ಎಲ್ಲರಿಗೂ ಒಳ್ಳೆಯ ಆರೋಗ್ಯ—ಶೀಘ್ರದಲ್ಲೇ!
ಎಲ್ಲರಿಗೂ ಒಳ್ಳೆಯ ಆರೋಗ್ಯ—ಶೀಘ್ರದಲ್ಲೇ!
“ಪುನಃ ಎಂದಿಗೂ ಅಸ್ವಸ್ಥರಾಗದೇ ಇರುವ ವಿಚಾರವು . . . ಈಗ ಚಾಲ್ತಿಯಲ್ಲಿದೆ,” ಎಂದು ಜರ್ಮನ್ ವಾರ್ತಾಪತ್ರಿಕೆಯಾದ ಫೋಕಸ್ ವರದಿಸುತ್ತದೆ. ಆದರೂ ಈ ವಿಚಾರವು ಹೊಸದೇನಲ್ಲ. ಮಾನವ ಜೀವಿತದ ಆರಂಭದಲ್ಲಿ, ಮಾನವಕುಲವು ಅಸ್ವಸ್ಥತೆಯಿಂದಿರಬೇಕು ಎಂದು ಸೃಷ್ಟಿಕರ್ತನು ಉದ್ದೇಶಿಸಿರಲಿಲ್ಲ. ಮಾನವರಿಗಾಗಿದ್ದ ಆತನ ಉದ್ದೇಶ ಕೇವಲ “ಲೋಕದಲ್ಲಿರುವ ಎಲ್ಲಾ ಜನರಿಗೆ ಅಂಗೀಕಾರಾರ್ಹ ಮಟ್ಟದ ಆರೋಗ್ಯ” ಎಂದಾಗಿರಲಿಲ್ಲ. (ಓರೆ ಅಕ್ಷರಗಳು ನಮ್ಮವು.) ನಮ್ಮ ಸೃಷ್ಟಿಕರ್ತನು ಎಲ್ಲರಿಗೂ ಪರಿಪೂರ್ಣವಾದ ಆರೋಗ್ಯವನ್ನೇ ಉದ್ದೇಶಿಸಿದ್ದನು!
ಹಾಗಾದರೆ ನಾವು ಏಕೆ ಅಸ್ವಸ್ಥತೆ ಮತ್ತು ರೋಗದಿಂದ ಬಾಧೆಪಡುತ್ತಿದ್ದೇವೆ? ಯೆಹೋವ ದೇವರು, ಇಡೀ ಮಾನವಕುಲದ ಹೆತ್ತವರಾದ ಆದಾಮಹವ್ವರನ್ನು ಪರಿಪೂರ್ಣವಾಗಿ ಸೃಷ್ಟಿಸಿದನು ಎಂದು ಬೈಬಲ್ ಹೇಳುತ್ತದೆ. ತನ್ನ ಸೃಷ್ಟಿಕಾರ್ಯವನ್ನು ಪೂರ್ಣಗೊಳಿಸಿದ ನಂತರ, “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” ಮಾನವನ ಜೀವಿತವು ರೋಗ ಮತ್ತು ಮರಣದಿಂದ ಪೀಡಿತವಾಗಿರಬೇಕೆಂದು ನಮ್ಮ ಪ್ರೀತಿಯ ಸೃಷ್ಟಿಕರ್ತನು ಎಂದೂ ಉದ್ದೇಶಿಸಿರಲಿಲ್ಲ. ಆದರೆ ಆದಾಮಹವ್ವರು ತಮಗಾಗಿ ಇಡಲ್ಪಟ್ಟಿದ್ದ ಜೀವನ ರೀತಿಯನ್ನು ತೊರೆಯಲು ಆಯ್ಕೆಮಾಡಿದಾಗ, ಅವರು ಪಾಪಕ್ಕೆ ಬಲಿಯಾದರು. ಆದಾಮನ ಪಾಪದ ಪರಿಣಾಮ ಮರಣವಾಗಿತ್ತು ಮತ್ತು ಇದು ಎಲ್ಲಾ ಮಾನವರಿಗೂ ದಾಟಿಸಲ್ಪಟ್ಟಿತು.—ಆದಿಕಾಂಡ 1:31; ರೋಮಾಪುರ 5:12.
ಯೆಹೋವನು ಮಾನವಕುಲವನ್ನು ಸಂಪೂರ್ಣವಾಗಿ ತೊರೆದುಬಿಡಲಿಲ್ಲ. ಮತ್ತು ಆತನು ಅವರಿಗಾಗಿಯೂ ಈ ಭೂಮಿಗಾಗಿಯೂ ಇಟ್ಟಿದ್ದ ತನ್ನ ಮೂಲ ಉದ್ದೇಶವನ್ನೂ ತಳ್ಳಿಹಾಕಲಿಲ್ಲ. ವಿಧೇಯರಾಗಿರುವ ಮಾನವರನ್ನು ಅವರ ಪ್ರಥಮ ಸ್ಥಿತಿಯಾಗಿದ್ದ ಒಳ್ಳೆಯ ಆರೋಗ್ಯಕ್ಕೆ ಪುನಸ್ಥಾಪಿಸುವೆನು ಎಂಬ ತನ್ನ ಉದ್ದೇಶವನ್ನು ದೇವರು ಬೈಬಲಿನಾದ್ಯಂತ ತಿಳಿಯಪಡಿಸುತ್ತಾನೆ. ದೇವರ ಮಗನಾದ ಯೇಸು ಕ್ರಿಸ್ತನು ಈ ಭೂಮಿಯಲ್ಲಿದ್ದಾಗ, ಅಸ್ವಸ್ಥತೆಗಳನ್ನು ಗುಣಪಡಿಸಬಹುದಾದ ದೇವರ ಶಕ್ತಿಯನ್ನು ಪ್ರದರ್ಶಿಸಿದನು. ಉದಾಹರಣೆಗಾಗಿ, ಯೇಸು ಕುರುಡುತನ, ಕುಷ್ಠರೋಗ, ಕಿವುಡುತನ, ಜಲೋದರ, ಮೂರ್ಛೆರೋಗ, ಮತ್ತು ಪಾರ್ಶ್ವವಾಯುಗಳನ್ನು ವಾಸಿಮಾಡಿದನು.—ಮತ್ತಾಯ 4:23, 24; ಲೂಕ 5:12, 13; 7:22; 14:1-4; ಯೋಹಾನ 9:1-7.
ಮಾನವಕುಲದ ಲೋಕವ್ಯವಹಾರಗಳನ್ನು ವಹಿಸಿಕೊಳ್ಳುವಂತೆ ದೇವರು ತನ್ನ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನಿಗೆ ಶೀಘ್ರವೇ ಆಜ್ಞಾಪಿಸುವನು. ಅವನ ಆಡಳಿತದ ಕೆಳಗೆ, ಯೆಶಾಯನ ಈ ಪ್ರವಾದನೆ ನಿಜವಾಗುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.” (ಯೆಶಾಯ 33:24) ಇದು ಹೇಗೆ ಸಂಭವಿಸುವುದು?
“ಅಲ್ಲಿಯ ಜನರ ಪಾಪವು ಪರಿಹಾರವಾಗುವದು” ಎಂದು ಪ್ರವಾದಿಯು ಬರೆಯುವುದನ್ನು ನಾವು ಗಮನಿಸಿದೆವು. ಆದುದರಿಂದ, ಅಸ್ವಸ್ಥತೆಯ ಪ್ರಧಾನ ಕಾರಣವು, ಅಂದರೆ ಮಾನವಕುಲವು ಬಾಧ್ಯತೆಯಾಗಿ ಪಡೆದಿರುವ ಪಾಪವು ತೆಗೆದುಹಾಕಲ್ಪಡುವುದು. ಹೇಗೆ? ಅಧೀನ ಮಾನವಕುಲಕ್ಕೆ ಯೇಸುವಿನ ಪ್ರಕಟನೆ 21:3, 4; ಮತ್ತಾಯ, ಅಧ್ಯಾಯ 24; 2 ತಿಮೊಥೆಯ 3:1-5.
ಪ್ರಾಯಶ್ಚಿತ್ತ ಬಲಿಯ ಮೌಲ್ಯವನ್ನು ಅನ್ವಯಿಸಲಾಗುವುದು. ಹೀಗೆ ಅಸ್ವಸ್ಥತೆ ಮತ್ತು ಮರಣದ ಕಾರಣವನ್ನು ತೆಗೆದುಹಾಕಲಾಗುವುದು. ಭೂಮಿಯ ಪ್ರತಿಯೊಂದು ಮೂಲೆಯಲ್ಲಿಯೂ ಪರದೈಸಿಕ ಪರಿಸ್ಥಿತಿಗಳು ಅನುಭವಿಸಲ್ಪಡುವವು. ಕ್ರೈಸ್ತ ಅಪೊಸ್ತಲನಾದ ಯೋಹಾನನು ಬರೆದದ್ದು: “ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಅದು ಶೀಘ್ರವೇ ನಡೆಯಲಿದೆ!—ಸಮತೂಕವನ್ನು ಕಾಪಾಡಿಕೊಳ್ಳುವುದು
ತನ್ಮಧ್ಯೆ, ಅಸ್ವಸ್ಥತೆ ಮತ್ತು ರೋಗವು ಲಕ್ಷಾಂತರ ಜನರ ಪಾಡಾಗಿದೆ. ಆದಕಾರಣ, ಜನರು ತಮ್ಮ ಆರೋಗ್ಯ ಮತ್ತು ತಮ್ಮ ಪ್ರಿಯ ಜನರ ಆರೋಗ್ಯದ ಕುರಿತು ಚಿಂತಿಸುವುದು ಸ್ವಾಭಾವಿಕವಾದದ್ದೇ.
ವೈದ್ಯಕೀಯ ವೃತ್ತಿಯ ಪ್ರಯತ್ನಗಳನ್ನು ಕ್ರೈಸ್ತರು ಇಂದು ಅಧಿಕವಾಗಿ ಮಾನ್ಯಮಾಡುತ್ತಾರೆ. ಅವರು ಆರೋಗ್ಯವಂತರಾಗಲು ಅಥವಾ ಆರೋಗ್ಯವಂತರಾಗಿ ಉಳಿಯಲು ನ್ಯಾಯಸಮ್ಮತವಾದ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೂ, ಭವಿಷ್ಯದಲ್ಲಿ ಅಸ್ವಸ್ಥತೆಯಿಂದ ವಿಮುಕ್ತಿ ಸಿಗುತ್ತದೆ ಎಂಬ ಬೈಬಲಿನ ವಾಗ್ದಾನವು ಈ ವಿಷಯದಲ್ಲಿ ನಮ್ಮ ಸಮತೂಕವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಮೆಸ್ಸೀಯ ರಾಜನು ಮಾನವಕುಲದ ವ್ಯವಹಾರಗಳನ್ನು ತನ್ನ ಹತೋಟಿಯಲ್ಲಿ ತೆಗೆದುಕೊಳ್ಳುವ ತನಕ, ಪರಿಪೂರ್ಣವಾದ ಆರೋಗ್ಯ ಸಾಧ್ಯವೇ ಇಲ್ಲ. ಈಗಾಗಲೇ ನಾವು ನೋಡಿರುವಂತೆ, ಮರದ ತುದಿಯಲ್ಲಿರುವ ತುಂಬ ಹಣ್ಣಾಗಿರುವ ಸೀಬೆಹಣ್ಣನ್ನು ಎಟುಕಿಸುವುದು ಅಸಾಧ್ಯವಾಗಿರುವಂತೆಯೇ ಅತಿ ದೊಡ್ಡ ಕಂಡುಹಿಡಿತಗಳು ಕೂಡ ಔಷಧಶಾಸ್ತ್ರವು ಎಲ್ಲರಿಗೂ ಒಳ್ಳೆಯ ಆರೋಗ್ಯವನ್ನು ಒದಗಿಸುವಂತೆ ಶಕ್ತಗೊಳಿಸಿಲ್ಲ.
“ಲೋಕದಲ್ಲಿರುವ ಎಲ್ಲಾ ಜನರಿಗೆ ಅಂಗೀಕಾರಾರ್ಹ ಮಟ್ಟದ ಆರೋಗ್ಯ” ಎಂಬ ಗುರಿಯು ಶೀಘ್ರವೇ ಸಾಧಿಸಲ್ಪಡುವುದು. ಆದರೆ ಅದು ವಿಶ್ವ ಸಂಸ್ಥೆಯಿಂದ, ಲೋಕಾರೋಗ್ಯ ಸಂಸ್ಥೆಯಿಂದ, ಪರಿಸರದ ಯೋಜಕರಿಂದ, ಸಾಮಾಜಿಕ ಸುಧಾರಕರಿಂದ, ಅಥವಾ ವೈದ್ಯರಿಂದ ಸಾಧಿಸಲ್ಪಡುವುದಿಲ್ಲ. ಆ ಸಾಧನೆಯು ಯೇಸು ಕ್ರಿಸ್ತನಿಗೆ ಮೀಸಲಾಗಿಡಲ್ಪಟ್ಟಿದೆ. ಮಾನವಕುಲವು ಅಂತಿಮವಾಗಿ “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲು”ಹೊಂದುವುದು ಎಂತಹ ಆನಂದಕರ ವಿಷಯವಾಗಿರುವುದು!—ರೋಮಾಪುರ 8:21.(g01 6/8)
[ಪುಟ 10ರಲ್ಲಿರುವ ಚಿತ್ರಗಳು]
ದೇವರ ಹೊಸ ಲೋಕದಲ್ಲಿ ಎಲ್ಲರಿಗೂ ಒಳ್ಳೇ ಆರೋಗ್ಯ ಇರುವುದು