ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಆಯ್ಕೆಯ ಮೂಲತತ್ತ್ವಗಳು

ನಿಮ್ಮ ಆಯ್ಕೆಯ ಮೂಲತತ್ತ್ವಗಳು

ನಿಮ್ಮ ಆಯ್ಕೆಯ ಮೂಲತತ್ತ್ವಗಳು

ನೀವು ನೀತಿಸೂತ್ರಗಳಿಗೆ ಅನುಸಾರವಾಗಿ ನಡೆಯುವ ಒಬ್ಬ ವ್ಯಕ್ತಿಯಾಗಿದ್ದೀರೋ? ಅಥವಾ ನೀತಿನಿಯಮಗಳು ಸ್ವಲ್ಪ ಹಳೇ ಕಾಲದವುಗಳು ಎಂದು ನೀವು ಎಣಿಸುತ್ತೀರೋ? ವಾಸ್ತವಾಂಶವೇನೆಂದರೆ, ಪ್ರತಿಯೊಬ್ಬನು ಅಥವಾ ಪ್ರತಿಯೊಬ್ಬಳು ತಮಗೆ ಪ್ರಾಮುಖ್ಯವಾದದ್ದೆಂದು ನಂಬುವ ಯಾವುದೇ ಒಂದು ರೀತಿಯ ಮೂಲತತ್ತ್ವಗಳಿಂದ ಖಂಡಿತವಾಗಿಯೂ ಮಾರ್ಗದರ್ಶಿಸಲ್ಪಡುತ್ತಾರೆ. ದ ನ್ಯೂ ಶಾರ್ಟರ್‌ ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷನೆರಿ ವಿವರಿಸುವ ಪ್ರಕಾರ, ಮೂಲತತ್ತ್ವ ಎಂಬುದು “ಒಬ್ಬ ವ್ಯಕ್ತಿಯು ಸ್ವಂತ ನಡವಳಿಕೆಗಾಗಿ ಇಟ್ಟುಕೊಂಡಿರುವ ಯೋಗ್ಯ ನಡತೆಯ ನೀತಿಸೂತ್ರ”ವಾಗಿದೆ. ಮೂಲತತ್ತ್ವಗಳು ನಮ್ಮ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ನಾವು ಜೀವನದಲ್ಲಿ ತೆಗೆದುಕೊಳ್ಳಬೇಕಾದ ಮಾರ್ಗವನ್ನು ದೃಢೀಕರಿಸುತ್ತವೆ. ಮೂಲತತ್ತ್ವಗಳು ಒಂದು ದಿಕ್ಸೂಚಿಯೋಪಾದಿ ಕಾರ್ಯನಡಿಸಸಾಧ್ಯವಿದೆ.

ಉದಾಹರಣೆಗಾಗಿ, ಮತ್ತಾಯ 7:12ರಲ್ಲಿ ಕಂಡುಬರುವ ಸುವರ್ಣ ನಿಯಮವನ್ನು ಪಾಲಿಸುವಂತೆ ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ” ಎಂದು ಅದರಲ್ಲಿ ತಿಳಿಸಲಾಗಿದೆ. ಕನ್‌ಫ್ಯೂಷಿಯಸ್‌ನ ಹಿಂಬಾಲಕರು, ಲೀ ಮತ್ತು ಜೆನ್‌ ಎಂಬ ಕರುಣೆ, ದೀನತೆ, ಮರ್ಯಾದೆ, ಮತ್ತು ನಿಷ್ಠೆಯಂಥ ಗುಣಗಳನ್ನು ಸೂಚಿಸುವ ಮೂಲತತ್ತ್ವಗಳನ್ನು ಪಾಲಿಸುತ್ತಾರೆ. ಧಾರ್ಮಿಕ ಮನೋಭಾವದವರಲ್ಲದ ವ್ಯಕ್ತಿಗಳು ಕೂಡ, ತಮ್ಮ ನಡತೆಯನ್ನು ನಿರ್ಧರಿಸುವ ಆದ್ಯತೆಗಳನ್ನು ಅಥವಾ ನಿರ್ದೇಶನಗಳನ್ನು ಇಟ್ಟುಕೊಂಡಿದ್ದಾರೆ.

ಯಾವ ರೀತಿಯ ಮೂಲತತ್ತ್ವಗಳನ್ನು ನಾವು ಆರಿಸಿಕೊಳ್ಳಬೇಕು?

ಆದರೂ, ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ವಿಷಯವಿದೆ. ಅದೇನೆಂದರೆ, ಮೂಲತತ್ತ್ವಗಳು ಒಳ್ಳೆಯವೂ ಆಗಿರಬಹುದು, ಕೆಟ್ಟವೂ ಆಗಿರಬಹುದು. ಉದಾಹರಣೆಗಾಗಿ, ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಜನರು, ಕಳೆದ ಹತ್ತು ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷಗಳಿಂದ, ಯಾವುದನ್ನು ಅಹಂವಾದ ಎಂದು ಕರೆಯಲಾಗಿದೆಯೋ ಅದರಿಂದ ಪ್ರಚೋದಿಸಲ್ಪಟ್ಟಿದ್ದಾರೆ. ಅನೇಕರಿಗೆ ಈ ಪದವು ಗೊತ್ತಿಲ್ಲದಿರಬಹುದು ಅಥವಾ ಇದು ತಮಗೆ ಅನ್ವಯಿಸುವುದಿಲ್ಲ ಎಂದು ಅವರು ನೆನಸಬಹುದಾದರೂ, ನಡತೆಯ ಶ್ರೇಷ್ಠ ಮಟ್ಟಗಳನ್ನು ಅಲಕ್ಷಿಸುತ್ತಾ ಇರುವಾಗ ಅವರು ಆಶ್ರಯಿಸುವಂಥ ನಿಯಮಾವಳಿಯು ಇದಾಗಿದೆ. ಇದಕ್ಕೆ ಅಹಂವಾದ ಎಂಬ ಅರ್ಥವು ಕೊಡಲ್ಪಡಲಿ ಇಲ್ಲವೇ ಕೊಡಲ್ಪಡದಿರಲಿ, ಅನೇಕವೇಳೆ ಈ ಅಹಂವಾದವು ಬುದ್ಧಿಹೀನ ಪ್ರಾಪಂಚಿಕತೆಯಿಂದ ಕೂಡಿರುವ ಸ್ವಾರ್ಥತೆಯ ವ್ಯಕ್ತಪಡಿಸುವಿಕೆಯಾಗಿದೆ. “ನಮಗೆ ಕೇವಲ ಎರಡು ಮೂಲತತ್ತ್ವಗಳಿವೆ,” ಎಂದು ಚೀನಾದಲ್ಲಿನ ಒಬ್ಬ ಟಿವಿ ನಿರ್ವಾಹಕನು ಒಪ್ಪಿಕೊಂಡನು. “ಒಂದು, ಇನ್ನೂ ಬೇಕು ಎಂಬ ಆಸೆಯನ್ನು ಪೂರೈಸಿಕೊಳ್ಳುವುದು. ಮತ್ತೊಂದು, ಹಣವನ್ನು ಸಂಪಾದಿಸುವುದು.”

ಅಹಂವಾದವು ಒಂದು ಅಯಸ್ಕಾಂತದಂತೆ ಕೆಲಸಮಾಡಬಹುದು. ಒಂದು ಅಯಸ್ಕಾಂತವು ಒಂದು ದಿಕ್ಸೂಚಿಯನ್ನು ಹೇಗೆ ಪ್ರಭಾವಿಸಬಲ್ಲದು? ಇವೆರಡೂ ಅಕ್ಕಪಕ್ಕ ಇಡಲ್ಪಟ್ಟಾಗ, ದಿಕ್ಸೂಚಿಯ ಸೂಜಿಯು ತಪ್ಪು ದಿಕ್ಕನ್ನು ಸೂಚಿಸುತ್ತದೆ. ತದ್ರೀತಿಯಲ್ಲೇ, ಅಹಂವಾದವು ಒಬ್ಬ ವ್ಯಕ್ತಿಯ ಆಶೆಗಳಿಗೆ ಪ್ರಥಮ ಸ್ಥಾನ ಕೊಟ್ಟು, ಬೇರೆಲ್ಲ ವಿಷಯಗಳನ್ನು ಎರಡನೆಯದ್ದಾಗಿ ಮಾಡುತ್ತಾ, ಆ ವ್ಯಕ್ತಿಯ ನೈತಿಕ ದಿಕ್ಸೂಚಿಯನ್ನು ಅಥವಾ ಸುನಡತೆಯ ನಿಯಮಾವಳಿಯನ್ನು ತಬ್ಬಿಬ್ಬುಗೊಳಿಸಬಹುದು.

ಅಹಂವಾದವು ಒಂದು ಆಧುನಿಕ ಸಂಗತಿಯೇನಲ್ಲ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದೋ? ಬದುಕಿನ ಕುರಿತಾದ ಈ ನೋಟವು, ನಮ್ಮ ಮೊದಲ ಹೆತ್ತವರು ಏದೆನ್‌ ತೋಟದಲ್ಲಿ ನಮ್ಮ ಸೃಷ್ಟಿಕರ್ತನಿಂದ ಇಡಲ್ಪಟ್ಟ ನಡವಳಿಕೆಯ ಮಟ್ಟವನ್ನು ತಿರಸ್ಕರಿಸಿದಾಗ, ಮೊದಲಾಗಿ ಆರಂಭವಾಯಿತು. ಇದು ಅವರ ನೈತಿಕ ದಿಕ್ಸೂಚಿಯನ್ನು ಬದಲಾಯಿಸಿತು. ಆದಾಮಹವ್ವರ ವಂಶಸ್ಥರೋಪಾದಿ, ಇತ್ತೀಚೆಗೆ “ಅಹಂವಾದ”ವೆಂದು ಹೆಸರಿಸಲ್ಪಟ್ಟ ಅದೇ ಬದುಕಿನ ನೋಟದಿಂದ ಮನುಷ್ಯರು ತೊಂದರೆಗೊಳಗಾಗಿದ್ದಾರೆ.​—ಆದಿಕಾಂಡ 3:6-8, 12.

ಆ ಮನೋಭಾವದ ವ್ಯಾಪಕತೆಯು, “ಕಠಿನಕಾಲ”ಗಳಿಂದ ಗುರುತಿಸಲ್ಪಟ್ಟಿರುವ “ಕಡೇ ದಿವಸ”ಗಳು ಎಂದು ಬೈಬಲ್‌ ಪ್ರವಾದನೆಯು ಯಾವುದನ್ನು ಕರೆಯುತ್ತದೋ ಆ ಕಾಲದಲ್ಲಿ ಹೆಚ್ಚು ಪ್ರತ್ಯಕ್ಷವಾಗಿದೆ. ಮತ್ತು ಅನೇಕರು “ಸ್ವಾರ್ಥಚಿಂತಕ”ರಾಗಿದ್ದಾರೆ. ಹೀಗಿರುವುದರಿಂದ, ನಾವು ತಾನು-ಮೊದಲೆಂಬ ಅಹಂವಾದದ ಮನೋಭಾವವನ್ನು ಅನುಕರಿಸುವ ಒತ್ತಡಕ್ಕೊಳಗಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.​—2 ತಿಮೊಥೆಯ 3:1-5.

ಯೆಹೋವನ ಸಾಕ್ಷಿಗಳ ಯೂರೋಪಿಯನ್‌ ಬ್ರಾಂಚ್‌ಗೆ ಪತ್ರ ಬರೆದ ಓಲಫ್‌ ಎಂಬ ಯುವಕನ ಮಾತುಗಳೊಂದಿಗೆ ನೀವು ಪ್ರಾಯಶಃ ಸಮ್ಮತಿಸಬಹುದು: “ನೈತಿಕವಾಗಿ ಪ್ರಾಮಾಣಿಕರಾಗಿ ಉಳಿಯುವುದು, ವಿಶೇಷವಾಗಿ ಯುವ ಜನರಾದ ನಮಗೆ ತುಂಬ ಕಷ್ಟಕರವಾದದ್ದಾಗಿದೆ. ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಂಡಿರುವ ಆವಶ್ಯಕತೆಯ ಕುರಿತು ನಮಗೆ ದಯವಿಟ್ಟು ಜ್ಞಾಪಕಹುಟ್ಟಿಸುತ್ತಾ ಇರಿ.”

ಓಲಫ್‌ ವಿವೇಚನಾಭರಿತವಾದ ಒಂದು ದೃಷ್ಟಿಕೋನವನ್ನು ವ್ಯಕ್ತಪಡಿಸಿದನು. ನಾವು ಯುವ ಜನರಾಗಿರಲಿ ವೃದ್ಧರಾಗಿರಲಿ, ದೈವಿಕ ಮೂಲತತ್ತ್ವಗಳು ನಾವು ನಡತೆಯ ಶ್ರೇಷ್ಠ ಮಟ್ಟಗಳಿಗೆ ಅಂಟಿಕೊಂಡಿರುವಂತೆ ನಮಗೆ ಸಹಾಯಮಾಡಬಲ್ಲವು. ಅವು ಅಹಂವಾದವನ್ನು​—ಅದು ಹಾಗೆ ಹೆಸರಿಸಲ್ಪಟ್ಟಿರಲಿ ಇಲ್ಲದಿರಲಿ​—ಪ್ರತಿರೋಧಿಸಲು ಸಹ ನಮ್ಮನ್ನು ಶಕ್ತಗೊಳಿಸುವವು. ಬೈಬಲ್‌ ಮೂಲತತ್ತ್ವಗಳು ನಿಜವಾಗಿಯೂ ನಿಮಗೆ ಹೇಗೆ ಸಹಾಯಮಾಡಬಲ್ಲವು ಎಂಬುದನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ, ದಯವಿಟ್ಟು ಮುಂದಿನ ಲೇಖನವನ್ನು ಪರಿಗಣಿಸಿರಿ.

[ಪುಟ 4ರಲ್ಲಿರುವ ಚಿತ್ರಗಳು]

ಇಂದು ಅನೇಕ ಜನರು ಇತರರ ಅಗತ್ಯಗಳಿಗೆ ಯಾವುದೇ ಪರಿಗಣನೆಯನ್ನು ತೋರಿಸುವುದಿಲ್ಲ