ಭವಿಷ್ಯವಾಣಿ 2. ಬರಗಾಲ
ಭವಿಷ್ಯವಾಣಿ 2. ಬರಗಾಲ
“ಆಹಾರದ ಕೊರತೆ ಇರುತ್ತೆ.”—ಮಾರ್ಕ 13:8.
● ನೈಗರನಲ್ಲಿರೋ ಕ್ವಾರಟಾರ್ಜಿ ಅನ್ನೋ ಹಳ್ಳಿಗೆ ಒಬ್ಬ ವ್ಯಕ್ತಿ ಆಶ್ರಯ ಕೇಳ್ಕೊಂಡು ಬಂದ. ಅವನು ಮಾತ್ರ ಅಲ್ಲ, ಅವನ ಕುಟುಂಬದವರು ಕೂಡ ಬರಗಾಲದಿಂದ ತಪ್ಪಿಸಿಕೊಳ್ಳೋಕೆ ಅದೇ ದೇಶಕ್ಕೆ ಬೇರೆಬೇರೆ ಸ್ಥಳಗಳಿಂದ ಬಂದ್ರು. ಹೀಗೆ ಆ ವ್ಯಕ್ತಿಯ ಬಂಧು-ಬಳಗ ಒಂದೇ ಕಡೆ ಇದ್ದರೂ ಆ ವ್ಯಕ್ತಿ ಆ ದೇಶದಲ್ಲಿ ಒಂಟಿಯಾಗಿದ್ದಾನೆ. ಯಾಕೆ? ಯಾಕಂದ್ರೆ “ಅವ್ರಿಗೆ ಊಟ ಕೊಡೋಕೆ ಅವನ ಕೈಯಲ್ಲಿ ಆಗ್ಲಿಲ್ಲ, ಅದಕ್ಕೆ ಅವನ ಮುಖನ ಅವ್ರಿಗೆ ತೋರಿಸೋಕೂ ಇಷ್ಟ ಇರಲಿಲ್ಲ” ಅಂತ ಆ ಹಳ್ಳಿಯ ಮುಖ್ಯಸ್ಥ ಸೀಡಿ ಹೇಳಿದ.
ನಿಜ ಏನು? ಇಡೀ ಲೋಕದಲ್ಲಿ ಏಳು ಜನರಲ್ಲಿ ಒಬ್ರಿಗೆ ಪ್ರತಿ ದಿನ ಊಟ ಸಿಗಲ್ಲ. ಅದ್ರಲ್ಲೂ ಸಬ್ ಸಹಾರನ್ ಆಫ್ರಿಕಾದಲಂತೂ ಮೂರರಲ್ಲಿ ಒಬ್ರು ಹೊಟ್ಟೆಗಿಲ್ಲದೆ ಇರೋ ಪರಿಸ್ಥಿತಿಯಲ್ಲಿ ಇದ್ದಾರೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ, ನೆನೆಸಿ ಒಂದು ಕುಟುಂಬದಲ್ಲಿ ಅಪ್ಪ, ಅಮ್ಮ ಮತ್ತು ಒಂದು ಮಗು ಇದ್ರೆ ಅದ್ರಲ್ಲಿ ಇಬ್ರಿಗಷ್ಟೆ ಊಟ ಸಿಗುತ್ತೆ. ಒಬ್ರು ಉಪವಾಸ ಇರಬೇಕಾಗುತ್ತೆ. ಹೀಗಿರೋವಾಗ, ಪ್ರತಿ ದಿನ ಅವ್ರು ಅಪ್ಪ ಉಪವಾಸ ಇರಬೇಕಾ? ಅಮ್ಮ ಉಪವಾಸ ಇರಬೇಕಾ? ಅಥವಾ ಮಗು ಉಪವಾಸ ಇರಬೇಕಾ? ಅನ್ನೋದನ್ನ ಅವ್ರು ನಿರ್ಧಾರ ಮಾಡಬೇಕಾಗುತ್ತೆ.
ತಪ್ಪು ಅಭಿಪ್ರಾಯಗಳು: ಭೂಮಿಯಲ್ಲಿ, ನಮ್ಗೆ ಅಗತ್ಯ ಇರೋದಕ್ಕಿಂತ ಹೆಚ್ಚು ಆಹಾರನ ಬೆಳಿತಾಯಿದ್ದಾರೆ. ಆದ್ರೆ ಭೂಮಿಯಲ್ಲಿ ಬೆಳೆಯೊ ಆಹಾರನ ಚೆನ್ನಾಗಿ ಉಪಯೋಗಿಸೋದನ್ನ ಕಲಿಬೇಕು.
ಈ ಅಭಿಪ್ರಾಯ ಸರಿನಾ? ನಿಜ, ಹಿಂದಿನ ಕಾಲಕ್ಕೆ ಹೋಲಿಸೋದಾದ್ರೆ ರೈತರ ಕೈಯಲ್ಲಿ ಜಾಸ್ತಿ ಆಹಾರನ ಬೆಳೆದು ಅದನ್ನ ಬೇರೆ ಬೇರೆ ಸ್ಥಳಗಳಿಗೆ ಸಾಗಿಸೋಕ್ಕೆ ಆಗುತ್ತೆ. ಹೀಗಿರೋವಾಗ ನಮ್ಮ ಸರ್ಕಾರ ರೈತರು ಬೆಳೆಯುವಂತ ಆಹಾರನ ಸಮವಾಗಿ ಹಂಚ್ಚಿದ್ರೆ ಆಹಾರದ ಕೊರತೆಯ ಸಮಸ್ಯೆನೇ ಇರಲ್ಲ. ಆದ್ರೆ ಅವರು ಎಷ್ಟೇ ಪ್ರಯತ್ನಪಟ್ರೂ, ಅವರ ಕೈಯಲ್ಲಿ ಸರಿಯಾಗಿ ಆಹಾರನ ಎಲ್ರಿಗೂ ಹಂಚ್ಚೋಕೆ ಆಗ್ತಿಲ್ಲ.
ನಿಮ್ಮ ಅಭಿಪ್ರಾಯ ಏನು? ಮಾರ್ಕ 13:8 ರಲ್ಲಿ ಇರುವ ಮಾತುಗಳ ನೆರವೇರಿಕೆ ಆಗ್ತಾ ಇದ್ಯಾ? ತಂತ್ರಜ್ಞಾನ ಇಂದು ಮುಂದುವರೆದಿದೆ ನಿಜ, ಹೀಗಿದ್ರೂ ಇಡೀ ಲೋಕದ ಜನರಿಗೆ ಆಹಾರದ ಕೊರತೆಯ ಸಮಸ್ಯೆ ಇದ್ದೇ ಇದೆ ಅಲ್ವಾ?
ಭೂಕಂಪ ಮತ್ತು ಬರಗಳು ಕಡೇ ದಿನಗಳ ಇನ್ನೊಂದು ಸೂಚನೆ ಕಡೆ ನಡಿಸುತ್ತೆ.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರ]
“ನಿಮೋನಿಯಾ, ಭೇದಿ ಮತ್ತು ಇನ್ನಿತರ ಕಾಯಿಲೆಗಳಿಂದ ಸತ್ತು ಹೋದ ಎಷ್ಟೋ ಮಕ್ಕಳಿಗೆ ಒಳ್ಳೆ ಪೌಷ್ಠಿಕ ಆಹಾರ ಸಿಕ್ಕಿದ್ದಿದ್ರೆ ಅವ್ರು ಸಯ್ತಾ ಇರಲಿಲ್ಲ.”—ಆನ್ ಎಮ್. ವಿನೀಮನ್, ಯ್ಯೂ ಎನ್ ಚಿಲ್ಡ್ರನ್ಸ್ ಫಂಡ್ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ.
[ಪುಟ 5ರಲ್ಲಿರುವ ಚಿತ್ರ ಕೃಪೆ]
© Paul Lowe/Panos Pictures