ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ”

“ನಿನ್ನ ಮನಸ್ಸಾಕ್ಷಿ ಒಪ್ಪುವಂತೆ ನಡೆದುಕೋ” ಎಂಬುದು ಹಲವು ಬಾರಿ ಕೇಳಿಬರುವ ಬುದ್ಧಿವಾದವಾಗಿದೆ. ನಮ್ಮ ಮನಸ್ಸಾಕ್ಷಿಯು ಒಂದು ವಿಶ್ವಾಸಾರ್ಹ ಮಾರ್ಗದರ್ಶಿಯಾಗಿರಲು, ಅದಕ್ಕೆ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸಬೇಕು, ಮತ್ತು ಅದರ ನಿರ್ದೇಶನಕ್ಕೆ ನಾವು ಸೂಕ್ಷ್ಮತೆಯಿಂದ ಸ್ಪಂದಿಸಬೇಕು.

ಬೈಬಲಿನಲ್ಲಿ ದಾಖಲಾಗಿರುವ ಜಕ್ಕಾಯ ಎಂಬ ವ್ಯಕ್ತಿಯ ಅನುಭವವನ್ನು ಪರಿಗಣಿಸಿರಿ. ಯೆರಿಕೋವಿನಲ್ಲಿ ಜೀವಿಸುತ್ತಿದ್ದ ಜಕ್ಕಾಯನು ಸುಂಕದವರ ಮುಖ್ಯಸ್ಥನಾಗಿದ್ದನು ಮತ್ತು ಒಬ್ಬ ಐಶ್ವರ್ಯವಂತ ವ್ಯಕ್ತಿಯಾಗಿದ್ದನು. ತಾನು ಸ್ವತಃ ಒಪ್ಪಿಕೊಂಡಂತೆ ಇತರರ ಹಣವನ್ನು ಸುಲಿಗೆ ಮಾಡುವ ಮೂಲಕ ಅವನು ಸಿರಿಸಂಪತ್ತನ್ನು ಗಳಿಸಿದ್ದನು​—ಇದು ಇತರರಿಗೆ ನಷ್ಟವನ್ನು ಉಂಟುಮಾಡುವ ಅಭ್ಯಾಸವಾಗಿತ್ತು ನಿಜ. ಅವನ ಅನೀತಿಯ ಕೃತ್ಯಗಳ ವಿಷಯದಲ್ಲಿ ಜಕ್ಕಾಯನ ಮನಸ್ಸಾಕ್ಷಿ ಅವನನ್ನು ಚುಚ್ಚಿತೋ? ಅದು ಹಾಗೆ ಮಾಡಿತ್ತಾದರೆ, ಅವನು ಅದನ್ನು ನಿರ್ಲಕ್ಷಿಸಿದ್ದನೆಂಬುದು ವ್ಯಕ್ತ.​—ಲೂಕ 19:1-7.

ಆದರೂ, ಒಂದು ಸನ್ನಿವೇಶವು ಜಕ್ಕಾಯನು ತನ್ನ ರೀತಿನೀತಿಗಳನ್ನು ಮರುಪರಿಶೀಲಿಸುವಂತೆ ಮಾಡಿತು. ಯೇಸು ಯೆರಿಕೋವಿಗೆ ಬಂದನು. ಗಿಡ್ಡನಾಗಿದ್ದ ಜಕ್ಕಾಯನು ಯೇಸುವಿನ ಒಂದು ನಸುನೋಟವನ್ನು ಅಪೇಕ್ಷಿಸಿದನು, ಆದರೆ ಜನಸಂದಣಿಯ ಕಾರಣ ಅವನನ್ನು ನೋಡಸಾಧ್ಯವಾಗಲಿಲ್ಲ. ಆದ್ದರಿಂದ ಅವನು ಮುಂದಕ್ಕೆ ಓಡಿ, ಒಂದು ಉತ್ತಮ ನೋಟಕ್ಕಾಗಿ ಒಂದು ಮರವನ್ನು ಹತ್ತಿದನು. ಜಕ್ಕಾಯನ ತೀವ್ರಾಸಕ್ತಿಯಿಂದ ಪ್ರಭಾವಿತನಾಗಿ, ಯೇಸು ಅವನನ್ನು ಅವನ ಮನೆಯಲ್ಲಿ ಭೇಟಿಯಾಗುವೆನೆಂದು ಹೇಳಿದನು. ತನ್ನ ಗಣ್ಯ ಅತಿಥಿಗೆ ಜಕ್ಕಾಯನು ಸಂತೋಷದಿಂದ ಅತಿಥಿಸತ್ಕಾರವನ್ನು ಮಾಡಿದನು.

ಯೇಸುವಿನೊಂದಿಗೆ ಸಹವಾಸಿಸಿದ ಆ ಸಮಯದಲ್ಲಿ ಜಕ್ಕಾಯನು ನೋಡಿದ ಮತ್ತು ಕೇಳಿದ ವಿಷಯಗಳು ಅವನ ಮನಸ್ಪರ್ಶಿಸಿದವು ಮತ್ತು ಅವನು ತನ್ನ ಮಾರ್ಗಕ್ರಮಗಳನ್ನು ಬದಲಾಯಿಸಿಕೊಳ್ಳುವಂತೆ ಪ್ರೇರಿಸಿದವು. ಅವನು ಪ್ರಕಟಿಸಿದ್ದು: “ಸ್ವಾಮೀ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಎಳಕೊಂಡದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ.”​—ಲೂಕ 19:8.

ಜಕ್ಕಾಯನ ಮನಸ್ಸಾಕ್ಷಿಯು ಸುಶಿಕ್ಷಿತವಾಯಿತು, ಮತ್ತು ಅವನು ಅದಕ್ಕೆ ಕಿವಿಗೊಟ್ಟು ಅದರಂತೆ ಪ್ರತಿಕ್ರಿಯಿಸಿದನು. ಇದರ ಸುಫಲಗಳು ಹೆಚ್ಚು ವ್ಯಾಪಕವಾಗಿದ್ದವು. ಯೇಸು ಜಕ್ಕಾಯನಿಗೆ, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು” ಎಂದು ಹೇಳಿದಾಗ ಅವನಿಗೆ ಹೇಗನಿಸಿರಬೇಕು ಎಂದು ತುಸು ಊಹಿಸಿಕೊಳ್ಳಿ.​—ಲೂಕ 19:9.

ಎಂತಹ ಪ್ರೋತ್ಸಾಹನೀಯ ಮಾದರಿಯಿದು! ನಾವು ಈ ಮುಂಚೆ ಯಾವುದೇ ರೀತಿಯ ಮಾರ್ಗವನ್ನು ಬೆನ್ನಟ್ಟಿರುವುದಾದರೂ, ನಾವು ಬದಲಾಗ ಸಾಧ್ಯವಿದೆ ಎಂಬುದನ್ನು ಇದು ತೋರಿಸುತ್ತದೆ. ಜಕ್ಕಾಯನಂತೆ, ನಾವು ಯೇಸುವಿನ​—ಬೈಬಲಿನಲ್ಲಿ ದಾಖಲಾಗಿರುವ​—ಮಾತುಗಳಿಗೆ ಕಿವಿಗೊಡಸಾಧ್ಯವಿದೆ ಮತ್ತು ಒಳ್ಳೇದರ ಕೆಟ್ಟದ್ದರ ಪ್ರಜ್ಞೆಯನ್ನು ಬೆಳೆಸಿಕೊಳ್ಳಸಾಧ್ಯವಿದೆ. ಆಗ ನಾವು ಅಪೊಸ್ತಲ ಪೇತ್ರನು ಪ್ರೋತ್ಸಾಹಿಸಿದಂತೆ, “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿ” ಇರಸಾಧ್ಯವಿದೆ. ನಾವು ನಮ್ಮ ಶಿಕ್ಷಿತ ಮನಸ್ಸಾಕ್ಷಿಗೆ ಕಿವಿಗೊಟ್ಟು ಒಳ್ಳೇದನ್ನು ಮಾಡಸಾಧ್ಯವಿದೆ.​—1 ಪೇತ್ರ 3:16.