ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗ್ರೀಸ್‌ ಮತ್ತು ರೋಮ್‌ ಯೆಹೂದ್ಯರ ಮೇಲೆ ಪ್ರಭಾವ ಬೀರುತ್ತವೆ

ಗ್ರೀಸ್‌ ಮತ್ತು ರೋಮ್‌ ಯೆಹೂದ್ಯರ ಮೇಲೆ ಪ್ರಭಾವ ಬೀರುತ್ತವೆ

ಗ್ರೀಸ್‌ ಮತ್ತು ರೋಮ್‌ ಯೆಹೂದ್ಯರ ಮೇಲೆ ಪ್ರಭಾವ ಬೀರುತ್ತವೆ

ಯಾವುದು ಗ್ರೀಕ್‌ ಸಾಮ್ರಾಜ್ಯವಾಗಿ ವಿಸ್ತರಿಸಿತೊ ಅದು ಆರಂಭವಾದದ್ದು ಮಕೆದೋನ್ಯದ ಪರ್ವತಗಳಲ್ಲಿ. ಅಲ್ಲಿ 20ರ ಆರಂಭದ ಪ್ರಾಯದವನಾಗಿದ್ದ ಅಲೆಕ್ಸಾಂಡರನು ಪೂರ್ವದಿಕ್ಕಿನಲ್ಲಿ ದಂಡಯಾತ್ರೆಗೆ ಹೋಗುವುದರ ಬಗ್ಗೆ ಯೋಚಿಸತೊಡಗಿದನು. ಸಾ.ಶ.ಪೂ. 334ರಲ್ಲಿ ಯೂರೋಪ್‌ ಮತ್ತು ಏಷ್ಯಾವನ್ನು ಪ್ರತ್ಯೇಕಿಸುವ ಹೆಲೆಸ್‌ಪೊಯಿಂಟ್‌ (ದಾರ್‌ಡೆನೆಲ್ಸ್‌) ಅನ್ನು ದಾಟಿ ಅವನು ತನ್ನ ಸೈನ್ಯವನ್ನು ಮುನ್ನಡೆಸಿದನು. ಮಿಂಚಿನ ವೇಗದಲ್ಲಿ ಓಡುವಂಥ “ಚಿರತೆಯ” ಹಾಗೆ, ಅಲೆಕ್ಸಾಂಡರನ ನೇತೃತ್ವದ ಕೆಳಗೆ ಗ್ರೀಕರು ಕ್ಷಿಪ್ರವಾಗಿ ಒಂದರ ನಂತರ ಇನ್ನೊಂದು ವಿಜಯವನ್ನು ಪಡೆಯಲಾರಂಭಿಸಿದರು. (ದಾನಿ 7:⁠6) ಗ್ರ್ಯಾನಿಕಸ್‌ ನದಿಯ ಬಯಲುಗಳಲ್ಲಿ, ಟ್ರಾಯ್‌ ಎಂಬ ನಗರದ ಹತ್ತಿರ ಅಲೆಕ್ಸಾಂಡರನು ಪಾರಸಿಯರ ಮೇಲೆ ಜಯಸಾಧಿಸಿದನು ಮತ್ತು ಇಸಸ್‌ ಎಂಬಲ್ಲಿ ಅವರನ್ನು ಸಂಪೂರ್ಣವಾಗಿ ಸೋಲಿಸಿದನು.

ಗ್ರೀಕರು ಅರಾಮ್‌ ಮತ್ತು ಫೊಯಿನಿಕೆಯ ಮೇಲೆ ದಾಳಿಮಾಡಿದರು, ಮತ್ತು ಏಳು ತಿಂಗಳುಗಳ ಮುತ್ತಿಗೆಯ ನಂತರ ತೂರನ್ನು ಜಯಿಸಿದರು. (ಯೆಹೆ 26:​4, 12) ಯೆರೂಸಲೇಮನ್ನು ಬಿಟ್ಟು, ಅಲೆಕ್ಸಾಂಡರನು ಗಾಜ (ಗಾಜಾ)ವನ್ನು ಜಯಿಸಿದನು. (ಜೆಕ 9:⁠5) ಅವನು ಐಗುಪ್ತವನ್ನು ತಲಪಿದ ನಂತರ, ಅಲೆಗ್ಸಾಂಡ್ರಿಯ ಎಂಬ ನಗರವನ್ನು ಸ್ಥಾಪಿಸಿದನು. ಇದು ವಾಣಿಜ್ಯ ಹಾಗೂ ವಿದ್ಯೆಯ ಕೇಂದ್ರವಾಗಿ ಪರಿಣಮಿಸಿತು. ವಾಗ್ದತ್ತ ದೇಶವನ್ನು ಪುನಃ ಹಾದುಹೋಗುತ್ತಾ, ಅವನು ಪಾರಸಿಯರನ್ನು ನಿನೆವೆಯ ಪಾಳುಭೂಮಿಯ ಬಳಿಯಲ್ಲಿದ್ದ ಗಾಗಮೇಲದಲ್ಲಿ ಇನ್ನೊಮ್ಮೆ ಸೋಲಿಸಿದನು.

ಈಗ ಅಲೆಕ್ಸಾಂಡರನು ಬಾಬೆಲ್‌, ಶೂಷನ್‌ ಮತ್ತು ಪರ್ಸಿಪೊಲಿಸ್‌ ಅನ್ನು ಜಯಿಸಲಿಕ್ಕಾಗಿ ದಕ್ಷಿಣಕ್ಕೆ ತಿರುಗಿದನು. ಇವು ಪಾರಸಿಯರ ಆಡಳಿತ ಕೇಂದ್ರಗಳಾಗಿದ್ದವು. ನಂತರ ಅವನು ತ್ವರಿತಗತಿಯಲ್ಲಿ ಪಾರಸಿಯ ಆಧಿಪತ್ಯ ಕ್ಷೇತ್ರದ ಮಧ್ಯದಿಂದ ಮುಂದೆ ಚಲಿಸುತ್ತಾ, ಈಗ ಪಾಕಿಸ್ತಾನದಲ್ಲಿರುವ ಸಿಂಧು ನದಿಯಲ್ಲಿಗೆ ಬಂದು ತಲಪಿದನು. ಕೇವಲ ಎಂಟು ವರ್ಷಗಳಲ್ಲಿ ಅಲೆಕ್ಸಾಂಡರನು ಆ ಸಮಯದಲ್ಲಿ ಜ್ಞಾತವಾಗಿದ್ದ ಜಗತ್ತಿನ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಿದ್ದನು. ಆದರೆ ಸಾ.ಶ.ಪೂ. 323ರಲ್ಲಿ, ಅವನು 32 ವರ್ಷ ಪ್ರಾಯದವನಾಗಿದ್ದಾಗ ಬಾಬೆಲಿನಲ್ಲಿ ಮಲೇರಿಯ ಜ್ವರಕ್ಕೆ ತುತ್ತಾಗಿ ಸತ್ತನು.​—⁠ದಾನಿ 8:⁠8.

ವಾಗ್ದತ್ತ ದೇಶದಲ್ಲಿ ಗ್ರೀಕರ ಪ್ರಭಾವವು ಬಹಳಷ್ಟು ಪ್ರಬಲವಾಗಿತ್ತು. ಅಲೆಕ್ಸಾಂಡರನ ಸೇನೆಯ ಕೆಲವು ಮಂದಿ ಮಾಜಿ ಯೋಧರು ಆ ಕ್ಷೇತ್ರದಲ್ಲಿ ನೆಲೆಸಿದರು. ಮೊದಲನೇ ಶತಮಾನದೊಳಗೆ, ಗ್ರೀಕ್‌ ಭಾಷೆಯನ್ನಾಡುವ ನಗರಗಳ ಒಂದು ಒಕ್ಕೂಟವು (ದೆಕಪೊಲಿ) ಅಲ್ಲಿತ್ತು. (ಮತ್ತಾ 4:25; ಮಾರ್ಕ 7:31) ಹೀಬ್ರು ಶಾಸ್ತ್ರಗಳು ಗ್ರೀಕ್‌ ಭಾಷೆಯಲ್ಲಿ ಲಭ್ಯವಾಗತೊಡಗಿದ್ದವು. ಕ್ರೈಸ್ತ ಬೋಧನೆಗಳನ್ನು ಹಬ್ಬಿಸಲಿಕ್ಕಾಗಿ ಕಾಯ್‌ನೆ (ಸಾಮಾನ್ಯ ಗ್ರೀಕ್‌) ಅಂತಾರಾಷ್ಟ್ರೀಯ ಭಾಷೆಯಾಗಿ ಕಾರ್ಯನಡಿಸಿತು.

ರೋಮ್‌ ಸಾಮ್ರಾಜ್ಯ

ಪಶ್ಚಿಮದಲ್ಲಿ ಏನು ಸಂಭವಿಸುತ್ತಾ ಇತ್ತು? ರೋಮ್‌​—⁠ಈ ಹಿಂದೆ ಟೈಬರ್‌ ನದಿಯ ಬಳಿಯಲ್ಲಿದ್ದ ಹಳ್ಳಿಗಳ ಒಂದು ಗುಂಪು​—⁠ಹೆಸರುವಾಸಿಯಾಗುತ್ತಾ ಬಂತು. ಕಟ್ಟಕಡೆಗೆ, ರೋಮಿನ ಮಿಲಿಟರಿ ಸಂಘಟನೆ ಮತ್ತು ಕೇಂದ್ರೀಯ ರಾಜಕೀಯ ಶಕ್ತಿಯು, ಅಲೆಕ್ಸಾಂಡರನ ನಾಲ್ಕು ಸೇನಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದ್ದ ಕ್ಷೇತ್ರಗಳನ್ನು ಕಬಳಿಸುವಂತೆ ಆ ಸಾಮ್ರಾಜ್ಯವನ್ನು ಶಕ್ತಗೊಳಿಸಿತು. ಸಾ.ಶ.ಪೂ. 30ರೊಳಗೆ, ರೋಮನ್‌ ಸಾಮ್ರಾಜ್ಯವು ಪ್ರಬಲವಾಗಿತ್ತೆಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು, ಮತ್ತು ಇದು ದಾನಿಯೇಲನು ದರ್ಶನದಲ್ಲಿ ಕಂಡ ‘ಭಯಂಕರ ಮೃಗದ’ ಆರಂಭದ ತೋರಿಕೆಯಾಗಿತ್ತು.​—⁠ದಾನಿ 7:⁠7.

ರೋಮನ್‌ ಸಾಮ್ರಾಜ್ಯವು, ಬ್ರಿಟನ್‌ನಿಂದ ಹಿಡಿದು ದಕ್ಷಿಣದಿಕ್ಕಿನಲ್ಲಿ ಉತ್ತರ ಆಫ್ರಿಕದ ವರೆಗೆ, ಅಟ್ಲಾಂಟಿಕ್‌ ಸಾಗರದಿಂದ ಪರ್ಷಿಯನ್‌ ಕೊಲ್ಲಿಯ ವರೆಗೆ ವ್ಯಾಪಿಸಿತು. ಆ ಸಾಮ್ರಾಜ್ಯವು ಮೆಡಿಟರೇನಿಯನ್‌ ಸಮುದ್ರದ ಸುತ್ತಲೂ ಇದದ್ದರಿಂದ, ರೋಮನರು ಅದನ್ನು ಮಾರಾ ನೊಸ್ಟ್ರಮ್‌ (ನಮ್ಮ ಸಮುದ್ರ) ಎಂದು ಕರೆಯುತ್ತಿದ್ದರು.

ಯಾರ ದೇಶವು ರೋಮನ್‌ ಸಾಮ್ರಾಜ್ಯದ ಭಾಗವಾಗಿತ್ತೊ ಆ ಯೆಹೂದ್ಯರ ಮೇಲೂ ರೋಮ್‌ ಪ್ರಭಾವಬೀರಿತು. (ಮತ್ತಾ 8:​5-13; ಅಕೃ 10:​1, 2) ಯೇಸುವಿನ ದೀಕ್ಷಾಸ್ನಾನ ಮತ್ತು ಮರಣವು, ಸಮ್ರಾಟ ತಿಬೇರಿಯನ ಆಳಿಕೆಯ ಸಮಯದಲ್ಲಿ ನಡೆಯಿತು. ಕೆಲವು ರೋಮನ್‌ ದೊರೆಗಳು, ಕ್ರೈಸ್ತರನ್ನು ಪಾಶವೀಯ ರೀತಿಯಲ್ಲಿ ಹಿಂಸಿಸಿದರೂ, ಸತ್ಯಾರಾಧನೆಯನ್ನು ಪರಾಜಯಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. 13 ಶತಮಾನಗಳ ನಂತರ ಆ ಸಾಮ್ರಾಜ್ಯವು, ಉತ್ತರದಲ್ಲಿದ್ದ ಜರ್ಮನಿಯ ಕುಲಗಳ ಮತ್ತು ಪೂರ್ವದಲ್ಲಿ ಅಲೆಮಾರಿ ಆಕ್ರಮಣಕಾರರ ದಾಳಿಗಳಿಗೆ ಬಲಿಯಾಯಿತು.

[ಪುಟ 26ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗ್ರೀಕ್‌ ಸಾಮ್ರಾಜ್ಯ

ಅಲೆಕ್ಸಾಂಡರನ ನಂತರ, ಅವನ ನಾಲ್ಕು ಮಂದಿ ಸೇನಾಧಿಪತಿಗಳು ಆ ವಿಸ್ತಾರವಾದ ಸಾಮ್ರಾಜ್ಯವನ್ನು ನಿಯಂತ್ರಿಸಿದರು

▪ ಕಸಾಂಡರ್‌

▫ ಲೈಸಿಮೆಕಸ್‌

○ Iನೆಯ ಟಾಲೆಮಿ

• Iನೆಯ ಸೆಲ್ಯೂಕಸ್‌

A2 ▪ ಗ್ರೀಸ್‌

A2 ▪ ಅಥೆನ್ಸ್‌

A2 ▪ ಅಖಾಯ

A3 ○ ಕುರೇನೆ

A3 ○ ಲಿಬ್ಯ

B2 ▫ ಬಸಾಂಟಿಯಮ್‌

B3 ○ ಸೈಪ್ರಸ್‌

B4 ○ ನೋ ಅಮೋನ್‌ (ಥೀಬ್ಸ್‌)

C3 ಪಾಲ್ಮೈರ (ತದ್ಮೋರ್‌)

C3 ○ ಗೆರಸ (ಜರಷ್‌)

C3 ○ ಫಿಲದೆಲ್ಫಿಯ

C3 ○ ಯೆರೂಸಲೇಮ್‌

C5 ○ ಸೆವೇನೆ

G2 • ಅಲೆಗ್ಸಾಂಡ್ರಿಯ ಮಾರ್ಜಿನಿಯ

ಅಲೆಕ್ಸಾಂಡರನ ಮಾರ್ಗ

A2 ▪ ಮಕೆದೋನ್ಯ

A2 ▪ ಪೆಲ್ಲಾ

A2 ▫ ಥ್ರೇಸ್‌

B2 ▫ ಟ್ರಾಯ್‌

B2 ▫ ಸಾರ್ದಿಸ್‌

B2 ▫ ಎಫೆಸ

B2 ▫ ಗಾರ್ಡಿಯಮ್‌

C2 ▫ ಆ್ಯಂಕರ

C3 • ತಾರ್ಸ

C3 • ಇಸಸ್‌

C3 • ಅಂತಿಯೋಕ್ಯ (ಸಿರಿಯ)

C3 ○ ತೂರ್‌

C4 ○ ಗಾಜಾ

B4 ○ ಈಜಿಪ್ಟ್‌

B4 ○ ಮೋಫ್‌

B4 ○ ಅಲೆಗ್ಸಾಂಡ್ರಿಯ

A4 ○ ಸೀವ ಓಏಸೀಸ್‌

B4 ○ ಮೋಫ್‌

C4 ○ ಗಾಜಾ

C3 ○ ತೂರ್‌

C3 ○ ದಮಸ್ಕ

C3 • ಅಲೆಪ್ಪೊ

D3 • ನಿಸಬಸ್‌

D3 • ಗಾಗಮೇಲ

D3 • ಬಾಬೆಲ್‌

E3 • ಶೂಷನ್‌

E4 • ಪಾರಸಿಯ

E4 • ಪರ್ಸಿಪೊಲಿಸ್‌

E4 • ಪಸಾರ್ಗಡೀ

E3 • ಮೇದ್ಯ

E3 • ಎಕ್‌ಬ್ಯಾಟನ

E3 • ರೇಜೀ

E3 • ಹೆಕ್‌ಟಾಮ್‌ಪೈಲಸ್‌

F3 • ಪಾರ್ಥಿಯ

G3 • ಅರಿಯ

G3 • ಅಲೆಗ್ಸಾಂಡ್ರಿಯ ಅರೀಯೋನ್‌

G3 • ಅಲೆಗ್ಸಾಂಡ್ರಿಯ ಪ್ರಾಪ್ತೇಷಿಯ

F4 • ಡ್ರ್ಯಾಂಜಿಯಾನ

G4 • ಆರಕೋಸ್ಯ

G4 • ಅಲೆಗ್ಸಾಂಡ್ರಿಯ ಅರಾಕೊಸಿಜೊರಮ್‌

H3 • ಕಾಬೂಲ್‌

G3 • ಡ್ರ್ಯಾಪ್ಸಕ

H3 • ಅಲೆಗ್ಸಾಂಡ್ರಿಯ ಆಕ್ಸೀಯನ

G3 • ಡ್ರ್ಯಾಪ್ಸಕ

G3 • ಬ್ಯಾಕ್ಟ್ರಿಯ

G3 • ಬ್ಯಾಕ್ಟ್ರ

G2 • ಡರ್ಬೆಂಟ್‌

G2 • ಸಾಗ್‌ಡೀಅನ

G2 • ಮಾರಕಾಂಡ

G2 • ಬೂಕಾರ

G2 • ಮಾರಕಾಂಡ

H2 • ಅಲೆಗ್ಸಾಂಡ್ರಿಯ ಎಸ್ಕೇಟ್‌

G2 • ಮಾರಕಾಂಡ

G2 • ಡರ್ಬೆಂಟ್‌

G3 • ಬ್ಯಾಕ್ಟ್ರ

G3 • ಬ್ಯಾಕ್ಟ್ರೀಯ

G3 • ಡ್ರ್ಯಾಪ್ಸಕ

H3 • ಕಾಬೂಲ್‌$

H3 • ತಕ್ಷಶಿಲೆ

H5 • ಭಾರತ

H4 • ಅಲೆಗ್ಸಾಂಡ್ರಿಯ

G4 • ಗೆಡ್ರೋಸಿಯ

F4 • ಪುರ

E4 • ಪಾರಸಿಯ

F4 • ಅಲೆಗ್ಸಾಂಡ್ರಿಯ

F4 • ಕಾರ್ಮೇನ್ಯ

E4 • ಪಸಾರ್ಗಡೀ

E4 • ಪರ್ಸಿಪೊಲಿಸ್‌

E3 • ಶೂಷನ್‌

D3 • ಬಾಬೆಲ್‌

[ಬೇರೆ ಸ್ಥಳಗಳು]

A3 ಕ್ರೇತ

D4 ಅರೇಬಿಯ

[ಜಲಾಶಯಗಳು]

B3 ಮೆಡಿಟರೇನಿಯನ್‌ ಸಮುದ್ರ

C5 ಕೆಂಪು ಸಮುದ್ರ

E4 ಪರ್ಷಿಯನ್‌ ಖಾರಿ

G5 ಅರಬ್ಬೀ ಸಮುದ್ರ

[ನದಿಗಳು]

B4 ನೈಲ್‌

D3 ಯೂಫ್ರೇಟೀಸ್‌

D3 ಟೈಗ್ರಿಸ್‌

G4 ಸಿಂಧೂ ನದಿ

[ಪುಟ 27ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರೋಮನ್‌ ಸಾಮ್ರಾಜ್ಯ

A1 ಬ್ರಿಟನ್‌

A3 ಸ್ಪೇನ್‌

B1 ಜರ್ಮೇನ್ಯ

B2 ಗಾಲ್‌

B2 ಇಟಲಿ

B2 ರೋಮ್‌

B3 ಕಾರ್ತೆಜ್‌

C2 ಇಲ್ಲುರಿಕ

C3 ಗ್ರೀಸ್‌

C3 ಆ್ಯಕ್ಟಿಯಮ್‌

C3 ಕುರೇನೆ

D2 ಬಸಾಂಟಿಯಮ್‌ (ಕಾನ್‌ಸ್ಟೆಂಟಿನೋಪಲ್‌)

D3 ಏಷ್ಯಾ ಮೈನರ್‌

D3 ಎಫೆಸ

D3 ಅಲೆಪ್ಪೊ

D3 ಅಂತಿಯೋಕ್ಯ (ಸಿರಿಯ)

D3 ದಮಸ್ಕ

D3 ಗೆರಸ

D3 ಯೆರೂಸಲೇಮ್‌

D3 ಅಲೆಗ್ಸಾಂಡ್ರಿಯ

D4 ಈಜಿಪ್ಟ್‌

[ಜಲಾಶಯಗಳು]

A2 ಅಟ್ಲಾಂಟಿಕ್‌ ಸಾಗರ

C3 ಮೆಡಿಟರೇನಿಯನ್‌ ಸಮುದ್ರ

D2 ಕಪ್ಪು ಸಮುದ್ರ

D4 ಕೆಂಪು ಸಮುದ್ರ

[ಪುಟ 26ರಲ್ಲಿರುವ ಚಿತ್ರ]

ರಬ್ಬಾವನ್ನು ಪುನರ್ನಿರ್ಮಿಸಿದ ನಂತರ, IIನೇ ಟಾಲೆಮಿಯು ಅದನ್ನು ಫಿಲದೆಲ್ಫಿಯ ಎಂದು ಹೆಸರಿಸಿದನು. ಒಂದು ದೊಡ್ಡ ರೋಮನ್‌ ನಾಟಕಮಂದಿರದ ಅವಶೇಷಗಳು ಉಳಿದಿವೆ

[ಪುಟ 27ರಲ್ಲಿರುವ ಚಿತ್ರ]

ದೆಕಪೊಲಿಯ ಗೆರಸ ನಗರ (ಜರಷ್‌)

[ಪುಟ 27ರಲ್ಲಿರುವ ಚಿತ್ರ]

ಅಲೆಪ್ಪೊ ಹತ್ತಿರದಲ್ಲಿರುವ ಇದರಂಥ ರೋಮನ್‌ ರಸ್ತೆಗಳು, ಯೂರೋಪ್‌, ಉತ್ತರ ಆಫ್ರಿಕ ಮತ್ತು ಮಧ್ಯಪೂರ್ವದಾದ್ಯಂತ ಹರಡಿದವು. ಬೈಬಲ್‌ ಸತ್ಯವನ್ನು ಹಬ್ಬಿಸಲಿಕ್ಕಾಗಿ ಕ್ರೈಸ್ತರು ಈ ರಸ್ತೆಗಳಲ್ಲಿ ಪ್ರಯಾಣಿಸಿದರು