ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಂದ ಗಣ್ಯಮಾಡಲ್ಪಡುತ್ತದೆ
ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲಿರಿ
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಂದ ಗಣ್ಯಮಾಡಲ್ಪಡುತ್ತದೆ
ಇದಕ್ಕಾಗಿ 12 ವರ್ಷಗಳು, 3 ತಿಂಗಳುಗಳು ಮತ್ತು 11 ದಿವಸಗಳ ಶ್ರದ್ಧಾಪೂರ್ವಕ ಕೆಲಸವು ಹಿಡಿಯಿತು. ಕೊನೆಗೆ, 1960 ರ ಮಾರ್ಚ್ 13 ರಂದು, ಒಂದು ಹೊಸ ಬೈಬಲ್ ಭಾಷಾಂತರದ ಮೂಲಪಾಠದ ಅಂತಿಮ ಭಾಗವು ಪೂರ್ಣಗೊಳಿಸಲ್ಪಟ್ಟಿತು. ಅದು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಎಂದು ಕರೆಯಲ್ಪಟ್ಟಿತು.
ಒಂದು ವರ್ಷದ ನಂತರ, ಯೆಹೋವನ ಸಾಕ್ಷಿಗಳು ಈ ಭಾಷಾಂತರವನ್ನು ಒಂದೇ ಸಂಪುಟದಲ್ಲಿ ಪ್ರಕಾಶಿಸಿದರು. 1961 ರಲ್ಲಿ ಆ ಸಂಪುಟದ ಸುಮಾರು ಹತ್ತು ಲಕ್ಷ ಪ್ರತಿಗಳು ಮುದ್ರಿಸಲ್ಪಟ್ಟವು. ಇಂದು, ಅದರ ಮುದ್ರಿತ ಪ್ರತಿಗಳ ಸಂಖ್ಯೆಯು ಹತ್ತು ಕೋಟಿಯನ್ನೂ ಮೀರಿದೆ ಮತ್ತು ಇದು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲನ್ನು, ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಬೈಬಲ್‌ಗಳಲ್ಲಿ ಒಂದಾಗಿ ಮಾಡಿದೆ. ಆದರೂ, ಈ ಭಾಷಾಂತರವನ್ನು ತಯಾರಿಸುವಂತೆ ಸಾಕ್ಷಿಗಳನ್ನು ಯಾವುದು ಪ್ರಚೋದಿಸಿತು?
ಒಂದು ಹೊಸ ಬೈಬಲ್ ಭಾಷಾಂತರದ ಅಗತ್ಯವೇನಿತ್ತು?
ಪವಿತ್ರ ಶಾಸ್ತ್ರಗಳ ಸಂದೇಶವನ್ನು ಅರ್ಥಮಾಡಿಕೊಂಡು, ಅದನ್ನು ಇತರರಿಗೆ ಸಾರಲಿಕ್ಕಾಗಿ ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಬೇರೆ ಬೇರೆ ಇಂಗ್ಲಿಷ್ ಬೈಬಲ್ ಭಾಷಾಂತರಗಳನ್ನು ಉಪಯೋಗಿಸಿದ್ದರು. ಈ ತರ್ಜುಮೆಗಳಲ್ಲಿ ಅನೇಕ ಪ್ರಯೋಜನಾರ್ಹ ಅಂಶಗಳಿರುವುದಾದರೂ, ಅನೇಕವೇಳೆ ಅವುಗಳು ಧಾರ್ಮಿಕ ಸಂಪ್ರದಾಯಗಳಿಂದ ಮತ್ತು ಕ್ರೈಸ್ತಪ್ರಪಂಚದ ಮೂಲಭೂತ ನಂಬಿಕೆಗಳಿಂದ ಪ್ರಭಾವಿಸಲ್ಪಟ್ಟಿರುತ್ತವೆ. (ಮತ್ತಾಯ 15:6) ಆದುದರಿಂದ, ಮೂಲ ಪ್ರೇರಿತ ಬರಹಗಳಲ್ಲಿ ಯಾವ ವಿಷಯಗಳು ಒಳಗೂಡಿದ್ದವೋ ಅವನ್ನು ನಿಷ್ಕೃಷ್ಟವಾಗಿ ಪ್ರಸ್ತುತಪಡಿಸುವಂತಹ ಒಂದು ಬೈಬಲ್ ಭಾಷಾಂತರದ ಆವಶ್ಯಕತೆಯನ್ನು ಯೆಹೋವನ ಸಾಕ್ಷಿಗಳು ಮನಗಂಡರು.
ಈ ಆವಶ್ಯಕತೆಯನ್ನು ಪೂರೈಸುವುದಕ್ಕಾಗಿ 1946 ರ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಹೆಜ್ಜೆಯನ್ನಿಡಲಾಯಿತು. ಆಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿದ್ದ ನೇತನ್ ಏಚ್. ನಾರ್ ಅವರು, ಒಂದು ಹೊಸ ಬೈಬಲ್ ಭಾಷಾಂತರದ ತಯಾರಿಯ ಕುರಿತು ಪ್ರಸ್ತಾಪಿಸಿದರು. 1947 ರ ಡಿಸೆಂಬರ್ 2 ರಂದು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಕಮಿಟಿಯು, ಮೂಲ ಗ್ರಂಥಪಾಠವನ್ನು ಯಥಾವತ್ತಾಗಿ ಪ್ರತಿನಿಧಿಸುವ, ಹೊಸದಾಗಿ ಕಂಡುಹಿಡಿಯಲ್ಪಟ್ಟ ಬೈಬಲ್ ಹಸ್ತಪ್ರತಿಗಳಿಂದ ಸಂಗ್ರಹಿಸಲ್ಪಟ್ಟ ಪಾಂಡಿತ್ಯಪೂರ್ಣ ವಿಷಯಗಳನ್ನು ಒಳಗೂಡಿರುವ, ಹಾಗೂ ಇಂದಿನ ವಾಚಕರು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ಭಾಷೆಯನ್ನು ಉಪಯೋಗಿಸಿರುವಂಥ ಒಂದು ಭಾಷಾಂತರವನ್ನು ತಯಾರಿಸಲು ಆರಂಭಿಸಿತು.
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ ನ ಮೊದಲ ಸಂಪುಟವು 1950 ರಲ್ಲಿ ಮುದ್ರಿಸಲ್ಪಟ್ಟಾಗ, ಭಾಷಾಂತರಕಾರರು ತಮ್ಮ ಗುರಿಯನ್ನು ಮುಟ್ಟಿದ್ದರು ಎಂಬುದು ಸುವ್ಯಕ್ತವಾಯಿತು. ಈ ಮುಂಚೆ ಕೇವಲ ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳಸಾಧ್ಯವಿದ್ದ ಬೈಬಲ್ ವಚನಗಳು ಈಗ ಹೆಚ್ಚು ಗಮನಾರ್ಹವಾದ ರೀತಿಯಲ್ಲಿ ಸ್ಪಷ್ಟವಾದವು. ಉದಾಹರಣೆಗಾಗಿ, ಮತ್ತಾಯ 5:3 ರಲ್ಲಿರುವ “ಆತ್ಮದಲ್ಲಿ ಬಡವರಾಗಿರುವವರು ಧನ್ಯರು” ಎಂಬ ಗೊಂದಲಮಯ ಗ್ರಂಥಪಾಠವನ್ನು ಪರಿಗಣಿಸಿರಿ. ಇದನ್ನು “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ತರ್ಜುಮೆಮಾಡಲಾಯಿತು. “ಯಾವ ವಿಷಯದಲ್ಲಿಯೂ ಆತಂಕಪಡದಿರಿ” (ಕಿಂಗ್ ಜೇಮ್ಸ್ ವರ್ಷನ್) ಎಂದು ತರ್ಜುಮೆಯಾಗಿದ್ದ ಅಪೊಸ್ತಲ ಪೌಲನ ಬುದ್ಧಿವಾದವನ್ನು, “ಯಾವುದರ ಕುರಿತಾಗಿಯೂ ಚಿಂತಿಸದಿರಿ” ಎಂದು ಭಾಷಾಂತರಿಸಲಾಯಿತು. (ಫಿಲಿಪ್ಪಿ 4:6) ಮತ್ತು “ಶಾರೀರಿಕ ಸಂಭೋಗಾಸಕ್ತಿ” (ಡುಯೇ ವರ್ಷನ್) ಎಂದು ಅಪೊಸ್ತಲ ಯೋಹಾನನು ಯಾವುದನ್ನು ಸೂಚಿಸಿದನೋ ಅದನ್ನು “ಶರೀರದಾಶೆ” ಎಂದು ಭಾಷಾಂತರಿಸಲಾಗಿದೆ. (1 ಯೋಹಾನ 2:16) ನ್ಯೂ ವರ್ಲ್ಡ್ ಟ್ರಾನ್‌ಲೇಶನ್ ಬೈಬಲು, ತಿಳಿವಳಿಕೆಯ ಒಂದು ಹೊಸ ಲೋಕವನ್ನೇ ತೆರೆಯಿತು ಎಂಬುದಂತೂ ಸ್ಪಷ್ಟ.
ಎಫೆಸ 5:25 ರಲ್ಲಿ “ಗಂಡಂದಿರೇ, ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ” (ಕಿಂಗ್ ಜೇಮ್ಸ್ ವರ್ಷನ್) ಎಂದಷ್ಟೇ ಹೇಳುವುದಕ್ಕೆ ಬದಲಾಗಿ, “ಗಂಡಂದಿರೇ, ನಿಮ್ಮ ಪತ್ನಿಯರನ್ನು ಪ್ರೀತಿಸುತ್ತಾ ಇರಿ” ಎಂದು ಭಾಷಾಂತರಿಸಲಾಗಿದೆ. “ಬೇರೆ ಯಾವ ಭಾಷಾಂತರವೂ ಗ್ರೀಕ್ ಭಾಷೆಯ ವರ್ತಮಾನಕಾಲವನ್ನು ಇಷ್ಟು ಪೂರ್ಣತೆಯಿಂದ ಹಾಗೂ ಆಗಿಂದಾಗ್ಗೆ ಉಪಯೋಗಿಸಿರುವುದು ಕಂಡುಬಂದಿಲ್ಲ” ಎಂದು ಥಾಮ್ಸನ್ ಅವರು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಕುರಿತು ಹೇಳಿದರು.
ಬೇರೆ ಬೇರೆ ವಿದ್ವಾಂಸರು ಇದರಿಂದ ಪ್ರಭಾವಿತರಾದರು. ಉದಾಹರಣೆಗೆ, ಗ್ರೀಕ್ ಭಾಷೆಯ ವರ್ತಮಾನಕಾಲವನ್ನು ನಿಷ್ಕೃಷ್ಟವಾಗಿ ತರ್ಜುಮೆಮಾಡುವುದರಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು ಅತ್ಯುತ್ತಮವಾದದ್ದಾಗಿದೆ ಎಂದು, ಬ್ರಿಟಿಷ್ ಬೈಬಲ್ ವಿದ್ವಾಂಸರಾದ ಅಲೆಕ್ಸಾಂಡರ್ ಥಾಮ್ಸನ್ ಹೇಳಿದರು. ದೃಷ್ಟಾಂತಕ್ಕಾಗಿ:ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ನ ಇನ್ನೊಂದು ಪ್ರಾಮುಖ್ಯ ವೈಶಿಷ್ಟ್ಯವು, ಶಾಸ್ತ್ರವಚನಗಳ ಹೀಬ್ರು ಮತ್ತು ಗ್ರೀಕ್ ಭಾಗಗಳಲ್ಲಿ ಯೆಹೋವ ಎಂಬ ದೇವರ ವೈಯಕ್ತಿಕ ಹೆಸರಿನ ಬಳಕೆಯೇ ಆಗಿದೆ. ಹಳೇ ಒಡಂಬಡಿಕೆ ಎಂದು ಕರೆಯಲ್ಪಡುವ ಒಂದು ಭಾಗದಲ್ಲೇ ಹೀಬ್ರು ಭಾಷೆಯಲ್ಲಿ ದೇವರ ಹೆಸರು ಸುಮಾರು 7,000 ಬಾರಿ ಕಂಡುಬರುವುದರಿಂದ, ತನ್ನ ಆರಾಧಕರು ತನ್ನ ಹೆಸರನ್ನು ಉಪಯೋಗಿಸುವಂತೆ ಹಾಗೂ ಒಬ್ಬ ವ್ಯಕ್ತಿಯೋಪಾದಿ ಆತನ ಬಗ್ಗೆ ತಿಳಿದುಕೊಳ್ಳುವಂತೆ ನಮ್ಮ ಸೃಷ್ಟಿಕರ್ತನು ಬಯಸುತ್ತಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. (ವಿಮೋಚನಕಾಂಡ 34:6, 7) ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು ಲಕ್ಷಾಂತರ ಜನರು ಹಾಗೆ ಮಾಡುವಂತೆ ಸಹಾಯಮಾಡಿದೆ.
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು ಅನೇಕ ಭಾಷೆಗಳಲ್ಲಿ ಉತ್ಪಾದಿಸಲ್ಪಡುತ್ತಿದೆ
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು ಇಂಗ್ಲಿಷ್ ಭಾಷೆಯಲ್ಲಿ ಸಿದ್ಧವಾದಂದಿನಿಂದ, ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಅದನ್ನು ತಮ್ಮ ಮಾತೃಭಾಷೆಗಳಲ್ಲಿ ಪಡೆದುಕೊಳ್ಳಲು ಹಂಬಲಿಸಿದರು. ಮತ್ತು ಇದಕ್ಕೆ ಸಕಾರಣವೂ ಇತ್ತು. ಕೆಲವು ದೇಶಗಳಲ್ಲಿ ಸ್ಥಳಿಕ ಭಾಷೆಗಳಲ್ಲಿ ಭಾಷಾಂತರಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿತ್ತು; ಏಕೆಂದರೆ ಈ ಬೈಬಲುಗಳನ್ನು ವಿತರಿಸುತ್ತಿದ್ದ ಬೈಬಲ್ ಸೊಸೈಟಿಗಳ ಪ್ರತಿನಿಧಿಗಳಿಗೆ, ತಮ್ಮ ದೇಶೀಯ ಭಾಷೆಯ ಬೈಬಲುಗಳ ಸರಬರಾಯಿಯು ಯೆಹೋವನ ಸಾಕ್ಷಿಗಳ ಕೈಸೇರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅಷ್ಟುಮಾತ್ರವಲ್ಲ, ಅಂತಹ ದೇಶೀಯ ಭಾಷೆಯ ಬೈಬಲುಗಳು ಅನೇಕವೇಳೆ ಅತ್ಯಾವಶ್ಯಕವಾದ ಬೋಧನೆಗಳನ್ನು ಮರೆಮಾಡುತ್ತಿದ್ದವು. ಇದಕ್ಕೆ ತಕ್ಕ ಉದಾಹರಣೆಯು, ದಕ್ಷಿಣ ಯೂರೋಪಿಯನ್ ಭಾಷೆಯಲ್ಲಿರುವ ಒಂದು ಭಾಷಾಂತರವಾಗಿದೆ. ಇದು ದೇವರ ಹೆಸರಿನ ಪ್ರಾಮುಖ್ಯ ಉಲ್ಲೇಖವನ್ನೇ ಮರೆಮಾಡುತ್ತದೆ. ಹೇಗೆಂದರೆ, “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಯೇಸುವಿನ ಮಾತುಗಳಿಗೆ ಬದಲಾಗಿ “ಜನರು ನಿನ್ನನ್ನು ಸನ್ಮಾನಿಸುವಂತಾಗಲಿ” ಎಂಬ ಮಾತುಗಳನ್ನು ಅದು ಸೇರಿಸಿದೆ.—ಮತ್ತಾಯ 6:9.
ಇಸವಿ 1961 ರಲ್ಲಿ ಭಾಷಾಂತರಕಾರರು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ನ ಇಂಗ್ಲಿಷ್ ಮೂಲಪಾಠವನ್ನು ಬೇರೆ ಭಾಷೆಗಳಲ್ಲಿ ತರ್ಜುಮೆಮಾಡತೊಡಗಿದರು. ಎರಡೇ ವರ್ಷಗಳ ನಂತರ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ ಭಾಷಾಂತರವು ಇನ್ನೂ ಆರು ಭಾಷೆಗಳಲ್ಲಿ ಪೂರ್ಣಗೊಳಿಸಲ್ಪಟ್ಟಿತು. ಅಷ್ಟರೊಳಗೆ, ಲೋಕವ್ಯಾಪಕವಾಗಿರುವ ಸರಾಸರಿ 4 ಸಾಕ್ಷಿಗಳಲ್ಲಿ ಮೂವರು ಈ ಬೈಬಲನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಸಾಧ್ಯವಿತ್ತು. ಆದರೂ, ಈ ಬೈಬಲಿನ ಪ್ರತಿಯು ಇನ್ನೂ ಅನೇಕ ಲಕ್ಷಾಂತರ ಜನರ ಕೈಸೇರಬೇಕಾಗಿದ್ದಲ್ಲಿ, ಯೆಹೋವನ ಸಾಕ್ಷಿಗಳು ಇನ್ನೂ ಅತ್ಯಧಿಕ ಕೆಲಸವನ್ನು ಮಾಡಬೇಕಿತ್ತು.
ಇಸವಿ 1989 ರಲ್ಲಿ, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಟ್ರಾನ್ಸ್‌ಲೇಶನ್ ಸರ್ವಿಸಸ್ ಡಿಪಾರ್ಟ್‌ಮೆಂಟ್ ಸ್ಥಾಪಿಸಲ್ಪಟ್ಟದ್ದರಿಂದ, ಆ ಗುರಿಯು ಸಾಧನೆಯ ಹಾದಿಯಲ್ಲಿತ್ತು. ಬೈಬಲ್ ಶಬ್ದಗಳ ಅಧ್ಯಯನವನ್ನು ಕಂಪ್ಯೂಟರ್ ತಂತ್ರಜ್ಞಾನದೊಂದಿಗೆ ಒಟ್ಟುಗೂಡಿಸಿದಂತಹ ರೀತಿಯ ಭಾಷಾಂತರ ವಿಧಾನವನ್ನು ಆ ಡಿಪಾರ್ಟ್‌ಮೆಂಟ್ ವಿಕಸಿಸಿತು. ಈ ವಿಧಾನವನ್ನು ಉಪಯೋಗಿಸುವುದು, ಕ್ರೈಸ್ತ ಗ್ರೀಕ್ ಶಾಸ್ತ್ರವನ್ನು ಇನ್ನೂ ಅನೇಕ ಭಾಷೆಗಳಲ್ಲಿ ಒಂದೇ ವರ್ಷದಲ್ಲಿ ಹಾಗೂ ಹೀಬ್ರು ಶಾಸ್ತ್ರವನ್ನು ಎರಡೇ ವರ್ಷಗಳಲ್ಲಿ ಭಾಷಾಂತರಿಸುವುದನ್ನು ಸಾಧ್ಯಗೊಳಿಸಿದೆ. ಇದು, ಒಂದು ಬೈಬಲ್ ಭಾಷಾಂತರ ಕಾರ್ಯಯೋಜನೆಗಾಗಿ ಸಾಮಾನ್ಯವಾಗಿ ಹಿಡಿಯುವಂತಹ ಸಮಯಕ್ಕಿಂತಲೂ ತೀರ ಕಡಿಮೆ ಸಮಯಾವಧಿಯಾಗಿದೆ. ಈ ವಿಧಾನವು ಕಾರ್ಯರೂಪಕ್ಕೆ ತರಲ್ಪಟ್ಟಂದಿನಿಂದ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲಿನ 29 ಮುದ್ರಣಗಳು ಇಂಗ್ಲಿಷ್ ಭಾಷೆಯಿಂದ ಭಾಷಾಂತರಿಸಲ್ಪಟ್ಟಿವೆ ಮತ್ತು ಸುಮಾರು 200 ಕೋಟಿ ಜನರಿಂದ ಮಾತಾಡಲ್ಪಡುವ ಭಾಷೆಗಳಲ್ಲಿ ಬಿಡುಗಡೆಮಾಡಲ್ಪಟ್ಟಿವೆ. ಇನ್ನೂ 12 ಭಾಷೆಗಳಲ್ಲಿ ಭಾಷಾಂತರದ ಕೆಲಸವು ನಡೆಯುತ್ತಿದೆ. ಇಷ್ಟರ ತನಕ, ಇಂಗ್ಲಿಷ್ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲು—ಪೂರ್ಣವಾಗಿ ಅಥವಾ ಭಾಗಶಃ—41 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ.
ನ್ಯೂ ಯಾರ್ಕ್ ಸಿಟಿಯಲ್ಲಿರುವ ಯೆಹೋವನ ಸಾಕ್ಷಿಗಳ ದೇವಪ್ರಭುತ್ವ ಅಭಿವೃದ್ಧಿ ಸಮ್ಮೇಳನದಲ್ಲಿ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲಿನ ಪ್ರಥಮ ಭಾಗವು, 1950 ರ ಆಗಸ್ಟ್ 3 ರಂದು ಬಿಡುಗಡೆಯಾದಂದಿನಿಂದ 50 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳು ಗತಿಸಿಹೋಗಿವೆ. ಆ ಸಂದರ್ಭದಲ್ಲಿ ನೇತನ್ ಏಚ್. ನಾರ್ ಅವರು ಅಧಿವೇಶನಕಾರರಿಗೆ ಉತ್ತೇಜಿಸಿದ್ದು: “ಈ ಭಾಷಾಂತರವನ್ನು ತೆಗೆದುಕೊಳ್ಳಿರಿ. ಇದನ್ನು ಆರಂಭದಿಂದ ಅಂತ್ಯದ ವರೆಗೆ ಓದಿರಿ, ಸಂತೋಷದಿಂದ ಹೀಗೆ ಮಾಡಿರಿ. ಇದನ್ನು ಅಭ್ಯಾಸಿಸಿರಿ, ಏಕೆಂದರೆ ದೇವರ ವಾಕ್ಯದ ಕುರಿತಾದ ನಿಮ್ಮ ತಿಳಿವಳಿಕೆಯನ್ನು ಉತ್ತಮಗೊಳಿಸಲು ಇದು ನಿಮಗೆ ಸಹಾಯಮಾಡುವುದು. ಇದನ್ನು ಇತರರಿಗೂ ವಿತರಿಸಿರಿ.” ದಿನಾಲೂ ಬೈಬಲನ್ನು ಓದುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ, ಏಕೆಂದರೆ ಅದರ ಸಂದೇಶವು ‘ಎಲ್ಲ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿದ್ದು ಪೂರ್ಣರಾಗಿ ನಿಲ್ಲುವಂತೆ’ ನಿಮಗೆ ಸಹಾಯಮಾಡುವುದು.—ಕೊಲೊಸ್ಸೆ 4:12, NW.
[ಪುಟ 8, 9ರಲ್ಲಿರುವ ನಕ್ಷೆ/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
“ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬಿಡುಗಡೆಗಳು”
ಮೊದಲಾಗಿ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಮಾಡಲ್ಪಟ್ಟ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್, ಈಗ ಪೂರ್ಣವಾಗಿ ಅಥವಾ ಭಾಗಶಃ ಇನ್ನೂ 41 ಭಾಷೆಗಳಲ್ಲಿ ಲಭ್ಯವಿದೆ
ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ ಇಡೀ ಬೈಬಲ್
1950 1
1960-69 6 5
1970-79 4 2
1980-89 2 2
1990 ರಿಂದ ಇಷ್ಟರ ತನಕ 29 19