“ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು!”
“ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು!”
“ಇವುಗಳೆಲ್ಲವೂ ಹೀಗೆ ಲಯವಾಗಿ ಹೋಗುವುದರಿಂದ ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು!” —2 ಪೇತ್ರ 3:11.
1. ಪೇತ್ರನ ಎರಡನೇ ಪತ್ರವು ಅವನ ದಿನಗಳ ಕ್ರೈಸ್ತರಿಗೆ ಸಮಯೋಚಿತ ಬುದ್ಧಿವಾದವಾಗಿತ್ತು ಏಕೆ?
ಅಪೊಸ್ತಲ ಪೇತ್ರನು ತನ್ನ ಎರಡನೆಯ ಪತ್ರವನ್ನು ಬರೆದಾಗ ಕ್ರೈಸ್ತ ಸಭೆಯು ಆವಾಗಲೇ ಬಹಳ ಹಿಂಸೆಯನ್ನು ಅನುಭವಿಸಿತ್ತು. ಆದರೆ ಹಿಂಸೆಯು ಸಭೆಯ ಹುರುಪನ್ನು ಕುಂದಿಸಿದ್ದೂ ಇಲ್ಲ ಅಥವಾ ಅದರ ವೃದ್ಧಿಯನ್ನು ನಿಧಾನಿಸಿದ್ದೂ ಇಲ್ಲ. ಆದುದರಿಂದ ಪಿಶಾಚನು ಇನ್ನೊಂದು ಕುತಂತ್ರವನ್ನು ಬಳಸಿದನು. ಹಿಂದೆ ಅನೇಕಾವರ್ತಿ ಯಶಸ್ವಿಕರವಾಗಿ ಬಳಸಲಾಗಿದ್ದ ತಂತ್ರವದು. ಪೇತ್ರನು ತಿಳಿಸಿದ ಪ್ರಕಾರ, “ಕಣ್ಣುಗಳು ವ್ಯಭಿಚಾರದಿಂದ ತುಂಬಿದ್ದು” “ದುರಾಶೆಯಲ್ಲಿ ತರಬೇತುಹೊಂದಿದ ಹೃದಯವನ್ನು” ಹೊಂದಿದ್ದ ಸುಳ್ಳು ಬೋಧಕರ ಮೂಲಕ ಸೈತಾನನು ದೇವಜನರನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ್ದನು. (2 ಪೇತ್ರ 2:1-3, 14; ಯೂದ 4) ಆದುದರಿಂದ ಪೇತ್ರನ ಎರಡನೆಯ ಪತ್ರವು ದೇವರಿಗೆ ನಂಬಿಗಸ್ತರಾಗಿರುವುದನ್ನು ಉತ್ತೇಜಿಸುವ ಹೃತ್ಪೂರ್ವಕ ಬುದ್ಧಿವಾದವಾಗಿದೆ.
2. ಎರಡನೆಯ ಪೇತ್ರ 3ನೇ ಅಧ್ಯಾಯವು ಯಾವ ವಿಷಯದ ಮೇಲೆ ಕೇಂದ್ರಿತವಾಗಿದೆ? ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
2 ಪೇತ್ರನು ಬರೆದದ್ದು: “ನಾನು ಈ ಗುಡಾರದಲ್ಲಿರುವ ವರೆಗೆ ಜ್ಞಾಪಕಹುಟ್ಟಿಸುವ ಮೂಲಕ ನಿಮಗೆ ಪ್ರಚೋದನೆಯನ್ನು ನೀಡುವುದನ್ನು ಯುಕ್ತವೆಂದೆಣಿಸುತ್ತೇನೆ. ಏಕೆಂದರೆ . . . ನನ್ನ ಗುಡಾರವು ತೆಗೆದುಹಾಕಲ್ಪಡುವ ಸಮಯವು ಬೇಗನೆ ಬರಲಿಕ್ಕಿದೆ ಎಂಬುದು ನನಗೆ ತಿಳಿದಿದೆ. ಆದುದರಿಂದ ನಾನು ಹೋದ ಬಳಿಕ ನೀವು ಈ ವಿಷಯಗಳನ್ನು ಯಾವಾಗಲೂ ನೆನಪಿಸಿಕೊಳ್ಳಲು ಸಾಧ್ಯವಾಗುವಂತೆ ಪ್ರತಿ ಸಲವೂ ನನ್ನಿಂದಾದಷ್ಟು ಮಟ್ಟಿಗೆ ಪ್ರಯಾಸಪಡುವೆನು.” (2 ಪೇತ್ರ 1:13-15) ಹೌದು, ತನ್ನ ಮರಣವು ಸಮೀಪವಾಗಿತ್ತೆಂದು ಪೇತ್ರನಿಗೆ ತಿಳಿದಿತ್ತು. ಆದರೆ ತನ್ನ ಸಮಯೋಚಿತ ಮರುಜ್ಞಾಪನಗಳು ನೆನಪಿಸಲ್ಪಡಬೇಕೆಂದು ಅವನು ಬಯಸಿದನು. ಅಂತೆಯೇ ಅವು ನಿಶ್ಚಯವಾಗಿ ಬೈಬಲಿನ ಭಾಗವಾಗಿ ಪರಿಣಮಿಸಿವೆ ಹಾಗೂ ಇಂದು ನಾವೆಲ್ಲರೂ ಅವನ್ನು ಓದಲು ಶಕ್ತರಾಗಿದ್ದೇವೆ. ನಮಗೆ ವಿಶೇಷ ಆಸಕ್ತಿಯದ್ದಾಗಿರುವುದು ಪೇತ್ರನ ಎರಡನೆಯ ಪತ್ರದ 3ನೇ ಅಧ್ಯಾಯವೇ. ಯಾಕಂದರೆ ಅದು ಸದ್ಯದ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳ” ಮೇಲೆ ಹಾಗೂ ಸಾಂಕೇತಿಕ ಆಕಾಶ ಮತ್ತು ಭೂಮಿಯ ನಾಶನದ ಮೇಲೆ ಕೇಂದ್ರಿತವಾಗಿದೆ. (2 ಪೇತ್ರ 3:3, 7, 10) ಪೇತ್ರನು ನಮಗೆ ಅಲ್ಲಿ ಯಾವ ಸಲಹೆಯನ್ನು ನೀಡುತ್ತಾನೆ? ಅವನ ಸಲಹೆಸೂಚನೆಯನ್ನು ಅನ್ವಯಿಸಿಕೊಳ್ಳುವುದು ಯೆಹೋವನ ಮೆಚ್ಚಿಕೆಯನ್ನು ಗಳಿಸಲು ನಮಗೆ ಹೇಗೆ ಸಹಾಯಕಾರಿ?
3, 4. (ಎ) ಪೇತ್ರನು ಯಾವ ಹುರಿದುಂಬಿಸುವಿಕೆಯನ್ನು ಕೊಟ್ಟನು? ಯಾವ ಎಚ್ಚರಿಕೆಯನ್ನೂ ನೀಡಿದನು? (ಬಿ) ಯಾವ ಮೂರು ಅಂಶಗಳನ್ನು ನಾವು ಪರಿಗಣಿಸುವೆವು?
2 ಪೇತ್ರ 3:11, 12) ಇಲ್ಲಿ ಪೇತ್ರನು ಪ್ರಶ್ನೆಯನ್ನು ಹಾಕುತ್ತಿಲ್ಲ ಬದಲಾಗಿ ಒಂದು ಉತ್ತೇಜಕ ಹಾಗೂ ಹುರಿದುಂಬಿಸುವ ಹೇಳಿಕೆಯನ್ನು ಕೊಡುತ್ತಿದ್ದಾನೆ ಎಂಬುದು ಸ್ಪಷ್ಟ. ಯೆಹೋವನ ಚಿತ್ತವನ್ನು ಮಾಡುವವರು ಹಾಗೂ ಆತನಿಗೆ ಮೆಚ್ಚಿಕೆಯಾದ ಗುಣಗಳನ್ನು ತೋರಿಸುವವರು ಮಾತ್ರವೇ ಬರಲಿರುವ “ಮುಯ್ಯಿತೀರಿಸುವ ದಿನ”ವನ್ನು ಪಾರಾಗಿ ಉಳಿಯುವರೆಂದು ಪೇತ್ರನಿಗೆ ತಿಳಿದಿತ್ತು. (ಯೆಶಾ. 61:2) ಆದಕಾರಣ ಅಪೊಸ್ತಲನು ಕೂಡಿಸಿದ್ದು: “ಆದುದರಿಂದ ಪ್ರಿಯರೇ, ಈ ವಿಷಯಗಳನ್ನು ನೀವು ಮುಂದಾಗಿಯೇ ತಿಳಿದುಕೊಂಡಿರುವುದರಿಂದ ನಿಯಮವನ್ನು ಉಲ್ಲಂಘಿಸುವಂಥ ಜನರ ತಪ್ಪಿನಿಂದ ನೀವು ಅವರೊಂದಿಗೆ [ಸುಳ್ಳು ಬೋಧಕರೊಂದಿಗೆ] ನಡೆಸಲ್ಪಟ್ಟು ನಿಮ್ಮ ಸ್ಥಿರತೆಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ.”—2 ಪೇತ್ರ 3:17.
3 ಸೈತಾನನ ಲೋಕವು ಲಯವಾಗುವುದನ್ನು ತಿಳಿಸಿದ ಬಳಿಕ ಪೇತ್ರನು ಹೇಳಿದ್ದು: “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು . . . ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು!” (4 ಪೇತ್ರನು ‘ವಿಷಯಗಳನ್ನು ಮುಂದಾಗಿಯೇ ತಿಳಿದುಕೊಂಡಿರುವವರ’ ಸಂಗಡ ಇದ್ದುದರಿಂದ ಕಡೇ ದಿವಸಗಳಲ್ಲಿ ಕ್ರೈಸ್ತರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ವಿಶೇಷ ಎಚ್ಚರಿಕೆಯಿಂದಿರುವುದು ಅತ್ಯಾವಶ್ಯಕ ಎಂಬುದು ಅವನಿಗೆ ತಿಳಿದಿತ್ತು. ಅದರ ಕಾರಣವನ್ನು ತದನಂತರ ಅಪೊಸ್ತಲ ಯೋಹಾನನು ಸ್ಪಷ್ಟವಾಗಿ ವಿವರಿಸಿದನು. ಸೈತಾನನು ಸ್ವರ್ಗದಿಂದ ದೊಬ್ಬಲ್ಪಡುವುದನ್ನೂ “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾಗಿ ಸಾಕ್ಷಿಹೇಳುವ ಕೆಲಸವನ್ನು ಮಾಡುವವರ ಮೇಲೆ” ಸೈತಾನನ ‘ಮಹಾ ಕೋಪವನ್ನೂ’ ಯೋಹಾನನು ಮುಂದಾಗಿ ನೋಡಿದನು. (ಪ್ರಕ. 12:9, 12, 17) ದೇವರ ನಿಷ್ಠಾವಂತ ಅಭಿಷಿಕ್ತ ಸೇವಕರು ಮತ್ತು ಅವರ ಸಂಗಡಿಗರಾದ ನಂಬಿಗಸ್ತ “ಬೇರೆ ಕುರಿಗಳೂ” ಅದನ್ನು ಜಯಶಾಲಿಗಳಾಗಿ ಪಾರಾಗುವರು. (ಯೋಹಾ. 10:16) ಆದರೆ ವೈಯಕ್ತಿಕವಾಗಿ ನಮ್ಮ ಕುರಿತೇನು? ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವೆವೊ? ನಾವು (1) ದೇವರು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಲು (2) ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಕಳಂಕವಿಲ್ಲದವರು, ನಿರ್ದೋಷಿಗಳು ಆಗಿ ಉಳಿಯಲು (3) ನಂಬಿಕೆಯ ಪರೀಕ್ಷೆಗಳಲ್ಲಿ ಯೋಗ್ಯ ದೃಷ್ಟಿಕೋನವನ್ನು ಇಟ್ಟುಕೊಳ್ಳಲು ಶ್ರಮಿಸಿದಲ್ಲಿ ಸಮಗ್ರತೆ ಕಾಪಾಡಿಕೊಳ್ಳಲು ಸಹಾಯ ಸಿಗುವುದು. ಈ ಅಂಶಗಳನ್ನು ನಾವೀಗ ಪರಿಗಣಿಸೋಣ.
ದೇವರು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಿ
5, 6. ಯಾವ ಗುಣಗಳನ್ನು ಬೆಳೆಸಿಕೊಳ್ಳಲು ನಾವು ಶ್ರಮಿಸಬೇಕು? ಇದಕ್ಕೆ “ಶ್ರದ್ಧಾಪೂರ್ವಕ ಪ್ರಯತ್ನ” ಅಗತ್ಯವೇಕೆ?
5 ತನ್ನ ಎರಡನೆಯ ಪತ್ರದ ಆರಂಭದಲ್ಲಿ ಪೇತ್ರನು ಬರೆದದ್ದು: “ಇದಕ್ಕೆ ಪ್ರತಿಕ್ರಿಯಿಸುತ್ತಾ ನೀವು ಎಲ್ಲ ಶ್ರದ್ಧಾಪೂರ್ವಕ ಪ್ರಯತ್ನದಿಂದ ನಿಮ್ಮ ನಂಬಿಕೆಗೆ ಸದ್ಗುಣವನ್ನೂ ನಿಮ್ಮ ಸದ್ಗುಣಕ್ಕೆ ಜ್ಞಾನವನ್ನೂ ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನೂ ನಿಮ್ಮ ಸ್ವನಿಯಂತ್ರಣಕ್ಕೆ ತಾಳ್ಮೆಯನ್ನೂ ನಿಮ್ಮ ತಾಳ್ಮೆಗೆ ದೇವಭಕ್ತಿಯನ್ನೂ ನಿಮ್ಮ ದೇವಭಕ್ತಿಗೆ ಸಹೋದರ ಮಮತೆಯನ್ನೂ ನಿಮ್ಮ ಸಹೋದರ ಮಮತೆಗೆ ಪ್ರೀತಿಯನ್ನೂ ಕೂಡಿಸಿರಿ. ಈ ವಿಷಯಗಳು ನಿಮ್ಮಲ್ಲಿದ್ದು ಅತ್ಯಧಿಕವಾಗುವಲ್ಲಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಸಂಬಂಧದಲ್ಲಿ ನೀವು ನಿಷ್ಕ್ರಿಯರು ಅಥವಾ ನಿಷ್ಫಲರು ಆಗುವುದರಿಂದ ಅವು ನಿಮ್ಮನ್ನು ತಡೆಯುವವು.”—2 ಪೇತ್ರ 1:5-8.
6 ದೇವರು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುವ ಚಟುವಟಿಕೆಗಳಲ್ಲಿ ಭಾಗವಹಿಸಲು “ಶ್ರದ್ಧಾಪೂರ್ವಕ ಪ್ರಯತ್ನ” ಅಗತ್ಯ ನಿಜ. ಉದಾಹರಣೆಗೆ, ಎಲ್ಲಾ ಕ್ರೈಸ್ತ ಕೂಟಗಳಿಗೆ ಹಾಜರಾಗಲು, ದಿನಂಪ್ರತಿ ಬೈಬಲನ್ನು ಓದಲು, ಕ್ರಮವಾಗಿ ವೈಯಕ್ತಿಕ ಅಧ್ಯಯನ ಮಾಡಲು ಪ್ರಯತ್ನವು ಬೇಕೇ ಬೇಕು. ಅಲ್ಲದೆ ಕ್ರಮವಾದ, ಆನಂದಕರ ಹಾಗೂ ಪ್ರತಿಫಲದಾಯಕ ಕುಟುಂಬ ಆರಾಧನೆಯ ಸಂಜೆಯನ್ನು ನಡಿಸಲಿಕ್ಕಾಗಿ ಶ್ರಮದ ಕೆಲಸದೊಂದಿಗೆ ಒಳ್ಳೇ ಯೋಜನೆಯೂ ಬೇಕಾದೀತು. ಆದರೆ ಒಮ್ಮೆ ನಮಗದು ಚೆನ್ನಾಗಿ ಅಭ್ಯಾಸವಾದಲ್ಲಿ ಹಿತಕರ ರೂಢಿಗಳು ಸುಲಭವಾಗಿ ಕೈಗಿಟ್ಟಿಸುವವು. ವಿಶೇಷವಾಗಿ ನಾವದರ ಪ್ರಯೋಜನಗಳನ್ನು ಅನುಭವಿಸಲು ತೊಡಗುವಾಗ ಇದು ಸತ್ಯ.
7, 8. (ಎ) ಕುಟುಂಬ ಆರಾಧನೆಯ ಸಂಜೆಯ ಕುರಿತು ಕೆಲವರು ಹೇಳಿದ್ದೇನು? (ಬಿ) ನಿಮ್ಮ ಕುಟುಂಬ ಆರಾಧನೆಯ ಸಂಜೆಯಿಂದ ನೀವು ಹೇಗೆ ಪ್ರಯೋಜನ ಹೊಂದುತ್ತಿದ್ದೀರಿ?
7 ಕುಟುಂಬ ಆರಾಧನೆಯ ಏರ್ಪಾಡಿನ ಕುರಿತು ಸಹೋದರಿಯೊಬ್ಬಳು ಬರೆಯುವುದು: “ಅದು ನಮಗೆ ಎಷ್ಟೋ ವಿಷಯಗಳ ಕುರಿತು ಕಲಿಯಲು ಅವಕಾಶ ನೀಡುತ್ತದೆ.” ಇನ್ನೊಬ್ಬಳು ಹೇಳುವುದು: “ನಿಜಕ್ಕೂ ನನಗೆ ಪುಸ್ತಕ ಅಧ್ಯಯನ ಅಂತ್ಯಗೊಳ್ಳುವುದು ಬೇಡವಾಗಿತ್ತು. ಅದು ನನ್ನ ಅಚ್ಚುಮೆಚ್ಚಿನ ಕೂಟವಾಗಿತ್ತು. ಆದರೆ ಈಗ ಕುಟುಂಬ ಆರಾಧನಾ ಸಂಜೆಯ ಮೂಲಕ ನನಗೆ ಮನವರಿಕೆ ಆಗಿದೆ ಏನೆಂದರೆ ನಮಗೇನು ಬೇಕು ಮತ್ತು ಅದು ಯಾವಾಗ ಬೇಕು ಎಂಬುದು ಯೆಹೋವನಿಗೆ ತಿಳಿದಿದೆ.” ಒಬ್ಬ ಕುಟುಂಬ ತಲೆಯು ಹೇಳುವುದು: “ಕುಟುಂಬ ಆರಾಧನೆ ನಮಗೆ ಮಹತ್ತಾದ ನೆರವು ನೀಡುತ್ತದೆ. ದಂಪತಿಯಾದ ನಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದಿಸಿದ ಅಂಥ ಒಂದು ಕೂಟವಿರುವುದು ಉತ್ತಮವೇ ಸರಿ! ಪವಿತ್ರಾತ್ಮದ ಫಲವನ್ನು ತೋರಿಸುವುದರಲ್ಲಿ ನಾವಿಬ್ಬರೂ ಪ್ರಗತಿ ಮಾಡುತ್ತಿದ್ದೇವೆಂದು ನಮ್ಮನಿಸಿಕೆ. ಶುಶ್ರೂಷೆಯಲ್ಲೂ ಎಂದಿಗಿಂತ ಹೆಚ್ಚು ಸಂತೋಷವನ್ನು ನಾವು ಕಾಣುತ್ತಿದ್ದೇವೆ.” ಇನ್ನೊಬ್ಬ ಕುಟುಂಬ ತಲೆಯು ಹೇಳುವುದು: “ಮಕ್ಕಳು ತಮ್ಮ ರಿಸರ್ಚ್ ತಾವೇ ಮಾಡುತ್ತಾ ಹೆಚ್ಚನ್ನು ಕಲಿಯುತ್ತಿದ್ದಾರೆ. ಅದು ಅವರಿಗೆ ಸಂತೋಷ ಕೊಟ್ಟಿದೆ. ಯೆಹೋವನು ನಮ್ಮ ಚಿಂತೆ-ವ್ಯಾಕುಲಗಳನ್ನು ಬಲ್ಲನು ಹಾಗೂ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂಬ ಭರವಸೆಯನ್ನು ಈ ಏರ್ಪಾಡು ಇನ್ನಷ್ಟು ಹೆಚ್ಚಿಸಿದೆ.”
ದೇವರ ಈ ಆಶ್ಚರ್ಯಕರ ಆಧ್ಯಾತ್ಮಿಕ ಒದಗಿಸುವಿಕೆಯ ಕುರಿತು ನಿಮಗೂ ಹಾಗನಿಸುತ್ತದೊ?8 ಕುಟುಂಬ ಆರಾಧನೆಗೆ ಚಿಕ್ಕಪುಟ್ಟ ವಿಷಯಗಳು ಅಡ್ಡಬರುವಂತೆ ಬಿಡಬೇಡಿರಿ. ವಿವಾಹ ದಂಪತಿಯೊಂದು ಹೇಳಿದ್ದು: “ಕಳೆದ ನಾಲ್ಕು ವಾರಗಳಲ್ಲಿ ಪ್ರತಿ ಗುರುವಾರ ಸಂಜೆ ನಮ್ಮ ಅಧ್ಯಯನವನ್ನು ಬಹುಮಟ್ಟಿಗೆ ನಿಲ್ಲಿಸಿಯೆಬಿಡುವ ಸಂಗತಿಯು ನಮ್ಮ ಕುಟುಂಬದಲ್ಲಿ ಸಂಭವಿಸಿತು. ಆದರೆ ನಮ್ಮ ಅಧ್ಯಯನವನ್ನು ಅದು ತಡೆಯುವಂತೆ ನಾವು ಬಿಟ್ಟುಕೊಡಲಿಲ್ಲ.” ಕೆಲವೊಮ್ಮೆ ನಿಮ್ಮ ಶೆಡ್ಯೂಲಿನಲ್ಲಿ ಹೊಂದಾಣಿಕೆ ಮಾಡಬೇಕಾದೀತು ನಿಶ್ಚಯ. ಆದರೂ ನಿಮ್ಮ ಕುಟುಂಬ ಆರಾಧನೆಯ ಸಂಜೆಯನ್ನು ರದ್ದುಮಾಡದಂತೆ ದೃಢಸಂಕಲ್ಪ ಮಾಡಿರಿ. ಒಂದೇ ಒಂದು ವಾರವಾದರೂ ಅದನ್ನು ತಪ್ಪಿಸಬೇಡಿ.
9. ಯೆಹೋವನು ಯೆರೆಮೀಯನನ್ನು ಪೋಷಿಸಿದ್ದು ಹೇಗೆ? ಅವನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?
9 ಪ್ರವಾದಿಯಾದ ಯೆರೆಮೀಯನು ನಮಗೆ ಇದರಲ್ಲಿ ಒಳ್ಳೇ ಮಾದರಿಯಾಗಿದ್ದಾನೆ. ಯೆಹೋವನಿಂದ ತನಗೆ ಬೇಕಾದ ಆಧ್ಯಾತ್ಮಿಕ ಪೋಷಣೆಯನ್ನು ಅವನು ಪಡೆದನು, ಅದನ್ನು ಅವನು ಆಳವಾಗಿ ಗಣ್ಯಮಾಡಿದನು. ಕಿವಿಗೊಡದೇ ಇದ್ದ ಜನರಿಗೆ ತಾಳ್ಮೆ-ಸಹನೆಯಿಂದ ಸಾರಲು ಅದು ಅವನಿಗೆ ಪುಷ್ಟಿಯನ್ನು ಕೊಟ್ಟಿತು. “ಯೆಹೋವನ ವಾಕ್ಯವು . . . ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ” ಇದೆ ಎಂದು ಅವನು ಹೇಳಿದನು. (ಯೆರೆ. 20:8, 9) ಯೆರೂಸಲೇಮಿನ ನಾಶನದಲ್ಲಿ ಪರಾಕಾಷ್ಠೆಗೇರಿದ ಕಠಿನ ಸಮಯವನ್ನು ತಾಳಿಕೊಳ್ಳಲು ಅದು ಅವನಿಗೆ ನೆರವನ್ನೂ ಇತ್ತಿತು. ಇಂದು ನಮ್ಮೊಂದಿಗೆ ದೇವರ ಪೂರ್ಣ ಲಿಖಿತ ವಾಕ್ಯವಿದೆ. ನಾವದನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡುತ್ತಾ ದೇವರ ಆಲೋಚನೆಗಳನ್ನು ನಮ್ಮ ಆಲೋಚನೆಗಳನ್ನಾಗಿ ಮಾಡಬೇಕು. ಆಗ ನಾವೂ ಯೆರೆಮೀಯನಂತೆ ಶುಶ್ರೂಷೆಯಲ್ಲಿ ಸಂತೋಷದಿಂದ ತಾಳಿಕೊಳ್ಳಲು ಶಕ್ತರಾಗುವೆವು, ನಂಬಿಕೆಯ ಪರೀಕ್ಷೆಗಳಲ್ಲಿ ನಂಬಿಗಸ್ತರಾಗಿ ನಿಲ್ಲುವೆವು, ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಶುದ್ಧರಾಗಿ ಉಳಿಯುವೆವು.—ಯಾಕೋ. 5:10.
‘ಕಳಂಕವಿಲ್ಲದವರೂ ನಿರ್ದೋಷಿಗಳೂ’ ಆಗಿ ಉಳಿಯಿರಿ
10, 11. ‘ಕಳಂಕವಿಲ್ಲದವರೂ ನಿರ್ದೋಷಿಗಳೂ’ ಆಗಿ ಉಳಿಯುವಂತೆ ನಾವು ಕೈಲಾದದ್ದೆಲ್ಲವನ್ನು ಮಾಡಬೇಕು ಏಕೆ? ಅದು ನಮ್ಮಿಂದ ಏನನ್ನು ಅವಶ್ಯಪಡಿಸುತ್ತದೆ?
10 ನಾವು ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆಂದು ಕ್ರೈಸ್ತರಾದ ನಮಗೆ ತಿಳಿದಿದೆ. ಆದುದರಿಂದ ಲೋಕವು ಯೆಹೋವನು ಹೇಸುವಂಥ ದುರಾಶೆ, ಲೈಂಗಿಕ ಭ್ರಷ್ಟಾಚಾರ, ಹಿಂಸಾಚಾರ ಮುಂತಾದವುಗಳಿಂದ ತುಂಬಿಹೋಗಿರುವುದು ನಮ್ಮನ್ನು ಆಶ್ಚರ್ಯಪಡಿಸುವುದಿಲ್ಲ. ಸೈತಾನನ ಚತುರೋಪಾಯದ ಚುಟುಕುನುಡಿ ಹೀಗಿದ್ದೀತು: ‘ದೇವರ ಸೇವಕರನ್ನು ಹೆದರಿಸಲು ಆಗದಿದ್ದರೇನಂತೆ, ಭ್ರಷ್ಟಗೊಳಿಸೋಣ ಬಿಡಿ!’ (ಪ್ರಕ. 2:13, 14) ಆದಕಾರಣ ನಾವು ಪೇತ್ರನ ಈ ಪ್ರೀತಿಪರ ಬುದ್ಧಿವಾದವನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು: “ಕೊನೆಗೆ [ದೇವರ] ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ.”—2 ಪೇತ್ರ 3:14.
11 “ಕೈಲಾದದ್ದೆಲ್ಲವನ್ನು ಮಾಡಿ” ಎಂಬ ಈ ಹೇಳಿಕೆಯು ಪೇತ್ರನ ಆರಂಭದ ಬುದ್ಧಿವಾದವಾದ “ಎಲ್ಲ ಶ್ರದ್ಧಾಪೂರ್ವಕ ಪ್ರಯತ್ನದಿಂದ” ಎಂಬದಕ್ಕೆ ಸಮಾನವಾದ ಹೇಳಿಕೆ. ಈ ಭಾವಪ್ರೇರಕ ಮಾತುಗಳನ್ನು ನುಡಿಯಲು ಪೇತ್ರನನ್ನು ಪ್ರೇರಿಸಿದವನು ಯೆಹೋವನು ತಾನೇ. ಏಕೆಂದರೆ ಸೈತಾನನ ಲೋಕದ ಹೊಲಸು ರೊಚ್ಚಿನಿಂದ ನಾವು ಸೋಂಕಿತರಾಗದೆ ‘ಕಳಂಕವಿಲ್ಲದವರೂ ನಿರ್ದೋಷಿಗಳೂ’ ಆಗಿ ಉಳಿಯಲು ನಮಗೆ ಪ್ರಯಾಸಪಡಲಿಕ್ಕಿದೆ ಎಂದು ಆತನು ಬಲ್ಲನು. ಹೀಗೆ ಪ್ರಯಾಸಪಡುವುದರಲ್ಲಿ, ನಮ್ಮ ಹೃದಯವು ದುರಾಶೆಗೆ ಬಲಿಯಾಗದಂತೆ ಅದನ್ನು ಜಾಗರೂಕತೆಯಿಂದ ಕಾಪಾಡುವುದೂ ಸೇರಿದೆ. (ಜ್ಞಾನೋಕ್ತಿ 4:23; ಯಾಕೋಬ 1:14, 15 ಓದಿ.) ನಮ್ಮ ಕ್ರೈಸ್ತ ಜೀವನಮಾರ್ಗದ ಬಗ್ಗೆ ಆಶ್ಚರ್ಯಪಡುತ್ತಾ ‘ನಮ್ಮ ಕುರಿತು ದೂಷಣಾತ್ಮಕ ಮಾತುಗಳನ್ನಾಡುವ’ ಜನರನ್ನು ಎದುರಿಸಿ ದೃಢವಾಗಿ ನಿಲ್ಲುವುದು ಸಹ ಇದರಲ್ಲಿ ಸೇರಿದೆ.—1 ಪೇತ್ರ 4:4.
12. ಲೂಕ 11:13ರಲ್ಲಿ ನಮಗೆ ಯಾವ ಆಶ್ವಾಸನೆ ನೀಡಲಾಗಿದೆ?
12 ಅಪರಿಪೂರ್ಣತೆಯಿಂದಾಗಿ ಒಳ್ಳೇದನ್ನು ಮಾಡುವುದು ನಮಗೆ ಒಂದು ಹೋರಾಟವೇ ಸರಿ. (ರೋಮ. 7:21-25) ಯೆಹೋವನ ಕಡೆಗೆ ತಿರುಗಿದರೆ ಮಾತ್ರವೇ ನಾವು ಯಶಸ್ವಿಗಳಾಗಲು ನಿರೀಕ್ಷಿಸಬಹುದು. ಆತನು ಯಥಾರ್ಥಚಿತ್ತದಿಂದ ಕೇಳಿಕೊಳ್ಳುವವರಿಗೆ ತನ್ನ ಪವಿತ್ರಾತ್ಮವನ್ನು ಉದಾರವಾಗಿ ಕೊಡುತ್ತಾನೆ. (ಲೂಕ 11:13) ಆ ಪವಿತ್ರಾತ್ಮವು ದೇವರ ಮೆಚ್ಚಿಕೆಗೆ ಪಾತ್ರವಾದ ಗುಣಗಳನ್ನು ನಮ್ಮಲ್ಲಿ ಬೆಳೆಸಿ ನಾವು ಜೀವನದ ಪ್ರಲೋಭನೆಗಳನ್ನು ಮಾತ್ರವಲ್ಲ ಅವುಗಳೊಂದಿಗೆ ಬರುವ ಪರೀಕ್ಷೆಗಳನ್ನು ಸಹ ಎದುರಿಸಲು ಸಹಾಯನೀಡುವುದು. ಯೆಹೋವನ ದಿನವು ಸಮೀಪಿಸುತ್ತಾ ಬರುವಾಗ ಅಂಥ ಪರೀಕ್ಷೆಗಳು ಹೆಚ್ಚಾಗುತ್ತಾ ಬರುವ ಸಂಭಾವ್ಯತೆಯಿದೆ.
ಪರೀಕ್ಷೆಗಳು ನಮ್ಮನ್ನು ಬಲಪಡಿಸಲಿ
13. ನಮ್ಮ ಜೀವನದಲ್ಲಿ ಪರೀಕ್ಷೆಗಳು ಬರುವಾಗ ಅವನ್ನು ತಾಳಿಕೊಳ್ಳಲು ನಮಗೆ ಯಾವುದು ಸಹಾಯಕಾರಿ?
13 ಈ ಹಳೇ ವಿಷಯಗಳ ವ್ಯವಸ್ಥೆಯಲ್ಲಿ ನಾವು ಜೀವಿಸಿರುವ ತನಕ ಒಂದಲ್ಲ ಒಂದು ತರದ ಪರೀಕ್ಷೆಗಳು ನಮಗೆ ಎದುರಾಗುವುದು ಅನಿವಾರ್ಯ. ಆದರೂ ಪರೀಕ್ಷೆಗಳಿಂದಾಗಿ ಮನಗುಂದಿ ಹೋಗಬೇಡಿರಿ. ಬದಲಾಗಿ ದೇವರಿಗೆ ನಿಮ್ಮ ಪ್ರೀತಿಯನ್ನು ದೃಢಗೊಳಿಸುವ ಹಾಗೂ ಆತನಲ್ಲಿ ಮತ್ತು ಆತನ ವಾಕ್ಯದಲ್ಲಿ ನಿಮಗಿರುವ ನಂಬಿಕೆಯನ್ನು ಬಲಪಡಿಸುವ ಸದವಕಾಶಗಳನ್ನಾಗಿ ಅವನ್ನು ನೋಡಿರಿ. ಶಿಷ್ಯ ಯಾಕೋಬನು ಬರೆದದ್ದು: “ನನ್ನ ಸಹೋದರರೇ, ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದವರಾಗಿದ್ದು ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ.” (ಯಾಕೋ. 1:2-4) ಇದನ್ನೂ ನೆನಪಿಡಿರಿ ಏನೆಂದರೆ “ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೂ . . . ತಿಳಿದವನಾಗಿದ್ದಾನೆ.”—2 ಪೇತ್ರ 2:9.
14. ಯೋಸೇಫನ ಮಾದರಿಯು ನಿಮ್ಮನ್ನು ವೈಯಕ್ತಿಕವಾಗಿ ಹೇಗೆ ಉತ್ತೇಜಿಸುತ್ತದೆ?
14 ಯಾಕೋಬನ ಮಗನಾದ ಯೋಸೇಫನ ಮಾದರಿಯನ್ನು ಪರಿಗಣಿಸಿರಿ. ಅವನ ಸ್ವಂತ ಸಹೋದರರು ಅವನನ್ನು ದಾಸತ್ವಕ್ಕೆ ಮಾರಿಬಿಟ್ಟರು. (ಆದಿ. 37:23-28; 42:21) ಆ ಕ್ರೂರ ಕೃತ್ಯದಿಂದಾಗಿ ಯೋಸೇಫನ ನಂಬಿಕೆಯು ಮುಗ್ಗರಿಸಿತೊ? ತನ್ನ ಮೇಲೆ ಅಂಥ ಕೇಡನ್ನು ಅನುಮತಿಸಿದ್ದಕ್ಕಾಗಿ ದೇವರ ವಿರುದ್ದ ಅವನು ಕಟುಭಾವನೆಯನ್ನು ತಾಳಿದನೊ? ಖಂಡಿತವಾಗಿಯೂ ಇಲ್ಲ ಎಂದು ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತದೆ. ಅದಲ್ಲದೆ ಯೋಸೇಫನ ಪರೀಕ್ಷೆಗಳು ಅಲ್ಲಿಗೆ ಅಂತ್ಯಗೊಳ್ಳಲಿಲ್ಲ. ಸಮಯಾನಂತರ, ಹೆಂಗಸೊಬ್ಬಳ ಮಾನಭಂಗ ಮಾಡಲು ಪ್ರಯತ್ನಿಸಿದನೆಂಬ ಸುಳ್ಳು ಆರೋಪಕ್ಕೆ ಗುರಿಯಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟನು. ಆಗಲೂ ಅವನು ತನ್ನ ದೈವಿಕ ಭಕ್ತಿಯಲ್ಲಿ ಎಂದೂ ವಿಚಲಿತನಾಗಲಿಲ್ಲ, ದೃಢವಾಗಿ ನಿಂತನು. (ಆದಿ. 39:9-21) ಪರೀಕ್ಷೆಗಳು ತನ್ನನ್ನು ಬಲಪಡಿಸುವಂತೆ ಬಿಟ್ಟನು ಮತ್ತು ಅದಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟನು.
15. ನೊವೊಮಿಯ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?
15 ಪರೀಕ್ಷೆಗಳು ನಮ್ಮನ್ನು ದುಃಖಪಡಿಸಬಲ್ಲವು, ಖಿನ್ನಗೊಳಿಸಲೂ ಬಲ್ಲವು ಎಂಬುದು ಗ್ರಾಹ್ಯ. ಪ್ರಾಯಶಃ ಯೋಸೇಫನಿಗೆ ಕೆಲವೊಮ್ಮೆ ಹಾಗನಿಸಿದ್ದಿರಬಹುದು. ಇತರ ನಂಬಿಗಸ್ತ ದೇವರ ಸೇವಕರಿಗೆ ನಿಶ್ಚಯವಾಗಿ ಹಾಗನಿಸಿತ್ತು. ನೊವೊಮಿಯನ್ನು ನೆನಪಿಗೆ ತನ್ನಿ. ಆಕೆ ತನ್ನ ಗಂಡನನ್ನು ಹಾಗೂ ಇಬ್ಬರು ಗಂಡುಮಕ್ಕಳನ್ನು ಮರಣದಲ್ಲಿ ಕಳಕೊಂಡಳು. ಅವಳಂದದ್ದು: “ನನ್ನನ್ನು ನೊವೊಮಿಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ [ಇದರರ್ಥ “ಕಹಿ”] ಎಂದು ಕರೆಯಿರಿ.” (ರೂತ. 1:20, 21) ನೊವೊಮಿಯ ಪ್ರತಿಕ್ರಿಯೆಯು ಸ್ವಾಭಾವಿಕವೂ ಗ್ರಹಿಸಶಕ್ತವೂ ಆಗಿತ್ತು. ಆದರೂ ಯೋಸೇಫನಂತೆಯೇ ಅವಳು ಆಧ್ಯಾತ್ಮಿಕವಾಗಿ ಮುಗ್ಗರಿಸಲೂ ಇಲ್ಲ ತನ್ನ ಸಮಗ್ರತೆಯಲ್ಲಿ ವಿಚಲಿತಳೂ ಆಗಲಿಲ್ಲ. ಪ್ರತಿಫಲವಾಗಿ ಯೆಹೋವನು ಆ ಅಮೂಲ್ಯ ಮಹಿಳೆಯನ್ನು ಆಶೀರ್ವದಿಸಿದನು. (ರೂತ. 4:13-17, 22) ಅದಕ್ಕಿಂತಲೂ ಹೆಚ್ಚಾಗಿ, ಸೈತಾನನಿಂದ ಮತ್ತು ಅವನ ದುಷ್ಟಲೋಕದಿಂದ ಆದ ಸಕಲ ಹಾನಿಗಳನ್ನು ಬರಲಿರುವ ಭೂಪರದೈಸದಲ್ಲಿ ಆತನು ಇಲ್ಲವಾಗಿಸುವನು. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.”—ಯೆಶಾ. 65:17.
16. ಪ್ರಾರ್ಥನೆಯ ಬಗ್ಗೆ ನಮ್ಮ ಮನೋಭಾವ ಏನಾಗಿರಬೇಕು? ಹಾಗೆ ಏಕೆ?
ರೋಮನ್ನರಿಗೆ 8:35-39 ಓದಿ.) ನಮ್ಮನ್ನು ನಿರಾಶೆಗೊಳಿಸಲು ಪ್ರಯತ್ನಿಸುವುದನ್ನು ಸೈತಾನನು ನಿಲ್ಲಿಸನು. ಆದರೂ ನಾವು “ಸ್ವಸ್ಥಚಿತ್ತರಾಗಿ” ‘ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರವುಳ್ಳವರಾಗಿ’ ಇದ್ದಲ್ಲಿ ಅವನು ಸೋತೇಸೋಲುವನು. (1 ಪೇತ್ರ 4:7) ಯೇಸು ಅಂದದ್ದು: “ಆದುದರಿಂದ, ಸಂಭವಿಸುವಂತೆ ವಿಧಿಸಲ್ಪಟ್ಟಿರುವ ಈ ಎಲ್ಲ ಸಂಗತಿಗಳಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಸಾಧ್ಯವಾಗುವಂತೆ ಎಲ್ಲ ಸಮಯದಲ್ಲಿ ಯಾಚನೆಗಳನ್ನು ಮಾಡುತ್ತಾ ಎಚ್ಚರದಿಂದಿರಿ.” (ಲೂಕ 21:36) “ಯಾಚನೆ” ಎಂಬ ಶಬ್ದವನ್ನು ಇಲ್ಲಿ ಯೇಸು ಬಳಸಿದ್ದನ್ನು ಗಮನಿಸಿರಿ. ಯಾಚನೆ ಎಂದರೆ ಅತಿ ಶ್ರದ್ಧಾಪೂರ್ವಕವಾದ ಅತ್ಯಾಸಕ್ತಿಯುಳ್ಳ ಪ್ರಾರ್ಥನಾ ರೂಪ. ಯಾಚನೆಯನ್ನು ಮಾಡುವಂತೆ ನಮ್ಮನ್ನು ಪ್ರಬೋಧಿಸುವ ಮೂಲಕ, ಅವನ ಮತ್ತು ಅವನ ತಂದೆಯ ಮುಂದೆ ನಿಲ್ಲುವುದನ್ನು ನಾವು ಹಗುರವಾಗಿ ತಕ್ಕೊಳ್ಳುವ ಸಮಯವಿದಲ್ಲ ಎಂಬದನ್ನು ಯೇಸು ಒತ್ತಿಹೇಳಿದನು. ಒಪ್ಪಲ್ಪಡುವ ಸ್ಥಿತಿಯಲ್ಲಿ ನಿಂತಿರುವವರು ಮಾತ್ರವೇ ಯೆಹೋವನ ದಿನವನ್ನು ಪಾರಾಗುವ ಪ್ರತೀಕ್ಷೆಯನ್ನು ಹೊಂದಿರುವರು.
16 ಯಾವುದೇ ಪರೀಕ್ಷೆಯು ನಮ್ಮ ಮೇಲೆ ಬರಲಿ, ನಮ್ಮನ್ನು ದೇವರು ಯಾವಾಗಲೂ ಪ್ರೀತಿಸುತ್ತಾನೆ ಎಂದು ತಿಳಿದಿರುವುದು ಅದನ್ನು ಸಹಿಸಿಕೊಳ್ಳಲು ನಮಗೆ ಸಹಾಯಮಾಡುವುದು. (ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿರಿ
17. ನೀವು ಸಾಕ್ಷಿನೀಡುವ ಟೆರಿಟೊರಿಯು ಕಷ್ಟಕರವಾಗಿದ್ದಲ್ಲಿ ಬೈಬಲ್ ಕಾಲದ ಪ್ರವಾದಿಗಳ ಒಳ್ಳೇ ಮಾದರಿಯಿಂದ ಹೇಗೆ ಪ್ರಯೋಜನ ಹೊಂದಬಲ್ಲಿರಿ?
17 ನಮ್ಮ ಆರಾಧನೆಗೆ ಸಂಬಂಧಿಸಿದ ಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು ನಮ್ಮನ್ನು ಚೈತನ್ಯಗೊಳಿಸುತ್ತದೆ. ಇದು ಪೇತ್ರನ ಮಾತುಗಳನ್ನು ನಮ್ಮ ಮನಸ್ಸಿಗೆ ತರುತ್ತದೆ: “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು!” (2 ಪೇತ್ರ 3:11) ಆ ಕ್ರಿಯೆಗಳಲ್ಲಿ ಅತಿ ಪ್ರಮುಖವಾದದ್ದು ಸುವಾರ್ತೆಯನ್ನು ಸಾರುವುದೇ. (ಮತ್ತಾ. 24:14) ಕೆಲವು ಟೆರಿಟೊರಿಗಳಲ್ಲಿ ಸಾರುವ ಕೆಲಸವು ಕಷ್ಟಕರ ನಿಜ. ಜನರ ಔದಾಸೀನ್ಯ ಅಥವಾ ವಿರೋಧದಿಂದಾಗಿ ಇಲ್ಲವೆ ಜನರು ಕೇವಲ ದಿನನಿತ್ಯದ ಜೀವನದ ಚಿಂತೆಗಳಲ್ಲೇ ಮಗ್ನರಾಗಿರುವುದರಿಂದ ಹಾಗಾಗಬಹುದು. ಬೈಬಲ್ ಕಾಲದ ಯೆಹೋವನ ಸೇವಕರಿಗೆ ಸಹ ತದ್ರೀತಿಯ ಮನೋಭಾವಗಳನ್ನು ಎದುರಿಸಲಿಕ್ಕಿತ್ತು. ಆದರೂ ಅವರೆಂದೂ ಬಿಟ್ಟುಕೊಡದೆ ದೇವದತ್ತ ಸಂದೇಶವನ್ನು “ದಿನ ದಿನವೂ” ಕೊಂಡೊಯ್ದು ಜನರಿಗೆ ಹೇಳುತ್ತಾ ಇದ್ದರು. (ಯೆರೆಮೀಯ 7:24-26 ಓದಿ; 2 ಪೂರ್ವ. 36:15, 16) ತಾಳಿಕೊಳ್ಳುವಂತೆ ಅವರಿಗೆ ನೆರವಾದದ್ದು ಯಾವುದು? ತಮ್ಮ ನೇಮಕವನ್ನು ಲೋಕದ ದೃಷ್ಟಿಕೋನದಿಂದಲ್ಲ, ಯೆಹೋವನ ದೃಷ್ಟಿಕೋನದಿಂದ ನೋಡಿದ್ದೇ. ಅಲ್ಲದೆ ದೇವರ ನಾಮಧಾರಿಗಳಾಗಿರುವದು ಮಹಾ ಗೌರವವೆಂದು ಅವರು ಪರಿಗಣಿಸಿದ್ದರಿಂದಲೇ.—ಯೆರೆ. 15:16.
18. ದೇವರ ನಾಮವು ಭವಿಷ್ಯತ್ತಿನಲ್ಲಿ ಮಹಿಮೆಗೇರುವ ವಿಷಯದಲ್ಲಿ ರಾಜ್ಯ ಸಾರುವಿಕೆಯು ಎಷ್ಟು ಮಹತ್ತಾದ ಪರಿಣಾಮ ಬೀರುವುದು?
18 ಯೆಹೋವನ ನಾಮ ಮತ್ತು ಉದ್ದೇಶವನ್ನು ಪ್ರಕಟಪಡಿಸುವ ಸುಯೋಗವು ನಮಗೂ ಇದೆ. ಯೋಚಿಸಿರಿ: ಸಾರುವ ಕೆಲಸದ ನೇರ ಪರಿಣಾಮ ಏನು? ಏನೆಂದರೆ ಯೆಹೋವನ ಮಹಾ ದಿನದಲ್ಲಿ ಆತನ ಶತ್ರುಗಳು ಆತನಿಗೆ ಮುಖಾಮುಖಿ ಎದುರಾಗುವಾಗ ತಮಗೇನೂ ಗೊತ್ತಿರಲಿಲ್ಲ ಎಂದು ನೆವಹೇಳಲು ಅವರು ಶಕ್ತರಾಗಲಾರರು. ನಿಶ್ಚಯವಾಗಿ ಪೂರ್ವಕಾಲದ ಫರೋಹನಂತೆ ಸ್ವತಃ ಯೆಹೋವನೇ ಅವರ ವಿರುದ್ಧವಾಗಿ ಕ್ರಿಯೆಗೈಯುತ್ತಿದ್ದಾನೆಂದು ಅವರಿಗೆ ತಿಳಿದುಬರುವುದು. (ವಿಮೋ. 8:1, 20; 14:25) ಅದೇ ಸಮಯದಲ್ಲಿ, ತನ್ನ ನಂಬಿಗಸ್ತ ಸೇವಕರೇ ತನ್ನ ಪ್ರತಿನಿಧಿಗಳಾಗಿದ್ದರು ಎಂದು ಅತಿ ಸ್ಪಷ್ಟವಾಗಿ ತಿಳಿಯಪಡಿಸುವ ಮೂಲಕ ಯೆಹೋವನು ತನ್ನ ಜನರನ್ನು ಗೌರವಿಸುವನು.—ಯೆಹೆಜ್ಕೇಲ 2:5; 33:33 ಓದಿ.
19. ಯೆಹೋವನ ತಾಳ್ಮೆಯನ್ನು ಸದುಪಯೋಗಕ್ಕೆ ಹಾಕುವ ಅಪೇಕ್ಷೆ ನಮಗಿದೆ ಎಂದು ನಾವು ಹೇಗೆ ತೋರಿಸಬಲ್ಲೆವು?
19 ತನ್ನ ಎರಡನೆಯ ಪತ್ರದ ಕೊನೆಯಲ್ಲಿ ಪೇತ್ರನು ತನ್ನ ಜೊತೆ ವಿಶ್ವಾಸಿಗಳಿಗೆ ಬರೆದದ್ದು: “ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳಿರಿ.” (2 ಪೇತ್ರ 3:15) ಹೌದು, ಯೆಹೋವನ ತಾಳ್ಮೆಯನ್ನು ಸದುಪಯೋಗಕ್ಕೆ ಹಾಕುವುದನ್ನು ನಾವು ಮುಂದುವರಿಸೋಣ. ಹೇಗೆ? ಹೇಗಂದರೆ ಆತನಿಗೆ ಮೆಚ್ಚಿಕೆಯಾದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ, ‘ಕಳಂಕವಿಲ್ಲದವರೂ ನಿರ್ದೋಷಿಗಳೂ’ ಆಗಿ ಉಳಿಯುವ ಮೂಲಕ, ಪರೀಕ್ಷೆಗಳ ಕಡೆಗೆ ಯೋಗ್ಯ ಮನೋಭಾವ ಇಡುವ ಮೂಲಕ. ಅದರೊಂದಿಗೆ ರಾಜ್ಯ ಸೇವೆಯಲ್ಲಿ ಕಾರ್ಯಮಗ್ನರಾಗಿರುವ ಮೂಲಕವೂ ನಾವಿದನ್ನು ಮಾಡುತ್ತೇವೆ. ಹೀಗೆ ಮಾಡುತ್ತಾ ಇರುವಲ್ಲಿ ‘ನೂತನ ಆಕಾಶ ಮತ್ತು ನೂತನ ಭೂಮಿಯಲ್ಲಿ’ ಸಿಗಲಿರುವ ಅನಂತ ಆಶೀರ್ವಾದಗಳಲ್ಲಿ ನಾವೂ ಪಾಲನ್ನು ಹೊಂದುವವರಾಗುವೆವು.—2 ಪೇತ್ರ 3:13.
ನಿಮಗೆ ಜ್ಞಾಪಕವಿದೆಯೊ?
• ದೇವರು ಮೆಚ್ಚುವ ಗುಣಗಳನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?
• ನಾವು ‘ಕಳಂಕವಿಲ್ಲದವರೂ ನಿರ್ದೋಷಿಗಳೂ’ ಆಗಿ ಹೇಗೆ ಉಳಿಯಬಲ್ಲೆವು?
• ಯೋಸೇಫ ಮತ್ತು ನೊವೊಮಿಯಿಂದ ನಾವೇನನ್ನು ಕಲಿಯಬಲ್ಲೆವು?
• ಸಾರುವ ಕೆಲಸದಲ್ಲಿ ಭಾಗವಹಿಸುವುದು ಮಹಾ ಸುಯೋಗವೇಕೆ?
[ಅಧ್ಯಯನ ಪ್ರಶ್ನೆಗಳು]
[ಪುಟ 9ರಲ್ಲಿರುವ ಚಿತ್ರ]
ಗಂಡಂದಿರಾದ ನೀವು ಮತ್ತು ನಿಮ್ಮ ಕುಟುಂಬವು ದೇವರು ಮೆಚ್ಚುವ ಗುಣಗಳನ್ನು ಬೆಳೆಸುವಂತೆ ಏನು ಸಹಾಯಮಾಡುವುದು?
[ಪುಟ 10ರಲ್ಲಿರುವ ಚಿತ್ರ]
ಯೋಸೇಫನು ಪರೀಕ್ಷೆಗಳನ್ನು ನಿರ್ವಹಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು?