ಹೊಸ ಲೋಕದಲ್ಲಿರಲು ಏನು ಮಾಡಬೇಕು?
ಈ ದುಷ್ಟ ಲೋಕಕ್ಕೆ ದೇವರು ಬೇಗ ಅಂತ್ಯ ತರ್ತಾರೆ ಅಂತ ಹಿಂದಿನ ಲೇಖನಗಳಲ್ಲಿ ಓದಿದ್ವಿ. ಅದು ಖಂಡಿತ ನಿಜ ಆಗುತ್ತೆ ಅಂತ ದೇವರ ವಾಕ್ಯ ಹೇಳಿದೆ.
“ಲೋಕ . . . ನಾಶ ಆಗುತ್ತೆ.”—1 ಯೋಹಾನ 2:17.
ಅಂತ್ಯ ಪಾರಾಗುವವರೂ ಇರ್ತಾರೆ ಅಂತ ದೇವರ ವಾಕ್ಯ ಸಾಂತ್ವನ ಕೊಡುತ್ತೆ. ಮೇಲೆ ಕೊಟ್ಟಿರೋ ವಚನದಲ್ಲಿ ಮುಂದುವರಿಸಿ ಹೀಗೆ ಹೇಳುತ್ತೆ:
“ದೇವರ ಇಷ್ಟವನ್ನ ಮಾಡೋ ವ್ಯಕ್ತಿ ಯಾವಾಗ್ಲೂ ಇರ್ತಾನೆ.”
ನಾವು ಅಂತ್ಯ ಪಾರಾಗಬೇಕಾದ್ರೆ ದೇವ್ರಿಗೆ ಏನು ಇಷ್ಟನೋ ಅದನ್ನ ಮಾಡಬೇಕು. ಆತನ ಇಷ್ಟ ತಿಳ್ಕೊಳ್ಳೋಕೂ ಮುಂಚೆ ದೇವರ ಬಗ್ಗೆ ತಿಳ್ಕೊಬೇಕು.
ಅಂತ್ಯ ಪಾರಾಗಬೇಕಾದ್ರೆ ದೇವ್ರನ್ನ ತಿಳಿಲೇಬೇಕು
“ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ . . . ತಿಳ್ಕೊಳ್ಳಲೇಬೇಕು” ಅಂತ ಯೇಸು ಹೇಳಿದರು. (ಯೋಹಾನ 17:3) ನಾವು ಅಂತ್ಯ ಪಾರಾಗಿ ಶಾಶ್ವತ ಜೀವ ಪಡೆಯಬೇಕಿದ್ದರೆ ದೇವ್ರನ್ನ ತಿಳಿಲೇಬೇಕು. ದೇವ್ರನ್ನ ತಿಳಿಯೋದು ಅಂದ್ರೆ ಆತನ ಬಗ್ಗೆ ಅಲ್ಪಸ್ವಲ್ಪ ಗೊತ್ತಿರೋದು ಅಥವಾ ದೇವರು ಇದ್ದಾನೆ ಅಂತ ನಂಬೋದು ಮಾತ್ರ ಅಲ್ಲ, ಬದಲಿಗೆ ಆತನ ಜೊತೆ ಒಳ್ಳೇ ಸ್ನೇಹಿತರಾಗಿ ಇರೋದು ಅಂತರ್ಥ. ನಾವು ನಮ್ಮ ಸ್ನೇಹಿತರ ಜೊತೆ ಸಮಯ ಕಳೆದಾಗ್ಲೇ ನಮ್ಮ ಸ್ನೇಹ ಬಲವಾಗಿರೋದು. ಅದೇ ತರ ದೇವರ ಜೊತೆ ಸ್ನೇಹ ಬೆಳೆಸೋಕೆ ಸಮಯ ಕೊಡಬೇಕು. ಆ ಸ್ನೇಹ ಗಟ್ಟಿ ಮಾಡೋಕೆ ಬೈಬಲಲ್ಲಿರೋ ಕೆಲವು ಸತ್ಯಗಳು ಸಹಾಯ ಮಾಡುತ್ತೆ.
ದೇವರ ವಾಕ್ಯವನ್ನು ಪ್ರತಿ ದಿನ ಓದಿ
ನಾವು ಬದುಕೋಕೆ ಪ್ರತಿದಿನ ಊಟ ಮಾಡಲೇಬೇಕು. ಆದರೆ ಅದಕ್ಕಿಂತ ಮುಖ್ಯವಾಗಿರೋ ಒಂದು ವಿಷ್ಯದ ಬಗ್ಗೆ ಯೇಸು ಹೇಳಿದರು. “ಮನುಷ್ಯ ರೊಟ್ಟಿ ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು.”—ಮತ್ತಾಯ 4:4.
ಯೆಹೋವ ದೇವರು ಹೇಳಿರೋದು ನಮಗೆ ಗೊತ್ತಾಗಬೇಕಂದ್ರೆ ಬೈಬಲ್ ಓದಬೇಕು. ಆಗ ದೇವರು ನಮ್ಮೆಲ್ಲರಿಗೋಸ್ಕರ ಹಿಂದೆ ಏನು ಮಾಡಿದ್ರು, ಈಗ ಏನು ಮಾಡ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಏನೆಲ್ಲ ಮಾಡ್ತಾರೆ ಅಂತ ಗೊತ್ತಾಗುತ್ತೆ.
ಸಹಾಯಕ್ಕಾಗಿ ಪ್ರಾರ್ಥಿಸಿ
ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ನಡ್ಕೊಳ್ಳುವಾಗ ಕೆಟ್ಟ ವಿಷಯಗಳನ್ನ ಬಿಡೋಕೆ ನೀವು ತುಂಬ ಕಷ್ಟಪಡ್ತಿದ್ದೀರಾ? ಹಾಗಾದ್ರೆ ದೇವರು ನಿಮ್ಮ ಕೈಬಿಡಲ್ಲ. ಖಂಡಿತ ನಿಮಗೆ ಸಹಾಯ ಮಾಡ್ತಾರೆ.
ಸಕುರಾ ಅನ್ನೋ ಸ್ತ್ರೀಯ ಬಗ್ಗೆ ನೋಡಿ. ಅವರು ಮುಂಚೆ ಅನೈತಿಕ ಜೀವನ ನಡೆಸ್ತಿದ್ರು. ಆದ್ರೆ ಬೈಬಲ್ ಕಲಿಯೋಕೆ ಶುರುಮಾಡಿದ ಮೇಲೆ “ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ” ಅನ್ನೋ ದೇವರ ನಿಯಮ ಕಲಿತ್ರು. (1 ಕೊರಿಂಥ 6:18) ಅವರು ತುಂಬ ಪ್ರಾರ್ಥನೆ ಮಾಡಿದ್ರಿಂದ ಆ ಕೆಟ್ಟ ಚಟ ಬಿಡೋಕೆ ಆಯ್ತು. ಆದರೂ ಆ ಕೆಟ್ಟ ಯೋಚನೆಗಳು ಅವರ ಮನಸ್ಸಿಗೆ ಬರ್ತಾನೇ ಇತ್ತು. ಆ ಸಮಯದಲ್ಲಿ ಅವರಿಗೆ ಪ್ರಾರ್ಥನೆ ಹೇಗೆ ಸಹಾಯಮಾಡ್ತು ಅಂತ ಹೇಳ್ತಾರೆ: “ಕೆಟ್ಟ ಯೋಚನೆಗಳು ಮನಸ್ಸಿಗೆ ಬಂದಾಗ ಯೆಹೋವ ದೇವರ ಹತ್ರ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡ್ತಿನಿ. ಯಾಕಂದ್ರೆ ಯೆಹೋವ ದೇವರ ಸಹಾಯ ಇಲ್ಲದೆ ಅದನ್ನ ಜಯಿಸೋಕೆ ಆಗಲ್ಲ. ನಾನು ಮಾಡಿರೋ ಪ್ರಾರ್ಥನೆಗೆ ದೇವರು ಉತ್ತರ ಕೊಟ್ಟಿರೋದ್ರಿಂದ ಆತನಿಗೆ ಇನ್ನಷ್ಟು ಹತ್ರ ಆಗಿದ್ದೀನಿ.” ಸಕುರಾ ತರ ಯೆಹೋವನ ಬಗ್ಗೆ ತಿಳ್ಕೊಳ್ತಿರೋ ಲಕ್ಷಾಂತರ ಜನ್ರಿಗೆ ಆತನು ಸಹಾಯ ಮಾಡ್ತಿದ್ದಾನೆ. ಇದ್ರಿಂದ ಅವರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಂಡು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ತಿದ್ದಾರೆ.—ಫಿಲಿಪ್ಪಿ 4:13.
ನೀವು ದೇವರ ಬಗ್ಗೆ ಚೆನ್ನಾಗಿ ತಿಳ್ಕೊಂಡಾಗ ‘ದೇವರೂ ನಿಮ್ಮ ಬಗ್ಗೆ ಚೆನ್ನಾಗಿ ತಿಳ್ಕೊಳ್ತಾರೆ.’ ಅಂದ್ರೆ ನೀವು ದೇವರ ಬೆಸ್ಟ್ ಫ್ರೆಂಡ್ ಆಗ್ತಿರ. (ಗಲಾತ್ಯ 4:9; ಕೀರ್ತನೆ 25:14) ಆಗ ನೀವು ಅಂತ್ಯ ಪಾರಾಗಿ ಹೊಸ ಲೋಕದಲ್ಲಿ ಜೀವನ ಮಾಡ್ತಿರ. ಹಾಗಾದ್ರೆ ಆ ಸುಂದರ ಲೋಕ ಹೇಗಿರುತ್ತೆ? ಅದನ್ನ ಮುಂದಿನ ಪುಟ ವಿವರಿಸುತ್ತೆ.
a ಯೆಹೋವ ಅನ್ನೋದು ಬೈಬಲಲ್ಲಿ ತಿಳಿಸಿರೋ ದೇವರ ಹೆಸರು.