ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2018
ಈ ಸಂಚಿಕೆಯಲ್ಲಿ 2018ರ ಏಪ್ರಿಲ್ 30ರಿಂದ ಜೂನ್ 3ರ ವರೆಗಿನ ಅಧ್ಯಯನ ಲೇಖನಗಳಿವೆ.
ದೀಕ್ಷಾಸ್ನಾನ—ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ
ದೀಕ್ಷಾಸ್ನಾನದ ಬಗ್ಗೆ ಬೈಬಲ್ ಏನು ಹೇಳುತ್ತದೆ? ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳುವ ಮುಂಚೆ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು? ನಾವು ಬೈಬಲ್ ವಿದ್ಯಾರ್ಥಿಗಳಿಗೆ ಅಥವಾ ನಮ್ಮ ಮಕ್ಕಳಿಗೆ ಕಲಿಸುವಾಗ ದೀಕ್ಷಾಸ್ನಾನದ ಪ್ರಾಮುಖ್ಯತೆಯನ್ನು ಯಾಕೆ ಸದಾ ನಮ್ಮ ಮನಸ್ಸಲ್ಲಿಟ್ಟರಬೇಕು?
ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?
ತಮ್ಮ ಮಕ್ಕಳು ದೀಕ್ಷಾಸ್ನಾನ ಪಡೆಯುವುದಕ್ಕೆ ಮುಂಚೆ ಕ್ರೈಸ್ತ ಹೆತ್ತವರು ಏನನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ?
ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿ ಅಪೊಸ್ತಲ ಪೌಲನಿಗೆ ಬೊಕ್ಕತಲೆ ಇರುವಂತೆ ಯಾಕೆ ಚಿತ್ರಿಸಲಾಗುತ್ತದೆ?
ಅತಿಥಿಸತ್ಕಾರ—ಆನಂದಕರ, ಆವಶ್ಯಕ
ಕ್ರೈಸ್ತರು ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡಬೇಕು ಎಂದು ಬೈಬಲ್ ಯಾಕೆ ಹೇಳುತ್ತದೆ? ಅತಿಥಿಸತ್ಕಾರ ಮಾಡಲು ನಮಗೆ ಯಾವ ಅವಕಾಶಗಳಿವೆ? ಅತಿಥಿಸತ್ಕಾರ ಮಾಡದಂತೆ ನಮ್ಮನ್ನು ಯಾವುದು ತಡೆಯಬಹುದು? ಆ ಅಡೆತಡೆಗಳನ್ನು ನಾವು ಹೇಗೆ ಜಯಿಸಬಹುದು?
ಜೀವನ ಕಥೆ
ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ!
ಏರೀಕಾ ನೆರರ್ ಬ್ರೈಟ್ ರೆಗ್ಯುಲರ್ ಪಯನೀಯರರಾಗಿ, ವಿಶೇಷ ಪಯನೀಯರರಾಗಿ ಮತ್ತು ಮಿಷನರಿಯಾಗಿ ಸೇವೆ ಮಾಡಿದ್ದಾರೆ. ದೇವರಿಗೆ ನಂಬಿಗಸ್ತ ಸೇವೆ ಮಾಡಿದ ಆ ಎಲ್ಲ ವರ್ಷಗಳಲ್ಲಿ ದೇವರು ಅವರನ್ನು ಹೇಗೆ ನೋಡಿಕೊಂಡನು, ಬಲಪಡಿಸಿದನು ಮತ್ತು ಅವರನ್ನು ಮಾರ್ಗದರ್ಶಿಸಿದನೆಂದು ತಿಳಿಸುತ್ತಾರೆ.
ಶಿಸ್ತು—ಯೆಹೋವನ ಪ್ರೀತಿಯ ರುಜುವಾತು
ಹಿಂದಿನ ಕಾಲದಲ್ಲಿ ದೇವರಿಂದ ಶಿಸ್ತು ಪಡಕೊಂಡ ವ್ಯಕ್ತಿಗಳಿಂದ ನಾವೇನು ಕಲಿಯಬಹುದು? ನಾವು ಶಿಸ್ತು ಕೊಡಬೇಕಾಗಿರುವಾಗ ಯೆಹೋವನ ಮಾದರಿಯನ್ನು ಹೇಗೆ ಅನುಕರಿಸಬಹುದು?
ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ
ಯೆಹೋವನು ನಮಗೆ ಯಾವ ವಿಧಗಳಲ್ಲಿ ಸ್ವಶಿಸ್ತನ್ನು ಕಲಿಸುತ್ತಾನೆ?ಸಭೆಯಿಂದ ನಮಗೆ ಶಿಸ್ತು ಸಿಗುವುದಾದರೆ ನಾವು ಹೇಗೆ ಅದರಿಂದ ಪ್ರಯೋಜನ ಪಡೆಯಬಹುದು?