ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:
• ನಮ್ಮ ಕ್ರೈಸ್ತ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಪ್ರಾಮುಖ್ಯವೇಕೆ?
ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ನಾವು ಪ್ರೀತಿಯಿಂದ ಯೆಹೋವನ ಪರಮಾಧಿಕಾರದ ಪರವಾಗಿ ನಿಲುವು ತೆಗೆದುಕೊಳ್ಳುತ್ತೇವೆ ಮತ್ತು ಸೈತಾನನು ಸುಳ್ಳುಗಾರನೆಂದು ಸಾಬೀತುಪಡಿಸುತ್ತೇವೆ. ಯೆಹೋವನು ನಮ್ಮ ಸಮಗ್ರತೆಯ ಆಧಾರದ ಮೇಲೆ ತೀರ್ಪು ಮಾಡುವುದರಿಂದ ಅದು ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಗೆ ಅತ್ಯಗತ್ಯ.—12/15, ಪುಟಗಳು 4-6.
• ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಸೂಚಿಸುವ ಕೆಲವು ಬಿರುದುಗಳು ಯಾವುವು?
ಒಬ್ಬನೇ ಮಗ. ವಾಕ್ಯ. ಆಮೆನ್. ಹೊಸ ಒಡಂಬಡಿಕೆಗೆ ಮಧ್ಯಸ್ಥ. ಮಹಾ ಯಾಜಕ. ವಾಗ್ದತ್ತ ಸಂತಾನ.—12/15, ಪುಟ 15.
• ಮಳೆಬರುವಂತೆ ಪ್ರಾರ್ಥಿಸುತ್ತಿರುವಾಗ ಎಲೀಯನು ತನ್ನ ಸೇವಕನನ್ನು ಸಮುದ್ರದ ಕಡೆಗೆ ನೋಡುವಂತೆ ಹೇಳಿದ ವಿಷಯ ಗಮನಾರ್ಹವಾದದ್ದೇಕೆ? (1 ಅರ. 18:43-45)
ಜಲಚಕ್ರದ ಕುರಿತು ತನಗೆ ತಿಳಿದಿತ್ತು ಎಂಬುದನ್ನು ಎಲೀಯನು ತೋರಿಸಿಕೊಟ್ಟನು. ಏಕೆಂದರೆ ಮೋಡಗಳು ಸಮುದ್ರದ ಮೇಲ್ಭಾಗದಲ್ಲಿ ಉಂಟಾಗಿ ನಂತರ ನೆಲಭಾಗದ ಕಡೆಗೆ ತೇಲಿ ಬಂದು ಮಳೆಯನ್ನು ಸುರಿಸುತ್ತವೆ.—4/1, ಪುಟಗಳು 25-26.
• ಶುಶ್ರೂಷೆಯಲ್ಲಿ ನಮ್ಮ ಆನಂದವನ್ನು ಹೇಗೆ ಹೆಚ್ಚಿಸಬಲ್ಲೆವು?
ಇತರರಿಗೆ ನಾವೆಷ್ಟು ಸಹಾಯ ಮಾಡಸಾಧ್ಯವಿದೆ ಎಂಬುದನ್ನು ಯೋಚಿಸುತ್ತಾ ನಮ್ಮ ಹೃದಯವನ್ನು ಸಿದ್ಧಪಡಿಸಬೇಕು. ಬೈಬಲ್ ಅಧ್ಯಯನ ಆರಂಭಿಸುವ ಉದ್ದೇಶದೊಂದಿಗೆ ನಾವು ಸಾರಬೇಕು. ಜನರು ನಿರಾಸಕ್ತರಾಗಿ ಕಂಡುಬರುವುದಾದರೆ ನಮ್ಮ ನಿರೂಪಣೆಯನ್ನು ಬದಲಾಯಿಸುತ್ತಾ, ಅವರಿಗೆ ಆಸಕ್ತಿಯಿರುವ ವಿಷಯಗಳ ಕುರಿತು ಮಾತಾಡಬೇಕು.—1/15, ಪುಟಗಳು 8-10.
• ಬೈಬಲ್ ಬೋಧನೆಗಳು, ಒಬ್ಬ ಕ್ರೈಸ್ತನು ಶವಸಂಸ್ಕಾರ ನಡೆಸುವ ರೀತಿ ಮತ್ತು ಅದರ ಕುರಿತಾದ ಅವನ ಮನೋಭಾವವನ್ನು ಹೇಗೆ ಪ್ರಭಾವಿಸಬೇಕು?
ಪ್ರಿಯ ವ್ಯಕ್ತಿಯು ಮೃತಪಟ್ಟಾಗ ಕ್ರೈಸ್ತನು ದುಃಖಿಸುತ್ತಾನಾದರೂ ಸತ್ತವರಿಗೆ ಯಾವುದೇ ಪ್ರಜ್ಞೆಯಿಲ್ಲ ಎಂಬುದನ್ನು ಅವನು ಅರಿತಿರುತ್ತಾನೆ. ಅವಿಶ್ವಾಸಿ ವ್ಯಕ್ತಿಗಳು ಅವನನ್ನು ಟೀಕಿಸುವುದಾದರೂ ಸತ್ತವರು ಜೀವಿತರ ಮೇಲೆ ಪರಿಣಾಮಬೀರುತ್ತಾರೆ ಎಂಬ ನಂಬಿಕೆಗೆ ಸಂಬಂಧಪಟ್ಟ ಎಲ್ಲಾ ಆಚಾರಗಳಿಂದ ಅವನು ದೂರವಿರುತ್ತಾನೆ. ಸಮಸ್ಯೆ ಉಂಟಾಗದಿರಲು ಕೆಲವು ಕ್ರೈಸ್ತರು ತಮ್ಮ ಶವಸಂಸ್ಕಾರ ಹೇಗೆ ನಡೆಯಬೇಕೆಂಬ ವಿವರಗಳನ್ನು ಬರೆದಿಡುತ್ತಾರೆ.—2/15, ಪುಟಗಳು 29-31.
• “ಯಾಷಾರ್ ಗ್ರಂಥ” ಮತ್ತು ‘ಯೆಹೋವವಿಜಯ ಗ್ರಂಥ’—ಇವು ಬೈಬಲಿನ ಕಳೆದುಹೋದ ಪುಸ್ತಕಗಳೋ? (ಯೆಹೋ. 10:13; ಅರ. 21:14)
ಅಲ್ಲ. ಇವು ಬೈಬಲ್ ಸಮಯಗಳಲ್ಲಿದ್ದ ದೇವಪ್ರೇರಿತವಲ್ಲದ ದಾಖಲೆಗಳಾಗಿದ್ದವು ಎಂದು ಕಾಣುತ್ತದೆ ಮತ್ತು ಬೈಬಲ್ ಬರಹಗಾರರು ಇವುಗಳನ್ನು ಉಲ್ಲೇಖಿಸಿದ್ದರು.—3/15, ಪುಟ 32.