ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ಷಣೆಯ ಯಾವುದಾದರೂ ನಿರೀಕ್ಷೆ ಇದೆಯೋ?

ರಕ್ಷಣೆಯ ಯಾವುದಾದರೂ ನಿರೀಕ್ಷೆ ಇದೆಯೋ?

ರಕ್ಷಣೆಯ ಯಾವುದಾದರೂ ನಿರೀಕ್ಷೆ ಇದೆಯೋ?

ಮಾನವಜಾತಿಗೆ ಅರಿವಿರುವಂಥ ಎಲ್ಲ ಶತಮಾನಗಳಲ್ಲಿ 20ನೆಯ ಶತಮಾನವನ್ನೇ ಅತ್ಯಂತ ರಕ್ತಮಯ ಶತಮಾನವೆಂದು ಕರೆಯಲಾಗಿದೆ. ಕಳೆದ ಕೆಲವು ದಶಕಗಳಲ್ಲಿ ಅಪರಾಧ, ಯುದ್ಧಗಳು, ಕುಲಸಂಬಂಧಿತ ಕಲಹ, ಅಮಲೌಷಧದ ದುರುಪಯೋಗ, ಅಪ್ರಾಮಾಣಿಕತೆ ಮತ್ತು ಹಿಂಸಾಚಾರಗಳು ವಿಶೇಷವಾದ ರೀತಿಯಲ್ಲಿ ವ್ಯಾಪಕವಾಗಿವೆ. ಇದಕ್ಕೆ ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣದ ಫಲಿತಾಂಶವಾಗಿರುವ ನೋವು ಮತ್ತು ಕಷ್ಟಾನುಭವವನ್ನು ಸಹ ಕೂಡಿಸಿರಿ. ಇಂದು ಲೋಕದಲ್ಲಿರುವ ಅಸಂಖ್ಯಾತ ಸಮಸ್ಯೆಗಳಿಂದ ಬಿಡುಗಡೆಗಾಗಿ ಹಾತೊರೆಯದೇ ಇರುವವರು ಯಾರು? ನಾವು ಭವಿಷ್ಯತ್ತಿನ ಕಡೆಗೆ ದೃಷ್ಟಿಹಾಯಿಸುವಾಗ, ರಕ್ಷಣೆಯ ಯಾವುದೇ ನಿರೀಕ್ಷೆಯು ಕಂಡುಬರುತ್ತದೋ?

ಸುಮಾರು 2,000 ವರ್ಷಗಳ ಹಿಂದೆ ಅಪೊಸ್ತಲ ಯೋಹಾನನಿಗೆ ನೀಡಲ್ಪಟ್ಟ ಒಂದು ದರ್ಶನವನ್ನು ಪರಿಗಣಿಸಿರಿ. ಅವನು ಬರೆದುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:​3, 4) ತದ್ರೀತಿಯಲ್ಲಿ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “[ಆತನು] ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.”​—ಯೆಶಾಯ 25:8.

ದೇವರ ವಾಗ್ದಾನಗಳ ನೆರವೇರಿಕೆಯು ಏನನ್ನು ಅರ್ಥೈಸುತ್ತದೆ ಎಂಬುದನ್ನು ತುಸು ಊಹಿಸಿಕೊಳ್ಳಿರಿ! ಮಾನವಕುಲವು ದಬ್ಬಾಳಿಕೆ ಹಾಗೂ ಹಿಂಸಾಚಾರದಿಂದ, ಕಷ್ಟಾನುಭವ ಹಾಗೂ ಸಂಕಟಗಳ ಮೂಲದಿಂದ ವಿಮೋಚಿಸಲ್ಪಡುವುದು ಅಥವಾ ಬಿಡುಗಡೆಮಾಡಲ್ಪಡುವುದು. ಅಷ್ಟೇಕೆ, ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣಗಳು ಸಹ ಆಗ ನಮ್ಮನ್ನು ಬಾಧಿಸವು! ದೇವರ ವಾಕ್ಯವಾದ ಬೈಬಲು, ಭೂಮಿಯ ಮೇಲೆ ಪರಿಪೂರ್ಣ ಪರಿಸ್ಥಿತಿಗಳಲ್ಲಿ ನಿತ್ಯ ಜೀವವನ್ನು ವಾಗ್ದಾನಿಸುತ್ತದೆ. (ಲೂಕ 23:43; ಯೋಹಾನ 17:3) ಮತ್ತು ಯಾರು ಇದನ್ನು ಬಯಸುತ್ತಾರೋ ಅವರೆಲ್ಲರಿಗೂ ಇದು ಲಭ್ಯಗೊಳಿಸಲ್ಪಡುವುದು. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು [ದೇವರ] ಚಿತ್ತವಾಗಿದೆ.”​—1 ತಿಮೊಥೆಯ 2:​3, 4.

ಆದರೂ, ದೇವರ ವಾಗ್ದಾನಗಳಿಂದ ನಾವು ಪ್ರಯೋಜನ ಪಡೆಯಬೇಕಾದರೆ, ನಮ್ಮ ರಕ್ಷಣೆಯಲ್ಲಿ ಯೇಸು ಕ್ರಿಸ್ತನು ವಹಿಸುವ ಪಾತ್ರವನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಅವನಲ್ಲಿ ನಂಬಿಕೆಯಿಡಬೇಕು. ಸ್ವತಃ ಯೇಸುವೇ ಅಂದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಈ ವಿಷಯದಲ್ಲಿ ಯೇಸು ಕ್ರಿಸ್ತನ ಅತಿ ಪ್ರಾಮುಖ್ಯ ಪಾತ್ರದ ಕಡೆಗೆ ಕೈತೋರಿಸುತ್ತಾ ಅಪೊಸ್ತಲ ಪೇತ್ರನು ಹೇಳಿದ್ದು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ಅಪೊಸ್ತಲ ಪೌಲನು ಮತ್ತು ಅವನ ಸಂಗಡಿಗನಾದ ಸೀಲನು, ಒಬ್ಬ ಪ್ರಾಮಾಣಿಕ ವಿಚಾರಕನನ್ನು ಉತ್ತೇಜಿಸಿದ್ದು: “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು.”​—ಅ. ಕೃತ್ಯಗಳು 16:​30, 31.

ಹೌದು, ಯೇಸು ಕ್ರಿಸ್ತನೇ “ಜೀವನಾಯಕ”ನಾಗಿದ್ದಾನೆ ಮತ್ತು ಅವನ ಮೂಲಕ ಮಾತ್ರ ರಕ್ಷಣೆಯು ಸಾಧ್ಯ. (ಅ. ಕೃತ್ಯಗಳು 3:14) ನಮ್ಮ ರಕ್ಷಣೆಯಲ್ಲಿ ಒಬ್ಬ ಮನುಷ್ಯನ ಪಾತ್ರವು ಹೇಗೆ ಅಷ್ಟೊಂದು ಅಗ್ರಗಣ್ಯವಾಗಿರಸಾಧ್ಯವಿದೆ? ಈ ವಿಷಯದಲ್ಲಿ ಅವನ ಪಾತ್ರದ ಕುರಿತು ಸ್ಪಷ್ಟವಾದ ತಿಳಿವಳಿಕೆಯನ್ನು ಹೊಂದುವುದು, ರಕ್ಷಣೆಯ ಕುರಿತಾದ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಬಲಪಡಿಸತಕ್ಕದ್ದು.

[ಪುಟ 2ರಲ್ಲಿರುವ ಚಿತ್ರ ಕೃಪೆ]

ಪುಟ 3: ಬಾಂಬ್‌ ವಿಮಾನಗಳು: USAF photo; ಹಸಿದಿರುವ ಮಕ್ಕಳು: UNITED NATIONS/J. FRAND; ಸುಟ್ಟುಹೋಗುತ್ತಿರುವ ಯುದ್ಧನೌಕೆ: U.S. Navy photo