ಪಾಠ 17
ಅರ್ಥವಾಗುವ ಭಾಷೆ
ಹೇಗೆ ಮಾಡಬೇಕು:
-
ನಿಮಗೆ ಕೊಟ್ಟಿರುವ ಮಾಹಿತಿಯನ್ನು ಚೆನ್ನಾಗಿ ಅಧ್ಯಯನ ಮಾಡಿ. ವಿಷಯವನ್ನು ಮೊದಲು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಆಗ ಅದನ್ನು ಸರಳವಾಗಿ, ಸ್ವಂತ ಮಾತಲ್ಲಿ ವಿವರಿಸಲು ಸಾಧ್ಯವಾಗುತ್ತದೆ.
-
ಚಿಕ್ಕ ವಾಕ್ಯಗಳನ್ನು, ಸರಳ ಪದಗಳನ್ನು ಉಪಯೋಗಿಸಿ. ಉದ್ದ ವಾಕ್ಯಗಳನ್ನು ಉಪಯೋಗಿಸಬಹುದಾದರೂ ಮುಖ್ಯಾಂಶಗಳನ್ನು ಸಣ್ಣ ವಾಕ್ಯಗಳಲ್ಲಿ, ಸರಳ ಪದಗಳಲ್ಲಿ ಹೇಳಿ.
-
ಗೊತ್ತಿಲ್ಲದ ಪದಗಳನ್ನು ವಿವರಿಸಿ. ಕೇಳುಗರಿಗೆ ಗೊತ್ತಿಲ್ಲದ ಪದಗಳನ್ನು ಉಪಯೋಗಿಸದಿದ್ದರೆ ಒಳ್ಳೇದು. ಅವರಿಗೆ ಗೊತ್ತಿಲ್ಲದ ಪದವನ್ನು ಉಪಯೋಗಿಸಬೇಕಾದರೆ, ಬೈಬಲ್ನಲ್ಲಿರುವ ಅಷ್ಟು ಪರಿಚಯವಿಲ್ಲದ ವ್ಯಕ್ತಿಯ ಬಗ್ಗೆ ಮಾತಾಡಬೇಕಿದ್ದರೆ, ಪುರಾತನ ಅಳತೆ ಅಥವಾ ಸಂಪ್ರದಾಯದ ಬಗ್ಗೆ ಹೇಳಬೇಕಿದ್ದರೆ ಅದನ್ನು ವಿವರಿಸಿ.