ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಸ್ನೇಹಿತನಾಗೋಕೆ ಏನು ಮಾಡಬೇಕು?

ನಿಜ ಸ್ನೇಹಿತನಾಗೋಕೆ ಏನು ಮಾಡಬೇಕು?

‘ನನ್‌ ಕಷ್ಟಕ್ಕೆ ಯಾರೂ ಆಗಲ್ಲ, ನಂಗೇ ಅಂತ ಯಾರೂ ಇಲ್ಲ’ ಅಂತ ಯಾವತ್ತಾದ್ರೂ ಅನ್ಸಿದ್ಯಾ? ಈ ಲೋಕದ “ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ” ಅಂತ ಬೈಬಲ್‌ ಹೇಳುತ್ತೆ. ಅದಕ್ಕೆ ಕೆಲವು ಸಲ ನಾವು ಕುಗ್ಗಿ ಹೋಗ್ತೀವಿ. (2 ತಿಮೊ. 3:1) ಆದ್ರೆ ನಮ್ಮ ಕಷ್ಟಗಳನ್ನ ನಾವು ಒಬ್ಬರೇ ಎದುರಿಸಬೇಕು ಅಂತೇನಿಲ್ಲ. ನಮಗೆ ಸಹಾಯ ಮಾಡೋರು ನಮ್ಮ ಸುತ್ತಲೂ ಇರ್ತಾರೆ. ಇಂಥವ್ರನ್ನೇ “ಕಷ್ಟಕಾಲದಲ್ಲಿ” ನಮಗೆ ಸಹಾಯ ಮಾಡೋ ನಿಜವಾದ ಸ್ನೇಹಿತರು ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋ. 17:17.

ನಿಜ ಸ್ನೇಹಿತರು ಹೇಗೆ ಸಹಾಯ ಮಾಡ್ತಾರೆ?

ಪೌಲ ಗೃಹ ಬಂಧನದಲ್ಲಿದ್ದಾಗ ಅವನ ನಿಜವಾದ ಫ್ರೆಂಡ್ಸ್‌ ಅವನಿಗೆ ಸಹಾಯ ಮಾಡಿದ್ರು. ಇದ್ರಿಂದ ಪೌಲ ಬೇರೆ ಬೇರೆ ಸಭೆಗೆ ಪ್ರೋತ್ಸಾಹ ಕೊಡೋಕಾಯ್ತು

ಪೌಲ ತನ್ನ ಕೆಲವು ಸ್ನೇಹಿತರ ಜೊತೆಯಲ್ಲಿ ಮಿಷನರಿ ಪ್ರಯಾಣ ಮಾಡ್ತಿದ್ದ. ಅವರು ಇವನಿಗೆ ತುಂಬ ಸಹಾಯ ಮಾಡಿದ್ರು. (ಕೊಲೊ. 4:7-11) ಒಂದು ಸಲ ಪೌಲ ರೋಮ್‌ನಲ್ಲಿ ಗೃಹಬಂಧನದಲ್ಲಿದ್ದಾಗ ಅವನ ಫ್ರೆಂಡ್ಸ್‌ ಅವನಿಗೋಸ್ಕರ ಎಷ್ಟೋ ಕೆಲಸಗಳನ್ನ ಮಾಡಿಕೊಟ್ರು. ಉದಾಹರಣೆಗೆ, ಫಿಲಿಪ್ಪಿಯಲ್ಲಿ ಇದ್ದ ಸಹೋದರರು ಕೊಟ್ಟ ವಸ್ತುಗಳನ್ನ ಎಪಫ್ರೊದೀತ ತಗೊಂಡು ಬಂದು ಪೌಲನಿಗೆ ಕೊಟ್ಟ. (ಫಿಲಿ. 4:18) ಪೌಲ ಬರೆದ ಪತ್ರಗಳನ್ನ ತುಖಿಕ ಬೇರೆಬೇರೆ ಸಭೆಗಳಿಗೆ ತಗೊಂಡು ತಲುಪಿಸಿದ. (ಕೊಲೊ. 4:7) ಈ ತರ ಸ್ನೇಹಿತರು ಪೌಲನಿಗೆ ಸಹಾಯ ಮಾಡಿದ್ರಿಂದ ಅವನು ಗೃಹಬಂಧನದಲ್ಲಿದ್ರೂ ತನ್ನ ಸೇವೆಯನ್ನ ಮುಂದುವರಿಸೋಕೆ ಇವ್ರು ಸಹಾಯ ಮಾಡಿದ್ರು. ನೀವೂ ಇವ್ರ ತರ ಹೇಗೆ ನಿಜವಾದ ಸ್ನೇಹಿತರಾಗಬಹುದು?

ಕಷ್ಟದಲ್ಲಿ ಕೈ ಹಿಡಿದು, ಬೆನ್ನೆಲುಬಾಗಿ ನಿಂತ್ಕೊಳ್ಳೋ ಎಷ್ಟೋ ಫ್ರೆಂಡ್ಸ್‌ ನಮಗೂ ಇರ್ತಾರೆ. ಉದಾಹರಣೆಗೆ, ಸ್ಪೇನ್‌ನಲ್ಲಿ ಪಯನೀಯರಾಗಿರೋ ಎಲಿಜ಼ಬೆತ್‌ ಸಹೋದರಿಗೆ ಒಬ್ಬ ಫ್ರೆಂಡ್‌ ಇದ್ದಾಳೆ. ಎಲಿಜ಼ಬೆತ್‌ ತಾಯಿಗೆ ಕ್ಯಾನ್ಸರ್‌ ಕಾಯಿಲೆ ಇದೆ ಅಂತ ಗೊತ್ತಾದಾಗ ಪ್ರೋತ್ಸಾಹ ಕೊಡೋಕೆ ಅವಳ ಫ್ರೆಂಡ್‌ ಎಷ್ಟೋ ಬೈಬಲ್‌ ವಚನಗಳನ್ನ, ಮೆಸೇಜ್‌ಗಳನ್ನ ಕಳಿಸ್ತಿದ್ಳು. “ನನ್ನ ಫ್ರೆಂಡ್‌ ನನಗೆ ಕಳಿಸ್ತಿದ್ದ ಮೆಸೇಜ್‌ಗಳನ್ನ ನಾನು ನೋಡ್ತಿದ್ದಾಗ ನನ್ನ ಬಗ್ಗೆ ಯೋಚ್ನೆ ಮಾಡೋರು ಒಬ್ರು ಇದ್ದಾರಲ್ಲ ಅಂತ ತುಂಬ ಖುಷಿ ಆಗ್ತಿತ್ತು. ಅದು ನನಗೆ ಈ ಸಮಸ್ಯೆನ ಎದುರಿಸೋಕೆ ಬೇಕಾಗಿರೋ ಶಕ್ತಿ ಕೊಡ್ತು” ಅಂತ ಎಲಿಜ಼ಬೆತ್‌ ಹೇಳ್ತಾಳೆ.—ಜ್ಞಾನೋ. 18:24.

ನಾವು ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದ್ರೆ ಅವ್ರ ಜೊತೆ ನಮಗಿರೋ ಸ್ನೇಹ ಇನ್ನಷ್ಟು ಗಟ್ಟಿಯಾಗುತ್ತೆ. ಉದಾಹರಣೆಗೆ, ನಿಮ್ಮ ಸಭೆಲಿರೋ ವಯಸ್ಸಾಗಿರೋರನ್ನ ನೀವು ಮೀಟಿಂಗ್‌ಗೆ ಅಥವಾ ಸೇವೆಗೆ ಕರ್ಕೊಂಡು ಹೋಗೋಕೆ ಆಗುತ್ತಾ? ಯೋಚಿಸಿ. ಒಂದುವೇಳೆ ಕರ್ಕೊಂಡು ಹೋದ್ರೆ ನಿಮ್ಮಿಂದ ಅವ್ರಿಗೆ, ಅವ್ರಿಂದ ನಿಮಗೆ ಪ್ರೋತ್ಸಾಹ ಸಿಗುತ್ತೆ. (ರೋಮ. 1:12) ಆದ್ರೆ ಇನ್ನು ಕೆಲವರು ಮನೆಯಿಂದ ಹೊರಗೆ ಬರೋಕೆ ಆಗದಿರೋ ಪರಿಸ್ಥಿತಿಯಲ್ಲಿದ್ದಾರೆ. ಅಂಥವ್ರಿಗೂ ನೀವು ಸಹಾಯ ಮಾಡಬಹುದು. ಹೇಗೆ?

ಮನೆಯಿಂದ ಹೊರಗೆ ಬರೋಕೆ ಆಗದೇ ಇರೋರಿಗೂ ಸಹಾಯ ಮಾಡಿ

ಕೆಲವ್ರಿಗೆ ಗಂಭೀರ ಕಾಯಿಲೆ ಇರೋದ್ರಿಂದ ಅಥವಾ ಬೇರೆ ಕಷ್ಟ ಇರೋದ್ರಿಂದ ನೇರವಾಗಿ ಮೀಟಿಂಗ್‌ಗೆ ಬರೋಕೆ ಆಗಲ್ಲ. ಉದಾಹರಣೆಗೆ, ಸಹೋದರ ಡೇವಿಡ್‌ಗೆ ಕ್ಯಾನ್ಸರ್‌ ಬಂತು. ಅವರು ಆರು ತಿಂಗಳು ಕೀಮೋಥೆರಪಿ ತಗೊಂಡ್ರು. ಆ ಆರು ತಿಂಗಳು ಅವ್ರಿಗೆ ರಾಜ್ಯ ಸಭಾಗೃಹಕ್ಕೆ ಬರೋಕೆ ಆಗ್ಲಿಲ್ಲ. ಆದ್ರೂ ಡೇವಿಡ್‌, ಅವ್ರ ಹೆಂಡತಿ ಲಿಡ್ಯಾ ತಪ್ಪದೇ ಮನೆಯಿಂದಾನೇ ಮೀಟಿಂಗ್‌ ಅಟೆಂಡ್‌ ಮಾಡ್ತಿದ್ರು.

ಇವ್ರಿಗೆ ಸಭೆಯಲ್ಲಿದ್ದ ಫ್ರೆಂಡ್ಸ್‌ ಹೇಗೆ ಸಹಾಯ ಮಾಡಿದ್ರು? ಪ್ರತಿಸಲ ಮೀಟಿಂಗ್‌ ಆದ್ಮೇಲೆ ರಾಜ್ಯ ಸಭಾಗೃಹದಲ್ಲಿದ್ದ ಕೆಲವರು ಡೇವಿಡ್‌, ಲಿಡ್ಯಾ ಹತ್ರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತಾಡ್ತಿದ್ರು. ಯಾವಾಗೆಲ್ಲ ಡೇವಿಡ್‌, ಲಿಡ್ಯಾ ಉತ್ರ ಕೊಡ್ತಿದ್ರೋ ಆಗೆಲ್ಲ ಮೆಸೇಜ್‌ ಮಾಡಿ ‘ನಿಮ್ಮ ಉತ್ರ ತುಂಬಾ ಚೆನ್ನಾಗಿತ್ತು’ ಅಂತ ಹೇಳ್ತಿದ್ರು. ಇದ್ರಿಂದ ಅವ್ರಿಗೆ ತುಂಬಾ ಖುಷಿಯಾಗ್ತಿತ್ತು, ಪ್ರೋತ್ಸಾಹ ಸಿಗ್ತಿತ್ತು.

ಮನೆಯಿಂದ ಆಚೆ ಬರೋಕೆ ಆಗದೇ ಇರೋರ ಜೊತೆ ಸೇವೆ ಮಾಡಿ

ಮನೆಯಿಂದ ಹೊರಗೆ ಬರೋಕೆ ಆಗದೆ ಇರೋರ ಜೊತೆ ನೀವು ಸೇವೆ ಮಾಡ್ತೀರಾ? ಚಿಕ್ಕ ಪುಟ್ಟ ಹೊಂದಾಣಿಕೆಗಳನ್ನ ಮಾಡ್ಕೊಂಡ್ರೆ ಮಾಡಬಹುದು. (ಜ್ಞಾನೋ. 3:27) ಅವ್ರ ಜೊತೆ ಫೋನ್‌ ಮತ್ತು ಪತ್ರ ಬರೆಯೋ ಮೂಲಕ ಸೇವೆ ಮಾಡೋಕೆ ನೀವು ಸ್ವಲ್ಪ ಟೈಮ್‌ ಮಾಡ್ಕೊಳ್ತೀರಾ? ಮನೆಯಿಂದ ಹೊರ ಬರೋಕೆ ಆಗದಿರೋರು ಕ್ಷೇತ್ರ ಸೇವಾ ಕೂಟಕ್ಕೆ ಹಾಜರಾಗೋಕೆ ಹಿರಿಯರು ವಿಡಿಯೋ ಕಾನ್ಫರೆನ್ಸ್‌ ಏರ್ಪಾಡು ಮಾಡಬಹುದು. ಈ ತರ ಏರ್ಪಾಡು ಮಾಡಿದ್ರಿಂದ ಡೇವಿಡ್‌, ಲಿಡ್ಯಾಗೆ ತುಂಬಾ ಪ್ರಯೋಜನ ಆಯ್ತು. “ನಮ್ಮ ಗುಂಪಿನವ್ರ ಜೊತೆ ಕ್ಷೇತ್ರ ಸೇವಾ ಕೂಟಕ್ಕೆ ಹಾಜರಾಗಿದ್ದು, ಅವ್ರ ಹತ್ರ ಮಾತಾಡಿದ್ದು, ಪ್ರಾರ್ಥನೆ ಮಾಡಿದ್ದು ನಮಗೆ ತುಂಬ ಬಲ ಕೊಡ್ತು” ಅಂತ ಡೇವಿಡ್‌ ಹೇಳ್ತಾರೆ. ಒಂದುವೇಳೆ ಪರಿಸ್ಥಿತಿ ಚೆನ್ನಾಗಿದ್ರೆ ನಿಮ್ಮ ಬೈಬಲ್‌ ವಿದ್ಯಾರ್ಥಿಯನ್ನ ಆಗಾಗ ಇಂಥವ್ರ ಮನೆಗೆ ಕರ್ಕೊಂಡು ಹೋಗಿ ಬೈಬಲ್‌ ಸ್ಟಡಿ ಮಾಡೋಕಾಗುತ್ತಾ ಅಂತ ಯೋಚ್ನೆ ಮಾಡಿ.

ಇಂಥ ಸಹೋದರ ಸಹೋದರಿಯರ ಜೊತೆ ನಾವು ಸೇವೆ ಮಾಡುವಾಗ ಅವ್ರಲ್ಲಿರೋ ಒಳ್ಳೆ ಗುಣಗಳನ್ನ ನೋಡ್ತೀವಿ. ಆಗ ಅವ್ರಿಗೆ ಹತ್ರ ಆಗ್ತೀವಿ. ಉದಾಹರಣೆಗೆ, ಅವ್ರ ಜೊತೆ ಸೇವೆ ಮಾಡೋವಾಗ ಅವರು ಬೈಬಲ್‌ ವಿಷಯನ ಬೇರೆಯವ್ರಿಗೆ ಹೇಗೆ ವಿವರಿಸ್ತಾರೆ, ಮನಸ್ಸು ಮುಟ್ಟೋ ತರ ಹೇಗೆ ಬೈಬಲನ್ನ ಬಳಸ್ತಾರೆ ಅಂತ ನೋಡ್ತೀರ. ಆಗ ಅವ್ರ ಮೇಲಿರೋ ಪ್ರೀತಿ, ಗೌರವ ಜಾಸ್ತಿ ಆಗುತ್ತೆ. ಈ ತರ ಒಬ್ರಿಗೊಬ್ರು ಸಹಾಯ ಮಾಡೋವಾಗ ನಿಮಗೆ ಸಭೆಲಿ ಹೊಸ ಹೊಸ ಫ್ರೆಂಡ್ಸ್‌ ಸಿಗ್ತಾರೆ.—2 ಕೊರಿಂ. 6:13.

ಪೌಲ ಕಷ್ಟದಲ್ಲಿದ್ದಾಗ ತೀತ ಅವನನ್ನ ನೋಡ್ಕೊಂಡು ಬರೋಕೆ ಆಗಾಗ ಹೋಗ್ತಿದ್ದ. ಇದ್ರಿಂದ ಪೌಲನ ಮನಸ್ಸಿಗೆ ನೆಮ್ಮದಿ ಅನಿಸ್ತು, ಖುಷಿ ಆಯ್ತು. (2 ಕೊರಿಂ. 7:5-7) ನಮ್ಮ ಸಹೋದರರು ಕಷ್ಟದಲ್ಲಿದ್ದಾಗ ನಾವು ಅವ್ರನ್ನ ಚೆನ್ನಾಗಿ ಮಾತಾಡಿಸಿದ್ರೆ ಅವ್ರಿಗೆ ತುಂಬಾ ಖುಷಿ ಆಗುತ್ತೆ. ಆದ್ರೆ ನೆನಪಿಡಿ, ಆ ಸಮಯದಲ್ಲಿ ನಾವು ಅವ್ರ ಜೊತೆ ಸಮಯ ಕಳೆದ್ರೆ, ಅವ್ರಿಗೆ ಸಹಾಯ ಮಾಡಿದ್ರೆ ಅವ್ರಿಗೆ ಇನ್ನೂ ಜಾಸ್ತಿ ಬಲ ಸಿಗುತ್ತೆ.—1 ಯೋಹಾ. 3:18.

ಹಿಂಸೆ, ವಿರೋಧ ಬಂದಾಗ್ಲೂ ನಿಜ ಸ್ನೇಹಿತರಾಗಿರಿ

ಈ ತರ ಸಹಾಯ ಮಾಡೋದ್ರಲ್ಲಿ ರಷ್ಯಾದಲ್ಲಿರೋ ನಮ್ಮ ಸಹೋದರರು ಎತ್ತಿದ ಕೈ! ಸಹೋದರ ಸರ್ಗೆ ಮತ್ತು ಅವರ ಹೆಂಡ್ತಿ ಟಟ್ಯಾನ ಮನೆಗೆ ಒಂದಿನ ಪೊಲೀಸರು ಬಂದು ಅವ್ರ ಮನೆನೆಲ್ಲಾ ಹುಡುಕಾಡಿದ್ರು. ಆಮೇಲೆ ಅವರಿಬ್ರನ್ನೂ ಪೊಲೀಸ್‌ ಸ್ಟೇಷನ್‌ಗೆ ಕರ್ಕೊಂಡ್‌ ಹೋದ್ರು. ಸರ್ಗೆನ ಅಲ್ಲೇ ಇಟ್ಕೊಂಡು ಮೊದ್ಲು ಟಟ್ಯಾನನ ಮನೆಗೆ ಕಳ್ಸಿದ್ರು. ಸರ್ಗೆ ಹೇಳೋದು “[ಟಟ್ಯಾನ] ಮನೆಗೆ ಬಂದ ತಕ್ಷಣ ಅವಳನ್ನ ನೋಡೋಕೆ ಒಬ್ಬ ಸಹೋದರಿ ಬಂದ್ರು. ಇಂಥ ಟೈಮಲ್ಲೂ ನಮ್ಮ ಮನೆಗೆ ಬರೋಕೆ ಆ ಸಿಸ್ಟರ್‌ಗೆ ತುಂಬಾ ಧೈರ್ಯ ಬೇಕಿತ್ತು. ಆಮೇಲೆ ಒಬ್ಬೊಬ್ರಾಗಿ ನಮ್ಮ ಸಹೋದರರು ಬರ್ತಾನೇ ಇದ್ರು. ಅವರೆಲ್ರೂ ನಮ್ಮ ವಸ್ತುಗಳನ್ನ ಮತ್ತೆ ಜೋಡಿಸಿ ಮನೆನ ನೀಟಾಗಿ ಇಡೋಕೆ ಸಹಾಯ ಮಾಡಿದ್ರು.”

“ನಂಗೆ ಜ್ಞಾನೋಕ್ತಿ 17:17 ತುಂಬಾ ಇಷ್ಟ. ಅಲ್ಲಿ ‘ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ’ ಅಂತಿದೆ. ನಮಗೆ ಹಿಂಸೆ, ವಿರೋಧ ಜಾಸ್ತಿ ಆಗ್ತಿದ್ದಾಗ ಸ್ನೇಹಿತರ ಸಹಾಯ ಬೇಕಾಯ್ತು. ಅವರೆಲ್ಲ ನಂಗೆ ಸಹಾಯ ಮಾಡಿದಾಗ ವಚನದಲ್ಲಿರೋ ಮಾತು ಎಷ್ಟು ನಿಜ ಅಂತ ಅರ್ಥ ಆಯ್ತು. ಧೈರ್ಯ ತೋರಿಸೋ ಇಂಥ ಫ್ರೆಂಡ್ಸ್‌ನ ನನಗೆ ಕೊಟ್ಟಿರೋದಕ್ಕೆ ನಾನು ಯೆಹೋವನಿಗೆ ಋಣಿ.” a

ಇವತ್ತು ನಮ್ಮೆಲ್ರಿಗೂ ಒಂದಲ್ಲಾ ಒಂದು ಕಷ್ಟ ಇದೆ. ಹಾಗಾಗಿ ನಮಗೆ ಫ್ರೆಂಡ್ಸ್‌ ತುಂಬ ಮುಖ್ಯ. ಅದ್ರಲ್ಲೂ ಮಹಾ ಸಂಕಟದಲ್ಲಿ ನಿಜವಾದ ಸ್ನೇಹಿತರ ಸಹಾಯ ನಮಗೆ ಬೇಕೇಬೇಕು. ಆದ್ರಿಂದ ಬೇರೆಯವರಿಗೆ ನಾವು ನಿಜವಾದ ಫ್ರೆಂಡ್ಸ್‌ ಆಗೋಕೆ ನಮ್ಮ ಕೈಲಾಗಿದ್ದೆಲ್ಲ ಮಾಡೋಣ!—1 ಪೇತ್ರ 4:7, 8.