ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲರ ಮನಕ್ಕೂ ಮುದನೀಡಬೇಕಾದಂತಹ ಒಂದು ವಿಷಯ”

“ಎಲ್ಲರ ಮನಕ್ಕೂ ಮುದನೀಡಬೇಕಾದಂತಹ ಒಂದು ವಿಷಯ”

“ಎಲ್ಲರ ಮನಕ್ಕೂ ಮುದನೀಡಬೇಕಾದಂತಹ ಒಂದು ವಿಷಯ”

ಟೂವಾಲೂ ಒಂಬತ್ತು ದ್ವೀಪಗಳುಳ್ಳ ಒಂದು ಸುಂದರ ದೇಶ. ಇದು ದಕ್ಷಿಣ ಪೆಸಿಫಿಕ್‌ನಲ್ಲಿದ್ದು, ಸುಮಾರು 10,500 ಜನರು ಅಲ್ಲಿ ವಾಸಿಸುತ್ತಾರೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ “ಚಿತ್ತವಾಗಿದೆ” ಎಂಬುದನ್ನು ಅಲ್ಲಿರುವ ಯೆಹೋವನ ಸಾಕ್ಷಿಗಳು ಅರಿತಿದ್ದ ಕಾರಣ, ಅವರಿಗೆ ತಮ್ಮ ಸ್ವಂತ ಭಾಷೆಯಲ್ಲಿ ಬೈಬಲ್‌ ಸಾಹಿತ್ಯಗಳನ್ನು ಹೊಂದಿರುವ ಕಟ್ಟಾಸೆಯಿತ್ತು. (1 ತಿಮೊಥೆಯ 2:⁠4) ಇದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿತ್ತು ಏಕೆಂದರೆ, ಆ ಭಾಷೆಯಲ್ಲಿ ಡಿಕ್ಷ್‌ನೆರಿಯೇ ಇರಲಿಲ್ಲ. 1979ರಲ್ಲಿ ಟೂವಾಲೂ ದೇಶದಲ್ಲಿ ಮಿಷನೆರಿಯೋಪಾದಿ ಸೇವೆಸಲ್ಲಿಸುತ್ತಿದ್ದ ಒಬ್ಬ ಯೆಹೋವನ ಸಾಕ್ಷಿ ಈ ಕಷ್ಟಕರವಾದ ಕೆಲಸಕ್ಕೆ ಕೈಹಾಕಿದರು. ಅಲ್ಲಿ ವಾಸಿಸುವ ಒಬ್ಬ ಕುಟುಂಬದೊಂದಿಗೆ ಅವರು ಮತ್ತು ಅವರ ಪತ್ನಿ ಸೇರಿಕೊಂಡು, ಆ ದೇಶದ ಭಾಷೆಯನ್ನು ಕಲಿತುಕೊಂಡರು ಮತ್ತು ಟೂವಾಲೂ ಭಾಷೆಯ ಪದಕೋಶವನ್ನು ಕಂಡುಹಿಡಿದರು. 1984ರೊಳಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಟೂವಾಲೂ ಭಾಷೆಯಲ್ಲಿ ನ್ಯೂ ಯಾರ್ಕ್‌ನ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯು ಹೊರತಂದಿತು.

ಟೂವಾಲೂ ದೇಶದ ಮಾಜಿ ಮುಖ್ಯ ಮಂತ್ರಿಯಾದ ಡಾ. ಟಿ. ಟೋಮಾಸಿ ಪೂವಾಪೂವ, ಸದಾ ಜೀವಿಸಬಲ್ಲಿರಿ ಪುಸ್ತಕಕ್ಕಾಗಿ ಗಣ್ಯತೆಯನ್ನು ಸೂಚಿಸುತ್ತಾ ಒಂದು ಪತ್ರವನ್ನು ಬರೆದರು. ಅವರು ಬರೆದುದು: “ಟೂವಾಲೂ ದೇಶದ ಪರಂಪರೆಗೆ ಇನ್ನೊಂದು ಹೊಸ ಹಾಗೂ ಬಹಳ ಮುಖ್ಯವಾದ ಕೊಡುಗೆಯು ಈ ಪುಸ್ತಕವಾಗಿದೆ. ಈ ದೇಶದ ಜನರ ಜೀವನದಲ್ಲಿ ಆತ್ಮಿಕತೆಯನ್ನು ಕಟ್ಟುವುದರಲ್ಲಿ ನೀವು ಅತ್ಯುತ್ತಮ ಪಾತ್ರವನ್ನು ವಹಿಸಿದ್ದೀರಿ. ಇದು ನಿಮಗೆ ನಿಜವಾಗಿಯೂ ಸಂತೋಷವನ್ನು ತರಬೇಕು. ಈ ಕೃತಿಯನ್ನು ಶೈಕ್ಷಣಿಕ ಪುಸ್ತಕಗಳ ಟೂವಾಲೂ ಭಾಷೆಯ ಚರಿತ್ರೆಯಲ್ಲಿ ಬರೆಯಲಾಗುವುದು . . . ಎಂಬುದು ನನ್ನ ನಂಬಿಕೆ. ಈ [ಸಾಧನೆಯು] ಎಲ್ಲರ ಮನಕ್ಕೂ ಮುದನೀಡುವಂತಹ ಒಂದು ವಿಷಯವಾಗಿದೆ.”

ಅನುವಾದಕನು ಸಂಗ್ರಹಿಸಿದ ಪದಗಳ ಪಟ್ಟಿಯು, 1993ರಲ್ಲಿ ಟೂವಾಲೂ-ಇಂಗ್ಲಿಷ್‌ ಭಾಷೆಯ ಡಿಕ್ಷ್‌ನೆರಿಯನ್ನು ಮುದ್ರಿಸಲಿಕ್ಕಾಗಿ ಸಹಾಯಮಾಡಿತು. ಜನಸಾಮಾನ್ಯರಿಗೆ ಆ ಭಾಷೆಯಲ್ಲಿ ಸಿಕ್ಕಿದ ಪ್ರಥಮ ಡಿಕ್ಷ್‌ನೆರಿಯು ಇದಾಗಿತ್ತು. ಇತ್ತೀಚೆಗೆ ಟೂವಾಲೂ ರಾಷ್ಟ್ರೀಯ ಭಾಷಾ ಮಂಡಳಿಯು, ಪ್ರಥಮ ದೇಶೀಯ ಭಾಷೆಯ ಡಿಕ್ಷ್‌ನೆರಿಯನ್ನು ಹೊರತರುವುದಕ್ಕಾಗಿ ಇದನ್ನು ಉಪಯೋಗಿಸಲು ಅನುಮತಿಯನ್ನು ಕೇಳಿತು.

1989, ಜನವರಿ 1ರಿಂದ ಟೂವಾಲೂ ಭಾಷೆಯಲ್ಲಿ ಮಾಸಿಕವಾಗಿ ಕಾವಲಿನಬುರುಜು ಪತ್ರಿಕೆಯನ್ನು ಪ್ರಕಾಶಿಸಲಾಗುತ್ತಿದೆ. ನಿಮ್ಮ ಮಾತೃಭಾಷೆಯಲ್ಲದ ಭಾಷೆಯಲ್ಲಿ ಈ ಪತ್ರಿಕೆಯನ್ನು ನೀವು ಓದುತ್ತಿರುವಲ್ಲಿ, ಕಾವಲಿನಬುರುಜು ಪತ್ರಿಕೆಯು ಪ್ರಕಾಶಿಸಲ್ಪಡುತ್ತಿರುವ ಭಾಷೆಗಳಲ್ಲಿ ನಿಮ್ಮ ಮಾತೃಭಾಷೆಯು ಇದೆಯೋ ಎಂಬುದನ್ನು ನೋಡಲು ನೀವೇಕೆ ಪುಟ 2ನ್ನು ತೆರೆದು ನೋಡಬಾರದು? ನಿಮ್ಮ ಮಾತೃಭಾಷೆಯಲ್ಲಿ ಓದುವುದು ಇನ್ನೂ ಹೆಚ್ಚಿನ ಸಂತೋಷವನ್ನು ತರುವುದು ಎಂಬುದರಲ್ಲಿ ಒಂದಿನಿತೂ ಸಂದೇಹವಿಲ್ಲ.