ಸಮಸ್ಯೆಗಳ ಮಧ್ಯೆ ನಿರೀಕ್ಷೆ
ಸಮಸ್ಯೆಗಳ ಮಧ್ಯೆ ನಿರೀಕ್ಷೆ
“ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.”—2 ತಿಮೊತಿ 3:1.
ಕೆಳಗಡೆ ಕೊಟ್ಟಿರುವ ದುಃಖಕರ ಘಟನೆಯಲ್ಲಿ ಯಾವುದನ್ನಾದರೂ ನೀವು ಕೇಳಿದ್ದೀರಾ? ಅಥವಾ ಕಣ್ಣಾರೆ ನೋಡಿದ್ದೀರಾ?
● ಮಾರಣಾಂತಿಕ ರೋಗ ಸಾವಿರಾರು ಜನರ ಜೀವವನ್ನು ಬಲಿ ತಗೊಂಡಿದೆ.
● ಬರಗಾಲದಿಂದ ನೂರಾರು ಜನ ಬಾಧಿತರಾಗಿ ಹೊಟ್ಟೆಗಿಲ್ಲದೆ ಸಾವನ್ನಪ್ಪಿದ್ದಾರೆ.
● ಭೂಕಂಪದಿಂದ ಸಾವಿರಾರು ಜನ ಸತ್ತಿದ್ದಾರೆ ಮತ್ತು ಮನೆ ಕಳೆದುಕೊಂಡು ಪರದಾಡುತ್ತಿದ್ದಾರೆ.
ಇಂಥ ಎಷ್ಟೋ ಕಷ್ಟಗಳಿಂದ ಜನ ಎಷ್ಟು ನರಳುತ್ತಿದ್ದಾರೆ ಅನ್ನೋದರ ಬಗ್ಗೆ ಮುಂದಿನ ಲೇಖನಗಳಲ್ಲಿ ನೋಡಿ. ಅಲ್ಲದೆ, ಈ ರೀತಿಯ ಘಟನೆಗಳು “ಕೊನೇ ದಿನಗಳಲ್ಲಿ” ನಡೆಯುತ್ತೆ ಅಂತ ಬೈಬಲ್ ಸಾವಿರಾರು ವರ್ಷಗಳ ಹಿಂದೆನೇ ಹೇಳಿರುವುದನ್ನು ನೀವು ಗಮನಿಸಬಹುದು.
ಈ ಲೇಖನಗಳ ಉದ್ದೇಶ ನೀವು ಕಷ್ಟ ತುಂಬಿರೋ ಲೋಕದಲ್ಲಿ ಜೀವಿಸುತ್ತಿದ್ದೀರ ಅಂತ ತೋರಿಸಲಿಕ್ಕಿಲ್ಲ. ಏಕೆಂದ್ರೆ ನಿಮಗೆ ಅದು ಗೊತ್ತಿದೆ, ನೀವೇ ಆ ಕಷ್ಟಗಳನ್ನು ಅನುಭವಿಸುತ್ತಿದ್ದೀರ. ಈ ಲೇಖನಗಳು ಬೈಬಲಿನ ಆರು ಭವಿಷ್ಯವಾಣಿಗಳು ಹೇಗೆ ನಮ್ಮ ಕಣ್ಮುಂದೆ ನಿಜ ಆಗ್ತಿದೆ ಅನ್ನೋದನ್ನ ತೋರಿಸುತ್ತವೆ. ಈ ಪುರಾವೆಗಳಿಗೆ ಸಾಮಾನ್ಯವಾಗಿ ಯಾವ ವಿರೋಧಗಳಿವೆ ಅನ್ನೋದನ್ನ ಕೂಡ ಈ ಲೇಖನಗಳು ಚರ್ಚಿಸುತ್ತವೆ. ‘ಕೊನೇ ದಿನಗಳಿಗೆ’ ಒಂದು ಕೊನೆ ಇದೆ, ಮುಂದೆ ಒಳ್ಳೇ ಕಾಲ ಬರುತ್ತದೆ ಅಂತನೂ ತೋರಿಸುತ್ತೆ.