ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಕ್ರೈಸ್ತನೊಬ್ಬನು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ದಣಿವನ್ನು ಅನುಭವಿಸುತ್ತಿರುವಲ್ಲಿ ಏನು ಮಾಡಬಹುದು?

ನಮ್ಮ ದಣಿವಿನ ಕಾರಣವನ್ನು ನಾವು ಗುರುತಿಸುವ ಅಗತ್ಯವಿದೆ. ಇದು, ನಮ್ಮ ಹವ್ಯಾಸಗಳ ಮತ್ತು ಪ್ರಾಪಂಚಿಕ ವಸ್ತುಗಳ ಪಟ್ಟಿಯನ್ನು ಮಾಡಿ ಅನಗತ್ಯವಾದ ಭಾರಗಳನ್ನು ತೆಗೆದಿಡಲು ನಮಗೆ ಸಹಾಯಮಾಡುವುದು. ನಮ್ಮ ಸನ್ನಿವೇಶಗಳಿಗನುಸಾರ ನಾವು ವಾಸ್ತವಿಕ ಗುರಿಗಳನ್ನು ಇಡಬಲ್ಲೆವು. ನಮ್ಮ ಆಧ್ಯಾತ್ಮಿಕ ಆರೋಗ್ಯದ ಕಡೆಗೆ ಕಾಳಜಿವಹಿಸುವುದು ಪ್ರಾಮುಖ್ಯ ವಿಷಯವಾಗಿದೆ ಮತ್ತು ಇದರಲ್ಲಿ ಪ್ರಾರ್ಥನೆ ಹಾಗೂ ಧ್ಯಾನ ಒಳಗೂಡಿರಬೇಕು.​—⁠8/15, ಪುಟ 23-6.

ಯೆಹೋವನ ಸಾಕ್ಷಿಗಳು 1,44,000 ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳುತ್ತಾರೆ ಏಕೆ?

ಅಪೊಸ್ತಲ ಯೋಹಾನನು 1,44,000 ಮಂದಿಯ ಕುರಿತು ಕೇಳಿಸಿಕೊಂಡ ಬಳಿಕ, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ”ವನ್ನು ನೋಡಿದನು. (ಓರೆ ಅಕ್ಷರಗಳು ನಮ್ಮವು.) (ಪ್ರಕಟನೆ 7:​4, 9) ಒಂದುವೇಳೆ 1,44,000 ಸಂಖ್ಯೆಯು ಸಾಂಕೇತಿಕವಾಗಿರುತ್ತಿದ್ದಲ್ಲಿ, ಆ ಎರಡು ವಚನಗಳ ನಡುವೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ. ಯಾರು ತನ್ನೊಂದಿಗೆ ಆಳಲಿಕ್ಕಿದ್ದಾರೋ ಅವರ ಕುರಿತು ಯೇಸು ಮಾತಾಡಿದಾಗ ಅವರನ್ನು ‘ಚಿಕ್ಕ ಹಿಂಡು’ ಎಂದು ಕರೆದನು. (ಲೂಕ 12:32)​—⁠9/1, ಪುಟ 30.

ರಕ್ತ ಬಸಿಯದ ಸತ್ತ ಪ್ರಾಣಿಯನ್ನು ಇಸ್ರಾಯೇಲ್ಯನು ಏಕೆ ಒಬ್ಬ ಪರದೇಶಸ್ಥನಿಗೆ ಮಾರಸಾಧ್ಯವಿತ್ತು?

ಯೆಹೂದಿ ಮತಾವಲಂಬಿಗಳಾಗಿರದಿದ್ದ ಪರದೇಶೀಯರೂ ಅನ್ಯರೂ ನಿಯಮದೊಡಂಬಡಿಕೆಯ ಕೆಳಗಿರಲಿಲ್ಲ. ಆದುದರಿಂದ, ಅಂಥ ಪ್ರಾಣಿಗಳನ್ನು ಅವರಿಗೆ ಕೊಡಲು ಅಥವಾ ಮಾರಲು ಇಸ್ರಾಯೇಲ್ಯರು ಅನುಮತಿಸಲ್ಪಟ್ಟಿದ್ದರು. (ಧರ್ಮೋಪದೇಶಕಾಂಡ 14:21) ಆದರೆ, ಒಬ್ಬ ಯೆಹೂದಿ ಮತಾವಲಂಬಿಯು ನಿಯಮದೊಡಂಬಡಿಕೆಗೆ ಬದ್ಧನಾಗಿದ್ದನು ಮತ್ತು ಈ ಕಾರಣ ರಕ್ತ ಬಸಿಯದ ಪ್ರಾಣಿಯ ಮಾಂಸವನ್ನು ಸೇವಿಸುವುದರಿಂದ ನಿಷೇಧಿಸಲ್ಪಟ್ಟಿದ್ದನು. (ಯಾಜಕಕಾಂಡ 17:10)​—⁠9/15, ಪುಟ 26.

ಬಯೊಮಿಮೆಟಿಕ್ಸ್‌ (ಜೀವಾನುಕರಣ ವಿಜ್ಞಾನ) ಎಂದರೇನು, ಮತ್ತು ಇದು ಕ್ರೈಸ್ತರಿಗೆ ಆಸ್ತಕಿಯ ವಿಷಯವಾಗಿದೆ ಏಕೆ?

ಇದು, ನಿಸರ್ಗದಲ್ಲಿ ಕಂಡುಬರುವ ವಿನ್ಯಾಸಗಳನ್ನು ನಕಲುಮಾಡಲು ಪ್ರಯತ್ನಿಸುವ ವಿಜ್ಞಾನ ಕ್ಷೇತ್ರವಾಗಿದೆ. ಉದಾಹರಣೆಗೆ, ರೈಟ್‌ ಸಹೋದರರು ದೊಡ್ಡ ಪಕ್ಷಿಗಳ ಹಾರಾಟವನ್ನು ಅಧ್ಯಯನಮಾಡಿದ ಬಳಿಕ ಒಂದು ವಿಮಾನವನ್ನು ವಿನ್ಯಾಸಿಸಿದರು. ಹೀಗೆ ಬಯೊಮಿಮೆಟಿಕ್ಸ್‌, ಸೃಷ್ಟಿಕರ್ತನನ್ನು ಘನಪಡಿಸುವಂತೆ ಒಬ್ಬ ಕ್ರೈಸ್ತನನ್ನು ಪ್ರಚೋದಿಸಬಲ್ಲವು.​—⁠10/1, ಪುಟ 9.

ಪರದೈಸಕ್ಕೆ ಒಯ್ಯಲ್ಪಟ್ಟವನು ಎಂಬುದಾಗಿ 2 ಕೊರಿಂಥ 12:​2-4ರಲ್ಲಿ ಸೂಚಿಸಲ್ಪಟ್ಟವನು ಯಾರು?

ಈ ವಚನಭಾಗವು, ಯಾವ ವಚನಗಳಲ್ಲಿ ಪೌಲನು ತನ್ನ ಅಪೊಸ್ತಲತನವನ್ನು ಸಮರ್ಥಿಸಿದನೋ ಅವುಗಳ ಅನಂತರವೇ ಕಂಡುಬರುತ್ತದೆ. ಅಷ್ಟುಮಾತ್ರವಲ್ಲ, ಇಂಥ ಒಂದು ಅನುಭವವನ್ನು ಪಡೆದುಕೊಂಡಂತಹ ಬೇರಾವುದೇ ವ್ಯಕ್ತಿಯ ಕುರಿತು ಬೈಬಲ್‌ ಮಾತಾಡುವುದಿಲ್ಲ, ಮತ್ತು ಇದರ ಕುರಿತು ನಮಗೆ ತಿಳಿಸುತ್ತಿರುವುದು ಪೌಲನು ಮಾತ್ರವೇ ಆಗಿರುವುದರಿಂದ ಈ ದರ್ಶನವನ್ನು ಪಡೆದುಕೊಂಡವನು ಪೌಲನೇ ಆಗಿರುವುದು ಸಂಭವನೀಯ.​—⁠10/15, ಪುಟ 8.

ದೇವರಿಂದ ಆಯ್ಕೆಮಾಡಲ್ಪಟ್ಟ ನಾಯಕನಾಗಿ ಸೇವೆಸಲ್ಲಿಸಲು ಯೇಸುವನ್ನು ಅರ್ಹನನ್ನಾಗಿ ಮಾಡಿದ ಅವನ ಕೆಲವು ಗುಣಗಳು ಯಾವುವು?

ಯೇಸು ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು. ಅವನು ಪ್ರಾಮಾಣಿಕನೂ ಒಳ್ಳೆಯ ನಡತೆಯವನೂ ಆಗಿದ್ದನು. ಅವನು ದೇವರಿಗೆ ಸಂಪೂರ್ಣವಾಗಿ ಸಮರ್ಪಿತನಾಗಿದ್ದನು. ಯೇಸುವಿಗೆ ಜನರ ಕುರಿತು ಆಳವಾದ ಚಿಂತನೆಯಿತ್ತು ಮತ್ತು ಕೆಲಸಮಾಡಲು ಇಚ್ಛೆಯುಳ್ಳವನಾಗಿದ್ದನು.​—⁠11/1, ಪುಟ 6-7.

ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ದೆವ್ವಗಳು ಎಲ್ಲಿರುವವು?

ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಅವುಗಳು ಸೈತಾನನೊಂದಿಗೆ ಅಧೋಲೋಕದಲ್ಲಿರುವವು ಎಂಬುದಾಗಿ ನಾವು ತರ್ಕಬದ್ಧವಾಗಿ ತೀರ್ಮಾನಿಸಬಲ್ಲೆವು. (ಪ್ರಕಟನೆ 20:​1-3) ಸರ್ಪನ ತಲೆಯನ್ನು ಜಜ್ಜುವ ವಿಷಯವನ್ನು ಆದಿಕಾಂಡ 3:15 ಮುಂತಿಳಿಸಿತು ಮತ್ತು ಇದರಲ್ಲಿ, ಸೈತಾನನನ್ನು ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಅಧೋಲೋಕದಲ್ಲಿಡುವುದು ಒಳಗೂಡಿದೆ. ಅವನ ಸಂತಾನದಲ್ಲಿ ದುಷ್ಟ ದೂತರು ಅಥವಾ ದೆವ್ವಗಳು ಸೇರಿವೆ. ತಾವು ಪಾತಾಳಕ್ಕೆ ಅಥವಾ ಅಧೋಲೋಕಕ್ಕೆ ಹೋಗುತ್ತೇವೆಂದು ದುರಾತ್ಮಗಳು ತೋರಿಸಿರುವ ಭಯವು ಸೂಚಿಸುವುದೇನೆಂದರೆ, ಅವುಗಳಿಗೆ ಮುಂಬರುವ ಈ ನಿರ್ಬಂಧದ ಕುರಿತಾಗಿ ತಿಳಿದಿದೆ. (ಲೂಕ 8:⁠31)​—⁠11/15, ಪುಟ 30-1.

ಕುಡಿದಿದ್ದಾನೆಂದು ಇತರರು ಗ್ರಹಿಸುವಷ್ಟರ ಮಟ್ಟಿಗೆ ಒಬ್ಬನು ಕುಡಿಯದಿದ್ದರೂ, ಮದ್ಯಪಾನವನ್ನು ಸೇವಿಸುವ ವಿಷಯದಲ್ಲಿ ಅವನು ಜಾಗ್ರತೆವಹಿಸಬೇಕು ಏಕೆ?

ಕೆಲವು ವ್ಯಕ್ತಿಗಳು ಬಹಳಷ್ಟು ಮದ್ಯವನ್ನು ಸೇವಿಸಿದ ಬಳಿಕವೂ ಕುಡಿಕತನದ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ. ಆದರೂ, ಪ್ರಗತಿಪರವಾಗಿ ಒಬ್ಬನು ಮದ್ಯಪಾನದ ಮೇಲೆ ಅವಲಂಬನೆಯನ್ನು ಬೆಳೆಸಿಕೊಳ್ಳಬಹುದು ಮತ್ತು ‘ಮದ್ಯಕ್ಕೆ ಗುಲಾಮನೂ’ ಆಗಬಹುದು. (ತೀತ 2:⁠3) ‘ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಹೃದಯಗಳು ಭಾರವಾಗುವುದರ’ ವಿರುದ್ಧ ಯೇಸು ಎಚ್ಚರಿಕೆಯನ್ನು ನೀಡಿದನು. (ಲೂಕ 21:34, 35) ಕುಡಿಯುವುದು ಒಬ್ಬ ವ್ಯಕ್ತಿಯನ್ನು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಜಡಗಟ್ಟಿಸುವ ಹಾಗೂ ಸೋಮಾರಿಯನ್ನಾಗಿ ಮಾಡುವ ಮುಂಚೆ ಅವನು ಕುಡಿಕತನದ ಮಟ್ಟವನ್ನು ತಲಪಬೇಕೆಂದಿಲ್ಲ.​—⁠12/1, ಪುಟ 19-21.