ಮಾನವರು—ಕೇವಲ ಮೇಲ್ಮಟ್ಟದ ಪ್ರಾಣಿಗಳೊ?
ಮಾನವರು—ಕೇವಲ ಮೇಲ್ಮಟ್ಟದ ಪ್ರಾಣಿಗಳೊ?
“ಜೀವದ ಉಗಮದ ಬಗ್ಗೆ ನಮ್ಮ ನಂಬಿಕೆಯೇನು ಎಂಬ ವಿಷಯವು ನಿಜವಾಗಿಯೂ ವ್ಯತ್ಯಾಸವನ್ನು ಉಂಟುಮಾಡುತ್ತದೋ?”
ಬ್ರೆಸಿಲ್ನ 16 ವರ್ಷ ಪ್ರಾಯದ ಹುಡುಗಿಯೊಬ್ಬಳು “ಮಾನವರು—ಕೇವಲ ಮೇಲ್ಮಟ್ಟದ ಪ್ರಾಣಿಗಳೊ?” ಎಂಬ ವಿಷಯದ ಕುರಿತಾದ ತನ್ನ ಭಾಷಣದ ಪೀಠಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಿದಳು. ಅವಳ ಶಿಕ್ಷಕಿಯು ಜುಲೈ 8, 1998ರ ಎಚ್ಚರ! ಪತ್ರಿಕೆಯನ್ನು ಪಡೆದುಕೊಂಡ ಅನಂತರ, ತರಗತಿಯ ಮುಂದೆ ಈ ಪ್ರಶ್ನೆಗೆ ಉತ್ತರವನ್ನು ಕೊಡುವಂತೆ ಈ ವಿದ್ಯಾರ್ಥಿನಿಯನ್ನು ಕೇಳಿಕೊಂಡಳು.
ನೈಸರ್ಗಿಕ ಪ್ರಕ್ರಿಯೆಯ ಮೇಲಾಧರಿಸಿದ ವಿಕಾಸದ ಬೋಧನೆಯು ಎಷ್ಟು ವಿನಾಶಕಾರಿಯಾಗಿದೆ ಎಂಬುದನ್ನು ಈ ಯುವ ಸಾಕ್ಷಿಯು ಎತ್ತಿತೋರಿಸಿದಳು. ಉದಾಹರಣೆಗೆ, ಯುದ್ಧವು ಬದುಕಿ ಉಳಿಯಲಿಕ್ಕಾಗಿ ನಿರಂತರವಾಗಿ ಸಂಘರ್ಷಿಸುವಾಗ ಆಗುವಂತಹ ಒಂದು ಸಹಜ ಕ್ರಿಯೆಯಾಗಿದ್ದು, ಫ್ಯಾಸಿಸ್ಟ್ ಹಾಗೂ ನಾಜಿ ಪಂಥದ ವಿಕಸನಕ್ಕೆ ದಾರಿಮಾಡಿಕೊಟ್ಟಿದೆ ಎಂದು ನೆನಸುವಂತೆ ಕೆಲವರನ್ನು ವಿಕಾಸವಾದವು ನಡೆಸಿದೆ ಎಂದು ಅನೇಕ ಜನರು ಭಾವಿಸುತ್ತಾರೆ.
ಮಾನವರ ಮತ್ತು ಪ್ರಾಣಿಗಳ ನಡುವೆ ಬಹಳ ಅಂತರವಿದೆ ಎಂಬುದನ್ನು ಈ ವಿದ್ಯಾರ್ಥಿನಿಯು ತೋರಿಸಿಕೊಟ್ಟಳು. ಅವಳು ಹೇಳಿದ್ದು: “ಮಾನವರು ಮಾತ್ರ ಆತ್ಮಿಕತೆಯನ್ನು ವಿಕಸಿಸಿಕೊಳ್ಳಸಾಧ್ಯವಿದೆ. ಜೀವ ಎಂದರೇನು ಮತ್ತು ಅದರ ಉದ್ದೇಶವೇನೆಂಬುದನ್ನು ಕಂಡುಹಿಡಿಯಲು ಮನುಷ್ಯರು ಮಾತ್ರ ಪ್ರಯತ್ನಿಸುತ್ತಾರೆ. ಕೇವಲ ಮನುಷ್ಯರು ಮರಣದಿಂದ ಕ್ಲೇಶಕ್ಕೊಳಗಾಗುತ್ತಾರೆ, ತಮ್ಮ ಉಗಮದ ಬಗ್ಗೆ ಚಿಂತಿತರಾಗಿದ್ದಾರೆ, ಅಷ್ಟುಮಾತ್ರವಲ್ಲದೆ ಅವರಿಗೆ ಅನಂತಕಾಲದ ವರೆಗೆ ಜೀವಿಸಲಿಕ್ಕೆ ಉತ್ಕಟ ಆಸೆಯಿದೆ. ನಮ್ಮ ಉಗಮದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಸಮಯವನ್ನು ಕಳೆಯುವುದು ಎಷ್ಟು ಮಹತ್ತ್ವದ್ದಾಗಿದೆ!”
ಇಷ್ಟೊಂದು ಉತ್ತಮ ರೀತಿಯಲ್ಲಿ ಭಾಷಣವನ್ನು ಸಾದರಪಡಿಸಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಶಿಕ್ಷಕಿಯು ಶ್ಲಾಘಿಸಿದಳು. ವಾಚನದಲ್ಲಿ ಈ ಯುವ ಸಾಕ್ಷಿಗಿರುವ ಒಲವಿಗೆ ಈ ಯಶಸ್ಸು ಸಲ್ಲುತ್ತದೆ ಎಂಬುದನ್ನು ಶಿಕ್ಷಕಿಯು ತೋರಿಸಿಕೊಟ್ಟಳು. ಎಚ್ಚರ! ಹಾಗೂ ಕಾವಲಿನಬರುಜು ಎಂಬ ಬೈಬಲ್ ಆಧಾರಿತ ಪ್ರಕಾಶನಗಳನ್ನು ಈ ಯುವ ಸಾಕ್ಷಿಯು ತೀವ್ರಾಸಕ್ತಿಯಿಂದ ಓದುತ್ತಾಳೆ ಎಂಬುದು ಶಾಲೆಯಲ್ಲಿ ಎಲ್ಲರಿಗೂ ಗೊತ್ತಿದೆ.
ಯುವ ಜನರ ಹೃದಮನಗಳಲ್ಲಿ ಎಷ್ಟರ ಮಟ್ಟಿಗೆ ವಿಕಾಸವಾದವು ಬೇರೂರಿಸಲ್ಪಟ್ಟಿದೆ ಎಂಬುದರ ಬಗ್ಗೆ ಯೆಹೋವನ ಸಾಕ್ಷಿಗಳು ನಿಜವಾಗಿಯೂ ಚಿಂತಿತರಾಗಿದ್ದಾರೆ. ಆದುದರಿಂದಲೇ, ಈ ಯುವ ಸಾಕ್ಷಿಯು ಸಹವಾಸಿಸುತ್ತಿರುವ ಸಭೆಯು, ತಮ್ಮ ಶಿಕ್ಷಕರಿಗೆ ಮತ್ತು ಸಹಪಾಠಿಗಳಿಗೆ ಜುಲೈ 8, 1998ರ ಎಚ್ಚರ! ಪತ್ರಿಕೆಯನ್ನು ಕೊಡುವಂತೆ ಯುವ ಸಾಕ್ಷಿಗಳನ್ನು ಉತ್ತೇಜಿಸಿತು. ಆ ನಗರದಲ್ಲಿ ಸುಮಾರು 230 ಪತ್ರಿಕೆಗಳು ಹಲವಾರು ಶಾಲೆಗಳಲ್ಲಿ ವಿತರಿಸಲ್ಪಟ್ಟವು. ಶಾಲೆಯೊಂದರ ವಿಜ್ಞಾನದ ಪ್ರಾಧ್ಯಾಪಕರು ಎಚ್ಚರ! ಪತ್ರಿಕೆಗೆ ಚಂದಾಮಾಡಿದರು.
ಹೌದು, ಜೀವದ ಉಗಮದ ಬಗ್ಗೆ ನಮ್ಮ ನಂಬಿಕೆಯೇನು ಎಂಬುದು ನಿಜವಾಗಿಯೂ ವ್ಯತ್ಯಾಸವನ್ನು ಉಂಟುಮಾಡುತ್ತದೆ! ಸೃಷ್ಟಿಕರ್ತನಲ್ಲಿರುವ ನಂಬಿಕೆಯು ತಮ್ಮ ಜೀವಿತಗಳಲ್ಲಿ ನಿಜವಾದ ವ್ಯತ್ಯಾಸವನ್ನು ಉಂಟುಮಾಡಿದೆ ಎಂಬುದನ್ನು ಆ ಯುವತಿ ಮತ್ತು ಅವಳ ಸ್ನೇಹಿತೆಯರು ತೋರಿಸಿದ್ದಾರೆ.