ದೇವರ ಸರ್ಕಾರದ ಬಗ್ಗೆ ಸತ್ಯ
ದೇವರಿಗೆ ಹೇಗೆ ಪ್ರಾರ್ಥಿಸಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಅದು, “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ದೇವರ ಸರ್ಕಾರ ಅಂದ್ರೆ ಏನು? ಅದ್ರಿಂದ ನಮಗೆ ಏನು ಪ್ರಯೋಜನ? ಅದು ಯಾಕೆ ಬೇಗ ಬರಬೇಕು?
ದೇವರ ಸರ್ಕಾರಕ್ಕೆ ರಾಜ ಯೇಸು.
ಲೂಕ 1:31-33: “ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು. ಅವನು ಮಹಾಪುರುಷನಾಗಿ ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು; ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು.”
ಯೇಸು ಸಾರಿದ ಮುಖ್ಯ ವಿಷಯ ದೇವರ ಸರ್ಕಾರ.
ಮತ್ತಾಯ 9:35: “ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು.”
ದೇವರ ಸರ್ಕಾರ ಯಾವಾಗ ಬರುತ್ತೆ ಅಂತ ಯೇಸು ಸೂಚನೆ ಕೊಟ್ಟನು.
ಮತ್ತಾಯ 24:7: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.”
ಯೇಸುವಿನ ಶಿಷ್ಯರು ಇಂದು ದೇವರ ಸರ್ಕಾರದ ಬಗ್ಗೆ ಭೂಮಿಯ ಎಲ್ಲಾ ಕಡೆ ಹೇಳುತ್ತಿದ್ದಾರೆ.
ಮತ್ತಾಯ 24:14: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”