ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 33

ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?

ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?

ದೇವರ ಸರ್ಕಾರ ಈಗಾಗಲೇ ಆಳ್ವಿಕೆ ನಡೆಸುತ್ತಿದೆ. ಆದಷ್ಟು ಬೇಗ ಅದು ಇಡೀ ಭೂಮಿ ಮೇಲೆ ಒಳ್ಳೇ ಬದಲಾವಣೆಗಳನ್ನ ಮಾಡುತ್ತೆ. ನಾವೀಗ ಅಂಥ ಕೆಲವು ಬದಲಾವಣೆಗಳ ಬಗ್ಗೆ ನೋಡೋಣ.

1. ದೇವರ ಸರ್ಕಾರ ಭೂಮಿ ಮೇಲೆ ಶಾಂತಿ ಮತ್ತು ನ್ಯಾಯವನ್ನ ಹೇಗೆ ತರುತ್ತೆ?

ದೇವರ ಸರ್ಕಾರದ ರಾಜನಾದ ಯೇಸು ಹರ್ಮಗೆದೋನ್‌ ಯುದ್ಧದ ಮೂಲಕ ಕೆಟ್ಟ ಜನರನ್ನ ಮತ್ತು ಈ ಲೋಕದ ಸರ್ಕಾರಗಳನ್ನ ನಾಶ ಮಾಡುತ್ತಾನೆ. (ಪ್ರಕಟನೆ 16:14, 16) ಆಗ “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ” ಅನ್ನೋ ಮಾತು ಸಂಪೂರ್ಣವಾಗಿ ನೆರವೇರುತ್ತೆ. (ಕೀರ್ತನೆ 37:10) ಹೀಗೆ ಯೇಸು ತನ್ನ ಸರ್ಕಾರದ ಮೂಲಕ ಇಡೀ ಭೂಮಿಯಲ್ಲಿ ಶಾಂತಿ ಮತ್ತು ನ್ಯಾಯವನ್ನ ತರುತ್ತಾನೆ.—ಯೆಶಾಯ 11:4 ಓದಿ.

2. ದೇವರ ಇಷ್ಟ ಭೂಮಿಯಲ್ಲಿ ನೆರವೇರುವಾಗ ಜೀವನ ಹೇಗಿರುತ್ತೆ?

ದೇವರ ಸರ್ಕಾರದಲ್ಲಿ “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.” (ಕೀರ್ತನೆ 37:29) ಇಡೀ ಭೂಮಿಯಲ್ಲಿ ಯೆಹೋವನನ್ನು ಮತ್ತು ಜೊತೆಮಾನವರನ್ನು ಪ್ರೀತಿಸುವ ಜನರೇ ಇರುವಾಗ ಜೀವನ ಹೇಗಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ ನೋಡಿ. ಅಲ್ಲಿ ಯಾರಿಗೂ ಕಾಯಿಲೆ ಇರಲ್ಲ, ಎಲ್ಲರೂ ಖುಷಿಖುಷಿಯಾಗಿ ಇರುತ್ತಾರೆ, ಶಾಶ್ವತವಾಗಿ ಜೀವಿಸುತ್ತಾರೆ.

3. ಕೆಟ್ಟವರನ್ನೆಲ್ಲ ನಾಶ ಮಾಡಿದ ಮೇಲೆ ದೇವರ ಸರ್ಕಾರ ಏನು ಮಾಡುತ್ತೆ?

ಕೆಟ್ಟವರನ್ನ ನಾಶ ಮಾಡಿದ ಮೇಲೆ, ಯೇಸು ರಾಜನಾಗಿ 1,000 ವರ್ಷ ಆಳ್ವಿಕೆ ಮಾಡುತ್ತಾನೆ. ಆ ಸಮಯದಲ್ಲಿ ಮಾನವರೆಲ್ಲ ಪರಿಪೂರ್ಣರಾಗಲು ಯೇಸು ಮತ್ತು 1,44,000 ಜೊತೆ ರಾಜರು ಸಹಾಯ ಮಾಡುತ್ತಾರೆ. 1,000 ವರ್ಷದ ಆಳ್ವಿಕೆಯ ಕೊನೆಯಲ್ಲಿ ಇಡೀ ಭೂಮಿ ಸುಂದರ ಪರದೈಸ್‌ ಆಗುತ್ತೆ. ಅಲ್ಲಿ ಜನರು ಯೆಹೋವನ ನಿಯಮಗಳನ್ನ ಪಾಲಿಸುತ್ತಾ ಖುಷಿಖುಷಿಯಾಗಿ ಇರುತ್ತಾರೆ. ಯೇಸು ತನ್ನ ಅಧಿಕಾರವನ್ನ ವಾಪಸ್‌ ಯೆಹೋವ ದೇವರಿಗೆ ಕೊಡುತ್ತಾನೆ. ಆಗ ಮುಂಚೆಗಿಂತಲೂ ಯೆಹೋವನ ‘ಹೆಸ್ರು ಪವಿತ್ರವಾಗುತ್ತೆ.’ (ಮತ್ತಾಯ 6:9, 10) ಯೆಹೋವ ದೇವರ ತರ ಜನರನ್ನ ಪ್ರೀತಿಸುವ ಒಳ್ಳೇ ರಾಜ ಬೇರೆ ಯಾರೂ ಇಲ್ಲ ಅಂತ ಎಲ್ಲರಿಗೂ ಗೊತ್ತಾಗುತ್ತೆ. ನಂತರ ಸೈತಾನನನ್ನು, ಕೆಟ್ಟ ದೂತರನ್ನು ಮತ್ತು ಆತನ ಆಳ್ವಿಕೆಯನ್ನ ವಿರೋಧಿಸುವ ಪ್ರತಿಯೊಬ್ಬರನ್ನು ಯೆಹೋವನು ನಾಶ ಮಾಡುತ್ತಾನೆ. (ಪ್ರಕಟನೆ 20:7-10) ಹೀಗೆ ದೇವರ ಸರ್ಕಾರ ತರಲಿರುವ ಆಶೀರ್ವಾದಗಳು ಎಂದೆಂದೂ ಇರುತ್ತೆ.

ಹೆಚ್ಚನ್ನ ತಿಳಿಯೋಣ

ಬೈಬಲ್‌ನಲ್ಲಿ ತಿಳಿಸಲಾಗಿರುವ ಆಶೀರ್ವಾದಗಳನ್ನ ದೇವರು ತನ್ನ ಸರ್ಕಾರದ ಮೂಲಕ ತರುತ್ತಾನೆ ಅನ್ನೋದಕ್ಕಿರುವ ಆಧಾರಗಳನ್ನ ನೋಡೋಣ.

4. ದೇವರ ಸರ್ಕಾರ ಮಾನವ ಸರ್ಕಾರಗಳನ್ನ ನಾಶ ಮಾಡುತ್ತೆ

“ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ.” (ಪ್ರಸಂಗಿ 8:9) ಈ ಹಾನಿಯ ಕೆಟ್ಟ ಪರಿಣಾಮಗಳನ್ನೆಲ್ಲ ಯೆಹೋವ ದೇವರು ತನ್ನ ಸರ್ಕಾರದ ಮೂಲಕ ಸರಿಪಡಿಸುತ್ತಾನೆ.

ದಾನಿಯೇಲ 2:44 ಮತ್ತು 2 ಥೆಸಲೊನೀಕ 1:6-8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಮಾನವ ಸರ್ಕಾರಗಳಿಗೆ ಮತ್ತು ಅದನ್ನ ಬೆಂಬಲಿಸುವವರಿಗೆ ಏನು ಮಾಡುತ್ತಾರೆ?

  • ಯೆಹೋವ ದೇವರು ಮತ್ತು ಯೇಸು ಮಾಡುವ ತೀರ್ಪು ನ್ಯಾಯವಾಗಿರುತ್ತೆ ಅಂತ ನಿಮಗೆ ಅನಿಸುತ್ತಾ? ಯಾಕೆ ಹಾಗೆ ಅನಿಸುತ್ತೆ?

5. ಯೇಸು ಒಬ್ಬ ಒಳ್ಳೇ ರಾಜ

ದೇವರ ಸರ್ಕಾರದ ರಾಜನಾಗಿ ಯೇಸು ಭೂಮಿಯಲ್ಲಿರೋ ಜನರಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡುತ್ತಾನೆ. ಜನರಿಗೆ ಸಹಾಯ ಮಾಡೋ ಮನಸ್ಸು ಯೇಸುವಿಗಿದೆ ಮತ್ತು ಅದನ್ನ ಮಾಡುವ ಶಕ್ತಿಯನ್ನೂ ದೇವರು ಆತನಿಗೆ ಕೊಟ್ಟಿದ್ದಾನೆ. ಯೇಸು ಅದನ್ನ ಈಗಾಗಲೇ ಹೇಗೆ ಮಾಡಿದ್ದಾನೆ ಅಂತ ತಿಳಿಯಲು ಈ ವಿಡಿಯೋ ನೋಡಿ.

ಮುಂದೆ ದೇವರ ಸರ್ಕಾರದಲ್ಲಿ ಆತನು ಏನು ಮಾಡ್ತಾನೆ ಅಂತ ಯೇಸು ಭೂಮಿಯಲ್ಲಿದ್ದಾಗ ತೋರಿಸಿಕೊಟ್ಟನು. ಮುಂದೆ ಕೊಡಲಾಗಿರುವ ಯಾವ ಆಶೀರ್ವಾದಗಳನ್ನ ನೀವು ನೋಡಕ್ಕೆ ಇಷ್ಟಪಡುತ್ತೀರಾ? ಆ ಆಶೀರ್ವಾದಗಳ ಬಗ್ಗೆ ತಿಳಿಯಲು ಕೊಡಲಾಗಿರುವ ವಚನಗಳನ್ನ ಸಹ ಓದಿ.

ಯೇಸು ಭೂಮಿಯಲ್ಲಿದ್ದಾಗ . . .

ಯೇಸು ಸ್ವರ್ಗದಿಂದ ಆಳುವಾಗ . . .

  • ಚಂಡಮಾರುತಗಳನ್ನ ನಿಯಂತ್ರಿಸಿದ್ದಾನೆ.—ಮಾರ್ಕ 4:36-41.

  • ಸಾವಿರಾರು ಜನರಿಗೆ ಅದ್ಭುತಕರವಾಗಿ ಊಟ ಕೊಟ್ಟಿದ್ದಾನೆ.—ಮತ್ತಾಯ 14:17-21.

  • ಅನೇಕ ಜನರ ಕಾಯಿಲೆಗಳನ್ನ ಗುಣಪಡಿಸಿದ್ದಾನೆ.—ಲೂಕ 18:35-43.

  • ಎಲ್ಲಾ ಜನರಿಗೆ ಒಳ್ಳೇ ಆರೋಗ್ಯವನ್ನ ಕೊಡ್ತಾನೆ.—ಯೆಶಾಯ 33:24.

  • ಸತ್ತವರನ್ನ ಎಬ್ಬಿಸಿದ್ದಾನೆ.—ಲೂಕ 8:49-55.

  • ಸತ್ತವರನ್ನ ಎಬ್ಬಿಸುತ್ತಾನೆ, ಸಾವನ್ನ ತೆಗೆದುಹಾಕ್ತಾನೆ.—ಪ್ರಕಟನೆ 21:3, 4.

6. ದೇವರ ಸರ್ಕಾರ ಸುಂದರ ಭವಿಷ್ಯವನ್ನ ತರುತ್ತೆ

ಜನರು ಹೇಗೆ ಜೀವನ ಮಾಡಬೇಕು ಅಂತ ಯೆಹೋವ ದೇವರು ಅಂದುಕೊಂಡಿದ್ದನೋ ಅದನ್ನ ದೇವರ ಸರ್ಕಾರದ ಮೂಲಕ ನಿಜ ಮಾಡುತ್ತಾನೆ. ಆಗ ಜನರು ಇದೇ ಭೂಮಿಯಲ್ಲಿ ಎಂದೆಂದೂ ಖುಷಿಖುಷಿಯಾಗಿ ಇರುತ್ತಾರೆ. ಯೆಹೋವ ದೇವರು ತನ್ನ ಮಗನ ಮೂಲಕ ಏನು ಮಾಡಲಿದ್ದಾನೆ ಅನ್ನೋದನ್ನ ತಿಳಿಯಲು ವಿಡಿಯೋ ನೋಡಿ.

ಕೀರ್ತನೆ 145:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರು ‘ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸುತ್ತಾನೆ’ ಅಂತ ಗೊತ್ತಾದಾಗ ನಿಮಗೆ ಹೇಗೆ ಅನಿಸುತ್ತೆ?

ಕೆಲವರು ಹೀಗಂತಾರೆ: “ಎಲ್ಲರೂ ಕೈ ಜೋಡಿಸಿದರೆ, ಲೋಕದ ಸಮಸ್ಯೆಗಳನ್ನ ಸರಿ ಮಾಡಬಹುದು.”

  • ಮನುಷ್ಯರಿಂದ ಸರಿ ಮಾಡಲು ಆಗದಿರುವ ಯಾವೆಲ್ಲ ಸಮಸ್ಯೆಗಳನ್ನ ದೇವರ ಸರ್ಕಾರ ಸರಿ ಮಾಡುತ್ತೆ?

ನಾವೇನು ಕಲಿತ್ವಿ

ದೇವರ ಸರ್ಕಾರ ಭೂಮಿಯನ್ನ ಪರದೈಸಾಗಿ ಮಾಡುತ್ತೆ. ಅಲ್ಲಿ ಒಳ್ಳೇ ಜನರು ಮಾತ್ರ ಇರುತ್ತಾರೆ, ಅವರು ಯೆಹೋವ ದೇವರನ್ನ ಯಾವಾಗ್ಲೂ ಆರಾಧಿಸುತ್ತಾರೆ.

ನೆನಪಿದೆಯಾ

  • ದೇವರ ಸರ್ಕಾರ ಯೆಹೋವನ ಹೆಸರನ್ನ ಹೇಗೆ ಪವಿತ್ರ ಮಾಡುತ್ತೆ?

  • ಬೈಬಲ್‌ನಲ್ಲಿ ಕೊಡಲಾಗಿರುವ ಎಲ್ಲಾ ಆಶೀರ್ವಾದಗಳು ಪರದೈಸಿನಲ್ಲಿ ನಿಜವಾಗುತ್ತೆ ಅಂತ ಹೇಗೆ ನಂಬಬಹುದು?

  • ದೇವರ ಸರ್ಕಾರ ತರಲಿರುವ ಯಾವ ಆಶೀರ್ವಾದಗಳನ್ನ ನೋಡೋಕೆ ನೀವು ಇಷ್ಟಪಡುತ್ತೀರಾ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಹರ್ಮಗೆದೋನ್‌ ಅಂದರೇನು ಅನ್ನೋದನ್ನ ತಿಳಿಯಿರಿ.

“ಹರ್ಮಗೆದೋನ್‌ ಯುದ್ಧ ಅಂದರೇನು?” (jw.org ಲೇಖನ)

ಯೇಸು ಹೇಳಿದ “ಮಹಾ ಸಂಕಟ” ಬಂದಾಗ ಯಾವೆಲ್ಲ ಘಟನೆಗಳು ನಡಿಯುತ್ತೆ ಅಂತ ತಿಳ್ಕೊಳ್ಳಿ.—ಮತ್ತಾಯ 24:21.

“ಮಹಾ ಸಂಕಟ ಅಂದ್ರೆ ಏನು?” (jw.org ಲೇಖನ)

ನೀವು ನಿಮ್ಮ ಕುಟುಂಬದವರ ಜೊತೆ ಪರದೈಸಲ್ಲಿ ಇದ್ದೀರಾ ಅಂತ ಚಿತ್ರಿಸಿಕೊಳ್ಳಿ.

ಪರದೈಸಿನ ಜೀವನ ಚಿತ್ರಿಸಿಕೊಳ್ಳಿ (1:50)

ರಾಜಕೀಯ ಹೋರಾಟಗಳನ್ನ ಮಾಡ್ತಿದ್ದ ಒಬ್ಬ ವ್ಯಕ್ತಿಗೆ ತುಂಬ ಪ್ರಶ್ನೆಗಳು ಇತ್ತು. ಆ ಪ್ರಶ್ನೆಗಳಿಗೆ ಹೇಗೆ ಉತ್ತರ ಸಿಕ್ಕಿತು ಅಂತ “ಜೀವನದ ಬಗ್ಗೆ ಇರುವ ಅನೇಕ ಪ್ರಶ್ನೆಗಳು ನನ್ನನ್ನ ಯಾವಾಗ್ಲೂ ಕಾಡ್ತಾ ಇತ್ತು” ಅನ್ನೋ ಲೇಖನದಲ್ಲಿ ತಿಳಿಯಿರಿ.

“ಬದುಕು ಬದಲಾದ ವಿಧ” (ಕಾವಲಿನಬುರುಜು ಲೇಖನ)