ಭಾಗ 1
ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?
ದೇವರು ಬೈಬಲ್ನ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. 2 ತಿಮೊಥೆಯ 3:16
ದೇವರು ತನ್ನ ಆಲೋಚನೆಗಳನ್ನು ಒಂದು ಪವಿತ್ರ ಪುಸ್ತಕದಲ್ಲಿ ಬರೆಯಿಸಿದನು. ಆ ಪುಸ್ತಕವೇ ಬೈಬಲ್. ಅದರಲ್ಲಿ ಪ್ರಾಮುಖ್ಯ ವಿಷಯಗಳಿವೆ. ಅವುಗಳನ್ನು ನಾವು ತಿಳಿದುಕೊಳ್ಳಬೇಕೆಂದು ದೇವರು ಇಷ್ಟಪಡುತ್ತಾನೆ.
ನಮಗೆ ಯಾವುದು ಒಳ್ಳೇದು ಎಂದು ದೇವರಿಗೆ ಚೆನ್ನಾಗಿ ಗೊತ್ತಿದೆ. ಅವನು ನಮಗೆ ಬೇಕಾದ ಜ್ಞಾನವನ್ನು ಕೊಡುತ್ತಾನೆ. ಆ ಸುಜ್ಞಾನವನ್ನು ನೀವು ಪಡೆದುಕೊಳ್ಳಬೇಕಾದರೆ ಅವನ ಮಾತನ್ನು ಆಲಿಸಬೇಕು.—ಜ್ಞಾನೋಕ್ತಿ 1:5.
ಎಲ್ಲಾ ಜನರು ಬೈಬಲ್ ಓದಬೇಕೆಂದು ದೇವರು ಇಷ್ಟಪಡುತ್ತಾನೆ. ಅದು ಅನೇಕ ಭಾಷೆಗಳಲ್ಲಿ ದೊರೆಯುತ್ತದೆ.
ದೇವರ ಮಾತನ್ನು ಕೇಳಿಸಿಕೊಳ್ಳಬೇಕಾದರೆ, ನೀವು ಬೈಬಲನ್ನು ಓದಿ ಅರ್ಥಮಾಡಿಕೊಳ್ಳಬೇಕು.
ಮತ್ತಾಯ 28:19
ಪ್ರಪಂಚದಾದ್ಯಂತ ಜನರು ಆಲಿಸುತ್ತಿದ್ದಾರೆ.ಬೈಬಲನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ.
ಅವರು ಪ್ರಪಂಚದ ವಿವಿಧ ಭಾಗಗಳಲ್ಲಿರುವ ಜನರಿಗೆ ದೇವರ ಕುರಿತ ಸತ್ಯವನ್ನು ಕಲಿಸುತ್ತಿದ್ದಾರೆ.
ಸಮೀಪದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೂಡ ನೀವು ದೇವರ ಬಗ್ಗೆ ಕಲಿತುಕೊಳ್ಳಬಹುದು. ಕಲಿಯಲು ನೀವು ಹಣ ಕೊಡಬೇಕಾಗಿಲ್ಲ.