ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಬ್ಬ ಕ್ರೈಸ್ತನು ಧ್ವನಿಗಳನ್ನು ಕೇಳಿಸಿಕೊಳ್ಳುವಲ್ಲಿ, ಅವನು ದೆವ್ವಗಳ ಕಾಟಕ್ಕೆ ತುತ್ತಾಗಿದ್ದಾನೆ ಎಂಬುದನ್ನು ಅದು ಅರ್ಥೈಸುತ್ತದೋ?

ಇಲ್ಲ. ದೆವ್ವಗಳು ಆ ರೀತಿಯಲ್ಲಿ ತಮ್ಮನ್ನು ತೋರ್ಪಡಿಸಿಕೊಳ್ಳುತ್ತವೆ ಎಂದು ವರದಿಸಲ್ಪಟ್ಟಿದೆಯಾದರೂ, ಧ್ವನಿಗಳನ್ನು ಕೇಳಿಸಿಕೊಳ್ಳುವ ಅಥವಾ ಇತರ ವಿವರಿಸಲಾಗದಂಥ ಗೊಂದಲಗೊಳಿಸುವ ಸಂವೇದನೆಗಳನ್ನು ಅನುಭವಿಸುವ ಅನೇಕ ವ್ಯಕ್ತಿಗಳು, ಸರಿಯಾದ ತಪಾಸಣೆಯ ಬಳಿಕ ತಮಗೆ ಒಂದು ವೈದ್ಯಕೀಯ ಸಮಸ್ಯೆಯಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ.

ಪ್ರಥಮ ಶತಮಾನದಲ್ಲಿಯೂ, ದೆವ್ವಗಳ ಕಾಟ ಹಾಗೂ ಶಾರೀರಿಕ ಅನಾರೋಗ್ಯಭರಿತ ಪರಿಸ್ಥಿತಿಗಳು ಕೆಲವೊಮ್ಮೆ ಒಂದೇ ರೀತಿಯ ಪರಿಣಾಮಗಳನ್ನು ಬೀರುತ್ತಿದ್ದವು ಎಂಬುದು ಸುವ್ಯಕ್ತವಾಗಿ ಗ್ರಹಿಸಲ್ಪಟ್ಟಿತ್ತು. ಮತ್ತಾಯ 17:​14-18ರಲ್ಲಿ, ಯೇಸುವಿನಿಂದ ವಾಸಿಮಾಡಲ್ಪಟ್ಟ ಹುಡುಗನೊಬ್ಬನ ಕುರಿತು ನಾವು ಓದುತ್ತೇವೆ. ಆ ಹುಡುಗನಲ್ಲಿ ಮೂರ್ಛಾರೋಗದ ಅನೇಕ ಲಕ್ಷಣಗಳು ಕಂಡುಬರುತ್ತಿದ್ದವಾದರೂ, ವಾಸ್ತವದಲ್ಲಿ ಅವನ ನರಳಾಟಕ್ಕೆ ಮೂಲತಃ ಒಂದು ದೆವ್ವವು ಕಾರಣವಾಗಿತ್ತು. ಆದರೂ, ಇದಕ್ಕೆ ಮುಂಚಿನ ಸಂದರ್ಭದಲ್ಲಿ, ಕಷ್ಟಾನುಭವಿಸುತ್ತಿರುವ ಜನರ ಗುಂಪುಗಳು ವಾಸಿಮಾಡಲ್ಪಡುವುದಕ್ಕಾಗಿ ಯೇಸುವಿನ ಬಳಿಗೆ ಕರೆತರಲ್ಪಟ್ಟಾಗ, ಇವರಲ್ಲಿ ‘ದೆವ್ವಹಿಡಿದವರು ಮತ್ತು ಮೂರ್ಛಾರೋಗಿಗಳು’ ಆಗಿದ್ದ ಕೆಲವರೂ ಸೇರಿದ್ದರು. (ಮತ್ತಾಯ 4:24) ಹೀಗೆ, ಕೆಲವು ಮೂರ್ಛಾರೋಗಿಗಳು ದೆವ್ವಹಿಡಿದವರಾಗಿರಲಿಲ್ಲ ಎಂದು ಗ್ರಹಿಸಲಾಗಿತ್ತು ಎಂಬುದು ಸುವ್ಯಕ್ತ. ಅವರ ಸಮಸ್ಯೆಗಳು ಆರೋಗ್ಯಕ್ಕೆ ಸಂಬಂಧಪಟ್ಟವುಗಳಾಗಿದ್ದವು.

ಅನೇಕವೇಳೆ ಔಷಧಗಳಿಂದ ಗುಣಪಡಿಸಸಾಧ್ಯವಿರುವಂಥ ಒಂದು ರೋಗವಾದ ಒಡಕುಮನ (ಸ್ಕಿಟ್ಸಫ್ರೀನಿಯ) ಎಂಬ ರೋಗದಿಂದ ಕಷ್ಟಾನುಭವಿಸುವವರು ಸಹ, ಅಲೌಕಿಕವಾಗಿ ಕಂಡುಬರಸಾಧ್ಯವಿರುವಂಥ ಧ್ವನಿಗಳನ್ನು ಕೇಳಿಸಿಕೊಳ್ಳುತ್ತಾರೆ ಅಥವಾ ಇತರ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ವರದಿಸಲಾಗಿದೆ. * ಇತರ ಶಾರೀರಿಕ ಅನಾರೋಗ್ಯಗಳು ಸಹ ಮಾನಸಿಕ ಪೇಚಾಟವನ್ನು ಉಂಟುಮಾಡಬಹುದು, ಮತ್ತು ಇದನ್ನು ಕೆಲವರು ದೆವ್ವಹಿಡಿದಿರುವುದರಿಂದ ಹೀಗಾಗಿದೆ ಎಂದು ಅಪಾರ್ಥಮಾಡಿಕೊಳ್ಳಸಾಧ್ಯವಿದೆ. ಆದುದರಿಂದ, ತಾನು ಧ್ವನಿಗಳನ್ನು ಕೇಳಿಸಿಕೊಳ್ಳುತ್ತೇನೆ ಅಥವಾ ಗೊಂದಲಗೊಳಿಸುವ ಇತರ ಸಂವೇದನೆಗಳನ್ನು ಅನುಭವಿಸುತ್ತಿದ್ದೇನೆ ಎಂದು ವರದಿಸುವಂಥ ಒಬ್ಬ ವ್ಯಕ್ತಿಯು ಅದು ದೆವ್ವದ ಕಾಟ ಅಲ್ಲವೇ ಅಲ್ಲವೆಂದು ಹೇಳಬಾರದಾದರೂ, ಅವನು ಏನನ್ನು ಅನುಭವಿಸುತ್ತಿದ್ದಾನೋ ಅದಕ್ಕೆ ಒಂದು ದೈಹಿಕ ವಿವರಣೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ಅವನನ್ನು ಉತ್ತೇಜಿಸುವುದಂತೂ ಖಂಡಿತವಾಗಿಯೂ ಒಳ್ಳೇದಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 5 ಕಾವಲಿನಬುರುಜುವಿನ ಜೊತೆ ಪತ್ರಿಕೆಯಾಗಿರುವ ಎಚ್ಚರ!ದ (ಇಂಗ್ಲಿಷ್‌) 1986, ಸೆಪ್ಟೆಂಬರ್‌ 8ರ ಸಂಚಿಕೆಯಲ್ಲಿರುವ “ಮಾನಸಿಕ ಅಸ್ವಸ್ಥತೆಯ ರಹಸ್ಯವನ್ನು ಬಯಲುಪಡಿಸುವುದು” ಎಂಬ ಲೇಖನವನ್ನು ನೋಡಿರಿ.