ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವ ರೀತಿಯ ಶಿಕ್ಷಣ ನಿಮ್ಮ ಜೀವನವನ್ನು ಯಶಸ್ಸುಗೊಳಿಸಬಲ್ಲದು?

ಯಾವ ರೀತಿಯ ಶಿಕ್ಷಣ ನಿಮ್ಮ ಜೀವನವನ್ನು ಯಶಸ್ಸುಗೊಳಿಸಬಲ್ಲದು?

ಯಾವ ರೀತಿಯ ಶಿಕ್ಷಣ ನಿಮ್ಮ ಜೀವನವನ್ನು ಯಶಸ್ಸುಗೊಳಿಸಬಲ್ಲದು?

ನೀರಿನ ಸುಳಿಯಲ್ಲಿ ಸಿಲುಕಿ ಮುಳುಗುತ್ತಿರುವಂತೆ ಅನಿಸುವಷ್ಟರ ಮಟ್ಟಿಗೆ ಎಂದಾದರೂ ನೀವು ಸಮಸ್ಯೆಗಳ ರಾಶಿಯಲ್ಲಿ ಸಿಕ್ಕಿಕೊಂಡದ್ದುಂಟೊ? ಅಂಥ ಸಮಸ್ಯೆಗಳಲ್ಲಿ ಒಂದನ್ನು ಅಥವಾ ಅದಕ್ಕಿಂತ ಹೆಚ್ಚನ್ನು ನಿಭಾಯಿಸುವುದರಲ್ಲಿ ನೀವು ಏನಾದರೂ ತಪ್ಪನ್ನು ಮಾಡಿದರೆ ಅದರಿಂದ ಎಷ್ಟೊಂದು ಸಂಕಷ್ಟವು ಉಂಟಾಗಸಾಧ್ಯವಿದೆ ಎಂಬುದರ ಕುರಿತು ತುಸು ಯೋಚಿಸಿ! ಎಲ್ಲ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸುವ ಮತ್ತು ಪ್ರತಿ ಬಾರಿ ಸರಿಯಾದ ನಿರ್ಣಯಗಳನ್ನು ಮಾಡುವ ಸಾಮರ್ಥ್ಯದೊಂದಿಗೆ ಯಾರೂ ಹುಟ್ಟುವುದಿಲ್ಲ. ಇದರಿಂದಾಗಿಯೇ ಶಿಕ್ಷಣವು ಅತ್ಯಗತ್ಯವಾಗಿದೆ. ಜೀವನದ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ನಿಮ್ಮನ್ನು ಸಿದ್ಧಗೊಳಿಸಬಲ್ಲ ಶಿಕ್ಷಣವು ನಿಮಗೆ ಎಲ್ಲಿ ದೊರಕಸಾಧ್ಯವಿದೆ?

ಆಬಾಲವೃದ್ಧರೆನ್ನದೆ ಅನೇಕರು ಶಾಲಾ ಶಿಕ್ಷಣಕ್ಕೆ ಅತಿಯಾದ ಪ್ರಧಾನ್ಯತೆಯನ್ನು ನೀಡುತ್ತಾರೆ. “ಕಾಲೇಜು ಡಿಗ್ರಿ ಇಲ್ಲದಿದ್ದರೆ ಒಂದು [ಸೂಕ್ತ] ಉದ್ಯೋಗವನ್ನು ಎಂದಿಗೂ ಕಂಡುಕೊಳ್ಳಸಾಧ್ಯವಿಲ್ಲ ಎಂದು ನಾವು ಸಂಪೂರ್ಣವಾಗಿ ನಂಬುತ್ತೇವೆ” ಎಂಬುದಾಗಿಯೂ ಕೆಲವು ಪರಿಣತರು ಹೇಳುತ್ತಾರೆ. ಹಾಗಿದ್ದರೂ, ಬರೀ ಭೌತಿಕ ಸಾಧನೆಗಳಿಂದ ತೃಪ್ತಿಪಡಿಸಲಾರದ ಅನೇಕ ಮಾನವ ಅಗತ್ಯಗಳು ಸಹ ಇವೆ. ಉದಾಹರಣೆಗೆ, ನೀವೊಬ್ಬ ಉತ್ತಮವಾದ ಹೆತ್ತವರಾಗಲು, ಸಂಗಾತಿಯಾಗಲು ಇಲ್ಲವೆ ಸ್ನೇಹಿತನಾಗಲು ಉನ್ನತ ವಿದ್ಯಾಭ್ಯಾಸವು ನಿಮಗೆ ಸಹಾಯಮಾಡುತ್ತದೊ? ವಾಸ್ತವದಲ್ಲಿ, ನಿಷ್ಣಾತ ಸಾಧನೆಗಳಿಗಾಗಿ ಗೌರವಿಸಲ್ಪಡುವ ಜನರು ಅಹಿತಕರವಾದ ಗುಣಗಳನ್ನು ಬೆಳೆಸಿಕೊಳ್ಳಬಹುದು, ತಮ್ಮ ಕುಟುಂಬ ಜೀವನದಲ್ಲಿ ಅಸಫಲರಾಗಬಹುದು, ಇಲ್ಲವೆ ಆತ್ಮಹತ್ಯೆಯನ್ನು ಸಹ ಮಾಡಿಕೊಳ್ಳಬಹುದು.

ಕೆಲವರು ಮಾರ್ಗದರ್ಶನಕ್ಕಾಗಿ ಧರ್ಮದ ಕಡೆಗೆ ನೋಡುತ್ತಾರೆ. ಧರ್ಮವು ಶಿಕ್ಷಣದ ಮೂಲವೆಂದು ಭಾವಿಸುತ್ತಾರೆ. ಆದರೆ, ಜೀವಿತದ ಕಷ್ಟಸಂಕಟಗಳನ್ನು ಎದುರಿಸಲು ಬೇಕಾದ ಪ್ರಾಯೋಗಿಕ ಸಹಾಯವು ಅಲ್ಲಿ ದೊರಕದಿದ್ದ ಕಾರಣ ನಿರಾಶರಾಗುತ್ತಾರೆ. ಇದರ ನಿಜತ್ವವನ್ನು ಉದಾಹರಿಸುತ್ತಾ ಮೆಕ್ಸಿಕೊದ ಏಮೀಲ್ಯಾ * ಹೇಳುವುದು: “ನಾನೂ ನನ್ನ ಗಂಡನೂ ಇನ್ನು ಮುಂದೆ ಒಟ್ಟಾಗಿ ಜೀವಿಸುವುದು ಅಸಾಧ್ಯ ಎಂದು 15 ವರುಷಗಳ ಹಿಂದೆ ನನಗನಿಸಿತ್ತು. ನಾವು ಯಾವಾಗಲೂ ಜಗಳವಾಡುತ್ತಿದ್ದೆವು. ಅವರ ಕುಡಿತವನ್ನು ನಿಲ್ಲಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆಗಾಗ ನಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ನನ್ನ ಗಂಡನನ್ನು ಹುಡುಕುತ್ತಾ ನಾನು ಹೋಗಬೇಕಿತ್ತು. ಭಾವನಾತ್ಮಕವಾಗಿ ನಾನು ಬಳಲಿಹೋಗಿದ್ದೆ. ನನ್ನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆ ನನಗೆ ಸಹಾಯಮಾಡಬಹುದಾದ ಏನಾದರೂ ದೊರಕಬಹುದು ಎಂದು ನೆನಸಿ ನಾನು ಅನೇಕಬಾರಿ ಚರ್ಚಿಗೆ ಹೋದೆ. ಅಲ್ಲಿ ಅಪರೂಪಕ್ಕೆ ಬೈಬಲನ್ನು ಉಪಯೋಗಿಸಲಾಗುತ್ತಿತ್ತಾದರೂ, ನನ್ನ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಮಾಡುವ ನೇರ ಸಲಹೆಯನ್ನು ನಾನೆಂದೂ ಪಡೆದುಕೊಳ್ಳಲಿಲ್ಲ; ಮಾತ್ರವಲ್ಲದೆ, ನಾನು ಏನು ಮಾಡಬೇಕೆಂದು ತಿಳಿಸಲು ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಚರ್ಚಿನಲ್ಲಿ ಸ್ವಲ್ಪ ಸಮಯ ಕುಳಿತುಕೊಂಡು, ಕೆಲವು ಪ್ರಾರ್ಥನೆಗಳನ್ನು ಪುನರುಚ್ಚರಿಸುವುದರಿಂದ ನನಗೆ ಯಾವುದೇ ಸಂತೃಪ್ತಿ ದೊರಕಲಿಲ್ಲ.” ಇನ್ನು ಕೆಲವರು, ತಮ್ಮ ಆಧ್ಯಾತ್ಮಿಕ ಮುಖಂಡರೇ ಒಂದು ಆದರ್ಶಪ್ರಾಯ ಜೀವನವನ್ನು ನಡಿಸುತ್ತಿಲ್ಲ ಎಂಬುದನ್ನು ನೋಡುವಾಗ ಆಶಾಭಂಗಗೊಳ್ಳುತ್ತಾರೆ. ಇದರ ಪರಿಣಾಮವಾಗಿ, ಧರ್ಮವು ಯಶಸ್ವಿಕರ ಜೀವನವನ್ನು ನಡೆಸಲು ಬೇಕಾಗಿರುವ ತರಬೇತಿ ಅಥವಾ ಶಿಕ್ಷಣದ ಮೂಲವಾಗಿದೆ ಎಂಬ ಭರವಸೆಯನ್ನು ಅನೇಕರು ಕಳೆದುಕೊಂಡಿದ್ದಾರೆ.

ಆದುದರಿಂದ ನೀವು ಸ್ವತಃ ಹೀಗೆ ಕೇಳಿಕೊಳ್ಳಬಹುದು, ‘ನನ್ನ ಜೀವನವನ್ನು ಯಶಸ್ವಿಗೊಳಿಸುವ ಸಲುವಾಗಿ ನಾನು ಯಾವ ರೀತಿಯ ಶಿಕ್ಷಣವನ್ನು ಪಡೆದುಕೊಳ್ಳಬೇಕು?’ ಈ ಪ್ರಾಮುಖ್ಯ ಪ್ರಶ್ನೆಗೆ ಸತ್ಯ ಕ್ರೈಸ್ತತ್ವವು ಉತ್ತರವನ್ನು ನೀಡುತ್ತದೊ? ಮುಂದಿನ ಲೇಖನದಲ್ಲಿ ಇದನ್ನು ಚರ್ಚಿಸಲಾಗುವುದು.

[ಪಾದಟಿಪ್ಪಣಿ]

^ ಪ್ಯಾರ. 4 ಹೆಸರನ್ನು ಬದಲಾಯಿಸಲಾಗಿದೆ.