ಭೂಮಿಯ ವ್ಯವಹಾರಗಳ ಮೇಲೆ ಈಗಲೂ ದೇವರ ನಿಯಂತ್ರಣವಿದೆಯೊ?
ಒಂದು ಆಮಂತ್ರಣ . . .
ಭೂಮಿಯ ವ್ಯವಹಾರಗಳ ಮೇಲೆ ಈಗಲೂ ದೇವರ ನಿಯಂತ್ರಣವಿದೆಯೊ?
ನೈಸರ್ಗಿಕ ವಿಪತ್ತುಗಳು, ಮಾರಕ ರೋಗಗಳು, ಉನ್ನತ ಹುದ್ದೆಗಳಲ್ಲಿ ಭ್ರಷ್ಟಾಚಾರ, ಉಗ್ರವಾದಿಗಳ ದಾಳಿಗಳು, ಯುದ್ಧಗಳು, ಅಪರಾಧ—ಇಂಥ ಸುದ್ದಿಗಳನ್ನು ಕೇಳದೆ ಒಂದು ದಿನವೂ ಕಳೆಯುವುದಿಲ್ಲ. ನೀವು ಇಂಥ ಘಟನೆಗಳಿಂದ ಬಾಧಿತರಾಗಿರಲಿ ಇಲ್ಲದಿರಲಿ, ಲೋಕವು ಎತ್ತ ಸಾಗುತ್ತಿದೆ ಮತ್ತು ಪರಿಸ್ಥಿತಿಯು ಎಂದಾದರೂ ಉತ್ತಮಗೊಳ್ಳುವುದೊ ಎಂಬುದರ ಬಗ್ಗೆ ನೀವು ಖಂಡಿತವಾಗಿಯೂ ಚಿಂತಿಸುವಿರಿ.
ಇಂಥ ಚಿಂತೆಗಳನ್ನು ಸಂಬೋಧಿಸಲು, ಲೋಕದಾದ್ಯಂತ 200ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, “ಭೂಮಿಯ ವ್ಯವಹಾರಗಳ ಮೇಲೆ ಈಗಲೂ ದೇವರ ನಿಯಂತ್ರಣವಿದೆಯೊ?” ಎಂಬ ಶೀರ್ಷಿಕೆಯುಳ್ಳ ಒಂದು ಸಮಯೋಚಿತ ಭಾಷಣವನ್ನು ಸಾದರಪಡಿಸಲಿದ್ದಾರೆ. ಆ ಭಾಷಣದಲ್ಲಿ, ದೇವರು ತನ್ನ ವಿಫಲವಾಗದ ವಾಕ್ಯವಾದ ಬೈಬಲಿನಲ್ಲಿ ಕೆಳಕಂಡ ಪ್ರಾಮುಖ್ಯ ಪ್ರಶ್ನೆಗಳ ಕುರಿತಾಗಿ ಏನು ಹೇಳಿದ್ದಾನೆ ಮತ್ತು ಏನನ್ನು ವಾಗ್ದಾನಿಸಿದ್ದಾನೆಂಬುದನ್ನು ಪರಿಗಣಿಸಲಾಗುವುದು:
ದೇವರಿಗೆ ಮಾನವನ ವ್ಯವಹಾರಗಳಲ್ಲಿ ಆಸಕ್ತಿ ಇದೆಯೊ?
ಮಾನವಕುಲದ ಬಗ್ಗೆ ಆತನಿಗೆ ಹೇಗನಿಸುತ್ತದೆ?
ನಿಮ್ಮ ಕ್ಷೇಮದ ಬಗ್ಗೆ ಆತನಿಗೆ ಚಿಂತೆಯಿದೆಯೊ?
ಹೆಚ್ಚಿನ ಸ್ಥಳಗಳಲ್ಲಿ, ಈ ಭಾಷಣವನ್ನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ, 2006, ಏಪ್ರಿಲ್ 30ರ, ಭಾನುವಾರದಂದು ನೀಡಲಾಗುವುದು. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸರಿಯಾದ ಸಮಯ ಹಾಗೂ ವಿಳಾಸದ ಕುರಿತು ತಿಳಿಸಲು ಸಂತೋಷಪಡುವರು.
ಭೂಮಿಯ ವ್ಯವಹಾರಗಳ ಮೇಲೆ ಈಗಲೂ ದೇವರ ನಿಯಂತ್ರಣವಿದೆಯೊ? ಎಂಬ ಪ್ರಶ್ನೆಗೆ ತೃಪ್ತಿದಾಯಕ ಉತ್ತರವನ್ನು ನೀಡುವ ಈ ಉತ್ತೇಜನದಾಯಕ ಮತ್ತು ಉಚಿತ ಬೈಬಲಾಧಾರಿತ ಭಾಷಣಕ್ಕೆ ಹಾಜರಾಗುವಂತೆ ನಿಮಗೆ ಹಾರ್ದಿಕ ಆಮಂತ್ರಣವನ್ನು ಕೊಡುತ್ತೇವೆ.