ಭಾಗ 6
ಮಹಾ ಜಲಪ್ರಳಯದಿಂದ ನಮಗೇನು ಪಾಠ?
ದೇವರು ನೋಹನ ಕಾಲದಲ್ಲಿ ಕೆಟ್ಟ ಜನರನ್ನು ನಾಶಮಾಡಿದನು. ನೋಹ ಮತ್ತವನ ಕುಟುಂಬವನ್ನು ರಕ್ಷಿಸಿದನು. ಆದಿಕಾಂಡ 7:11, 12, 23
40 ದಿನ ಹಗಲುರಾತ್ರಿ ಮಳೆ ಸುರಿಯಿತು. ಭೂಮಿ ಸಂಪೂರ್ಣವಾಗಿ ಜಲಾವೃತವಾಯಿತು. ಕೆಟ್ಟ ಜನರೆಲ್ಲಾ ಅಳಿದುಹೋದರು.
ಮಾನವ ರೂಪವನ್ನು ಧರಿಸಿದ್ದ ದೇವದೂತರೆಲ್ಲರು ಆ ರೂಪವನ್ನು ತೊರೆದರು. ನೀಚರಾದ ಇವರನ್ನು ದೆವ್ವಗಳೆಂದು ಕರೆಯಲಾಗುತ್ತದೆ.
ನಾವೆಯಲ್ಲಿದ್ದ ನೋಹ ಮತ್ತು ಅವನ ಮನೆಯವರು ಮಾತ್ರ ಸುರಕ್ಷಿತವಾಗಿದ್ದರು. ಅವರು ಈ ಭೂಮಿಯಲ್ಲಿ ಅನೇಕ ವರ್ಷ ಬದುಕಿ ಕಾಲಾನಂತರ ವಯಸ್ಸಾಗಿ ತೀರಿಹೋದರು. ಆದರೆ ದೇವರು ಅವರನ್ನು ಪುನಃ ಜೀವಕ್ಕೆ ತರುವನು. ಆಗ ಅವರಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯಿರುವುದು.
ಮತ್ತಾಯ 24:37-39
ದೇವರು ನಮ್ಮ ಕಾಲದಲ್ಲೂ ಕೆಟ್ಟ ಜನರನ್ನು ನಾಶಮಾಡುವನು. ಒಳ್ಳೆಯವರನ್ನು ರಕ್ಷಿಸುವನು.ಅಂದಿನಿಂದ ಸೈತಾನ ಮತ್ತು ಅವನ ದೆವ್ವಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಾ ಇವೆ.
ನೋಹನ ಕಾಲದ ಜನರಂತೆ ಇಂದು ಸಹ ಅನೇಕರು ದೇವರ ಪ್ರೀತಿಯ ಮಾರ್ಗದರ್ಶನವನ್ನು ತಳ್ಳಿಹಾಕುತ್ತಿದ್ದಾರೆ. ಕೆಟ್ಟ ಜನರನ್ನು ಯೆಹೋವನು ಬೇಗನೆ ನಾಶಮಾಡಲಿದ್ದಾನೆ.—2 ಪೇತ್ರ 2:5, 6.
ನೋಹನಂತೆ ಇಂದು ಕೂಡ ಕೆಲವರು ದೇವರ ಮಾತಿಗೆ ವಿಧೇಯತೆ ತೋರಿಸುತ್ತಿದ್ದಾರೆ. ಅವರೇ ಯೆಹೋವನ ಸಾಕ್ಷಿಗಳು.