ಒಂದು ಲೋಕವ್ಯಾಪಕ ಸಂಘ ಪರಸ್ಪರ ಕಾಳಜಿಯನ್ನು ತೋರಿಸುತ್ತದೆ
ಒಂದು ಲೋಕವ್ಯಾಪಕ ಸಂಘ ಪರಸ್ಪರ ಕಾಳಜಿಯನ್ನು ತೋರಿಸುತ್ತದೆ
ಕಣ್ಣು ಹಾಯಿಸಿದಷ್ಟು ದೂರದವರೆಗೆ ಜನವೋ ಜನ. ಅನೇಕರು ವೃದ್ಧರಾಗಿದ್ದರು, ಕೆಲವರು ಎಷ್ಟು ದುರ್ಬಲರಾಗಿದ್ದರೆಂದರೆ ಅವರು ಮುಂದೆ ಹೆಜ್ಜೆಯಿಡಲು ಸಹ ಅಶಕ್ತರಾಗಿದ್ದರು. ಬಸುರಿ ಮಹಿಳೆಯರು ಹಾಗೂ ಪುಟ್ಟ ಕಂದಮ್ಮಗಳಿರುವ ಯುವ ದಂಪತಿಗಳು, ಗಂಡಸರು, ಹೆಂಗಸರು ಮತ್ತು ಮಕ್ಕಳು ಇದ್ದಾರೆ. ಇವರೆಲ್ಲರೂ ನಿರಾಶ್ರಿತರು. ಇವರು ಅಂತರ್ಯುದ್ಧ, ನಿಸರ್ಗದ ವಿಕೋಪಗಳು ಇಲ್ಲವೇ ಇನ್ನಿತರ ಪರಿಸ್ಥಿತಿಗಳಿಂದಾಗಿ ತಮ್ಮ ಮನೆಗಳನ್ನು ಬಿಟ್ಟು, ನೆರೆ ರಾಷ್ಟ್ರದಲ್ಲಿ ಆಶ್ರಯವನ್ನು ಹುಡುಕುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಕೆಲವರು ಪದೇ ಪದೇ ತಮ್ಮ ಮನೆಮಠಗಳನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಅಂತರ್‌ಕಲಹ ಇಲ್ಲವೇ ನಿಸರ್ಗದ ವಿಕೋಪದ ಸೂಚನೆಗಳು ಕಾಣಿಸಿಕೊಳ್ಳುವಾಗಲೇ, ಅವರು ತಮ್ಮ ಮನೆಯಲ್ಲಿರುವ ಕೆಲವು ಸಾಮಾನುಗಳನ್ನು ಸಂಗ್ರಹಿಸಿಕೊಂಡು, ತಮ್ಮ ಮಕ್ಕಳನ್ನು ಒಟ್ಟುಗೂಡಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಓಡಿಹೋಗುತ್ತಾರೆ. ಅನಂತರ, ಪರಿಸ್ಥಿತಿಯು ಸುಧಾರಿಸಿದಾಗ ಅನೇಕ ನಿರಾಶ್ರಿತರು ತಮ್ಮ ಮನೆಗಳನ್ನು ಪುನಃ ಕಟ್ಟಲು ಹಾಗೂ ಮತ್ತೆ ಜೀವನವನ್ನು ಆರಂಭಿಸಲು ಹಿಂದಿರುಗುತ್ತಾರೆ.
ಅನೇಕ ವರ್ಷಗಳಿಂದ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಹಲವಾರು ದೇಶಗಳಿಂದ ಬರುತ್ತಿರುವ ನಿರಾಶ್ರಿತರಿಗೆ ತನ್ನ ದ್ವಾರವನ್ನು ತೆರೆದಿದೆ. ಇತ್ತೀಚೆಗೆ, ಯೆಹೋವನ ಸಾಕ್ಷಿಗಳು ಸೇರಿದಂತೆ ಸಾವಿರಾರು ಜನರು ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಾದ ಯುದ್ಧದಿಂದಾಗಿ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿರುವ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ಗೆ ಓಡಿಹೋಗುವಂತೆ ಒತ್ತಾಯಿಸಲ್ಪಟ್ಟರು.
ಸಹೋದರರು ಸಹಾಯಕ್ಕೆ ಬರುತ್ತಾರೆ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿರುವ ಸಾಕ್ಷಿಗಳು ಮಾನವೀಯತೆಯ ಸಹಾಯ ನೀಡುವುದನ್ನು ಒಂದು ಸುಯೋಗವಾಗಿ ನೆನಸಿದರು. ನಿರಾಶ್ರಿತರಾಗಿ ಬರುತ್ತಿದ್ದ ಸಹೋದರರಿಗೆ ತಂಗುವ ಸ್ಥಳಗಳನ್ನು ಏರ್ಪಾಡುಮಾಡಲಾಯಿತು. ಪ್ರಾರಂಭದಲ್ಲಿ, ಖಾಸಗಿ ಮನೆಗಳಲ್ಲಿ ರೂಮುಗಳನ್ನು ಕೊಂಡುಕೊಳ್ಳಲಾಯಿತು. ಆದರೆ ನಿರಾಶ್ರಿತರ ಸಂಖ್ಯೆಯು ಹೆಚ್ಚಾದಂತೆ, ಹೆಚ್ಚು ದೊಡ್ಡದಾದ ಸ್ಥಳಗಳಲ್ಲಿ ಏರ್ಪಾಡುಮಾಡುವ ಅಗತ್ಯವಿರುವುದನ್ನು ಸ್ಥಳಿಕ ಸಾಕ್ಷಿಗಳು ಮನಗಂಡರು. ಕೆಲವು ರಾಜ್ಯ ಸಭಾಗೃಹಗಳು ಡಾರ್‌ಮೆಟ್‌ರಿಗಳಾಗಿ ಪರಿವರ್ತಿಸಲ್ಪಟ್ಟವು. ಸ್ಥಳಿಕ ಸಾಕ್ಷಿಗಳು ಹೆಚ್ಚಿನ ಲೈಟ್‌ಗಳನ್ನು ಹಾಕಲು, ಕುಡಿಯುವ ನೀರಿನ ಪೈಪ್‌ಗಳನ್ನು ಜೋಡಿಸಲು ಹಾಗೂ ತಂಗಲಿಕ್ಕಾಗಿ ಬರುವವರ ಅನುಕೂಲಕ್ಕಾಗಿ ನೆಲಕ್ಕೆ ಸಿಮೆಂಟು ಹಾಕಿಸಲು ತಮ್ಮನ್ನು ಸ್ವಇಚ್ಛೆಯಿಂದ ನೀಡಿಕೊಂಡರು. ಸ್ಥಳಿಕ ಸಹೋದರರೊಂದಿಗೆ ನಿರಾಶ್ರಿತರು ಸಹ ಈ ತಾತ್ಕಾಲಿಕ ಡಾರ್‌ಮೆಟ್‌ರಿಗಳನ್ನು ಸ್ಥಾಪಿಸುವುದರಲ್ಲಿ ಕೆಲಸಮಾಡಿದರು. ನಿರಾಶ್ರಿತರಾಗಿ ಬರುವವರು ಜೀವ ರಕ್ಷಕ ಆತ್ಮಿಕ ಆಹಾರದಿಂದ ಪೋಷಿಸಲ್ಪಡುವಂತೆ ಲಿಂಗಾಲ ಭಾಷೆಯಲ್ಲಿ ಎಲ್ಲಾ ಕ್ರೈಸ್ತ ಕೂಟಗಳನ್ನು ಏರ್ಪಡಿಸಲಾಯಿತು. ಸ್ಥಳಿಕ ಸಾಕ್ಷಿಗಳು ಮತ್ತು ಅವರ ಅತಿಥಿಗಳ ಮಧ್ಯೆಯಿರುವ ನಿಕಟವಾದ ಸಹಕಾರವು, ಅಂತಾರಾಷ್ಟ್ರೀಯ ಸಹೋದರತ್ವವು ವಾಸ್ತವವಾಗಿದೆ ಎಂಬುದನ್ನು ತೋರಿಸಿತು.
ನಿರಾಶ್ರಿತರ ಕುಟುಂಬಗಳು ಯಾವಾಗಲೂ ಒಟ್ಟಾಗಿ ಬರಲಿಲ್ಲ. ಕೆಲವೊಮ್ಮೆ ಬೇರ್ಪಟ್ಟಿದ್ದ ಕುಟುಂಬ ಸದಸ್ಯರು ಗಮ್ಯಸ್ಥಾನವನ್ನು ತಲಪಿದ ನಂತರವೇ ಪುನಃ ಒಟ್ಟುಗೂಡಿದರು. ಸುರಕ್ಷಿತವಾಗಿ ಬಂದು ತಲಪಿದವರ ಹೆಸರುಗಳ ಪಟ್ಟಿಯು ಪ್ರತಿಯೊಂದು ರಾಜ್ಯ ಸಭಾಗೃಹದಲ್ಲಿ ಇಡಲ್ಪಟ್ಟಿತ್ತು. ಇದುವರೆಗೂ ಕಳೆದುಹೋಗಿರುವವರನ್ನು “ವಾಚ್ ಟವರ್—ಯೆಹೋವನ ಸಾಕ್ಷಿಗಳು” ಎಂದು ಬರೆದಿದ್ದ ದೊಡ್ಡ ಸೂಚನಾಫಲಕದೊಂದಿಗೆ ಗುರುತಿಸಲ್ಪಟ್ಟಿದ್ದವು.
ಪತ್ತೆಮಾಡುವುದಕ್ಕಾಗಿ ಏರ್ಪಾಡುಗಳನ್ನು ಮಾಡಲಾಯಿತು. ಆ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ಮಾರ್ಗದರ್ಶಿಸುವ ಶಾಖೆಯು, ಇನ್ನೂ ದಾರಿಯಲ್ಲೇ ಇರುವವರನ್ನು ಕರೆತರಲಿಕ್ಕಾಗಿ ಹಾಗೂ ಕಳೆದುಹೋಗಿರಬಹುದಾದ ಯಾರನ್ನಾದರೂ ಹುಡುಕಲಿಕ್ಕಾಗಿ ಪ್ರತಿದಿನ ಮೂರು ವಾಹನಗಳನ್ನು ಕಳುಹಿಸಿತು. ಈ ವಾಹನಗಳುತಮ್ಮ ಹೆತ್ತವರಿಂದ ಬೇರ್ಪಟ್ಟಿದ್ದ ಒಂದು ಗುಂಪಿಗೆ ಸೇರಿದ ಏಳು ನಿರಾಶ್ರಿತ ಮಕ್ಕಳು, ಯೆಹೋವನ ಸಾಕ್ಷಿಗಳ ವಾಹನವನ್ನು ಕಂಡುಕೊಂಡಾಗ ಅವರಿಗಾಗಿರಬಹುದಾದ ಸಂತೋಷವನ್ನು ಊಹಿಸಿನೋಡಿ. ಕೂಡಲೇ ಅವರು ವಾಹನದೆಡೆಗೆ ಓಡುತ್ತಾ ತಾವು ಯೆಹೋವನ ಸಾಕ್ಷಿಗಳೆಂದು ಹೇಳಿದರು. ಅವರು ವಾಹನಕ್ಕೆ ಹತ್ತುವಂತೆ ಸಹೋದರರು ಸಹಾಯಮಾಡಿ, ನಂತರ ಅವರನ್ನು ರಾಜ್ಯ ಸಭಾಗೃಹಕ್ಕೆ ಕರೆದೊಯ್ದರು. ಅಲ್ಲಿ ತಮ್ಮ ಕುಟುಂಬದವರೊಂದಿಗೆ ಕೊನೆಗೂ ಅವರ ಪುನರ್ಮಿಲನವಾಯಿತು.
ಒಮ್ಮೆಯಲ್ಲ, ಪದೇ ಪದೇ ಈ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಲು ಈ ಪ್ರಾಮಾಣಿಕ ಕ್ರೈಸ್ತರನ್ನು ಯಾವುದು ಶಕ್ತಗೊಳಿಸಿತು? ಅವರು, ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬ ವಿಷಯದಲ್ಲಿ ಸಂಪೂರ್ಣವಾಗಿ ದೃಢನಿಶ್ಚಿತರಾಗಿದ್ದಾರೆ.—2 ತಿಮೊಥೆಯ 3:1-5; ಪ್ರಕಟನೆ 6:3-8.
ಆದುದರಿಂದ ಯುದ್ಧಗಳು, ದ್ವೇಷ, ಹಿಂಸೆ ಮತ್ತು ಜಗಳಗಳಿಗೆ ಯೆಹೋವ ದೇವರು ಶೀಘ್ರದಲ್ಲೇ ಅಂತ್ಯವನ್ನು ತರುವನು ಎಂಬುದು ಅವರಿಗೆ ಗೊತ್ತಿದೆ. ಆಗ ನಿರಾಶ್ರಿತರ ಸಮಸ್ಯೆಯು ಗತಕಾಲದ ವಿಷಯವಾಗಿರುವುದು. ಅಲ್ಲಿಯ ವರೆಗೂ, 1 ಕೊರಿಂಥ 12:14-26ರಲ್ಲಿ ನೀಡಿರುವ ಅಪೊಸ್ತಲ ಪೌಲನ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ ಯೆಹೋವನ ಸಾಕ್ಷಿಗಳು ಪರಸ್ಪರ ಕಾಳಜಿವಹಿಸಲು ಪ್ರಯಾಸಪಡುತ್ತಾರೆ. ನದಿಗಳಿಂದ, ಗಡಿಗಳಿಂದ, ಭಾಷೆಗಳಿಂದ ಹಾಗೂ ಅಂತರದಿಂದ ಬೇರ್ಪಟ್ಟಿದ್ದರೂ ಅವರು ಪರಸ್ಪರ ಚಿಂತಿತರಾಗಿದ್ದಾರೆ. ಆದುದರಿಂದಲೇ, ಯಾರಾದರೊಬ್ಬರು ಅಗತ್ಯದಲ್ಲಿರುವಾಗ ಅವರು ಕೂಡಲೆ ಕ್ರಿಯೆಗೈಯುತ್ತಾರೆ.—ಯಾಕೋಬ 1:22-27.
[ಪುಟ 30ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
[ಕೃಪೆ]
Mountain High Maps® Copyright © 1997 Digital Wisdom, Inc.
ಆಫ್ರಿಕ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ
[ಕೃಪೆ]
Mountain High Maps® Copyright © 1997 Digital Wisdom, Inc.
[ಪುಟ 30ರಲ್ಲಿರುವ ಚಿತ್ರಗಳು]
ಮೂರು ರಾಜ್ಯ ಸಭಾಗೃಹಗಳು ನಿರಾಶ್ರಿತರನ್ನು ಬರಮಾಡಿಕೊಳ್ಳುವ ಕೇಂದ್ರಗಳಾಗಿ ಉಪಯೋಗಿಸಲ್ಪಟ್ಟವು
[ಪುಟ 31ರಲ್ಲಿರುವ ಚಿತ್ರ]
ಅಡಿಗೆ ಮನೆಯ ಸೌಲಭ್ಯಗಳು ಕೂಡಲೇ ಅಳವಡಿಸಲ್ಪಟ್ಟವು
[ಪುಟ 31ರಲ್ಲಿರುವ ಚಿತ್ರ]
ಹೆಚ್ಚೆಚ್ಚು ನಿರಾಶ್ರಿತರು ಬರುತ್ತಿದ್ದರು
[ಪುಟ 31ರಲ್ಲಿರುವ ಚಿತ್ರಗಳು]
ನಿರಾಶ್ರಿತ ನವಶಿಶುಗಳು