ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಗಣ್ಯಮಾಡಿದ್ದೀರೋ? ಈ ಮುಂದಿನ ಪ್ರಶ್ನೆಗಳಿಗೆ ನಿಮಗೆ ಉತ್ತರಗಳು ಗೊತ್ತಿವೆಯೋ ಎಂಬುದನ್ನು ನೋಡಿ.
• ಯೆಶಾಯ 65:17-19ರಲ್ಲಿರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಪ್ರವಾದನೆಯ ನೆರವೇರಿಕೆಯು, ಸೆರೆಯಿಂದ ಹಿಂದಿರುಗಿದ ಯೆಹೂದ್ಯರ ಕುರಿತಾಗಿ ತಿಳಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ ಎಂಬುದರ ಬಗ್ಗೆ ನಾವು ಹೇಗೆ ನಿಶ್ಚಿತರಾಗಿರಸಾಧ್ಯವಿದೆ?
ಸಾ.ಶ. ಒಂದನೇ ಶತಮಾನದಲ್ಲಿ ಅಪೊಸ್ತಲ ಪೇತ್ರ ಹಾಗೂ ಯೋಹಾನರು ಪತ್ರವನ್ನು ಬರೆದಾಗ, ಅವರು ಒಂದು ಭವಿಷ್ಯತ್ತಿನ ನೆರವೇರಿಕೆಯನ್ನು ಸೂಚಿಸಿದರು. ಅದರಲ್ಲಿ ಇನ್ನು ಮುಂದೆ ಬರಲಿರುವ ಆಶೀರ್ವಾದಗಳು ಒಳಗೂಡಲಿವೆ. (2 ಪೇತ್ರ 3:13; ಪ್ರಕಟನೆ 21:1-4)—4/15, ಪುಟಗಳು 10-12.
• ಹಿಂಸಾತ್ಮಕ ದೇವಮಾನವರ ಕುರಿತ ಪುರಾತನ ಗ್ರೀಕ್ ಕಾಲ್ಪನಿಕ ಕಥೆಗಳಿಗೆ ಯಾವುದು ಆಧಾರವಾಗಿರಬಹುದು?
ಜಲಪ್ರಳಯಕ್ಕೆ ಮುಂಚೆ ಕೆಲವು ದೇವದೂತರು ಮಾನವ ದೇಹಗಳನ್ನು ಧರಿಸಿಕೊಂಡು ಭೂಮಿಯ ಮೇಲೆ ಹಿಂಸಾತ್ಮಕ ಹಾಗೂ ಅನೈತಿಕ ಜೀವಿತಗಳನ್ನು ನಡೆಸಿದರು ಎಂಬ ವಾಸ್ತವಾಂಶವು ತಪ್ಪಾಗಿ ಅರ್ಥನಿರೂಪಿಸಲ್ಪಟ್ಟಿದ್ದು, ಸುಳ್ಳುಕಥೆಗಳಾಗಿ ಹೆಣಿದಿರಬಹುದು. (ಆದಿಕಾಂಡ 6:1, 2)—4/15, ಪುಟ 27.
• ವಿವಾಹಗಳಲ್ಲಿ ಉಂಟಾಗಬಹುದಾದಂತಹ ಯಾವ ಕೆಲವು ಅಪಾಯಗಳಿಂದ ಪ್ರೌಢ ಕ್ರೈಸ್ತರು ತಮ್ಮನ್ನು ಕಾಪಾಡಿಕೊಳ್ಳುತ್ತಾರೆ?
ಅಬ್ಬರಿಸುವಂತಹ ಗೋಷ್ಠಿಗಳಿಂದ ದೂರವಿರುವುದು ಪ್ರಾಮುಖ್ಯವಾಗಿದೆ. ಮಿತಿಮೀರಿದ ಮದ್ಯಪಾನ ಹಾಗೂ ಗದ್ದಲಭರಿತ ಸಂಗೀತಕ್ಕೆ ತಕ್ಕಂತೆ ಹುಚ್ಚು ಕುಣಿತವು ಇರುವಲ್ಲಿ ಇದು ಉಂಟಾಗಬಹುದು. ವಿವಾಹಕ್ಕೆ ಎಲ್ಲರೂ ಬರಬಹುದು ಎಂಬ ಸ್ಪಷ್ಟವಾದ ನಿರ್ದೇಶನವಿರದಿರುವಲ್ಲಿ, ಆಹ್ವಾನಿಸಲ್ಪಡದೇ ಇರುವವರು ವಿವಾಹಕ್ಕೆ ಹೋಗಬಾರದು. ಒಂದು ತಕ್ಕ, ನಿರ್ದಿಷ್ಟ ಸಮಯದಲ್ಲಿ ಸಮಾರಂಭವು ಮುಗಿಯುವ ತನಕ ಜವಾಬ್ದಾರಿಯುತ ಕ್ರೈಸ್ತರು ಅಲ್ಲಿರುವಂತೆ ವರನು ಖಚಿತಪಡಿಸಕೊಳ್ಳತಕ್ಕದ್ದು.—5/1, ಪುಟಗಳು 19-22.
• ಕೀರ್ತನೆ 128:3ರಲ್ಲಿ ಪುತ್ರರು ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ “ಎಣ್ಣೇಮರದ ಸಸಿ”ಗಳಂತಿರುವರು ಎಂದು ಹೇಳಿರುವುದರ ಅರ್ಥವೇನು?
ಅನೇಕ ವೇಳೆ ಹೊಸ ರೆಂಬೆಗಳು ಆಲಿವ್ ಮರದ ಕಾಂಡದಿಂದ ಚಿಗುರುತ್ತವೆ. ಆಲಿವ್ ಮರದ ಮುಖ್ಯ ಕಾಂಡವು ಹೆಚ್ಚು ಹಣ್ಣನ್ನು ಬಿಡದಿದ್ದಾಗ, ಅದರ ಸುತ್ತಲೂ ಹೊಸ ರೆಂಬೆಗಳು ಸೊಗಸಾಗಿ ಬೆಳೆದ ಕಾಂಡಗಳಾಗುವುವು. ಅದೇ ರೀತಿಯಲ್ಲಿ, ಮಕ್ಕಳು ತಮ್ಮೊಂದಿಗೆ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡಿ, ಹೆತ್ತವರು ಬಹಳ ಸಂತೋಷಿಸಬಲ್ಲರು.—5/15, ಪುಟ 27.
• ಹಿತಕರವಾದ ಕುಟುಂಬ ವಾತಾವರಣದಿಂದ ಮಕ್ಕಳು ಯಾವ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ?
ಇದು ಅಧಿಕಾರದ ಕುರಿತು ಉತ್ತಮ ದೃಷ್ಟಿಕೋನವನ್ನು ಹೊಂದಿರಲು ಮತ್ತು ಸರಿಯಾದ ಮೌಲ್ಯಗಳಿಗೆ ಗಣ್ಯತೆಯನ್ನು ತೋರಿಸಲು ಹಾಗೂ ಇತರರೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳಲು ತಳಪಾಯವನ್ನು ಹಾಕುತ್ತದೆ. ಅಂಥ ಒಂದು ವಾತಾವರಣವು ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ಸಹ ಅವರಿಗೆ ಸಹಾಯಮಾಡಬಲ್ಲದು.—6/1, ಪುಟ 18.
• ದೂರದ ಪೂರ್ವದೇಶವೊಂದರಲ್ಲಿ, ಕ್ರೈಸ್ತರೆಲ್ಲರೂ ಸಹೋದರರಾಗಿದ್ದಾರೆ ಎಂಬ ವಿಚಾರವನ್ನು ಉತ್ತೇಜಿಸಲು ಏನು ಮಾಡಲಾಯಿತು?
ಕೆಲವರಿಗೆ ಮಾತ್ರ ಗೌರವಾರ್ಥಕ ಪದಗಳನ್ನು ಉಪಯೋಗಿಸದೆ, ಎಲ್ಲರನ್ನೂ ಸಮಾನವಾಗಿ ಸಹೋದರರೆಂದು ಕರೆಯಬೇಕು ಎಂದು ಸಭೆಗಳಿಗೆ ಉತ್ತೇಜನವನ್ನು ನೀಡಲಾಯಿತು.—6/15, ಪುಟಗಳು 21, 22.
• ರಕ್ತದಿಂದ ತೆಗೆದ ಔಷಧಿಗಳನ್ನು ಯೆಹೋವನ ಸಾಕ್ಷಿಗಳು ಸ್ವೀಕರಿಸುತ್ತಾರೋ?
‘ರಕ್ತವನ್ನು . . . ವಿಸರ್ಜಿಸಿರಿ’ ಎಂಬ ಬೈಬಲಿನ ಆಜ್ಞೆಯು, ರಕ್ತ ಅಥವಾ ರಕ್ತದ ಅಂಶಗಳನ್ನು (ಪ್ಲಾಸ್ಮಾ, ಕೆಂಪು ರಕ್ತಕಣಗಳು, ಬಿಳಿರಕ್ತಕಣಗಳು, ಮತ್ತು ಪ್ಲೇಟ್‌ಲೆಟ್‌ಗಳು) ತೆಗೆದುಕೊಳ್ಳದಿರುವಂತೆ ಸೂಚಿಸುತ್ತದೆ. (ಅ. ಕೃತ್ಯಗಳು 15:28, 29) ರಕ್ತದ ಅಂಶಗಳಿಂದ ತೆಗೆದ ಘಟಕಗಳ ವಿಷಯದಲ್ಲಿ, ಬೈಬಲು ಏನು ಹೇಳುತ್ತದೆ ಮತ್ತು ದೇವರೊಂದಿಗಿನ ಸಂಬಂಧವನ್ನು ಮನಸ್ಸಿನಲ್ಲಿಟ್ಟುಕೊಂಡು, ಪ್ರತಿಯೊಬ್ಬ ಕ್ರೈಸ್ತನು ವೈಯಕ್ತಿಕವಾಗಿ ನಿರ್ಧರಿಸತಕ್ಕದ್ದು.—6/15, ಪುಟಗಳು 29-31.
• ಇಂದು ನಿಜವಾಗಿಯೂ ಮನಶ್ಶಾಂತಿಯನ್ನು ಕಂಡುಕೊಳ್ಳಸಾಧ್ಯವಿದೆಯೋ?
ಹೌದು. ಬೈಬಲಿನ ಮುಖಾಂತರ, ಯೇಸು ಕ್ರಿಸ್ತನು ಜನರನ್ನು ಶುದ್ಧಾರಾಧನೆಯ ಮತ್ತು ಯೆಶಾಯ 32:18ರಲ್ಲಿ ವರ್ಣಿಸಲ್ಪಟ್ಟಿರುವ ಶಾಂತಿಯ ಮಾರ್ಗದಲ್ಲಿ ನಡೆಸುತ್ತಿದ್ದಾನೆ. ಅಷ್ಟುಮಾತ್ರವಲ್ಲದೆ, ಇಂತಹ ಶಾಂತಿಯನ್ನು ಅನುಭವಿಸುವವರು ಕೀರ್ತನೆ 37:11, 29ರ ನೆರವೇರಿಕೆಗನುಸಾರ, ಇದೇ ಭೂಮಿಯಲ್ಲಿ ಚಿರಕಾಲದ ಶಾಂತಿಯಲ್ಲಿ ಆನಂದಿಸುವ ಪ್ರತೀಕ್ಷೆಯನ್ನು ಹೊಂದಿದ್ದಾರೆ.—7/1, ಪುಟ7.
• ಆಧುನಿಕ ದೇವಪ್ರಭುತ್ವಾ ಇತಿಹಾಸದಲ್ಲಿ ಜಾರ್ಜ್ ಯಂಗ್‌ರವರ ಪಾತ್ರವೇನು?
1917ರಿಂದ ಆರಂಭಿಸಿ, ಇವರು ಅನೇಕ ದೇಶಗಳಲ್ಲಿ ರಾಜ್ಯ ಸುವಾರ್ತೆಯ ಬೆಳಕುವಾಹಕರಾಗಿ ಕಾರ್ಯನಡೆಸಿದರು. ಅವರು ಕೆನಡದಲ್ಲೆಲ್ಲ, ಕ್ಯಾರಿಬಿಯನ್, ಬ್ರಸಿಲ್ ಮತ್ತು ದಕ್ಷಿಣ ಅಮೆರಿಕ, ಮಧ್ಯ ಅಮೆರಿಕದ ಇತರ ದೇಶಗಳು, ಸ್ಪೆಯಿನ್, ಪೋರ್ಚುಗಲ್, ಆಗಿನ ಸೋವಿಯೆಟ್ ಯೂನಿಯನ್, ಮತ್ತು ಅಮೆರಿಕದಲ್ಲಿ ಸುವಾರ್ತೆಯನ್ನು ಸಾರಿದರು.—7/1, ಪುಟಗಳು 22-7.
• ‘ಸತ್ತವರಾಗಿರುವುದಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು’ ಎಂದು 1 ಕೊರಿಂಥ 15:29 ಹೇಳುವಾಗ, ಅದರ ಅರ್ಥವೇನಾಗಿದೆ?
ಕ್ರೈಸ್ತರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವಾಗ, ತಮ್ಮನ್ನು ಮರಣಕ್ಕೆ ನಡಿಸುವಂತೆ ಒಂದು ಜೀವನಮಾರ್ಗಕ್ಕೆ ಒಳಪಡಿಸುತ್ತಾರೆ. ತರುವಾಯ ಸ್ವರ್ಗೀಯ ಜೀವನಕ್ಕಾಗಿ ಅವರಿಗೆ ಪುನರುತ್ಥಾನವಾಗುತ್ತದೆ.—7/15, ಪುಟ 17.
• ಅಪೊಸ್ತಲ ಪೌಲನ ಅಜ್ಞಾತ ವರ್ಷಗಳು ಎಂದು ಕರೆಯಲ್ಪಡುವ ಸಮಯದಲ್ಲಿ ಅವನು ಏನು ಮಾಡುತ್ತಿದ್ದನು?
ಈ ವರ್ಷಗಳಲ್ಲಿ ಅವನು ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಲ್ಲಿ ಸಭೆಗಳನ್ನು ಸ್ಥಾಪಿಸಲು ಇಲ್ಲವೇ ಅವುಗಳನ್ನು ಬಲಪಡಿಸಲು ಸಹಾಯಮಾಡಿದ್ದಿರಬಹುದು. 2 ಕೊರಿಂಥ 11:23-27ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಅನೇಕ ಕಷ್ಟದೆಸೆಗಳು ಈ ಅವಧಿಯಲ್ಲೇ ಸಂಭವಿಸಿದ್ದಿರಬಹುದು. ಇದು ಅವನು ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸಿದನು ಎಂಬುದನ್ನು ತೋರಿಸುತ್ತದೆ.—7/15, ಪುಟಗಳು 26, 27.
• ನಮ್ಮ ನಿರೀಕ್ಷೆಗಳು ಅತಿಯಾಗಿರದಂತೆ ಮಾಡಲು ಯಾವುದು ನಮಗೆ ಸಹಾಯಮಾಡಬಲ್ಲದು?
ಯೆಹೋವನು ಅರ್ಥಮಾಡಿಕೊಳ್ಳುವವನಾಗಿದ್ದಾನೆ ಎಂಬುದನ್ನು ನೆನಪಿನಲ್ಲಿಡಿರಿ. ಆತನಿಗೆ ನಾವು ಪ್ರಾರ್ಥಿಸುವಾಗ, ನಮ್ಮ ಯೋಚನೆಯನ್ನು ನಾವು ಸಮತೂಕಗೊಳಿಸಸಾಧ್ಯವಿದೆ. ಮತ್ತು ಇದು ವಿನಯಶೀಲತೆಯನ್ನು ತೋರಿಸುತ್ತದೆ. ಪ್ರೌಢರಾಗಿರುವ ಒಬ್ಬ ಸ್ನೇಹಿತ ಅಥವಾ ಸ್ನೇಹಿತೆಯೊಂದಿಗೆ ಮನಬಿಚ್ಚಿ ಮಾತಾಡುವುದರಿಂದ ಸಹ ಸಹಾಯವು ಸಿಗುತ್ತದೆ.—8/1, ಪುಟಗಳು 29, 30.