ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖಶಮನಕ್ಕೆ ಮಾರ್ಗದರ್ಶಿ

ದುಃಖಶಮನಕ್ಕೆ ಮಾರ್ಗದರ್ಶಿ

ದುಃಖಶಮನಕ್ಕೆ ಮಾರ್ಗದರ್ಶಿ

ಮಹಿಳೆಯೊಬ್ಬಳು ತಾನು 12 ವರ್ಷದವಳಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಳು. ಅನಂತರ ಅನೇಕ ವರ್ಷಗಳ ವರೆಗೆ ಅವಳು ಕಳವಳ ಮತ್ತು ಖಿನ್ನತೆಯಿಂದ ಬಳಲಿದಳು. ಕೆನಡದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಬರೆದ ಪತ್ರದಲ್ಲಿ ಆಕೆ ವಿವರಿಸಿದ್ದು:

“ನನಗೆ ಸಮಾಧಾನ ಸಿಕ್ಕಿದ್ದು, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರನ್ನು ಓದಿದ ಮೇಲೆಯೇ. ನಿಜವಾಗಿಯೂ ಆ ಬ್ರೋಷರ್‌ ನನಗೆ ದುಃಖದಿಂದ ಹೊರಬರಲು ತುಂಬಾ ಸಹಾಯಮಾಡಿತು. ತಂದೆ ​ಇಲ್ಲವಲ್ಲಾ ಎಂದು ನೆನಸಿಕೊಳ್ಳುವಾಗ ನನಗೆ ಈಗಲೂ ದುಃಖ ಉಮ್ಮಳಿಸಿ ಬರುತ್ತದೆ. ಆದರೆ ಆ ಬ್ರೋಷರನ್ನು ಹಾಗೂ ಶಾಸ್ತ್ರವಚನಗಳನ್ನು ಓದಿ, ಧ್ಯಾನಿಸಿ, ಪ್ರಾರ್ಥನೆ ಮಾಡಿದ ನಂತರ ಮತ್ತು ಹಾಗೆ ಓದುವಾಗ ನನ್ನ ಭಾವನೆಗಳನ್ನು ತಡೆಯದೆ ಅತ್ತದ್ದರಿಂದ ನನಗೆ ಮುಂಚಿನಷ್ಟು ನೋವಿಲ್ಲ. ಈಗ ನಾನು ದೇವರ ವಾಗ್ದಾನಗಳಿಂದ ಸಮಾಧಾನವನ್ನು ಕಂಡುಕೊಳ್ಳಬಲ್ಲೆ.

“ಈ ಬ್ರೋಷರ್‌ನಲ್ಲಿರುವ ಪದಗಳು ಮತ್ತು ಶಾಸ್ತ್ರವಚನಗಳು ನನಗೆ ಅತಿ ಪ್ರಿಯವಾಗಿವೆ. ಏಕೆಂದರೆ, ಅವು ದುಃಖದಿಂದ ಭಗ್ನಗೊಂಡ ಹೃದಯವನ್ನು ಸಂತೈಸಿದ ಸಾಧನ. ಈಗ ನನಗೆ ನೆಮ್ಮದಿ ಸಿಕ್ಕಿದೆ. ಈ ಬ್ರೋಷರ್‌ ದುಃಖಶಮನಕ್ಕೆ ಅತ್ಯುತ್ತಮ ಮಾರ್ಗದರ್ಶಿ ಎಂದು ನಾನು ಶಿಫಾರಸ್ಸು ಮಾಡುತ್ತೇನೆ.”

ನಿಮ್ಮ ಪ್ರೀತಿಪಾತ್ರರು ಯಾರಾದರೂ ಮರಣಪಟ್ಟಿದ್ದಾರೋ? ಅವರಿಗಾಗಿ ನೀವಿನ್ನೂ ದುಃಖಿಸುತ್ತಿದ್ದೀರೋ? ನಿಮ್ಮ ದುಃಖಶಮನಕ್ಕಾಗಿ ನಿಮಗೆ ಸಹಾಯ ಬೇಕೋ? ಮೃತರಿಗೆ ಬೈಬಲ್‌ ಯಾವ ನಿರೀಕ್ಷೆಯನ್ನು ನೀಡುತ್ತದೆ? ನೀವು ಅಥವಾ ನಿಮ್ಮ ಪರಿಚಯದವರೊಬ್ಬರು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ 32 ಪುಟಗಳ ಬ್ರೋಷರಿನಿಂದ ಸಾಂತ್ವನವನ್ನು ಪಡೆಯಬಹುದು. ಕೆಳಗಿನ ಕೂಪನ್‌ ಭರ್ತಿಮಾಡಿ, ಈ ಪತ್ರಿಕೆಯ 5 ನೇ ಪುಟದಲ್ಲಿರುವ ಸೂಕ್ತ ವಿಳಾಸಕ್ಕೆ ಕಳುಹಿಸುವ ಮೂಲಕ ಈ ಬ್ರೋಷರನ್ನು ಪಡೆದುಕೊಳ್ಳಬಹುದು. (g 8/08)

ಯಾವುದೇ ನಿರ್ಬಂಧಕ್ಕೆ ಒಳಪಡದೆ ಈ ಚಿತ್ರದಲ್ಲಿರುವ ಬ್ರೋಷರಿಗಾಗಿ ನಾನು ವಿನಂತಿಸಿಕೊಳ್ಳುತ್ತೇನೆ.

ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.