ಹೊಸಲೋಕ ಯಾಕೆ ಬೇಕು?
“ಸಮಸ್ಯೆಗಳು ತುಂಬಿ ತುಳುಕುತ್ತಿರೋ ಲೋಕದಲ್ಲಿ ನಾವಿದ್ದೀವಿ” ಅಂತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟರೆಸ್ ಹೇಳುತ್ತಾರೆ. ನೀವೂ ಇದನ್ನು ಒಪ್ಪುತ್ತೀರಲ್ವಾ?
ಚಿಂತೆಗೀಡು ಮಾಡೋ ವಿಷಯಗಳು:
ಕಾಯಿಲೆ, ಅಂಟುರೋಗ
ನೈಸರ್ಗಿಕ ವಿಪತ್ತು
ಬಡತನ, ಹಸಿವು
ಮಾಲಿನ್ಯ, ಹೆಚ್ಚುತ್ತಿರುವ ತಾಪಮಾನ
ಅಪರಾಧ, ಹಿಂಸೆ, ಭ್ರಷ್ಟಾಚಾರ
ಯುದ್ಧ
ಈ ವಿಷಯಗಳು ನಮಗೆ ಹೊಸಲೋಕ ಬೇಕೇ ಬೇಕು ಅಂತ ತಿಳಿಸುತ್ತೆ. ಹೊಸಲೋಕದಲ್ಲಿ ಸಿಗೋ ಆಶೀರ್ವಾದಗಳು:
ಒಳ್ಳೇ ಆರೋಗ್ಯ
ಭದ್ರತೆ, ಸುರಕ್ಷತೆ
ಸಾಕಷ್ಟು ಆಹಾರ
ಹಿತಕರ ವಾತಾವರಣ
ನೀತಿ-ನ್ಯಾಯ
ಶಾಂತಿ-ಸಮಾಧಾನ
ಈಗಿರೋ ಲೋಕಕ್ಕೆ ಮುಂದೆ ಏನಾಗುತ್ತೆ?
ಹೊಸಲೋಕದ ಜೀವನ ಹೇಗಿರುತ್ತೆ?
ಹೊಸಲೋಕದಲ್ಲಿ ಇರಬೇಕಾದ್ರೆ ನಾವೇನು ಮಾಡಬೇಕು?
ಮೇಲಿರೋ ಪ್ರಶ್ನೆಗಳಿಗೆ ಬೈಬಲ್ ತಿಳಿಸೋ ಸಾಂತ್ವನದ ಮಾತುಗಳನ್ನು ಈ ಕಾವಲಿನಬುರುಜು ತಿಳಿಸುತ್ತೆ.