ನೆನಪಿಸಿಕೊಳ್ಳಬೇಕಾದ ರಾತ್ರಿ
ನೆನಪಿಸಿಕೊಳ್ಳಬೇಕಾದ ರಾತ್ರಿ
ನಮ್ಮೊಂದಿಗೆ ನೀವೂ ಕೂಡಿಬನ್ನಿ—ಗುರುವಾರ, ಏಪ್ರಿಲ್ 9, 2009
ಯೇಸು ಕ್ರಿಸ್ತನು ತಾನು ಸಾಯುವ ಮುಂಚಿನ ರಾತ್ರಿಯಲ್ಲಿ ದ್ರಾಕ್ಷಾಮದ್ಯ ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ಸೂಚಕವಾಗಿ ಉಪಯೋಗಿಸುತ್ತಾ ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸಿದನು. ಯೇಸು ಆಜ್ಞಾಪಿಸಿದ್ದು: “ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.”—ಲೂಕ 22:19, NW.
ಯೇಸುವಿನ ಆಜ್ಞೆಗೆ ವಿಧೇಯರಾಗುತ್ತಾ ಈ ವಾರ್ಷಿಕ ಘಟನೆಯನ್ನು ಆಚರಿಸಲು ತಮ್ಮೊಂದಿಗೆ ಕೂಡಿಬರುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತಾರೆ. ಸರಿಯಾದ ಸಮಯ ಮತ್ತು ಸ್ಥಳದ ಮಾಹಿತಿಗಾಗಿ ದಯವಿಟ್ಟು ಅವರನ್ನು ಸ್ಥಳಿಕವಾಗಿ ಸಂಪರ್ಕಿಸಿ. (g 3/09)