ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ಇದೇ ನಿಜವಾದ ಜೀವನ!

ಇದೇ ನಿಜವಾದ ಜೀವನ!

ಈಗಾಗಲೇ ನಾವು ನೋಡಿದಂತೆ, ದೇವರ ಸ್ನೇಹಿತರಾಗಬೇಕೆಂದರೆ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವೆಂದರೆ,

  1. ದೇವರ ಹೆಸರು ಯೆಹೋವ ಎಂದು ತಿಳಿದುಕೊಳ್ಳಬೇಕು ಮತ್ತು ಅದನ್ನು ಉಪಯೋಗಿಸಬೇಕು

  2. ಪ್ರಾರ್ಥನೆ ಮತ್ತು ಬೈಬಲ್‌ ಅಧ್ಯಯನದ ಮೂಲಕ ಕ್ರಮವಾಗಿ ದೇವರೊಂದಿಗೆ ಮಾತನಾಡಬೇಕು

  3. ಯೆಹೋವನು ಬಯಸುವುದನ್ನು ಯಾವಾಗಲೂ ಮಾಡುತ್ತಾ ಇರಬೇಕು.

ದೇವರ ಸ್ನೇಹಿತರಾಗಲು ಆತನ ಹೆಸರನ್ನು ಉಪಯೋಗಿಸಿ, ಆತನಿಗೆ ಪ್ರಾರ್ಥಿಸಿ, ಆತನ ವಾಕ್ಯವನ್ನು ಅಧ್ಯಯನ ಮಾಡಿ, ಆತನು ಬಯಸುವುದನ್ನೇ ಮಾಡಿ

ಈ ಅಂಶಗಳನ್ನು ಗಮನಿಸಿದ ಮೇಲೆ, ದೇವರ ಸ್ನೇಹಿತರಾಗಲು ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಿದ್ದೀರೆಂದು ನಿಮಗನಿಸುತ್ತಾ? ಅಥವಾ ಕೆಲವೊಂದು ಅಂಶಗಳನ್ನು ಮಾಡುತ್ತಿದ್ದೇನೆ ಇನ್ನೂ ಕೆಲವೊಂದನ್ನು ಮಾಡಬೇಕು ಅಂತ ಅನಿಸುತ್ತಾ? ಎಲ್ಲ ಅಂಶಗಳನ್ನು ಮಾಡಲು ಬಹಳ ಪ್ರಯತ್ನ ಬೇಕು ಎನ್ನುವುದು ಒಪ್ಪತಕ್ಕ ವಿಷಯವೇ, ಆದರೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.

ಅಮೆರಿಕಾದಲ್ಲಿರುವ ಜೆನಿಫರ್‌ ಹೀಗೆ ಹೇಳುತ್ತಾಳೆ, “ದೇವರ ಜೊತೆ ಆಪ್ತರಾಗಲು ನಾವು ಮಾಡುವ ಯಾವುದೇ ಪ್ರಯತ್ನವೂ ವ್ಯರ್ಥವಲ್ಲ. ಆ ಸಂಬಂಧದಿಂದ ಅನೇಕ ಪ್ರಯೋಜನಗಳಿವೆ. ದೇವರ ಮೇಲಿನ ನಮ್ಮ ನಂಬಿಕೆ ಬೆಳೆಯುತ್ತದೆ, ಆತನ ವ್ಯಕ್ತಿತ್ವದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುತ್ತೇವೆ, ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ಆತನ ಮೇಲಿರುವ ಪ್ರೀತಿ ಹೆಚ್ಚಾಗುತ್ತದೆ. ಇದೇ ನಿಜವಾದ ಜೀವನ.”

ನಿಮಗೆ ದೇವರ ಸ್ನೇಹಿತರಾಗಲು ಇಷ್ಟನಾ? ಹಾಗಿದ್ದರೆ, ಈ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ. ಅವರು ನಿಮ್ಮೊಂದಿಗೆ ಉಚಿತ ಬೈಬಲ್‌ ಅಧ್ಯಯನಕ್ಕೆ ಏರ್ಪಾಡು ಮಾಡುತ್ತಾರೆ. ಈಗಾಗಲೇ ದೇವರೊಂದಿಗೆ ಆಪ್ತ ಸಂಬಂಧ ಹೊಂದಿರುವ ಅನೇಕರು ರಾಜ್ಯ ಸಭಾಗೃಹ ಎಂಬ ಸ್ಥಳಗಳಲ್ಲಿ ಸೇರಿ ದೇವರನ್ನು ಆರಾಧಿಸುತ್ತಿದ್ದಾರೆ. ಈ ಕೂಟಗಳಿಗೆ ನಿಮಗೂ ಸ್ವಾಗತ, ಅಲ್ಲಿ ನೀವು ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳಬಹುದು. * ಈ ರೀತಿ ಮಾಡುವುದಾದರೆ ಬೈಬಲಿನ ಒಬ್ಬ ಲೇಖಕನಂತೆ ನೀವು ಸಹ “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು” ಎಂದು ಹೇಳಬಲ್ಲಿರಿ.—ಕೀರ್ತನೆ 73:28. ▪ (w14-E 12/01)

^ ಪ್ಯಾರ. 9 ಬೈಬಲ್ ಅಧ್ಯಯನವನ್ನು ವಿನಂತಿಸಲು ಅಥವಾ ನಿಮಗೆ ಹತ್ತಿರವಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ವಿಳಾಸ ಪಡೆಯಲು ನಿಮಗೆ ಈ ಪತ್ರಿಕೆಯನ್ನು ಕೊಟ್ಟ ವ್ಯಕ್ತಿಯನ್ನು ಕೇಳಿರಿ ಅಥವಾ ಇಂಟರ್‌ನೆಟ್‍ನಲ್ಲಿ www.dan124.com/kn ಎಂಬ ನಮ್ಮ ವೆಬ್‌ಸೈಟ್‌ಗೆ ಹೋಗಿ, ಪುಟದ ಕೊನೆಯಲ್ಲಿರುವ ನಮ್ಮನ್ನು ಸಂಪರ್ಕಿಸಿ ಎಂಬಲ್ಲಿ ನೋಡಿ.