ದೇವರಿಂದ ಶಾಶ್ವತ ಆಶೀರ್ವಾದ ಪಡೆದು ಖುಷಿ ಖುಷಿಯಾಗಿರಿ
ದೇವರು ಅನೇಕ ವರ್ಷಗಳ ಹಿಂದೆ ಪ್ರವಾದಿ ಅಬ್ರಹಾಮನಿಗೆ ಒಂದು ಮಾತು ಕೊಟ್ಟಿದ್ದನು. ಅದೇನೆಂದ್ರೆ, ಅವನ ವಂಶಾವಳಿಯಲ್ಲಿ ಹುಟ್ಟುವ ಒಬ್ಬ ವ್ಯಕ್ತಿಯ ಮೂಲಕ ‘ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವದು.’ (ಆದಿಕಾಂಡ 22:18) ಹಾಗಾದರೆ ಆ ವ್ಯಕ್ತಿ ಯಾರು?
ಆ ವ್ಯಕ್ತಿ ಯೇಸು. ಸುಮಾರು 2000 ವರ್ಷಗಳ ಹಿಂದೆ ಅಬ್ರಹಾಮನ ವಂಶಾವಳಿಯಲ್ಲಿ ಯೇಸು ಹುಟ್ಟಿದ. ಅವನಿಗೆ ದೇವರು ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋ ಶಕ್ತಿ ಕೊಟ್ಟ. ಆ ಅದ್ಭುತಗಳು, ದೇವರು ಕಳಿಸ್ತೀನಿ ಅಂತ ಹೇಳಿದ ವ್ಯಕ್ತಿ ಯೇಸುನೇ ಅಂತ ರುಜುಪಡಿಸಿದವು.—ಗಲಾತ್ಯ 3:14.
ಯೇಸುವಿನ ಮೂಲಕನೇ ದೇವರು ಎಲ್ಲಾ ಮನುಷ್ಯರನ್ನು ಆಶೀರ್ವದಿಸುತ್ತಾನೆ ಮತ್ತು ಆ ಆಶೀರ್ವಾದಗಳು ಶಾಶ್ವತವಾಗಿ ಇರುತ್ತೆ ಅಂತ ಆ ಅದ್ಭುತಗಳು ತೋರಿಸಿಕೊಟ್ಟವು. ಯೇಸು ಮಾಡಿದ ಅದ್ಭುತಗಳು ಅವನಲ್ಲಿರೋ ಅನೇಕ ಒಳ್ಳೇ ಗುಣಗಳನ್ನ ತೋರಿಸುತ್ತೆ. ಅದರಲ್ಲಿ ಕೆಲವನ್ನ ನಾವೀಗ ನೋಡೋಣ.
ಕೋಮಲ ಮಮತೆ—ಯೇಸು ರೋಗಿಗಳನ್ನ ಗುಣಪಡಿಸಿದ.
ಒಮ್ಮೆ ಒಬ್ಬ ಕುಷ್ಠರೋಗಿ ತನ್ನನ್ನು ಗುಣಪಡಿಸು ಅಂತ ಯೇಸು ಹತ್ರ ಬೇಡಿಕೊಂಡ. ಆಗ ಯೇಸು ಅವನನ್ನ ಮುಟ್ಟಿ “ನನಗೆ ಮನಸ್ಸುಂಟು” ಗುಣಮುಖನಾಗು ಅಂತ ಹೇಳಿದ. ತಕ್ಷಣ ಆ ಮನುಷ್ಯನ ಕುಷ್ಠ ವಾಸಿ ಆಯಿತು.—ಮಾರ್ಕ 1:40-42.
ಉದಾರತೆ—ಯೇಸು ಹಸಿದವರಿಗೆ ಆಹಾರ ಕೊಟ್ಟ.
ಜನರು ಹಸಿವಿನಿಂದ ಬಳಲೋದು ಯೇಸುಗೆ ಇಷ್ಟ ಇರಲಿಲ್ಲ. ಎಷ್ಟೋ ಸಲ, ಯೇಸು ಅದ್ಭುತ ಮಾಡಿ ಬರೀ ಕೆಲವೇ ಕೆಲವು ರೊಟ್ಟಿ ಮತ್ತು ಮೀನುಗಳಿಂದ ಸಾವಿರಾರು ಜನರ ಹೊಟ್ಟೆ ತುಂಬಿಸಿದ. (ಮತ್ತಾಯ 14:17-21; 15:32-38) ಎಲ್ಲರ ಹೊಟ್ಟೆ ತುಂಬಿದ ಮೇಲೂ ಇನ್ನೂ ಸಾಕಷ್ಟು ಆಹಾರ ಹಾಗೇ ಉಳಿದಿತ್ತು.
ಅನುಕಂಪ—ಯೇಸು ಸತ್ತವರನ್ನ ಮತ್ತೆ ಜೀವಂತ ಎಬ್ಬಿಸಿದ.
ಒಂದು ಸಲ ಒಬ್ಬ ವಿಧವೆಯ ಒಬ್ಬನೇ ಮಗ ತೀರಿಹೋದ. ಅವಳ ದುಃಖ ನೋಡಿ ಯೇಸು “ಕನಿಕರಪಟ್ಟು” ಅವನನ್ನ ಮತ್ತೆ ಎಬ್ಬಿಸಿದ.—ಲೂಕ 7:12-15.