ಆತ್ಮಿಕ ಹೃದಯಾಘಾತವನ್ನು ನೀವು ತಪ್ಪಿಸಬಹುದು
ಆತ್ಮಿಕ ಹೃದಯಾಘಾತವನ್ನು ನೀವು ತಪ್ಪಿಸಬಹುದು
ತನ್ನ ಕೌಶಲವನ್ನು ಕರಗತಗೊಳಿಸಿಕೊಂಡಿದ್ದ, ಅತ್ಯುತ್ತಮವಾದ ಆರೋಗ್ಯವಿದ್ದಂತೆ ತೋರುತ್ತಿದ್ದ ಒಬ್ಬ ಉತ್ಕೃಷ್ಟ ದರ್ಜೆಯ ಸ್ಪರ್ಧಾಳು, ಒಂದು ಪ್ರ್ಯಾಕ್ಟಿಸ್ ಸೆಷನ್‌ನ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸತ್ತುಹೋದನು. ಆ ಸ್ಪರ್ಧಾಳುವಿನ ಹೆಸರು ಸ್ಯರ್‌ಗ್ಯೇ ಗ್ರೀಂಕಾಫ್ ಎಂಬುದಾಗಿತ್ತು. ಅವನು ಐಸ್ ಸ್ಕೇಟಿಂಗ್ ಕ್ರೀಡೆಯಲ್ಲಿ ಎರಡು ಸಲ ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದವನಾಗಿದ್ದನು. ಚೆನ್ನಾಗಿ ಅರಳುತ್ತಾ ಇದ್ದ ಅವನ ಜೀವನವೃತ್ತಿಯು, ಅವನು ಕೇವಲ 28 ವರ್ಷದವನಾಗಿದ್ದಾಗ, ಇದ್ದಕ್ಕಿದ್ದಂತೆ ಅರ್ಧದಲ್ಲೇ ನಿಂತುಹೋಯಿತು. ಎಂಥ ದುರಂತ! ಅವನ ಸಾವಿಗೆ ಕಾರಣ? ಹೃದಯಾಘಾತ. ಅವನ ಸಾವು ತೀರ ಅನಿರೀಕ್ಷಿತವಾಗಿತ್ತು, ಯಾಕಂದರೆ ಅವನಿಗೆ ಹೃದ್ರೋಗದ ಯಾವುದೇ ಸೂಚನೆಯಿರಲಿಲ್ಲ ಎಂದು ಹೇಳಲಾಯಿತು. ಆದರೆ ಅವನನ್ನು ಪರೀಕ್ಷಿಸಿದವರು, ಅವನ ಹೃದಯದ ಗಾತ್ರವು ದೊಡ್ಡದಾಗಿರುವುದನ್ನು ಮತ್ತು ರಕ್ತನಾಳಗಳು ಬಹುಮಟ್ಟಿಗೆ ಪೂರ್ತಿಯಾಗಿ ಮುಚ್ಚಿಹೋಗಿರುವುದನ್ನು ಕಂಡುಹಿಡಿದರು.
ಅನೇಕ ಹೃದಯಾಘಾತಗಳು ಯಾವುದೇ ಎಚ್ಚರಿಕೆಯಿಲ್ಲದೆ ಆಗುತ್ತಿರುವಂತೆ ತೋರಿದರೂ, ಹೀಗಾಗುವುದು ತೀರ ಅಪರೂಪವೆಂದು ವೈದ್ಯಕೀಯ ಅಧಿಕಾರಿಗಳು ಹೇಳುತ್ತಾರೆ. ಸತ್ಯ ಸಂಗತಿಯೇನೆಂದರೆ, ಉಸಿರುಕಟ್ಟುವಿಕೆ, ವಿಪರೀತ ತೂಕ ಮತ್ತು ಎದೆ ನೋವಿನಂಥ ಎಚ್ಚರಿಕೆಯ ಸಂಕೇತಗಳು ಮತ್ತು ಹೃದಯಾಘಾತಕ್ಕೆ ನಡೆಸುವಂಥ ಅಂಶಗಳು ಹೆಚ್ಚಾಗಿ ಅಲಕ್ಷಿಸಲ್ಪಡುತ್ತವೆ. ಫಲಸ್ವರೂಪವಾಗಿ, ಹೃದಯಾಘಾತದ ಸಮಯದಲ್ಲಿ ಯಾವಾಗಲೂ ಜನರು ಸಾವಿಗೆ ತುತ್ತಾಗದಿದ್ದರೂ, ಅವರು ತಮ್ಮ ಉಳಿದ ಜೀವಮಾನದುದ್ದಕ್ಕೂ ತೀವ್ರ ರೀತಿಯಲ್ಲಿ ಅಂಗವಿಕಲರಾಗಿಬಿಡುತ್ತಾರೆ.
ಹೃದಯಾಘಾತವನ್ನು ತಡೆಯಲಿಕ್ಕಾಗಿ, ಒಬ್ಬನು ಆಹಾರಪಥ್ಯ ಮತ್ತು ಜೀವನಶೈಲಿಯ ವಿಷಯದಲ್ಲಿ ಸತತವಾಗಿ ಜಾಗ್ರತೆ ವಹಿಸುವುದು ಹಾಗೂ ಕ್ರಮವಾದ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಆವಶ್ಯಕವೆಂದು ಸದ್ಯಕ್ಕೆ ವೈದ್ಯಕೀಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. * ಇಂಥ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ಅವಶ್ಯವಿರುವಲ್ಲೆಲ್ಲ ಬದಲಾವಣೆಗಳನ್ನು ಮಾಡುವ ಸಿದ್ಧಮನಸ್ಸು, ಒಬ್ಬ ವ್ಯಕ್ತಿಯು ಹೃದಯಾಘಾತದ ಭೀಕರ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಬಹಳಷ್ಟು ಸಹಾಯಮಾಡುವುದು.
ಆದರೆ ಹೃದಯದ ಇನ್ನೊಂದು ಅಂಶಕ್ಕೆ ನಾವು ಇನ್ನೂ ಹೆಚ್ಚಿನ ಗಮನವನ್ನು ಕೊಡಬೇಕಾದ ಅಗತ್ಯವಿದೆ. “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು,” ಎಂದು ಬೈಬಲು ನಮ್ಮನ್ನು ಎಚ್ಚರಿಸುತ್ತದೆ. (ಜ್ಞಾನೋಕ್ತಿ 4:23) ಹೌದು, ಈ ವಚನವು ಮುಖ್ಯವಾಗಿ ಸಾಂಕೇತಿಕ ಹೃದಯಕ್ಕೆ ಸೂಚಿಸುತ್ತದೆ. ನಮ್ಮ ಶಾರೀರಿಕ ಹೃದಯವನ್ನು ಕಾಪಾಡಲಿಕ್ಕೋಸ್ಕರ ಎಚ್ಚರಿಕೆಯು ಅಗತ್ಯ. ಆದರೆ ಆತ್ಮಿಕ ಮರಣಕ್ಕೆ ನಡೆಸಬಲ್ಲ ರೋಗಗಳ ವಿರುದ್ಧ ನಮ್ಮ ಸಾಂಕೇತಿಕ ಹೃದಯವನ್ನು ಸಂರಕ್ಷಿಸಲಿಕ್ಕಾಗಿ ನಾವು ಎಚ್ಚರಿಕೆಯಿಂದಿರುವುದು ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ.
ಒಂದು ಸಾಂಕೇತಿಕ ಹೃದಯಾಘಾತದ ವಿಶ್ಲೇಷಣೆ
ಆತ್ಮಿಕ ರೀತಿಯ ಹೃದಯಾಘಾತವನ್ನು ತಡೆದುಕೊಳ್ಳುವ ಅತ್ಯುತ್ತಮ ವಿಧಗಳಲ್ಲಿ ಒಂದು ಯಾವುದೆಂದರೆ, ಶಾರೀರಿಕ ಹೃದ್ರೋಗದಂತೆ, ಅದರ ಕಾರಣಗಳೇನೆಂಬುದನ್ನು ತಿಳಿದುಕೊಳ್ಳುವುದು ಮತ್ತು ಅನಂತರ ಅವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವುದೇ. ಹೀಗಿರುವುದರಿಂದ, ಅಕ್ಷರಶಃ ಹಾಗೂ ಸಾಂಕೇತಿಕ ಹೃದಯದ ತೊಂದರೆಗಳಿಗೆ ಕಾರಣವಾಗಿರುವ ಕೆಲವು ಮೂಲಭೂತ ಅಂಶಗಳನ್ನು ನಾವೀಗ ಪರಿಗಣಿಸೋಣ.
ಆಹಾರಪಥ್ಯ. ಕಚಡ ಆಹಾರವು ನಾಲಿಗೆಗೆ ರುಚಿಸುವಂಥದ್ದಾಗಿದ್ದರೂ ಅದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ ಎಂಬ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ, ಮಾನಸಿಕ ಕಚಡ ಆಹಾರವು ಸುಲಭವಾಗಿ ಲಭ್ಯವಿದೆ ಮತ್ತು ಇಂದ್ರಿಯಗಳಿಗೆ ಹಿಡಿಸುವಂಥದ್ದಾಗಿರುತ್ತದೆ. ಆದರೆ ಅದು ಒಬ್ಬನ ಆತ್ಮಿಕ ಆರೋಗ್ಯಕ್ಕೆ ತುಂಬ ಹಾನಿಕರವಾಗಿದೆ. ವಾರ್ತಾಮಾಧ್ಯಮವು, ನಿಷಿದ್ಧ ಕಾಮ ಮತ್ತು ಅಮಲೌಷಧ, ಹಿಂಸಾಚಾರ ಹಾಗೂ ಮಾಂತ್ರಿಕತೆಯಿಂದ ತುಂಬಿರುವ ವಿಷಯಗಳನ್ನು ಮಾರಾಟಮಾಡುತ್ತದೆ. ಅಂಥ ಪಥ್ಯವನ್ನು ಮನಸ್ಸಿಗೆ ಉಣಿಸುವುದು ಸಾಂಕೇತಿಕ ಹೃದಯಕ್ಕೆ ಅಪಾಯಕಾರಿಯಾಗಿದೆ. ಈ ವಿಷಯದಲ್ಲಿ ದೇವರ ವಾಕ್ಯವು ಹೀಗೆ ಎಚ್ಚರಿಸುತ್ತದೆ: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:16, 17.
ಕಚಡ ಆಹಾರದ ಚಟ ಹಿಡಿದಿರುವ ಒಬ್ಬ ವ್ಯಕ್ತಿಗೆ ಹಣ್ಣುಹಂಪಲುಗಳು ಮತ್ತು ಹಸಿರು ತರಕಾರಿಗಳಂಥ ಆರೋಗ್ಯಕರ ಆಹಾರವು ರುಚಿಸುವುದೇ ಇಲ್ಲ. ತದ್ರೀತಿಯಲ್ಲಿ, ಲೌಕಿಕ ವಿಷಯಗಳನ್ನೇ ತನ್ನ ಹೃದಮನಸ್ಸುಗಳಿಗೆ ಉಣಿಸುವ ರೂಢಿಗೆ ಒಗ್ಗಿಹೋಗಿರುವ ಒಬ್ಬ ವ್ಯಕ್ತಿಗೆ, ಸ್ವಸ್ಥಕರ ಹಾಗೂ ಗಟ್ಟಿಯಾದ ಆತ್ಮಿಕ ಆಹಾರವು ರುಚಿಸಲಿಕ್ಕಿಲ್ಲ. ಸ್ವಲ್ಪ ಸಮಯ ಅವನು ದೇವರ ವಾಕ್ಯದ ‘ಹಾಲನ್ನು’ ಸೇವಿಸುತ್ತಾ ಹೇಗೊ ಬದುಕಬಹುದು. (ಇಬ್ರಿಯ 5:13) ಆದರೆ ದೀರ್ಘ ಸಮಯದ ನಂತರವೂ, ಅವನು ಕ್ರೈಸ್ತ ಸಭೆ ಮತ್ತು ಶುಶ್ರೂಷೆಯಲ್ಲಿ ತನ್ನ ಮೂಲಭೂತ ಆತ್ಮಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಬೇಕಾಗಿರುವ ಆತ್ಮಿಕ ಪ್ರೌಢತೆಯನ್ನು ಬೆಳೆಸಿಕೊಳ್ಳುವುದಿಲ್ಲ. (ಮತ್ತಾಯ 24:14; 28:19; ಇಬ್ರಿಯ 10:24, 25) ಈ ಸ್ಥಿತಿಯಲ್ಲಿರುವ ಕೆಲವರು, ತಮ್ಮ ಆತ್ಮಿಕ ಬಲವು ಎಷ್ಟರ ಮಟ್ಟಿಗೆ ಕುಗ್ಗುವಂತೆ ಬಿಟ್ಟಿದ್ದಾರೆಂದರೆ, ಅವರು ನಿಷ್ಕ್ರಿಯ ಸಾಕ್ಷಿಗಳಾಗಿಬಿಟ್ಟಿದ್ದಾರೆ!
ಇನ್ನೊಂದು ಅಪಾಯವು, ಮೋಸಕರವಾಗಿರಬಲ್ಲ ಬಾಹ್ಯ ತೋರಿಕೆಯಾಗಿದೆ. ಕ್ರೈಸ್ತ ಕರ್ತವ್ಯಗಳನ್ನು ಹೇಗಾದರೂ ಮಾಡಿಮುಗಿಸಬೇಕೆಂಬ ಉದ್ದೇಶದಿಂದ ಯಾಂತ್ರಿಕವಾಗಿ ಅವುಗಳನ್ನು ಪೂರೈಸುವುದು, ಭೌತಿಕವಾದದ ತತ್ತ್ವಜ್ಞಾನಗಳು ಅಥವಾ ಅನೈತಿಕತೆ, ಹಿಂಸಾಚಾರ ಇಲ್ಲವೆ ಮಾಂತ್ರಿಕತೆಯಿಂದ ತುಂಬಿರುವ ಮನೋರಂಜನೆಯಲ್ಲಿ ಗುಪ್ತ ರೀತಿಯಲ್ಲಿ ಮುಳುಗಿರುವುದರಿಂದ ದುರ್ಬಲಗೊಂಡಿರುವ ಸಾಂಕೇತಿಕ ಹೃದಯದ ಹೆಚ್ಚುತ್ತಿರುವ ಬಲಹೀನತೆಯ ಮೇಲೆ ಮುಸುಕನ್ನು ಎಳೆಯಬಹುದು. ಆ ರೀತಿಯ ದೋಷಪೂರ್ಣ ಆತ್ಮಿಕ ಪಥ್ಯವು, ಒಬ್ಬ ವ್ಯಕ್ತಿಯ ಆತ್ಮಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂಬಂತೆ ತೋರಬಹುದು. ಆದರೆ ಪೌಷ್ಠಿಕಾಂಶಗಳ ಕೊರತೆಯುಳ್ಳ ಆಹಾರಪಥ್ಯವು ಹೇಗೆ ರಕ್ತನಾಳಗಳನ್ನು ಗಡುಸುಗೊಳಿಸಿ, ಶಾರೀರಿಕ ಹೃದಯಕ್ಕೆ ಹಾನಿಮಾಡಬಲ್ಲದೊ, ಹಾಗೆಯೇ ಅಂಥ ಪಥ್ಯವು ಸಾಂಕೇತಿಕ ಹೃದಯವನ್ನು ಸ್ತಬ್ಧಗೊಳಿಸಬಲ್ಲದು. ಅಯೋಗ್ಯವಾದ ಆಸೆಗಳು ಒಬ್ಬ ವ್ಯಕ್ತಿಯ ಹೃದಯವನ್ನು ಪ್ರವೇಶಿಸುವಂತೆ ಬಿಡುವುದರ ವಿರುದ್ಧ ಯೇಸು ಎಚ್ಚರಿಸಿದನು. ಅವನಂದದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ [“ಹೃದಯದಲ್ಲಿ,” NW] ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28) ಹೌದು, ನ್ಯೂನವಾದ ಆತ್ಮಿಕ ಪಥ್ಯವು, ಆತ್ಮಿಕ ಹೃದಯಾಘಾತಕ್ಕೆ ನಡೆಸಬಲ್ಲದು. ಆದರೆ ಚಿಂತಿಸಲಿಕ್ಕಾಗಿ ಇನ್ನೂ ಅನೇಕ ವಿಷಯಗಳಿವೆ.
ವ್ಯಾಯಾಮ. ಚಟುವಟಿಕೆಯಿಲ್ಲದ ಜೀವನಶೈಲಿಯು ಶಾರೀರಿಕ ಹೃದಯಾಘಾತಗಳಿಗೆ ಕಾರಣವಾಗಿರಬಲ್ಲದೆಂಬ ಸಂಗತಿಯು ಎಲ್ಲರಿಗೂ ತಿಳಿದಿದೆ. ಅದೇ ರೀತಿಯಲ್ಲಿ ಆತ್ಮಿಕ ರೀತಿಯಲ್ಲಿ 2 ತಿಮೊಥೆಯ 2:15) ಇಲ್ಲವೆ, ಒಬ್ಬ ವ್ಯಕ್ತಿಯು ಕೆಲವೊಂದು ಕ್ರೈಸ್ತ ಕೂಟಗಳಿಗೆ ಹಾಜರಾಗಬಹುದು, ಆದರೆ ಅದಕ್ಕಾಗಿ ತಯಾರಿ ಮಾಡದೇ ಇರಬಹುದು ಮತ್ತು ಅದರಲ್ಲಿ ಪಾಲ್ಗೊಳ್ಳದಿರಬಹುದು. ಅವನಿಗೆ ಯಾವುದೇ ಆತ್ಮಿಕ ಗುರಿಗಳು ಇಲ್ಲದಿರಬಹುದು ಅಥವಾ ಆತ್ಮಿಕ ವಿಷಯಗಳಿಗಾಗಿ ಹಸಿವು ಇಲ್ಲವೆ ಉತ್ಸಾಹವಿಲ್ಲದೇ ಇರಬಹುದು. ಆತ್ಮಿಕ ವ್ಯಾಯಾಮದ ಈ ಕೊರತೆಯು ಕಟ್ಟಕಡೆಗೆ, ಒಂದು ಸಮಯದಲ್ಲಿ ಅವನಿಗಿದ್ದಿರಬಹುದಾದ ಅಲ್ಪಸ್ವಲ್ಪ ನಂಬಿಕೆಯನ್ನೂ ಸಾಯಿಸಬಹುದು. (ಯಾಕೋಬ 2:26) ಚಟುವಟಿಕೆಯಿಲ್ಲದ ಅಂತಹ ಆತ್ಮಿಕ ಜೀವನಶೈಲಿಗೆ ಇಳಿದಿರುವಂತೆ ತೋರಿದ ಇಬ್ರಿಯ ಕ್ರೈಸ್ತರಿಗೆ ಬರೆಯುವಾಗ ಅಪೊಸ್ತಲ ಪೌಲನು ಈ ಅಪಾಯದ ಕುರಿತು ತಿಳಿಸಿದನು. ಇದು ಅವರ ಆತ್ಮಿಕತೆಯ ಮೇಲೆ ಬೀರಬಲ್ಲ ಕಠಿನಗೊಳಿಸುವಂಥ ಪರಿಣಾಮದ ಕುರಿತು ಅವನು ಹೇಗೆ ಎಚ್ಚರಿಸಿದನೆಂಬುದನ್ನು ಗಮನಿಸಿರಿ. “ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.”—ಇಬ್ರಿಯ 3:12, 13.
ಚಟುವಟಿಕೆಯಿಲ್ಲದ ಜೀವನಕ್ಕೆ ಗಂಭೀರವಾದ ಪರಿಣಾಮಗಳಿರಬಲ್ಲವು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯು ಕ್ರೈಸ್ತ ಶುಶ್ರೂಷೆಯಲ್ಲಿ ಅಲ್ಪಸ್ವಲ್ಪವಾಗಿ ಪಾಲ್ಗೊಳ್ಳಬಹುದು. ಆದರೆ ಅವನು ಕೇವಲ ತನಗೆ ಅನುಕೂಲವಾಗಿರುವಾಗ ಇದನ್ನು ಮಾಡಬಹುದು. ಅವನು ‘ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರಲು’ ತೀರ ಕಡಿಮೆ ಪ್ರಯತ್ನವನ್ನು ಮಾಡಬಹುದು ಅಥವಾ ಪ್ರಯತ್ನವನ್ನೇ ಮಾಡದಿರಬಹುದು. (ಮಾನಸಿಕ ಒತ್ತಡ. ಶಾರೀರಿಕ ಹೃದಯಾಘಾತಗಳ ಇನ್ನೊಂದು ಮುಖ್ಯ ಕಾರಣವು ವಿಪರೀತ ಮಾನಸಿಕ ಒತ್ತಡವಾಗಿದೆ. ಹಾಗೆಯೇ, ಮಾನಸಿಕ ಒತ್ತಡ ಇಲ್ಲವೆ ‘ಪ್ರಪಂಚದ ಚಿಂತೆಗಳು’ ಸುಲಭವಾಗಿ ಸಾಂಕೇತಿಕ ಹೃದಯಕ್ಕೆ ಮಾರಕವಾಗಿ ಪರಿಣಮಿಸಬಲ್ಲವು. ಈ ಸಂಬಂಧದಲ್ಲಿ ಯೇಸು ಕೊಟ್ಟ ಎಚ್ಚರಿಕೆಯು ಸಮಯೋಚಿತವಾಗಿದೆ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.” (ಲೂಕ 21:34, 35) ನಾವು ಮಾಡಿರುವ ಒಂದು ಗುಪ್ತ ಪಾಪದ ಕುರಿತು ತುಂಬ ದೀರ್ಘ ಸಮಯಾವಧಿಯ ವರೆಗೆ ಒಳಗೊಳಗೆ ಸಂಕಟಪಡುತ್ತಿದ್ದರೂ, ಈ ಮಾನಸಿಕ ಒತ್ತಡವು ನಮ್ಮ ಸಾಂಕೇತಿಕ ಹೃದಯವನ್ನು ಬಹಳಷ್ಟು ಬಾಧಿಸಬಲ್ಲದು. ಅಂಥ ಹಾನಿಕರ ಮಾನಸಿಕ ಒತ್ತಡದಿಂದಾಗಿ ಬರುವ ನೋವನ್ನು ರಾಜ ದಾವೀದನು ಅನುಭವದಿಂದ ತಿಳಿದುಕೊಂಡಿದ್ದನು. ಆದುದರಿಂದ ಅವನು ಹೇಳಿದ್ದು: “ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ. ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟ್ಟವೆ.”—ಕೀರ್ತನೆ 38:3, 4.
ಮಿತಿಮೀರಿದ ಆತ್ಮವಿಶ್ವಾಸ. ಹೃದಯಾಘಾತಕ್ಕೆ ತುತ್ತಾದ ಅನೇಕರು, ತಮ್ಮ ಹೃದಯಾಘಾತಕ್ಕೆ ಸ್ವಲ್ಪ ಮುಂಚೆ ತಮ್ಮ ಆರೋಗ್ಯದ ಕುರಿತಾಗಿ ತುಂಬ ಆತ್ಮವಿಶ್ವಾಸದಿಂದಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ, ತಪಾಸಣೆಗಳನ್ನು ಅಥವಾ ವೈದ್ಯಕೀಯ ಪರೀಕ್ಷೆಗಳನ್ನು, ಅವು ಸುಮ್ಮನೆ ಅನಾವಶ್ಯಕವೆಂದು ಅವರು ಉಪೇಕ್ಷೆ ಮಾಡುತ್ತಿದ್ದರು 1 ಕೊರಿಂಥ 10:12; ಜ್ಞಾನೋಕ್ತಿ 28:14.
ಅಥವಾ ತಮಾಷೆಯೋಪಾದಿ ಪರಿಗಣಿಸುತ್ತಿದ್ದರು. ತದ್ರೀತಿಯಲ್ಲಿ ಕೆಲವರಿಗೆ, ತಾವು ಎಷ್ಟೋ ಸಮಯದಿಂದ ಕ್ರೈಸ್ತರಾಗಿರುವುದರಿಂದ ತಮಗೆ ಏನೂ ಆಗಲಾರದೆಂಬ ಭಾವನೆಯಿರಬಹುದು. ವಿಪತ್ತು ಬಂದೆರಗುವ ವರೆಗೂ ಅವರು ತಮ್ಮನ್ನು ಆತ್ಮಿಕ ತಪಾಸಣೆಗಳಿಗೆ ಇಲ್ಲವೇ ಸ್ವಪರೀಕ್ಷೆಗೆ ಒಳಪಡಿಸುವುದನ್ನು ಅಲಕ್ಷಿಸುತ್ತಿರಬಹುದು. ಮಿತಿಮೀರಿದ ಆತ್ಮವಿಶ್ವಾಸದ ಕುರಿತಾಗಿ ಅಪೊಸ್ತಲ ಪೌಲನು ಕೊಟ್ಟ ಈ ಒಳ್ಳೆಯ ಸಲಹೆಯನ್ನು ಮನಸ್ಸಿನಲ್ಲಿಡುವುದು ಅತ್ಯಾವಶ್ಯಕ: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” ನಮ್ಮ ಅಪರಿಪೂರ್ಣ ಸ್ವಭಾವವನ್ನು ಅಂಗೀಕರಿಸಿ, ಆಗಿಂದಾಗ್ಗೆ ನಮ್ಮನ್ನೇ ಆತ್ಮಿಕವಾಗಿ ಪರಿಶೀಲಿಸುವುದು ವಿವೇಕದ ಮಾರ್ಗವಾಗಿದೆ.—ಎಚ್ಚರಿಕೆಯ ಸೂಚನೆಗಳನ್ನು ಅಲಕ್ಷಿಸಬೇಡಿರಿ
ಶಾಸ್ತ್ರವಚನಗಳು ಸಾಂಕೇತಿಕ ಹೃದಯದ ಸ್ಥಿತಿಗೆ ಅತಿ ಮುಖ್ಯ ಸ್ಥಾನವನ್ನು ಕೊಡುವುದಕ್ಕೆ ಸಕಾರಣವಿದೆ. ಯೆರೆಮೀಯ 17:9, 10ರಲ್ಲಿ ನಾವು ಹೀಗೆ ಓದುತ್ತೇವೆ: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು? ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.” ಆದರೆ ನಮ್ಮ ಹೃದಯವನ್ನು ಪರೀಕ್ಷಿಸುವುದರ ಜೊತೆಗೆ, ನಾವು ಸ್ವಪರೀಕ್ಷೆಯನ್ನು ಮಾಡುವುದಕ್ಕಾಗಿ ಬೇಕಾಗಿರುವ ಸಹಾಯವನ್ನು ಒದಗಿಸಲು ಯೆಹೋವನು ಪ್ರೀತಿಪರ ಏರ್ಪಾಡನ್ನೂ ಮಾಡಿದ್ದಾನೆ.
‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ನಮಗೆ ಸಮಯಕ್ಕನುಸಾರವಾಗಿ ಮರುಜ್ಞಾಪನಗಳನ್ನು ಕೊಡಲಾಗುತ್ತದೆ. (ಮತ್ತಾಯ 24:45) ಉದಾಹರಣೆಗಾಗಿ ನಮ್ಮ ಸಾಂಕೇತಿಕ ಹೃದಯವು ನಮ್ಮನ್ನು ವಂಚಿಸಬಹುದಾದ ಮುಖ್ಯ ವಿಧಗಳಲ್ಲಿ ಒಂದು, ನಾವು ಲೌಕಿಕ ಭ್ರಾಂತಿಗಳಲ್ಲಿ ಮುಳುಗಿರುವಂತೆ ಮಾಡುವುದೇ ಆಗಿದೆ. ಈ ಭ್ರಾಂತಿಗಳು, ನೈಜವಲ್ಲದ ಕಲ್ಪನೆಗಳು, ಹಗಲುಗನಸುಗಳು ಮತ್ತು ಸೋಮಾರಿ ಮನಸ್ಸಿನ ಅಲೆಯುವಿಕೆಗಳಾಗಿವೆ. ಇವು ತುಂಬ ಹಾನಿಕರವಾಗಿ ಪರಿಣಮಿಸಬಲ್ಲವು. ವಿಶೇಷವಾಗಿ ಅವು ಅಶುದ್ಧವಾದ ವಿಚಾರಗಳನ್ನು ಬಡಿದೆಬ್ಬಿಸುವಲ್ಲಿ ಈ ಮಾತು ಸತ್ಯವಾಗಿದೆ. ಆದುದರಿಂದ ನಾವು ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯೇಸುವಿನಂತೆ ನಾವು ಅಧರ್ಮವನ್ನು ದ್ವೇಷಿಸಿದರೆ, ನಮ್ಮ ಹೃದಯವು ಲೌಕಿಕ ಭ್ರಾಂತಿಗಳಲ್ಲಿ ತೊಡಗದಂತೆ ಅದನ್ನು ಕಾಪಾಡಿಕೊಳ್ಳುತ್ತಿರುವೆವು.—ಇಬ್ರಿಯ 1:8, 9.
ಅಷ್ಟುಮಾತ್ರವಲ್ಲದೆ, ಕ್ರೈಸ್ತ ಸಭೆಯಲ್ಲಿ ನಮಗೆ ಪ್ರೀತಿಪರ ಹಿರಿಯರ ಸಹಾಯವಿದೆ. ಬೇರೆಯವರು ತೋರಿಸುವ ಚಿಂತೆಯು ನಿಜವಾಗಿಯೂ ಗಣ್ಯಮಾಡಬೇಕಾದ ಸಂಗತಿಯಾಗಿದ್ದರೂ, ನಮ್ಮ ಸಾಂಕೇತಿಕ ಹೃದಯದ ಆರೈಕೆ ಮಾಡುವ ಜವಾಬ್ದಾರಿಯು ಕಟ್ಟಕಡೆಗೆ ವೈಯಕ್ತಿಕವಾಗಿ ನಮ್ಮ ಮೇಲೆ ಇದೆ. ‘ಎಲ್ಲವನ್ನೂ ಪರಿಶೋಧಿಸುವುದು’ ಮತ್ತು ‘ನಂಬಿಕೆಯಲ್ಲಿ ಇದ್ದೇವೊ ಇಲ್ಲವೊ ಎಂದು ಪರೀಕ್ಷಿಸಿಕೊಳ್ಳುವುದು’ ನಮ್ಮ ನಮ್ಮ ಕರ್ತವ್ಯವಾಗಿದೆ.—1 ಥೆಸಲೊನೀಕ 5:21; 2 ಕೊರಿಂಥ 13:5.
ಹೃದಯವನ್ನು ಕಾಪಾಡಿಕೊಳ್ಳಿರಿ
‘ಮನುಷ್ಯನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುವನು’ ಎಂಬ ಬೈಬಲ್ ಮೂಲತತ್ತ್ವವು, ನಮ್ಮ ಸಾಂಕೇತಿಕ ಹೃದಯದ ಆರೋಗ್ಯಕ್ಕೂ ಅನ್ವಯಿಸುತ್ತದೆ. (ಗಲಾತ್ಯ 6:7) ಅನೇಕವೇಳೆ, ಅನಿರೀಕ್ಷಿತ ಆತ್ಮಿಕ ವಿಪತ್ತು ಎಂದು ತೋರುವಂಥ ಸಂಗತಿಯು ನಿಜವಾಗಿಯೂ ಅನಿರೀಕ್ಷಿತವಾದದ್ದಾಗಿರುವುದಿಲ್ಲ. ಅದರ ಬದಲು, ಅಶ್ಲೀಲ ಸಾಹಿತ್ಯವನ್ನು ನೋಡುವುದು, ಪ್ರಾಪಂಚಿಕ ವಿಷಯಗಳ ಕುರಿತಾಗಿ ಅತಿರೇಕ ಆಸಕ್ತಿವಹಿಸುವುದು, ಇಲ್ಲವೇ ಪ್ರಖ್ಯಾತಿ ಅಥವಾ ಅಧಿಕಾರಕ್ಕಾಗಿ ಸ್ಪರ್ಧಿಸುವಂಥ ರೀತಿಯ ಆತ್ಮಿಕವಾಗಿ ಹಾನಿಕರವಾಗಿರುವ ಚಟುವಟಿಕೆಗಳಲ್ಲಿ ಮುಳುಗಿರುವುದರ ಒಂದು ದೀರ್ಘವಾದ, ಗುಪ್ತ ಇತಿಹಾಸ ಅದರ ಹಿಂದಿರುತ್ತದೆ.
ಆದುದರಿಂದ, ಹೃದಯವನ್ನು ಸಂರಕ್ಷಿಸಲಿಕ್ಕೋಸ್ಕರ ಒಬ್ಬ ವ್ಯಕ್ತಿಯು ತನ್ನ ಆತ್ಮಿಕ ಆಹಾರಪಥ್ಯಕ್ಕೆ ಗಮನಕೊಡುವುದು ಅತ್ಯಾವಶ್ಯಕ. ದೇವರ ವಾಕ್ಯದಿಂದ ಉಣ್ಣುವ ಮೂಲಕ ಅದನ್ನು ಪೋಷಿಸಿರಿ. ಸುಲಭವಾಗಿ ಲಭ್ಯವಿರುವ ಮತ್ತು ಶರೀರಕ್ಕೆ ಆಕರ್ಷಕವಾಗಿರುವ ಮಾನಸಿಕ ಕಚಡ ಆಹಾರದಿಂದ ದೂರವಿರಿ. ಏಕೆಂದರೆ ಅದು ನಮ್ಮ ಸಾಂಕೇತಿಕ ಹೃದಯವನ್ನು ಸಂವೇದನಾಶೂನ್ಯವಾಗಿ ಮಾಡುತ್ತದೆ ಅಷ್ಟೇ. ಕೀರ್ತನೆಗಾರನು, ಒಂದು ಸೂಕ್ತವಾದ ಮತ್ತು ವೈದ್ಯಕೀಯ ರೀತಿಯಲ್ಲಿ ಯಥಾರ್ಥವಾಗಿರುವ ಹೋಲಿಕೆಯ ಮೂಲಕ ಎಚ್ಚರಿಸುವುದು: “ಕೊಬ್ಬಿನಂತೆ ಅವರ ಬುದ್ಧಿ [“ಹೃದಯವು,” NW] ಮಂದವಾಯಿತು.”—ಕೀರ್ತನೆ 119:70.
ದೀರ್ಘಸಮಯದಿಂದ ಬಚ್ಚಿಡಲ್ಪಟ್ಟಿರುವ ತಪ್ಪುಗಳಿರುವಲ್ಲಿ, ಅವುಗಳನ್ನು ತೆಗೆದುಹಾಕಲು ತುಂಬ ಪ್ರಯತ್ನಮಾಡಿರಿ. ಇಲ್ಲದಿದ್ದಲ್ಲಿ ಅವು ನಿಮ್ಮ ಸಾಂಕೇತಿಕ ರಕ್ತನಾಳಗಳಲ್ಲಿ ಅಡಚಣೆಯನ್ನುಂಟುಮಾಡುವವು. ಲೋಕವು ತುಂಬ ಆಕರ್ಷಕವಾಗಿ ಕಾಣುತ್ತಿದ್ದು, ಬಹಳಷ್ಟು ಮೋಜು ಮತ್ತು ಆನಂದವನ್ನು ನೀಡುತ್ತಿರುವಂತೆ ತೋರುವಲ್ಲಿ, ಅಪೊಸ್ತಲ ಪೌಲನು ಕೊಟ್ಟಿರುವ ವಿವೇಕಭರಿತ ಸಲಹೆಯ ಕುರಿತು ಮನನಮಾಡಿರಿ. ಅವನು ಬರೆದುದು: 1 ಕೊರಿಂಥ 7:29-31) ಮತ್ತು ಪ್ರಾಪಂಚಿಕ ಐಶ್ವರ್ಯವು ನಿಮ್ಮನ್ನು ಕೈಬೀಸಿ ಕರೆಯುತ್ತಿರುವುದಾದರೆ, ಯೋಬನ ಈ ಮಾತುಗಳನ್ನು ಪರ್ಯಾಲೋಚಿಸಿರಿ: “ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು ಅಪರಂಜಿಗೆ ನಿನ್ನನ್ನೇ ನಂಬಿದ್ದೇನೆ ಎಂದು ಹೇಳಿದ್ದರೆ ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.”—ಯೋಬ 31:24, 28; ಕೀರ್ತನೆ 62:10; 1 ತಿಮೊಥೆಯ 6:9, 10.
“ಸಹೋದರರೇ, ನಾನು ಹೇಳುವದೇನಂದರೆ—ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ . . . ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.” (ಬೈಬಲಾಧಾರಿತ ಸಲಹೆಯನ್ನು ರೂಢಿಯಾಗಿ ಅಲಕ್ಷಿಸುವ ಗಂಭೀರತೆಗೆ ಸೂಚಿಸುತ್ತಾ ಬೈಬಲ್ ಎಚ್ಚರಿಸುವುದು: “ಬಹಳವಾಗಿ ಗದರಿಸಿದರೂ ತಗ್ಗದವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.” (ಜ್ಞಾನೋಕ್ತಿ 29:1) ಆದರೆ ಇದಕ್ಕೆ ವಿರುದ್ಧವಾಗಿ, ನಾವು ನಮ್ಮ ಸಾಂಕೇತಿಕ ಹೃದಯದ ಒಳ್ಳೇ ಆರೈಕೆಯನ್ನು ಮಾಡುವ ಮೂಲಕ, ಒಂದು ಸರಳವಾದ, ಜಂಜಾಟಗಳಿಲ್ಲದ ಜೀವನವನ್ನು ನಡೆಸುವುದರಿಂದ ಬರುವ ಆನಂದ ಮತ್ತು ಮನಶ್ಶಾಂತಿಯನ್ನು ಅನುಭವಿಸುವೆವು. ಈ ರೀತಿಯ ಜೀವನವೇ, ನಿಜ ಕ್ರೈಸ್ತತ್ವವು ಯಾವಾಗಲೂ ಶಿಫಾರಸ್ಸು ಮಾಡಿರುವ ಮಾರ್ಗವಾಗಿದೆ. ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊಥೆಯ 6:6-8.
ಹೌದು, ದೈವಿಕ ಭಕ್ತಿಗಾಗಿ ನಾವು ನಮ್ಮನ್ನೇ ತರಬೇತುಗೊಳಿಸುತ್ತಾ ಮತ್ತು ವ್ಯಾಯಾಮಮಾಡುತ್ತಾ ಇರುವುದರಿಂದ, ನಮಗೊಂದು ಆರೋಗ್ಯಕರವಾದ ಹಾಗೂ ಬಲವಾದ ಸಾಂಕೇತಿಕ ಹೃದಯವು ಇರುವುದು. ನಮ್ಮ ಆತ್ಮಿಕ ಆಹಾರಪಥ್ಯಕ್ಕೆ ನಿಕಟವಾದ ಗಮನವನ್ನು ಕೊಡುವ ಮೂಲಕ, ಈ ಲೋಕದ ವಿನಾಶಕಾರಿ ಮಾರ್ಗಗಳು ಮತ್ತು ಯೋಚನಾಧಾಟಿಯು, ನಮ್ಮ ಆತ್ಮಿಕತೆಗೆ ಯಾವುದೇ ಹಾನಿ ಅಥವಾ ನಷ್ಟವನ್ನು ಉಂಟುಮಾಡಲು ನಾವು ಅವಕಾಶವನ್ನು ಕೊಡದಿರುವೆವು. ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನು ತನ್ನ ಸಂಸ್ಥೆಯ ಮೂಲಕ ಮಾಡುವ ಏರ್ಪಾಡುಗಳನ್ನು ಸ್ವೀಕರಿಸುವ ಮೂಲಕ, ನಮ್ಮ ಸಾಂಕೇತಿಕ ಹೃದಯ ತಪಾಸಣೆಗಳಿಗೆ ನಾವು ಕ್ರಮವಾಗಿ ನಮ್ಮನ್ನು ಒಳಪಡಿಸೋಣ. ಇದನ್ನು ಶ್ರದ್ಧೆಯಿಂದ ಮಾಡಿದರೆ, ಆತ್ಮಿಕ ಹೃದಯಾಘಾತದ ದುಃಖಕರ ಪರಿಣಾಮಗಳನ್ನು ತಪ್ಪಿಸುವುದರಲ್ಲಿ ನಮಗೆ ತುಂಬ ನೆರವು ಸಿಗುವುದು.
[ಪಾದಟಿಪ್ಪಣಿ]
^ ಪ್ಯಾರ. 4 ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಎಚ್ಚರ! ಪತ್ರಿಕೆಯ 1997, ಜನವರಿ 8ರ ಸಂಚಿಕೆಯಲ್ಲಿ “ಹೃದಯಾಘಾತ—ಏನು ಮಾಡಸಾಧ್ಯವಿದೆ?” ಎಂಬ ಲೇಖನಮಾಲೆಯನ್ನು ದಯವಿಟ್ಟು ನೋಡಿರಿ.
[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]
ನ್ಯೂನವಾದ ಆಹಾರಪಥ್ಯವು ರಕ್ತನಾಳಗಳನ್ನು ಗಡುಸುಗೊಳಿಸಿ, ಶಾರೀರಿಕ ಹೃದಯವನ್ನು ಹಾನಿಗೊಳಿಸುವಂತೆಯೇ, ಒಂದು ದೋಷಪೂರ್ಣ ಆತ್ಮಿಕ ಪಥ್ಯವು ಸಾಂಕೇತಿಕ ಹೃದಯವನ್ನು ಸ್ತಬ್ಧಗೊಳಿಸಬಲ್ಲದು
[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆತ್ಮಿಕವಾಗಿ ಚಟುವಟಿಕೆರಹಿತ ಜೀವನಶೈಲಿಯು ಗಂಭೀರವಾದ ಫಲಿತಾಂಶಗಳನ್ನು ತರಬಲ್ಲದು
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಪ್ರಪಂಚದ ಚಿಂತೆಗಳು’ ಸಾಂಕೇತಿಕ ಹೃದಯಕ್ಕೆ ಮಾರಕವಾಗಿರಬಲ್ಲವು
[ಪುಟ 11ರಲ್ಲಿರುವ ಚಿತ್ರ]
ನಮ್ಮ ಆತ್ಮಿಕ ಆರೋಗ್ಯವನ್ನು ಅಲಕ್ಷಿಸುವುದು ಬಹಳಷ್ಟು ಸಂಕಟವನ್ನು ತರಬಲ್ಲದು
[ಪುಟ 13ರಲ್ಲಿರುವ ಚಿತ್ರಗಳು]
ಒಳ್ಳೆಯ ಆತ್ಮಿಕ ರೂಢಿಗಳನ್ನು ಬೆಳೆಸಿಕೊಳ್ಳುವುದು, ಸಾಂಕೇತಿಕ ಹೃದಯವನ್ನು ಕಾಪಾಡುತ್ತದೆ
[ಪುಟ 9ರಲ್ಲಿರುವ ಚಿತ್ರ ಕೃಪೆ]
AP Photo/David Longstreath