ಇಸ್ರಾಯೇಲ್ ಮತ್ತು ಅದರ ಸುತ್ತಮುತ್ತಲಿನ ಜನಾಂಗಗಳು
ಇಸ್ರಾಯೇಲ್ ಮತ್ತು ಅದರ ಸುತ್ತಮುತ್ತಲಿನ ಜನಾಂಗಗಳು
ಯೆಹೋವನು ಅಬ್ರಹಾಮನಿಗೆ ಹೇಳಿದ್ದು: ‘ನೀನು ಮೆಸೊಪೊತಾಮ್ಯದಲ್ಲಿರುವ ಊರ್ ಅನ್ನು ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.’ ಆದರೆ, ಆ ದೇಶದಲ್ಲಿ ಮತ್ತು ಅದರ ಸುತ್ತಮುತ್ತಲಲ್ಲಿ ಬೇರೆ ಜನಾಂಗಗಳವರು ವಾಸಿಸುತ್ತಿದ್ದರು.—ಆದಿ 12:1-3; 15:17-21.
ದೇವಜನರು ಐಗುಪ್ತದಿಂದ ಹೊರಟುಬಂದಾಗ, ತಾವು ‘ಮೋವಾಬ್ಯರ ಮುಖಂಡರಂಥ’ ಶತ್ರುಗಳಿಂದ ಪ್ರತಿರೋಧವನ್ನು ಎದುರಿಸಬೇಕಾಗಬಹುದೆಂಬುದು ಅವರಿಗೆ ತಿಳಿದಿತ್ತು. (ವಿಮೋ 15:14, 15) ವಾಗ್ದತ್ತ ದೇಶಕ್ಕೆ ಹೋಗಲು ಇಸ್ರಾಯೇಲ್ಯರು ಹಿಡಿದ ಹಾದಿಯಲ್ಲಿ ಅಮಾಲೇಕ್ಯರು, ಮೋವಾಬ್ಯರು, ಅಮ್ಮೋನಿಯರು, ಮತ್ತು ಅಮೋರಿಯರು ಇದ್ದರು. (ಅರಣ್ಯ 21:11-13; ಧರ್ಮೋ 2:16-33; 23:3, 4) ಮತ್ತು ದೇವರು ಇಸ್ರಾಯೇಲ್ಯರಿಗೆ ಕೊಡುವೆನೆಂದು ವಾಗ್ದಾನಿಸಿದಂಥ ದೇಶದಲ್ಲೂ ಅವರು ಇನ್ನಿತರ ಶತ್ರು ಜನಾಂಗಗಳನ್ನು ಎದುರಿಸಲಿದ್ದರು.
ಇಸ್ರಾಯೇಲ್ಯರು, ನಾಶನಕ್ಕೆ ಅರ್ಹರಾಗಿದ್ದ ಏಳು “ಜನಾಂಗಗಳನ್ನು,” ಅಂದರೆ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರನ್ನು ಅವರ ಎದುರಿನಿಂದ ‘ಹೊರಡಿಸಬೇಕೆಂದು’ ದೇವರು ಹೇಳಿದನು. ಆ ಜನಾಂಗಗಳವರು ನೈತಿಕವಾಗಿ ಕೀಳ್ಮಟ್ಟಕ್ಕಿಳಿದವರೂ, ಧಾರ್ಮಿಕವಾಗಿ ಭ್ರಷ್ಟರೂ ಆಗಿದ್ದರು. ಅವರ ದೇವತೆಗಳಲ್ಲಿ, ಬಾಳನು (ಲಿಂಗದ ಕಲ್ಲು ಕಂಬಗಳಿಗಾಗಿ ಪ್ರಸಿದ್ಧನು), ಮೋಲೆಕ್ (ಶಿಶುಗಳನ್ನು ಬಲಿಯರ್ಪಿಸಲಾಗುತ್ತಿತ್ತು), ಮತ್ತು ಫಲೋತ್ಪತ್ತಿಯ ದೇವತೆಯಾದ ಅಷ್ಟೋರೆತ್ (ಅಸ್ಟಾರ್ಟೆ) ಸೇರಿದ್ದವು.—ಧರ್ಮೋ 7:1-4; 12:31; ವಿಮೋ 23:23; ಯಾಜ 18:21-25; 20:2-5; ನ್ಯಾಯ 2:11-14; ಕೀರ್ತ 106:37, 38.
ಕೆಲವೊಮ್ಮೆ, ದೇವರು ಇಸ್ರಾಯೇಲ್ಯರಿಗೆ ಕೊಡಲಿದ್ದ ಇಡೀ ಕ್ಷೇತ್ರವನ್ನು, ಅಂದರೆ ಸೀದೋನಿನ ಉತ್ತರದಿಂದಲೂ “ಐಗುಪ್ತದೇಶ ಮುಂದಿರುವ ಹಳ್ಳ”ದ (“ಐಗುಪ್ತದ ತೊರೆ ಕಣಿವೆ,” NW) ವರೆಗಿನ ಕ್ಷೇತ್ರವನ್ನು “ಕಾನಾನ್” ಎಂದು ಕರೆಯಲಾಗುತ್ತಿತ್ತು. (ಅರಣ್ಯ 13:2, 21; 34:2-12; ಆದಿ 10:19) ಬೇರೆ ಸಮಯಗಳಲ್ಲಿ ಬೈಬಲು, ಆ ದೇಶದ ವಿಭಿನ್ನ ರಾಷ್ಟ್ರಗಳು, ನಗರರಾಜ್ಯಗಳು ಇಲ್ಲವೆ ಜನಾಂಗಗಳನ್ನು ಹೆಸರಿಸುತ್ತದೆ. ಕೆಲವು ಜನಾಂಗಗಳು ಒಂದು ಪ್ರತ್ಯೇಕವಾದ ಸ್ಥಳದಲ್ಲಿರುತ್ತಿದ್ದವು. ಉದಾಹರಣೆಗೆ ಫಿಲಿಷ್ಟಿಯರು ಕರಾವಳಿಯಲ್ಲಿ ಮತ್ತು ಯೆಬೂಸಿಯರು ಯೆರೂಸಲೇಮಿನ ಹತ್ತಿರದಲ್ಲಿರುವ ಪರ್ವತಗಳಲ್ಲಿರುತ್ತಿದ್ದರು. (ಅರ 13:29; ಯೆಹೋ 13:2) ಇತರರು ಸಮಯ ದಾಟಿದಂತೆ ತಮ್ಮ ಸ್ಥಳಗಳನ್ನು ಇಲ್ಲವೆ ಕ್ಷೇತ್ರಗಳನ್ನು ಬದಲಾಯಿಸಿದರು.—ಆದಿ 34:1, 2; 49:30; ಯೆಹೋ 1:4; 11:3; ನ್ಯಾಯ 1:16, 23-26.
ಇಸ್ರಾಯೇಲ್ಯರು ಐಗುಪ್ತದಿಂದ ಹೊರಟ ಸಮಯದಲ್ಲಿ, ಅಮೋರಿಯರು ಅತಿ ಪ್ರಮುಖ ಹಾಗೂ ಬಲಿಷ್ಠವಾದ ಗೋತ್ರವಾಗಿದ್ದಿರಬಹುದು. * (ಧರ್ಮೋ 1:19-21; ಯೆಹೋ 24:15) ಆರ್ನೋನ್ ಹಳ್ಳದ (“ಆರ್ನೋನ್ ತೊರೆ ಕಣಿವೆ,” NW) ವರೆಗೂ ಅವರು ಮೋವಾಬ್ಯ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದರು. ಆದರೂ, ಯೆರಿಕೋವಿನಿಂದ ಹಿಡಿದು ಆ ಕ್ಷೇತ್ರವನ್ನು ಇನ್ನೂ ‘ಮೋವಾಬ್ಯರ ಬೈಲು’ ಎಂದೇ ಕರೆಯಲಾಗುತ್ತಿತ್ತು. ಅಮೋರಿಯ ರಾಜರು, ಬಾಷಾನ್ ಮತ್ತು ಗಿಲ್ಯಾದನ್ನು ಸಹ ಆಳಿದರು.—ಅರ 21:21-23, 33-35; 22:1; 33:46-51.
ಇಸ್ರಾಯೇಲ್ಯರಿಗೆ ದೇವರ ಬೆಂಬಲವಿದ್ದರೂ, ಖಂಡಿಸಲ್ಪಟ್ಟಿದ್ದ ಆ ಎಲ್ಲಾ ಜನಾಂಗಗಳನ್ನು ಅವರು ನಿರ್ಮೂಲಗೊಳಿಸಲಿಲ್ಲ. ಮತ್ತು ಇವು ಸಮಯಾನಂತರ ಇಸ್ರಾಯೇಲ್ಯರನ್ನು ಪಾಶದಲ್ಲಿ ಸಿಕ್ಕಿಸಿದವು. (ಅರ 33:55; ಯೆಹೋ 23:13; ನ್ಯಾಯ 2:3; 3:5, 6; 2ಅರ 21:11) ಹೌದು, “ಸುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು” ಎಂಬ ಎಚ್ಚರಿಕೆಯು ಕೊಡಲ್ಪಟ್ಟರೂ ಇಸ್ರಾಯೇಲ್ಯರು ಪಾಶದಲ್ಲಿ ಸಿಕ್ಕಿಬಿದ್ದರು.—ಧರ್ಮೋ 6:14; 13:7.
[ಪಾದಟಿಪ್ಪಣಿ]
^ ಪ್ಯಾರ. 6 “ಕಾನಾನ್ಯರು” ಎಂಬ ಪದದಂತೆಯೇ “ಅಮೋರಿಯರು” ಎಂಬ ಪದವನ್ನೂ ಆ ದೇಶದಲ್ಲಿರುವ ಎಲ್ಲಾ ಜನರಿಗಾಗಿ ಸಾಮೂಹಿಕವಾಗಿ ಉಪಯೋಗಿಸಸಾಧ್ಯವಿತ್ತು, ಇಲ್ಲವೆ ಪ್ರತ್ಯೇಕವಾಗಿ ಒಂದು ಗೋತ್ರಕ್ಕೆ ಸೂಚಿಸಲು ಸಾಧ್ಯವಿತ್ತು.—ಆದಿ 15:16; 48:22.
[ಪುಟ 11ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ವಾಗ್ದತ್ತ ದೇಶದಿಂದ ಉಚ್ಚಾಟಿಸಲ್ಪಡಬೇಕಾಗಿದ್ದ ಜನಾಂಗಗಳು
ಫಿಲಿಷ್ಟಿಯ (D8)
C8 ಅಷ್ಕೆಲೋನ್
C9 ಗಾಜಾ
D8 ಅಷ್ಡೋದ್
D8 ಗತ್
D9 ಗೆರಾರ್
ಕಾನಾನ್ (D8)
B10 ಅಮಾಲೇಕ್ಯರು
C12 ಹಚರದ್ದಾರ್ (ಅದ್ದಾರ್?)
C12 ಕಾದೇಶ್ (ಕಾದೇಶ್‌ಬರ್ನೇಯ)
D8 ಲಾಕೀಷ್
D9 ಬೇರ್ಷೆಬ
D10 ಅಮೋರಿಯರು
D11 ದಕ್ಷಿಣಪ್ರಾಂತ
E4 ದೋರ್
E5 ಮೆಗಿದ್ದೋ
E5 ತಾನಾಕ್
E6 ಅಫೇಕ್
E6 ಹಿವ್ವಿಯರು
E7 ಯೆಬೂಸಿಯರು
E8 ಬೇತ್‌ಷೆಮೆಷ್
E8 ಹೆಬ್ರೋನ್ (ಕಿರ್ಯತರ್ಬ)
E9 ಹಿತ್ತಿಯರು
E9 ದೆಬೀರ್
E10 ಅರಾದ್ (ಕಾನಾನ್ಯ)
E10 ಕೇನ್ಯರು
E11 ಅಕ್ರಬ್ಬೀಮ್
F4 ಗಿರ್ಗಾಷಿಯರು
F6 ಶೆಕೆಮ್
F7 ಪೆರಿಜ್ಜೀಯರು
F7 ಗಿಲ್ಗಾಲ್
F7 ಯೆರಿಕೋ
F8 ಯೆರೂಸಲೇಮ್
G2 ಹಿವ್ವಿಯರು
G2 ದಾನ್ (ಲಯಿಷ್)
G3 ಹಾಚೋರ್
ಫೊಯಿನಿಕೆ (F2)
E2 ತೂರ್
F1 ಸೀದೋನ್
ಎದೋಮ್ (F12)
F11 ಸೇಯೀರ್
G11 ಬೊಚ್ರ
ಅಮೋರಿಯರು (ಸೀಹೋನ) (G8)
G6 ಗಿಲ್ಯಾದ್
G7 ಶಿಟ್ಟೀಮ್
G7 ಹೆಷ್ಬೋನ್
G9 ಅರೋಯೇರ್
ಸಿರಿಯ (H1)
G1 ಬಾಲ್ಗಾದ್
G2 ಹಿವ್ವಿಯರು
I1 ದಮಸ್ಕ
ಮೋವಾಬ್ (H10)
ಅಮೋರಿಯರು (ಓಗ್) (I5)
G6 ಗಿಲ್ಯಾದ್
H3 ಬಾಷಾನ್
H4 ಅಷ್ಟರೋತ್
H4 ಎದ್ರೈ
ಅಮ್ಮೋನ್ (I7)
H7 ರಬ್ಬಾ
[ಮರಳುಗಾಡುಗಳು]
H12 ಅರಬ್ಬೀ ಮರುಭೂಮಿ
[ಪರ್ವತಗಳು]
E4 ಕರ್ಮೆಲ್ ಬೆಟ್ಟ
E11 ಹೋರ್ ಬೆಟ್ಟ
G1 ಹೆರ್ಮೋನ್ ಬೆಟ್ಟ
G8 ನೆಬೋ ಬೆಟ್ಟ
[ಜಲಾಶಯಗಳು]
C6 ಮೆಡಿಟರೇನಿಯನ್ ಸಮುದ್ರ (ಮಹಾ ಸಮುದ್ರ)
F9 ಲವಣ ಸಮುದ್ರ
G4 ಗಲಿಲಾಯ ಸಮುದ್ರ
[ನದಿಗಳು ಮತ್ತು ಹೊಳೆಗಳು]
B11 ಐಗುಪ್ತದ ತೊ. ಕ.
F6 ಯೊರ್ದನ್ ಹೊಳೆ
G6 ಯಬ್ಬೋಕ್ ತೊ. ಕ.
G9 ಆರ್ನೋನ್ ತೊ. ಕ.
G11 ಜೆರೆದ್ ತೊ. ಕ.
[ಪುಟ 10ರಲ್ಲಿರುವ ಚಿತ್ರಗಳು]
ಬಲಬದಿ: ಗೂಳಿಗಳು ಮತ್ತು ಕುರಿಗಳಿಗಾಗಿ ಪ್ರಸಿದ್ಧವಾಗಿದ್ದ ಬಾಷಾನನ್ನು ಅಮೋರಿಯ ರಾಜ ಓಗನು ಆಳಿದನು
ಕೆಳಗೆ: ಮೋವಾಬ್, ಲವಣ ಸಮುದ್ರದಾಚೆಗೆ ಯೆಹೂದದ ಅರಣ್ಯದ ಕಡೆಗೆ ಮುಖಮಾಡಿಕೊಂಡಿದೆ
[ಪುಟ 11ರಲ್ಲಿರುವ ಚಿತ್ರ]
ಬಾಳ್, ಮೋಲೆಕ್ ಮತ್ತು ಫಲೋತ್ಪತ್ತಿಯ ದೇವತೆಯಾದ ಅಷ್ಟೋರೆತ್ (ತೋರಿಸಲ್ಪಟ್ಟಿದೆ) ದೇವತೆಗಳನ್ನು ಆರಾಧಿಸುತ್ತಿದ್ದ ಜನಾಂಗಗಳನ್ನು ಉಚ್ಚಾಟಿಸುವಂತೆ ಯೆಹೋವನು ಇಸ್ರಾಯೇಲಿಗೆ ನಿರ್ದೇಶನಕೊಟ್ಟನು