ಗಿಂತ ಜಾಸ್ತಿ ಪ್ರಶ್ನೆಗಳನ್ನ ಜೋಶುವಾನೇ ಕೇಳೋಕೆ ಶುರುಮಾಡಿದರು, ಆಮೇಲೆ ಇನ್ನೂ ಜಾಸ್ತಿ ಬೈಬಲ್ ಕಲಿಯೋಕೆ ಇಷ್ಟಪಟ್ಟರು.
ಮೇರಿ ಕೇಳಿದ ಆ ಒಂದು ಪ್ರಶ್ನೆಯಿಂದ ಎಷ್ಟೋ ಬೈಬಲ್ ಸ್ಟಡಿಗಳು ಶುರುವಾಯ್ತು! ಕೆಲವು ಸ್ಟಡಿಗಳನ್ನ ಮೇರಿ ಸಭೇಲಿರೋ ಬೇರೆಯವರಿಗೂ ಕೊಟ್ಟಳು. ಮೇರಿ ಒಟ್ಟು ನಾಲ್ಕು ದೇಶಗಳಲ್ಲಿ 28 ಬೈಬಲ್ ಅಧ್ಯಯನಗಳನ್ನ ಶುರು ಮಾಡಿದಳು.
ಈ ಲೇಖನದ ಆರಂಭದಲ್ಲಿ ತಿಳಿಸಿದ ಮೇರಿಯ ಬೈಬಲ್ ವಿದ್ಯಾರ್ಥಿ ಜಾಸ್ಮಿನ್ 2021ರ ಏಪ್ರಿಲ್‌ನಲ್ಲಿ ದೀಕ್ಷಾಸ್ನಾನ ತಗೊಂಡ್ರು. ಕ್ರಿಸ್ಟಿನ್ ಮೇ 2022ರಲ್ಲಿ ದೀಕ್ಷಾಸ್ನಾನ ತಗೊಂಡು ಫಿಲಿಪ್ಪೀನ್ಸ್‌ನಲ್ಲಿರೋ ತಮ್ಮ ಕುಟುಂಬದ ಹತ್ರ ಹೋದ್ರು. ಕ್ರಿಸ್ಟಿನ್ ಪರಿಚಯ ಮಾಡಿದ ಬೇರೆ ಇಬ್ಬರು ವಿದ್ಯಾರ್ಥಿಗಳೂ ದೀಕ್ಷಾಸ್ನಾನ ತಗೊಂಡ್ರು. ಕೆಲವೇ ದಿನಗಳಲ್ಲಿ ಕಣ್ಣು ಕಾಣಿಸದೇ ಇರೋ ಆ್ಯಂಜೆಲಾ ಕೂಡ ದೀಕ್ಷಾಸ್ನಾನ ತಗೊಂಡ್ರು. ಈಗ ಅವರು ಪಯನೀಯರ್ ಆಗಿ ಸೇವೆ ಮಾಡ್ತಿದ್ದಾರೆ. ಕ್ರಿಸ್ಟಿನ್ ಗಂಡ ಜೋಶುವ, ಮಗಳು ಆ್ಯಂಡ್ರಿಯಾ ಮತ್ತು ಇನ್ನೂ ಹಲವಾರು ಬೈಬಲ್ ವಿದ್ಯಾರ್ಥಿಗಳು ಒಳ್ಳೆ ಪ್ರಗತಿ ಮಾಡ್ತಿದ್ದಾರೆ.
ಯೇಸು ಮತ್ತು ಅಪೊಸ್ತಲರ ಕಾಲದಲ್ಲೂ ಜನ ತಾವು ಕಲ್ತಿದ್ದನ್ನ ತಮ್ಮ ಫ್ರೆಂಡ್ಸ್‌ಗೆ ಮತ್ತು ಸಂಬಂಧಿಕರಿಗೆ ಹೇಳ್ತಿದ್ರು. (ಯೋಹಾ. 1:41, 42ಎ; ಅ. ಕಾ. 10:24, 27, 48; 16:25-33) ಇವತ್ತೂ ಜನ ತಾವು ಕಲಿತಿದ್ದನ್ನ ಬೇರೆಯವ್ರಿಗೆ ಹೇಳೋಕೆ ಇಷ್ಟಪಡ್ತಾರೆ. ಅದಕ್ಕೆ ನೀವೂ ನಿಮ್ಮ ಬೈಬಲ್ ವಿದ್ಯಾರ್ಥಿಗಳ ಹತ್ರ “ಬೈಬಲ್ ಕಲಿಯೋಕೆ ಇಷ್ಟಪಡೋ ಯಾರಾದ್ರೂ ನಿಮಗೆ ಗೊತ್ತಾ?” ಅಂತ ಕೇಳಿ. ನೀವು ಕೇಳೋ ಈ ಒಂದು ಚಿಕ್ಕ ಪ್ರಶ್ನೆಯಿಂದ ಯಾರಿಗೆ ಗೊತ್ತು ಮೇರಿ ತರ ನೀವೂ ಎಷ್ಟೋ ಬೈಬಲ್ ಸ್ಟಡಿಗಳನ್ನ ಶುರು ಮಾಡಬಹುದು.
a ಕೆಲವ್ರ ಹೆಸ್ರು ಬದಲಾಗಿದೆ.