ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು

ದೇವರು ಕ್ರೂರಿ ಅನ್ನೋ ಸುಳ್ಳು

ದೇವರು ಕ್ರೂರಿ ಅನ್ನೋ ಸುಳ್ಳು

ಅನೇಕರು ಏನು ನಂಬುತ್ತಾರೆ

“ಪಾಪ ಮಾಡುತ್ತಾ ಸಾಯೋ ಒಬ್ಬ ವ್ಯಕ್ತಿ ಸತ್ತ ಕೂಡಲೇ ನರಕಕ್ಕೆ ಹೋಗುತ್ತಾನೆ. ಅಲ್ಲಿ ಅವನು ನರಕದ ಶಿಕ್ಷೆಯನ್ನು ಅನುಭವಿಸುತ್ತಾ ‘ನಿರಂತರ ಬೆಂಕಿಯಲ್ಲಿ’ ಇರಬೇಕಾಗುತ್ತೆ.” (ಕೇಟ್ಚಿಸಂ ಆಫ್‌ ದಿ ಕ್ಯಾಥೊಲಿಕ್‌ ಚರ್ಚ್‌) ನರಕದಲ್ಲಿ ದೇವರಿಂದ ಸಂಪೂರ್ಣ ಪ್ರತ್ಯೇಕವಾಗಿ ಇರಬೇಕಾಗುತ್ತೆ ಅಂತ ಕೆಲವು ಧಾರ್ಮಿಕ ಗುರುಗಳು ಹೇಳುತ್ತಾರೆ.

ಬೈಬಲ್‌ನಲ್ಲಿರುವ ಸತ್ಯ

“ಪಾಪ ಮಾಡೋ ವ್ಯಕ್ತಿನೇ (ಪ್ರಾಣ) ಸಾಯ್ತಾನೆ.” (ಯೆಹೆಜ್ಕೇಲ 18:4) “ಸತ್ತವ್ರಿಗೆ ಏನೂ ಗೊತ್ತಿರಲ್ಲ.” (ಪ್ರಸಂಗಿ 9:5) ಪ್ರಾಣನೇ ಸತ್ತು ಹೋದ ಮೇಲೆ ‘ನಿರಂತರ ಬೆಂಕಿಯಲ್ಲಿ’ ಅಥವಾ ದೇವರಿಂದ ದೂರವಾಗಿ ಹೇಗೆ ನೋವನ್ನು ಅನುಭವಿಸೋಕೆ ಆಗುತ್ತೆ?

ಬೈಬಲ್‌ನಲ್ಲಿ “ನರಕ” ಅಂತ ಅನುವಾದ ಮಾಡಿದ ಹೀಬ್ರೂ ಮತ್ತು ಗ್ರೀಕ್‌ ಪದದ ಅರ್ಥ ಸಾಮಾನ್ಯ ಸಮಾಧಿಯನ್ನ ಸೂಚಿಸುತ್ತೆ. ಉದಾಹರಣೆಗೆ, ಯೋಬನಿಗೆ ಕಾಯಿಲೆ ಬಂದಾಗ ಅವನು ಹೀಗೆ ಪ್ರಾರ್ಥಿಸಿದ: ‘ನೀವು ನನ್ನನ್ನ ಸಮಾಧಿಯಲ್ಲಿ [“ನರಕದಲ್ಲಿ,” ಡೌಯ್‌-ರೀಮ್ಸ್‌ ವರ್ಷನ್‌] ಮುಚ್ಚಿಡಬೇಕು ಅನ್ನೋದೇ ನನ್ನ ಆಸೆ.’ (ಯೋಬ 14:13, ಪವಿತ್ರ ಬೈಬಲ್‌–ಈ­ಸಿ-ಟೂ-ರೀಡ್‌ ವರ್ಷನ್‌) ಯೋಬ ಸತ್ತ ಮೇಲೆ ತಾನು ನರಕದಲ್ಲಿ ಶಿಕ್ಷೆ ಅನುಭವಿಸುತ್ತೇನೆ ಅಂತಾನೋ ಅಥವಾ ದೇವರಿಂದ ದೂರ ಆಗಿ ನೋವನ್ನ ಅನುಭವಿಸುತ್ತೇನೆ ಅಂತಾನೋ ಹೇಳಿಲ್ಲ. ತನ್ನನ್ನ ಸಮಾಧಿಯಲ್ಲಿ ಇಡಬೇಕು ಅಂತ ಕೇಳಿಕೊಂಡ.

ಇದು ಯಾಕೆ ಮುಖ್ಯ

ಕ್ರೂರತೆ ನಮ್ಮನ್ನ ದೇವರಿಂದ ದೂರ ಮಾಡುತ್ತೆ. ಮೆಕ್ಸಿಕೋದಲ್ಲಿರೋ ರೋಸಿಯೋ ಹೀಗೆ ಹೇಳುತ್ತಾಳೆ, “ಚಿಕ್ಕ ವಯಸ್ಸಿಂದ ನನಗೆ ನರಕದ ಸಿದ್ಧಾಂತವನ್ನ ಕಲಿಸಲಾಯಿತು. ನನಗೆ ಎಷ್ಟು ಹೆದರಿಕೆ ಆಯಿತು ಅಂದ್ರೆ ದೇವರಲ್ಲಿ ಒಳ್ಳೇ ಗುಣಗಳೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆತನೊಬ್ಬ ಕೋಪಿಷ್ಠ, ಕ್ರೂರಿ ಅಂತ ನಾನು ನಂಬಿದೆ.”

ದೇವರ ನ್ಯಾಯತೀರ್ಪಿನ ಬಗ್ಗೆ ಮತ್ತು ಸತ್ತವರ ಸ್ಥಿತಿ ಬಗ್ಗೆ ಬೈಬಲ್‌ನಿಂದ ಕಲಿತಾಗ ದೇವರ ಬಗ್ಗೆ ಇರೋ ತಪ್ಪಭಿಪ್ರಾಯವನ್ನು ರೋಸಿಯೋ ಬದಲಾಯಿಸಿಕೊಂಡಳು. ರೋಸಿಯೋ ಮುಂದುವರಿಸಿ ಹೀಗೆ ಹೇಳಿದಳು, “ನನ್ನ ಮನಸ್ಸು ಹಗುರ ಆಯ್ತು. ನಾನು ದೇವರ ಮೇಲೆ ನಂಬಿಕೆ ಇಡೋಕೆ ಶುರು ಮಾಡಿದೆ. ಆತನು ನಮ್ಮನ್ನ ಪ್ರೀತಿಸುತ್ತಾನೆ ನಾವೂ ಆತನನ್ನ ಪ್ರೀತಿಸಬಹುದು. ಒಬ್ಬ ತಂದೆ ತನ್ನ ಮಕ್ಕಳ ಕೈಹಿಡಿದು ಸಹಾಯ ಮಾಡಿದ ತರ ದೇವರು ನಮಗೆ ಸಹಾಯ ಮಾಡುತ್ತಾನೆ.”—ಯೆಶಾಯ 41:13.

ಅನೇಕರು ನರಕದ ಭಯದಿಂದ ಆ ಬೋಧನೆಯನ್ನ ನಂಬಿದ್ದಾರೆ. ನೀವು ದೇವರಿಗೆ ಹೆದರಿಕೊಂಡು ಆತನ ಸೇವೆ ಮಾಡಬೇಕು ಅಂತ ಆತನು ಬಯಸಲ್ಲ. ಬದಲಿಗೆ ಯೇಸು ಹೇಳಿದ್ದು: ‘ನಿನ್ನ ದೇವರಾದ ಯೆಹೋವನನ್ನ ನೀನು ಪ್ರೀತಿಸಬೇಕು.’ (ಮಾರ್ಕ 12:29, 30) ಅಷ್ಟೇ ಅಲ್ಲ, ದೇವರು ಇಂದು ಅನ್ಯಾಯ ಮಾಡಲ್ಲ ಅಂತ ನಾವು ಅರ್ಥ ಮಾಡಿಕೊಂಡ್ರೆ ಮುಂದೆ ಆತನು ಮಾಡೋ ನ್ಯಾಯವಾದ ತೀರ್ಪುಗಳ ಮೇಲೆ ನಾವು ಭರವಸೆ ಇಡಬಹುದು. ಯೋಬನ ಸ್ನೇಹಿತನಾದ ಎಲೀಹು ತರ “ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ, ಸರ್ವಶಕ್ತ ದೇವರು ತಪ್ಪನ್ನ ಮಾಡೋಕೆ ಸಾಧ್ಯಾನೇ ಇಲ್ಲ” ಅಂತ ನಾವು ಭರವಸೆಯಿಂದ ಹೇಳಬಹುದು.—ಯೋಬ 34:10.