ಪರೀಕ್ಷಿಸಲ್ಪಟ್ಟರೂ ಯೆಹೋವನಿಗೆ ಸತ್ಯಸಂಧರು!
ಅಧ್ಯಾಯ ಮೂರು
ಪರೀಕ್ಷಿಸಲ್ಪಟ್ಟರೂ ಯೆಹೋವನಿಗೆ ಸತ್ಯಸಂಧರು!
1, 2. ಯಾವ ಅರ್ಥಗರ್ಭಿತ ಘಟನೆಗಳು ದಾನಿಯೇಲನ ವೃತ್ತಾಂತಕ್ಕೆ ಪೀಠಿಕೆಯಾಗಿ ಕಾರ್ಯನಡಿಸಿದವು?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಮಹತ್ವದ ಬದಲಾವಣೆಯು ಸಂಭವಿಸುತ್ತಿದ್ದ ಸಮಯದಲ್ಲಿ, ದಾನಿಯೇಲನ ಪ್ರವಾದನಾ ಪುಸ್ತಕದ ದೃಶ್ಯವು ಆರಂಭವಾಗುತ್ತದೆ. ಈಗಷ್ಟೇ ಅಶ್ಶೂರ್ಯವು ತನ್ನ ರಾಜಧಾನಿಯಾದ ನಿನವೆಯನ್ನು ಕಳೆದುಕೊಂಡಿತ್ತು. ಒಂದು ಕಾಲದಲ್ಲಿ ಲೋಕ ಶಕ್ತಿಯಾಗಿದ್ದ ಈಜಿಪ್ಟ್, ಈಗ ಯೆಹೂದದ ದಕ್ಷಿಣ ಭಾಗದಲ್ಲಿ ಒಂದು ಚಿಕ್ಕ ಅಧಿಕಾರ ಸ್ಥಾನದಲ್ಲಿ ಇತ್ತು. ಮತ್ತು ಲೋಕದ ಆಧಿಪತ್ಯದ ಹೋರಾಟದಲ್ಲಿ, ಬಾಬೆಲು ಒಂದು ಮುಖ್ಯ ಶಕ್ತಿಯೋಪಾದಿ ತೀವ್ರಗತಿಯಿಂದ ಪ್ರಗತಿಮಾಡುತ್ತಿತ್ತು.
2 ಸಾ.ಶ.ಪೂ. 625ರಲ್ಲಿ, ಐಗುಪ್ತ ದೇಶದ ಫರೋಹ ನೆಕೋ, ಬಾಬೆಲು ದಕ್ಷಿಣಾಭಿಮುಖವಾಗಿ ವಿಸ್ತಾರಗೊಳ್ಳುವುದನ್ನು ತಡೆಗಟ್ಟಲಿಕ್ಕಾಗಿ ಕೊನೆಯ ಪ್ರಯತ್ನವನ್ನು ಮಾಡಿದನು. ಈ ಹೇತುವಿನಿಂದಲೇ ಅವನು, ಯೂಫ್ರೇಟೀಸ್ ನದಿಯ ದಡದಲ್ಲಿದ್ದ ಕರ್ಕೆಮೀಷಿಗೆ ತನ್ನ ಸೇನೆಯನ್ನು ಮುನ್ನಡಿಸಿದನು. ಕರ್ಕೆಮೀಷಿನ ಕದನವೆಂದು ಪ್ರಸಿದ್ಧವಾದ ಈ ಕದನವು, ಒಂದು ನಿರ್ಣಾಯಕ, ಐತಿಹಾಸಿಕ ಘಟನೆಯಾಗಿತ್ತು. ಯುವರಾಜ ನೆಬೂಕದ್ನೆಚ್ಚರನು ಮುಂದಾಳತ್ವ ವಹಿಸಿದ್ದ ಬಾಬೆಲಿನ ಸೈನ್ಯವು, ಫರೋಹ ನೆಕೋವಿನ ಸೈನ್ಯಗಳ ಮೇಲೆ ವಿನಾಶಕರ ಹೊಡೆತವನ್ನು ಉಂಟುಮಾಡಿತು. (ಯೆರೆಮೀಯ 46:2) ಈ ವಿಜಯದ ಆವೇಗದಿಂದ ನೆಬೂಕದ್ನೆಚ್ಚರನು, ಸಿರಿಯ ಹಾಗೂ ಪ್ಯಾಲೆಸ್ಟೈನನ್ನು ಸೋಲಿಸಿ, ಈ ಪ್ರಾಂತದಲ್ಲಿದ್ದ ಐಗುಪ್ತ ಆಧಿಪತ್ಯವನ್ನು ಹೆಚ್ಚುಕಡಿಮೆ ನಿಲ್ಲಿಸಿಬಿಟ್ಟನು. ಅವನ ತಂದೆಯಾದ ನೆಬೊಪೊಲಾಸರನು ಮೃತಪಟ್ಟದ್ದರಿಂದ, ನೆಬೂಕದ್ನೆಚ್ಚರನು ತನ್ನ ಯುದ್ಧಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದನು.
3. ನೆಬೂಕದ್ನೆಚ್ಚರನು ಯೆರೂಸಲೇಮಿನ ವಿರುದ್ಧ ನಡೆಸಿದ ಮೊತ್ತಮೊದಲ ಕಾರ್ಯಾಚರಣೆಯ ಪರಿಣಾಮವೇನಾಗಿತ್ತು?
3 ಮರು ವರ್ಷ, ಬಾಬೆಲಿನ ಅರಸನಾಗಿ ಸಿಂಹಾಸನವೇರಿದ ನೆಬೂಕದ್ನೆಚ್ಚರನು, ಸಿರಿಯ ಹಾಗೂ ಪ್ಯಾಲೆಸ್ಟೈನ್‌ನಲ್ಲಿದ್ದ ತನ್ನ ಯುದ್ಧ ಕಾರ್ಯಾಚರಣೆಗಳ ಕಡೆಗೆ ಪುನಃ ಗಮನ ಹರಿಸಿದನು. ಇದೇ ಸಮಯದಲ್ಲಿ ಅವನು ಮೊತ್ತಮೊದಲ ಬಾರಿ ಯೆರೂಸಲೇಮಿಗೆ ಬಂದನು. ಬೈಬಲು ಹೀಗೆ ವರದಿಸುತ್ತದೆ: “ಅವನ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದನು; ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರುಷಗಳಾದನಂತರ ಅವನಿಗೆ ವಿರೋಧವಾಗಿ ತಿರುಗಿಬಿದ್ದನು.”—2 ಅರಸು 24:1.
ಯೆರೂಸಲೇಮಿನಲ್ಲಿ ನೆಬೂಕದ್ನೆಚ್ಚರನು
4. ದಾನಿಯೇಲ 1:1ರಲ್ಲಿರುವ “ಯೆಹೋಯಾಕೀಮನ ಆಳಿಕೆಯ ಮೂರನೆಯ ವರುಷದಲ್ಲಿ” ಎಂಬ ಅಭಿವ್ಯಕ್ತಿಯನ್ನು ಹೇಗೆ ಅರ್ಥಮಾಡಿಕೊಳ್ಳತಕ್ಕದ್ದು?
4 ‘ಮೂರು ವರುಷಗಳ ವರೆಗೆ’ ಎಂಬ ಅಭಿವ್ಯಕ್ತಿಯು ವಿಶೇಷವಾಗಿ ಆಸಕ್ತಿಕರವಾಗಿದೆ. ಏಕೆಂದರೆ ದಾನಿಯೇಲನ ಆರಂಭದ ಮಾತುಗಳನ್ನು ಹೀಗೆ ಓದಲಾಗುತ್ತದೆ: “ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರುಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು.” (ದಾನಿಯೇಲ 1:1) ಸಾ.ಶ.ಪೂ. 628ರಿಂದ 618ರ ತನಕ ಆಳಿದಂತಹ ಯೆಹೋಯಾಕೀಮನ ಸಂಪೂರ್ಣ ಆಳ್ವಿಕೆಯ ಮೂರನೆಯ ವರ್ಷದಲ್ಲಿ, ನೆಬೂಕದ್ನೆಚ್ಚರನು ಇನ್ನೂ “ಬಾಬೆಲಿನ ರಾಜ”ನಾಗಿರಲಿಲ್ಲ, ಕೇವಲ ಯುವರಾಜನಾಗಿದ್ದನು. ಸಾ.ಶ.ಪೂ. 620ರಲ್ಲಿ, ಕಪ್ಪಕಾಣಿಕೆಗಳನ್ನು ಸಲ್ಲಿಸುವಂತೆ ನೆಬೂಕದ್ನೆಚ್ಚರನು ಯೆಹೋಯಾಕೀಮನನ್ನು ಒತ್ತಾಯಿಸಿದನು. ಆದರೆ ಸುಮಾರು ಮೂರು ವರ್ಷಗಳ ಬಳಿಕ ಯೆಹೋಯಾಕೀಮನು ಅವನ ವಿರುದ್ಧ ದಂಗೆಯೆದ್ದನು. ಹೀಗೆ, ಸಾ.ಶ.ಪೂ. 618ರಲ್ಲಿ, ಅಥವಾ ಬಾಬೆಲಿನ ಸಾಮಂತ ರಾಜನೋಪಾದಿ ಯೆಹೋಯಾಕೀಮನು ಆಳ್ವಿಕೆ ನಡೆಸುತ್ತಿದ್ದ ಮೂರನೆಯ ವರ್ಷದಲ್ಲಿ, ದಂಗೆಕೋರ ಯೆಹೋಯಾಕೀಮನಿಗೆ ಶಿಕ್ಷೆ ವಿಧಿಸಲಿಕ್ಕಾಗಿ ಅರಸನಾದ ನೆಬೂಕದ್ನೆಚ್ಚರನು ಎರಡನೆಯ ಬಾರಿ ಯೆರೂಸಲೇಮಿಗೆ ಬಂದನು.
5. ನೆಬೂಕದ್ನೆಚ್ಚರನು ಯೆರೂಸಲೇಮಿನ ವಿರುದ್ಧ ನಡೆಸಿದ ಎರಡನೆಯ ಕಾರ್ಯಾಚರಣೆಯ ಪರಿಣಾಮವೇನಾಗಿತ್ತು?
5 ಈ ಮುತ್ತಿಗೆಯ ಪರಿಣಾಮವೇನೆಂದರೆ, “[“ಯೆಹೋವನು,” NW] ಯೆಹೂದದ ಅರಸನಾದ ಯೆಹೋಯಾಕೀಮನನ್ನೂ ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ” ಕೊಟ್ಟನು. (ದಾನಿಯೇಲ 1:2) ಪ್ರಾಯಶಃ ಯೆಹೋಯಾಕೀಮನು, ಒಂದೋ ಮೋಸದಿಂದ ಕೊಲ್ಲಲ್ಪಟ್ಟಿರಬಹುದು, ಅಥವಾ ಈ ಮುತ್ತಿಗೆಯ ಆರಂಭದ ಹಂತದಲ್ಲಿ ನಡೆದ ದಂಗೆಯಲ್ಲಿ ಕೊಲ್ಲಲ್ಪಟ್ಟಿರಬಹುದು. (ಯೆರೆಮೀಯ 22:18, 19) ಸಾ.ಶ.ಪೂ. 618ರಲ್ಲಿ, 18 ವರ್ಷ ಪ್ರಾಯದ ಅವನ ಮಗನಾದ ಯೆಹೋಯಾಖೀನನು ಅವನಿಗೆ ಬದಲಾಗಿ ರಾಜನಾದನು. ಆದರೆ ಯೆಹೋಯಾಖೀನನ ಆಳ್ವಿಕೆಯು ಕೇವಲ ಮೂರು ತಿಂಗಳು ಹಾಗೂ ಹತ್ತು ದಿನಗಳ ವರೆಗೆ ಮಾತ್ರ ಉಳಿಯಿತು. ಆ ಬಳಿಕ ಅವನು ಸಾ.ಶ.ಪೂ. 617ರಲ್ಲಿ ಶರಣಾಗತನಾದನು.—2 ಅರಸು 24:10-15ನ್ನು ಹೋಲಿಸಿರಿ.
6. ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಲ್ಲಿದ್ದ ಪವಿತ್ರ ಪಾತ್ರೆಗಳನ್ನು ಏನು ಮಾಡಿದನು?
6 ನೆಬೂಕದ್ನೆಚ್ಚರನು, ಯೆರೂಸಲೇಮಿನಲ್ಲಿದ್ದ ದೇವಾಲಯದ ಪವಿತ್ರ ಪಾತ್ರೆಗಳನ್ನು ಕೊಳ್ಳೆಹೊಡೆದು, “ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.” ಹೀಬ್ರು ಭಾಷೆಯಲ್ಲಿ ಆ ದೇವರ ಹೆಸರು ಮಾರ್ದೂಕ್ ಅಥವಾ ಮೆರೋದಾಕ್ ಆಗಿತ್ತು. (ದಾನಿಯೇಲ 1:2; ಯೆರೆಮೀಯ 50:2) ಬಾಬೆಲಿನ ಒಂದು ಶಾಸನಫಲಕವು ಸಿಕ್ಕಿದ್ದು, ಅದರಲ್ಲಿ ನೆಬೂಕದ್ನೆಚ್ಚರನು ಮಾರ್ದೂಕನ ದೇವಾಲಯದ ಕುರಿತು ಹೀಗೆ ಹೇಳಿದನೆಂದು ಸೂಚಿಸಲಾಗುತ್ತದೆ: “ನಾನು ಅದರಲ್ಲಿ ಬಂಗಾರಬೆಳ್ಳಿ ಹಾಗೂ ಅಮೂಲ್ಯ ರತ್ನಗಳನ್ನು ಶೇಖರಿಸಿಟ್ಟೆ . . . ಮತ್ತು ನನ್ನ ರಾಜ್ಯದ ಭಂಡಾರವನ್ನು ಅಲ್ಲಿ ಸ್ಥಾಪಿಸಿದೆ.” ಈ ಪವಿತ್ರ ಪಾತ್ರೆಗಳ ಕುರಿತು ನಾವು ಪುನಃ ಅರಸನಾದ ಬೇಲ್ಶಚ್ಚರನ ದಿನಗಳಲ್ಲಿಯೂ ಓದುತ್ತೇವೆ.—ದಾನಿಯೇಲ 5:1-4.
ಯೆರೂಸಲೇಮಿನ ಯುವಕರಲ್ಲಿ ಗಣ್ಯರು
7, 8. ದಾನಿಯೇಲ 1:3, 4, ಹಾಗೂ 6ನೆಯ ವಚನಗಳಿಂದ, ದಾನಿಯೇಲನ ಹಾಗೂ ಅವನ ಮೂವರು ಸಂಗಡಿಗರ ಹಿನ್ನೆಲೆಯ ಕುರಿತು ಏನು ತಿಳಿದುಕೊಳ್ಳಸಾಧ್ಯವಿದೆ?
7 ಯೆಹೋವನ ದೇವಾಲಯದ ಅಮೂಲ್ಯ ವಸ್ತುಗಳಿಗಿಂತಲೂ ಹೆಚ್ಚಿನದ್ದನ್ನು ಬಾಬೆಲಿಗೆ ತರಲಾಗಿತ್ತು. ವೃತ್ತಾಂತವು ಹೀಗೆ ಹೇಳುತ್ತದೆ: “ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯನಾದ ಅಶ್ಪೆನಜನಿಗೆ—ನೀನು ಇಸ್ರಾಯೇಲ್ಯರಲ್ಲಿ ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ ಸುಂದರರೂ ಸಮಸ್ತಶಾಸ್ತ್ರಜ್ಞರೂ ಪಂಡಿತರೂ ವಿದ್ಯಾನಿಪುಣರೂ ರಾಜಾಲಯದಲ್ಲಿ ಸನ್ನಿಧಿಸೇವೆಮಾಡಲು ಸಮರ್ಥರೂ ಆದ [“ಮಕ್ಕಳನ್ನು,” NW] ಕೆಲವು ಯುವಕರನ್ನು ಇಲ್ಲಿಗೆ ಕರತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಸಬೇಕೆಂಬದಾಗಿ ಅಪ್ಪಣೆಕೊಟ್ಟನು.”—ದಾನಿಯೇಲ 1:3, 4.
8 ಯಾರನ್ನು ಆಯ್ಕೆಮಾಡಲಾಯಿತು? ನಮಗೆ ಹೀಗೆ ತಿಳಿಸಲಾಗಿದೆ: “ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮಿಶಾಯೇಲ, ಅಜರ್ಯ ಎಂಬ ಯೆಹೂದ್ಯರು [“ಯೆಹೂದನ ಪುತ್ರರು,” NW] ಸೇರಿದ್ದರು.” (ದಾನಿಯೇಲ 1:6) ದಾನಿಯೇಲ ಹಾಗೂ ಅವನ ಸಂಗಡಿಗರ ಅಸ್ಪಷ್ಟ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಇದು ಸ್ವಲ್ಪ ಸಹಾಯ ಮಾಡುತ್ತದೆ. ಉದಾಹರಣೆಗಾಗಿ, ಅವರು “ಯೆಹೂದನ ಪುತ್ರರು,” ಅಂದರೆ ರಾಜವಂಶಜರಾಗಿದ್ದರು ಎಂಬುದನ್ನು ನಾವು ಗಮನಿಸುತ್ತೇವೆ. ಅವರು ರಾಜಮನೆತನಕ್ಕೆ ಸೇರಿದವರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ಪ್ರತಿಷ್ಠಿತ ಕುಟುಂಬದಿಂದ ಬಂದವರಾಗಿದ್ದರೆಂದು ಅಭಿಪ್ರಯಿಸುವುದು ಸಮಂಜಸವಾಗಿದೆ. ಅವರು ದೈಹಿಕವಾಗಿಯೂ ಮಾನಸಿಕವಾಗಿಯೂ ಸ್ವಸ್ಥರಾಗಿದ್ದರು ಮಾತ್ರವಲ್ಲ, ಅವರಲ್ಲಿ ಸೂಕ್ಷ್ಮಪರಿಜ್ಞಾನ, ವಿವೇಕ, ಜ್ಞಾನ, ಹಾಗೂ ವಿವೇಚನಾಶಕ್ತಿಯೂ ಇತ್ತು. ‘ಮಕ್ಕಳು’ ಎಂದು ಕರೆಯುವಷ್ಟು ಚಿಕ್ಕ ಪ್ರಾಯದಲ್ಲಿ, ಅಂದರೆ ಬಹುಶಃ ಅವರ ಹದಿಪ್ರಾಯದ ಆರಂಭದಲ್ಲೇ ಅವರು ಇಷ್ಟು ಬುದ್ಧಿವಂತರಾಗಿದ್ದರು. ಯೆರೂಸಲೇಮಿನಲ್ಲಿದ್ದ ಯುವಕರ ನಡುವೆ, ದಾನಿಯೇಲನೂ ಅವನ ಸಂಗಡಿಗರೂ ಅತ್ಯುತ್ತಮರಾಗಿದ್ದಿರಬೇಕು, ಅಂದರೆ ಗಣ್ಯರಾಗಿದ್ದಿರಬೇಕು.
9. ದಾನಿಯೇಲನಿಗೆ ಹಾಗೂ ಅವನ ಮೂವರು ಸಂಗಡಿಗರಿಗೆ ದೇವಭಕ್ತಿಯುಳ್ಳ ಹೆತ್ತವರಿದ್ದರು ಎಂಬುದು ಹೇಗೆ ಖಚಿತವಾಗಿ ಕಂಡುಬರುತ್ತದೆ?
9 ಈ ಯುವ ಜನರ ಹೆತ್ತವರು ಯಾರಾಗಿದ್ದರು ಎಂಬುದನ್ನು ವೃತ್ತಾಂತವು ನಮಗೆ ತಿಳಿಸುವುದಿಲ್ಲ. ಆದರೂ, ಅವರು ದೇವಭಕ್ತಿಯುಳ್ಳ ಜನರಾಗಿದ್ದು, ತಮ್ಮ ತಂದೆತಾಯ್ತನದ ಎಫೆಸ 6:4, NW.
ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಂತೂ ಖಂಡಿತ. ಆ ಸಮಯದಲ್ಲಿ ಯೆರೂಸಲೇಮಿನಲ್ಲಿ ಅಸ್ತಿತ್ವದಲ್ಲಿದ್ದ ನೈತಿಕ ಹಾಗೂ ಆತ್ಮಿಕ ಅವನತಿಯನ್ನು ಪರಿಗಣಿಸುವಾಗ, ಅದರಲ್ಲೂ ವಿಶೇಷವಾಗಿ ‘ರಾಜವಂಶೀಯರನ್ನು ಮತ್ತು ಪ್ರಧಾನರನ್ನು’ ಗಮನಿಸುವಾಗ, ದಾನಿಯೇಲನಲ್ಲಿ ಹಾಗೂ ಅವನ ಸಂಗಡಿಗರಲ್ಲಿ ಕಂಡುಬಂದ ಅತ್ಯುತ್ತಮ ಗುಣಗಳು, ಆಕಸ್ಮಿಕವಾಗಿ ಉಂಟಾಗಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಪುತ್ರರು ಬಹು ದೂರದ ಒಂದು ದೇಶಕ್ಕೆ ಕರೆದೊಯ್ಯಲ್ಪಡುವುದನ್ನು ನೋಡುವುದು, ಈ ಹೆತ್ತವರಿಗೆ ಅತಿ ವೇದನಾಮಯವಾದ ಅನುಭವವಾಗಿದ್ದಿರಬೇಕು ಎಂಬುದರಲ್ಲಿ ಸಂದೇಹವೇ ಇಲ್ಲ. ಇದರ ಅಂತಿಮ ಪರಿಣಾಮವು ಅವರಿಗೆ ಮೊದಲೇ ಗೊತ್ತಿರುತ್ತಿದ್ದಲ್ಲಿ, ಅವರೆಷ್ಟು ಹೆಮ್ಮೆಪಡುತ್ತಿದ್ದರೋ ಏನೋ! ಹೆತ್ತವರು ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತು ಹಾಗೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವುದು ಎಷ್ಟು ಪ್ರಾಮುಖ್ಯ!—ಮನಸ್ಸನ್ನು ವಶಪಡಿಸಿಕೊಳ್ಳುವ ಹೋರಾಟ
10. ಈ ಇಬ್ರಿಯ ಯುವಕರಿಗೆ ಯಾವ ಶಿಕ್ಷಣವು ಕೊಡಲ್ಪಟ್ಟಿತು, ಮತ್ತು ಅದರ ಉದ್ದೇಶವೇನಾಗಿತ್ತು?
10 ಸ್ವಲ್ಪದರಲ್ಲೇ, ಈ ದೇಶಭ್ರಷ್ಟರ ಎಳೆಯ ಮನಸ್ಸುಗಳನ್ನು ವಶಪಡಿಸಿಕೊಳ್ಳುವ ಹೋರಾಟವು ಆರಂಭವಾಯಿತು. ಇಬ್ರಿಯ ಯುವಕರು ಬಾಬೆಲಿನ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುವಂತೆ ಅವರಿಗೆ ತರಬೇತಿ ನೀಡಲಿಕ್ಕಾಗಿ, ತನ್ನ ಅಧಿಕಾರಿಗಳು ಅವರಿಗೆ “ಕಸ್ದೀಯ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಸು”ವಂತೆ ನೆಬೂಕದ್ನೆಚ್ಚರನು ಅಪ್ಪಣೆಕೊಟ್ಟನು. (ದಾನಿಯೇಲ 1:4) ಇದು ಒಂದು ಸಾಧಾರಣವಾದ ಶಿಕ್ಷಣವಾಗಿರಲಿಲ್ಲ. “ಸುಮೇರಿಯನ್, ಅಕೇಡಿಯನ್, ಆ್ಯರಮೇಯಿಕ್ . . . , ಮತ್ತು ಇನ್ನಿತರ ಭಾಷೆಗಳ ಅಭ್ಯಾಸ, ಹಾಗೂ ಆ ಭಾಷೆಗಳಲ್ಲಿ ಬರೆಯಲ್ಪಟ್ಟಿದ್ದ ಬೇರೆ ಬೇರೆ ಸಾಹಿತ್ಯದ ಅಧ್ಯಯನವು ಇದರಲ್ಲಿ ಒಳಗೂಡಿತ್ತು” ಎಂದು ದಿ ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್‌ಸೈಕ್ಲೊಪೀಡಿಯ ವಿವರಿಸುತ್ತದೆ. “ಬೇರೆ ಬೇರೆ ಸಾಹಿತ್ಯ”ದಲ್ಲಿ, ಇತಿಹಾಸ, ಗಣಿತಶಾಸ್ತ್ರ, ಖಗೋಳವಿಜ್ಞಾನ, ಇನ್ನು ಮುಂತಾದ ವಿಷಯಗಳು ಸೇರಿದ್ದವು. ಆದರೂ, “ಶಕುನ ಹಾಗೂ ಜ್ಯೋತಿಶ್ಶಾಸ್ತ್ರಗಳಂತಹ ಧಾರ್ಮಿಕ ಗ್ರಂಥಗಳಿಗೆ ಸಂಬಂಧಿಸಿದ ವಿಷಯಗಳು . . . , ಬಹು ಮುಖ್ಯ ಪಾತ್ರವನ್ನು ವಹಿಸಿದವು.”
11. ಇಬ್ರಿಯ ಯುವಕರು ಬಾಬೆಲಿನ ಆಸ್ಥಾನದ ಪದ್ಧತಿಗಳಿಗೆ ಹೊಂದಿಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಯಾವ ಕ್ರಮಗಳನ್ನು ಕೈಕೊಳ್ಳಲಾಯಿತು?
11 ಈ ಇಬ್ರಿಯ ಯುವಕರು, ಬಾಬೆಲಿನ ಆಸ್ಥಾನದ ಪದ್ಧತಿಗಳು ಹಾಗೂ ಸಂಸ್ಕೃತಿಗೆ ಸಂಪೂರ್ಣವಾಗಿ ಹೊಂದಿಕೊಂಡು, “ಸನ್ನಿಧಿಸೇವಕರಾಗಲೆಂದು ತನ್ನ ಭೋಜನಪದಾರ್ಥಗಳನ್ನೂ ತಾನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ದಿನವಹಿ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರುಷ ಪೋಷಿಸಬೇಕು ಎಂದು [ರಾಜನು] ಆಜ್ಞಾಪಿಸಿದನು.” (ದಾನಿಯೇಲ 1:5) ಅಷ್ಟುಮಾತ್ರವಲ್ಲ, “ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮಿಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್‌ನೆಗೋ ಎಂಬ ಹೆಸರಿಟ್ಟನು.” (ದಾನಿಯೇಲ 1:7) ಬೈಬಲ್ ಸಮಯಗಳಲ್ಲಿ, ಒಬ್ಬ ವ್ಯಕ್ತಿಯ ಜೀವಿತದಲ್ಲಿ ನಡೆದ ಒಂದು ವಿಶೇಷ ಘಟನೆಯನ್ನು ಗುರುತಿಸಲಿಕ್ಕಾಗಿ, ಅವನಿಗೆ ಒಂದು ಹೊಸ ಹೆಸರನ್ನು ಕೊಡುವುದು ಸಾಮಾನ್ಯ ಪದ್ಧತಿಯಾಗಿತ್ತು. ಉದಾಹರಣೆಗಾಗಿ, ಅಬ್ರಾಮ ಹಾಗೂ ಸಾರಯಳ ಹೆಸರುಗಳನ್ನು ಯೆಹೋವನು ಅಬ್ರಹಾಮ ಹಾಗೂ ಸಾರಾ ಎಂದು ಬದಲಾಯಿಸಿದನು. (ಆದಿಕಾಂಡ 17:5, 15, 16) ಒಬ್ಬ ವ್ಯಕ್ತಿಯು ಬೇರೊಬ್ಬನ ಹೆಸರನ್ನು ಬದಲಾಯಿಸುವುದು, ಆ ವ್ಯಕ್ತಿಯ ಅಧಿಕಾರ ಹಾಗೂ ಉನ್ನತ ಸ್ಥಾನದ ಸ್ಪಷ್ಟವಾದ ಪುರಾವೆಯಾಗಿದೆ. ಯೋಸೇಫನು ಐಗುಪ್ತ ದೇಶದ ಆಹಾರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟಾಗ, ಫರೋಹನು ಅವನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು.—ಆದಿಕಾಂಡ 41:44, 45; ಹೋಲಿಸಿರಿ 2 ಅರಸು 23:34; 24:17.
12, 13. ಇಬ್ರಿಯ ಯುವಕರ ಹೆಸರುಗಳನ್ನು ಬದಲಾಯಿಸುವುದು, ಅವರ ನಂಬಿಕೆಯನ್ನು ಭಂಗಗೊಳಿಸಲಿಕ್ಕಾಗಿ ನಡೆಸಲ್ಪಟ್ಟ ಮೋಸಕರ ಪ್ರಯತ್ನವಾಗಿತ್ತು ಎಂದು ಏಕೆ ಹೇಳಸಾಧ್ಯವಿದೆ?
12 ದಾನಿಯೇಲನ ಹಾಗೂ ಅವನ ಮೂವರು ಇಬ್ರಿಯ ಸ್ನೇಹಿತರ ವಿಷಯದಲ್ಲಿಯಾದರೋ, ಹೆಸರಿನ ಬದಲಾವಣೆಗಳು ತುಂಬ ಅರ್ಥಗರ್ಭಿತವಾಗಿದ್ದವು. ಈ ಇಬ್ರಿಯ ಯುವಕರಿಗೆ ಅವರ ಹೆತ್ತವರು ಇಟ್ಟಿದ್ದ ಹೆಸರುಗಳು, ಯೆಹೋವನ ಆರಾಧನೆಗೆ ಹೊಂದಿಕೆಯಲ್ಲಿದ್ದವು. “ದಾನಿಯೇಲ” ಎಂಬ ಹೆಸರಿನ ಅರ್ಥ “ಯೆಹೋವನು ನನ್ನ ನ್ಯಾಯಾಧಿಪತಿ” ಎಂದಾಗಿತ್ತು. “ಹನನ್ಯ” ಅಂದರೆ “ಯೆಹೋವನು ಅನುಗ್ರಹ ತೋರಿಸಿದ್ದಾನೆ.” “ಮಿಶಾಯೇಲ” ಅಂದರೆ “ದೇವರಂತೆ ಯಾರಿದ್ದಾರೆ?” ಎಂದಿರಬಹುದು. “ಅಜರ್ಯ” ಅಂದರೆ “ಯೆಹೋವನು ಸಹಾಯ ಮಾಡಿದ್ದಾನೆ.” ತಮ್ಮ ಪುತ್ರರು ಯೆಹೋವ ದೇವರ ಮಾರ್ಗದರ್ಶನದ ಕೆಳಗೆ ಬೆಳೆದು, ಆತನ ನಂಬಿಗಸ್ತ ಹಾಗೂ ನಿಷ್ಠಾವಂತ ಸೇವಕರಾಗಬೇಕೆಂಬುದೇ ಆ ಯುವಕರ ಹೆತ್ತವರ ಉತ್ಕಟ ಬಯಕೆಯಾಗಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ.
13 ಆದರೆ, ಈ ನಾಲ್ಕು ಮಂದಿ ಇಬ್ರಿಯರಿಗೆ ಕೊಡಲ್ಪಟ್ಟಿದ್ದ ಹೊಸ ಹೆಸರುಗಳು, ಬಾಬೆಲಿನ ಸುಳ್ಳು ದೇವದೇವತೆಗಳಿಗೆ ಸಂಬಂಧಿಸಿದವುಗಳಾಗಿದ್ದವು. ಈಗ ಸತ್ಯ ದೇವರು ಇಂತಹ ದೇವದೇವತೆಗಳ ಅಡಿಯಾಳಾಗಿದ್ದಾನೆ ಎಂಬುದನ್ನು ಇದು ಸೂಚಿಸಿತು. ಈ ಯುವಕರ ನಂಬಿಕೆಯನ್ನು ಭಂಗಗೊಳಿಸಲಿಕ್ಕಾಗಿ ಎಂತಹ ಮೋಸಕರ ಪ್ರಯತ್ನ!
14. ದಾನಿಯೇಲನಿಗೆ ಹಾಗೂ ಅವನ ಮೂವರು ಸಂಗಡಿಗರಿಗೆ ಕೊಡಲ್ಪಟ್ಟ ಹೊಸ ಹೆಸರುಗಳ ಅರ್ಥವೇನಾಗಿತ್ತು?
14 ದಾನಿಯೇಲನ ಹೆಸರನ್ನು, “ಅರಸನ ಜೀವವನ್ನು ಸಂರಕ್ಷಿಸು” ಎಂಬರ್ಥ ಕೊಡುವ ಬೇಲ್ತೆಶಚ್ಚರ್ ಎಂಬ ಹೆಸರಿಗೆ ಬದಲಾಯಿಸಲಾಯಿತು. ಇದು ಬಾಬೆಲಿನ ಮುಖ್ಯ ದೇವತೆಯಾಗಿದ್ದ ಬೇಲ್ ಅಥವಾ ಮಾರ್ದೂಕನ ಪ್ರಾರ್ಥನೆಯ ಸಂಕ್ಷಿಪ್ತ ರೂಪವಾಗಿತ್ತು. ದಾನಿಯೇಲನಿಗೋಸ್ಕರ ಈ ಹೆಸರನ್ನು ಆಯ್ಕೆಮಾಡುವುದರಲ್ಲಿ ನೆಬೂಕದ್ನೆಚ್ಚರನ ಕೈವಾಡವಿತ್ತೋ ಇಲ್ಲವೋ ಎಂಬುದು ಗೊತ್ತಿಲ್ಲವಾದರೂ, ಅದು “[ತನ್ನ] ದೇವರ ಹೆಸರು ಸೇರಿರುವ ದಾನಿಯೇಲ 4:8) ಹನನ್ಯನಿಗೆ ಶದ್ರಕ್ ಎಂದು ಹೆಸರಿಡಲಾಗಿತ್ತು; ಇದು “ಆಕುವಿನ ಅಪ್ಪಣೆ” ಎಂಬರ್ಥಕೊಡುವ ಸಂಯುಕ್ತ ನಾಮವಾಗಿರಬಹುದೆಂದು ಕೆಲವು ವಿದ್ವಾಂಸರು ನಂಬುತ್ತಾರೆ. ಆಸಕ್ತಿಕರವಾಗಿ, ಆಕು ಎಂಬುದು ಸುಮೇರಿಯನ್ ದೇವತೆಯ ಹೆಸರಾಗಿತ್ತು. ಮಿಶಾಯೇಲನಿಗೆ ಮೇಶಕ್ (ಬಹುಶಃ ಮಿಶಆಕು) ಎಂಬ ಹೆಸರಿಡಲಾಗಿತ್ತು; “ದೇವರಂತೆ ಯಾರಿದ್ದಾರೆ?” ಎಂಬುದನ್ನು “ಆಕು ಇರುವಂತೆ ಯಾರಿದ್ದಾರೆ?” ಎಂಬರ್ಥ ಬರುವಂತೆ ಚಾತುರ್ಯದಿಂದ ಬದಲಾಯಿಸಿರುವುದು ಇಲ್ಲಿ ಸುವ್ಯಕ್ತ. ಅಜರ್ಯನಿಗೆ ಅಬೇದ್‌ನೆಗೋ ಎಂದು ನಾಮಕರಣಮಾಡಲಾಗಿತ್ತು. “ನೆಗೋವಿನ ಸೇವಕ” ಎಂಬುದು ಇದರ ಅರ್ಥವಾಗಿರಬಹುದು. ಮತ್ತು “ನೆಗೋ” ಎಂಬುದು, “ನೆಬೋ” ಎಂಬ ದೇವತೆಯ ಹೆಸರಿನ ಭಿನ್ನ ರೂಪವಾಗಿದ್ದು, ಬಾಬೆಲಿನ ಅನೇಕ ರಾಜರುಗಳಿಗೆ ಸಹ ಈ ದೇವತೆಯ ಹೆಸರನ್ನು ಇಡಲಾಗಿತ್ತು.
. . . ಅಡ್ಡಹೆಸರಾ”ಗಿತ್ತು ಎಂಬುದನ್ನು ಒಪ್ಪಿಕೊಂಡು ಅವನು ಹೆಮ್ಮೆಪಟ್ಟನು. (ಯೆಹೋವನಿಗೆ ಸತ್ಯಸಂಧರಾಗಿ ಉಳಿಯಲು ದೃಢನಿಶ್ಚಿತರು
15, 16. ಈಗ ದಾನಿಯೇಲನಿಗೆ ಹಾಗೂ ಅವನ ಸಂಗಡಿಗರಿಗೆ ಯಾವ ಅಪಾಯಗಳು ಎದುರಾದವು, ಮತ್ತು ಅವರ ಪ್ರತಿಕ್ರಿಯೆ ಏನಾಗಿತ್ತು?
15 ಬಾಬೆಲಿನ ಹೆಸರುಗಳು, ಪುನರ್‌ಶಿಕ್ಷಣ ಕಾರ್ಯಕ್ರಮ, ಹಾಗೂ ವಿಶೇಷ ಆಹಾರಕ್ರಮ—ಇವೆಲ್ಲವೂ, ದಾನಿಯೇಲ ಹಾಗೂ ಮೂವರು ಇಬ್ರಿಯ ಯುವಕರು ಬಾಬೆಲಿನ ಜೀವನ ಕ್ರಮವನ್ನು ಅನುಸರಿಸುವಂತೆ ಮಾಡುವ ಪ್ರಯತ್ನಗಳಾಗಿದ್ದವು. ಅಷ್ಟುಮಾತ್ರವಲ್ಲ, ಇವರು ತಮ್ಮ ದೇವರಾದ ಯೆಹೋವನಿಂದ, ತಮ್ಮ ಧಾರ್ಮಿಕ ತರಬೇತಿ ಹಾಗೂ ಹಿನ್ನೆಲೆಯಿಂದ ದೂರಸರಿಯುವಂತೆ ಮಾಡುವುದೇ ಅದರ ಉದ್ದೇಶವಾಗಿತ್ತು. ಈ ಎಲ್ಲ ಒತ್ತಡ ಹಾಗೂ ಶೋಧನೆಗಳು ಎದುರಾಗಿರುವಾಗ, ಈ ಯುವಕರು ಏನು ಮಾಡಸಾಧ್ಯವಿತ್ತು?
16 ಪ್ರೇರಿತ ವೃತ್ತಾಂತವು ಹೇಳುವುದು: “ದಾನಿಯೇಲನು ತಾನು ರಾಜನ ಭೋಜನಪದಾರ್ಥಗಳನ್ನು ತಿಂದು ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು [“ತನ್ನ ಹೃದಯದಲ್ಲಿ,” NW] ನಿಶ್ಚಯಿಸಿ”ದನು. (ದಾನಿಯೇಲ 1:8ಎ) ಇಲ್ಲಿ ದಾನಿಯೇಲನ ಹೆಸರು ಮಾತ್ರ ಉಲ್ಲೇಖಿಸಲ್ಪಟ್ಟಿದೆಯಾದರೂ, ಮುಂದೆ ಏನು ಸಂಭವಿಸಿತೋ ಅದರಿಂದ, ದಾನಿಯೇಲನ ಮೂವರು ಸಂಗಡಿಗರು ಸಹ ಅವನ ನಿರ್ಣಯವನ್ನು ಬೆಂಬಲಿಸಿದರು ಎಂಬುದು ವ್ಯಕ್ತವಾಗುತ್ತದೆ. “ತನ್ನ ಹೃದಯದಲ್ಲಿ ನಿಶ್ಚಯಿಸಿ”ದನು ಎಂಬ ಮಾತುಗಳು, ದಾನಿಯೇಲನ ಹೆತ್ತವರು ಹಾಗೂ ಸ್ವದೇಶದಲ್ಲಿದ್ದ ಇತರರು ಕಲಿಸಿದ್ದ ವಿಚಾರವು ಅವನ ಹೃದಯಕ್ಕೆ ತಲಪಿತ್ತು ಎಂಬುದನ್ನು ತೋರಿಸುತ್ತವೆ. ತದ್ರೀತಿಯ ತರಬೇತಿಯು, ಇತರ ಮೂವರು ಇಬ್ರಿಯರು ತಮ್ಮ ನಿರ್ಣಯವನ್ನು ಮಾಡುವಂತೆ ಮಾರ್ಗದರ್ಶಿಸಿತು ಎಂಬುದರಲ್ಲಿ ಸಂಶಯವೇ ಇಲ್ಲ. ನಮ್ಮ ಮಕ್ಕಳು ವಿಷಯವನ್ನು ಅರ್ಥಮಾಡಿಕೊಳ್ಳಲಾರರು ಎಂದು ತೋರುವಷ್ಟು ಚಿಕ್ಕ ಪ್ರಾಯದಲ್ಲೇ ಅವರಿಗೆ ಕಲಿಸುವುದರ ಮೌಲ್ಯವನ್ನು ಇದು ಚೆನ್ನಾಗಿ ಉದಾಹರಿಸುತ್ತದೆ.—ಜ್ಞಾನೋಕ್ತಿ 22:6; 2 ತಿಮೊಥೆಯ 3:14, 15.
17. ದಾನಿಯೇಲನು ಹಾಗೂ ಅವನ ಸಂಗಡಿಗರು ರಾಜನ ದೈನಂದಿನ ಒದಗಿಸುವಿಕೆಗಳನ್ನು ನಿರಾಕರಿಸಿದರಾದರೂ, ಬೇರೆ ಏರ್ಪಾಡುಗಳನ್ನು ಏಕೆ ನಿರಾಕರಿಸಲಿಲ್ಲ?
ಅ. ಕೃತ್ಯಗಳು 7:22; ಇಬ್ರಿಯ 11:24, 25.
17 ಈ ಇಬ್ರಿಯ ಯುವಕರು ರಾಜನ ಭೋಜನಪದಾರ್ಥ ಹಾಗೂ ದ್ರಾಕ್ಷಾರಸವನ್ನು ನಿರಾಕರಿಸಿದರಾದರೂ, ಬೇರೆ ಏರ್ಪಾಡುಗಳನ್ನು ಏಕೆ ನಿರಾಕರಿಸಲಿಲ್ಲ? “ತನ್ನನ್ನು ಅಶುದ್ಧಮಾಡಿಕೊಳ್ಳಬಾರ”ದೆಂಬ ಕಾರಣದಿಂದಲೇ ಎಂದು ದಾನಿಯೇಲನ ತರ್ಕವು ಸ್ಪಷ್ಟವಾಗಿ ತಿಳಿಸುತ್ತದೆ. “ಕಸ್ದೀಯ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ” ಕಲಿತುಕೊಳ್ಳುವುದು, ಹಾಗೂ ಬಾಬೆಲಿನ ಹೆಸರುಗಳನ್ನು ಸ್ವೀಕರಿಸುವುದು ಆಕ್ಷೇಪಣೀಯವಾಗಿತ್ತಾದರೂ, ಇದು ವ್ಯಕ್ತಿಯೊಬ್ಬನನ್ನು ಅಶುದ್ಧಗೊಳಿಸುತ್ತಿರಲಿಲ್ಲ. ಸುಮಾರು 1,000 ವರ್ಷಗಳಿಗಿಂತಲೂ ಹಿಂದೆ ಜೀವಿಸಿದ್ದ ಮೋಶೆಯ ಉದಾಹರಣೆಯನ್ನು ತೆಗೆದುಕೊಳ್ಳಿ. ಅವನು “ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ”ದವನಾಗಿದ್ದರೂ, ಯೆಹೋವನಿಗೆ ನಿಷ್ಠಾವಂತನಾಗಿ ಉಳಿದನು. ಅವನ ಸ್ವಂತ ಹೆತ್ತವರು ಅವನನ್ನು ಬೆಳೆಸಿದ್ದರಿಂದ, ನಂಬಿಕೆಯ ಬಗ್ಗೆ ಅವನಲ್ಲಿ ಬಲವಾದ ತಳಪಾಯವನ್ನು ಹಾಕಿದ್ದರು. ಇದರ ಪರಿಣಾಮವಾಗಿ, “ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.”—18. ಯಾವ ರೀತಿಯಲ್ಲಿ ರಾಜನ ಒದಗಿಸುವಿಕೆಗಳು ಇಬ್ರಿಯ ಯುವಕರನ್ನು ಅಶುದ್ಧಗೊಳಿಸಸಾಧ್ಯವಿತ್ತು?
18 ಯಾವ ರೀತಿಯಲ್ಲಿ ಬಾಬೆಲಿನ ಅರಸನ ಒದಗಿಸುವಿಕೆಗಳು ಈ ಯುವಕರನ್ನು ಅಶುದ್ಧಗೊಳಿಸಸಾಧ್ಯವಿತ್ತು? ಮೊದಲನೆಯದಾಗಿ, ಮೋಶೆಯ ಧರ್ಮಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಟಿದ್ದ ಆಹಾರಪದಾರ್ಥಗಳು ಈ ಭೋಜನಪದಾರ್ಥಗಳಲ್ಲಿ ಒಳಗೂಡಿದ್ದಿರಬಹುದು. ಉದಾಹರಣೆಗಾಗಿ, ಧರ್ಮಶಾಸ್ತ್ರದ ಕೆಳಗಿದ್ದ ಇಸ್ರಾಯೇಲ್ಯರು ತಿನ್ನಬಾರದೆಂದು ನಿಷೇಧಿಸಲ್ಪಟ್ಟಿದ್ದ ಅಶುದ್ಧ ಪ್ರಾಣಿಗಳನ್ನು ಬಾಬೆಲಿನವರು ತಿನ್ನುತ್ತಿದ್ದರು. (ಯಾಜಕಕಾಂಡ 11:1-31; 20:24-26; ಧರ್ಮೋಪದೇಶಕಾಂಡ 14:3-20) ಎರಡನೆಯದಾಗಿ, ಬಾಬೆಲಿನವರು ಆಹಾರಕ್ಕಾಗಿ ಪ್ರಾಣಿಗಳನ್ನು ವಧಿಸಿದಾಗ, ಅವುಗಳ ಮಾಂಸವನ್ನು ತಿನ್ನುವುದಕ್ಕೆ ಮೊದಲು ರಕ್ತವನ್ನು ಸುರಿಸಿಬಿಡುತ್ತಿರಲಿಲ್ಲ. ರಕ್ತವನ್ನು ಸುರಿಸಿರದಂತಹ ಮಾಂಸವನ್ನು ತಿನ್ನುವುದು, ರಕ್ತದ ಕುರಿತಾದ ಯೆಹೋವನ ನಿಯಮದ ನೇರ ಉಲ್ಲಂಘನೆಯಾಗಿರುತ್ತಿತ್ತು. (ಆದಿಕಾಂಡ 9:1, 3, 4; ಯಾಜಕಕಾಂಡ 17:10-12; ಧರ್ಮೋಪದೇಶಕಾಂಡ 12:23-25) ಮೂರನೆಯದಾಗಿ, ಒಟ್ಟುಗೂಡಿ ಊಟಮಾಡುವುದಕ್ಕೆ ಮೊದಲು, ಸುಳ್ಳು ದೇವರ ಆರಾಧಕರು ತಮ್ಮ ಆಹಾರವನ್ನು ವಿಗ್ರಹಗಳಿಗೆ ಸಾಂಪ್ರದಾಯಿಕವಾಗಿ ಅರ್ಪಿಸುತ್ತಿದ್ದರು. ಯೆಹೋವನ ಸೇವಕರು ಇಂತಹ ಚಟುವಟಿಕೆಗಳಲ್ಲಿ ಎಂದೂ ಭಾಗವಹಿಸುತ್ತಿರಲಿಲ್ಲ! (1 ಕೊರಿಂಥ 10:20-22ನ್ನು ಹೋಲಿಸಿರಿ.) ಕೊನೆಯದಾಗಿ, ಯುವಕರಂತೂ ಇರಲಿ, ಯಾವುದೇ ವಯೋಮಿತಿಯ ಜನರೂ ದಿನೇ ದಿನೇ ಪುಷ್ಟಿಕರವಾದ ಆಹಾರವನ್ನು ಹಾಗೂ ಮದ್ಯಪಾನೀಯಗಳನ್ನು ಸೇವಿಸುವುದು ಖಂಡಿತವಾಗಿಯೂ ಆರೋಗ್ಯಕರವಲ್ಲ.
19. ಇಬ್ರಿಯ ಯುವಕರು ಏನೆಂದು ತರ್ಕಿಸಬಹುದಿತ್ತು, ಆದರೆ ಸರಿಯಾದ ನಿರ್ಣಯವನ್ನು ಮಾಡಲು ಅವರಿಗೆ ಯಾವುದು ಸಹಾಯ ಮಾಡಿತು?
ಜ್ಞಾನೋಕ್ತಿ 15:3; ಪ್ರಸಂಗಿ 12:14) ಈ ನಂಬಿಗಸ್ತ ಯುವಕರ ಜೀವನಮಾರ್ಗದಿಂದ ನಾವೆಲ್ಲರೂ ಪಾಠವನ್ನು ಕಲಿಯೋಣ.
19 ಈ ಸನ್ನಿವೇಶದಲ್ಲಿ ಏನು ಮಾಡಬೇಕು ಎಂದು ಗೊತ್ತಿರುವುದು ಒಂದು ವಿಷಯವಾದರೆ, ಒತ್ತಡ ಅಥವಾ ಶೋಧನೆಯ ಕೆಳಗಿರುವಾಗ ಅದನ್ನು ಮಾಡಲು ಧೈರ್ಯವುಳ್ಳವರಾಗಿರುವುದು ಬೇರೆಯೇ ವಿಷಯವಾಗಿದೆ. ಹೆತ್ತವರು ಹಾಗೂ ಸ್ನೇಹಿತರಿಂದ ತಾವು ದೂರ ಇರುವುದರಿಂದ, ನಾವು ಏನು ಮಾಡಿದರೂ ಅವರಿಗೆ ಗೊತ್ತಾಗುವುದಿಲ್ಲ ಎಂದು ದಾನಿಯೇಲನೂ ಅವನ ಮೂವರು ಸ್ನೇಹಿತರೂ ತರ್ಕಿಸಬಹುದಿತ್ತು. ಇದು ಅರಸನ ಅಪ್ಪಣೆಯಾಗಿತ್ತು ಹಾಗೂ ಯಾವುದೇ ಬದಲಿ ಆಯ್ಕೆ ಇರಲಿಲ್ಲ ಎಂದು ಸಹ ಅವರು ವಾದಿಸಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ಬೇರೆ ಯುವಕರು ಈ ಏರ್ಪಾಡುಗಳನ್ನು ಮನಃಪೂರ್ವಕವಾಗಿ ಅಂಗೀಕರಿಸಿದರು ಹಾಗೂ ಈ ಏರ್ಪಾಡುಗಳಲ್ಲಿ ಪಾಲ್ಗೊಳ್ಳುವುದು ತುಂಬ ಕಷ್ಟಕರವಾಗಿದೆ ಎಂದು ಭಾವಿಸುವುದಕ್ಕೆ ಬದಲಾಗಿ, ಇದನ್ನು ಒಂದು ಸುಯೋಗವಾಗಿ ಪರಿಗಣಿಸಿದರು ಎಂಬುದಂತೂ ಖಂಡಿತ. ಆದರೆ ಇಂತಹ ತಪ್ಪಾದ ಆಲೋಚನೆಯು, ಅನೇಕ ಯುವ ಜನರಿಗೆ ಒಂದು ಪಾಶದೋಪಾದಿ ಇರುವ ರಹಸ್ಯಮಯವಾದ ಪಾಪಕ್ಕೆ ಬಲಿಬೀಳುವಂತೆ ಮಾಡಸಾಧ್ಯವಿತ್ತು. “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು” ಮತ್ತು “ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು” ಎಂದು ಇಬ್ರಿಯ ಯುವಕರಿಗೆ ತಿಳಿದಿತ್ತು. (ಧೈರ್ಯ ಹಾಗೂ ಸತತ ಪ್ರಯತ್ನವು ಪ್ರತಿಫಲದಾಯಕವಾಗಿತ್ತು
20, 21. ದಾನಿಯೇಲನು ಯಾವ ನಿಲುವನ್ನು ತೆಗೆದುಕೊಂಡನು, ಮತ್ತು ಅದರ ಫಲಿತಾಂಶವೇನಾಗಿತ್ತು?
20 ತನ್ನ ಹೃದಯದಲ್ಲಿ ಭ್ರಷ್ಟ ಪ್ರಭಾವಗಳನ್ನು ವಿರೋಧಿಸುವ ನಿರ್ಧಾರ ಮಾಡಿಕೊಂಡಿದ್ದ ದಾನಿಯೇಲನು, ತನ್ನ ನಿರ್ಣಯಕ್ಕೆ ಅನುಸಾರವಾಗಿ ಕಾರ್ಯನಡಿಸಲು ಪ್ರಯತ್ನಿಸಿದನು. “ಕಂಚುಕಿಯರ ಅಧ್ಯಕ್ಷನಿಗೆ—ನಾನು ಅಶುದ್ಧನಾಗಲಾರೆ, ಕ್ಷಮಿಸು ಎಂದು ವಿಜ್ಞಾಪಿಸಿದನು [“ವಿಜ್ಞಾಪಿಸುತ್ತಾ ಇದ್ದನು,” NW].” (ದಾನಿಯೇಲ 1:8ಬಿ) “ವಿಜ್ಞಾಪಿಸುತ್ತಾ ಇದ್ದನು” ಎಂಬುದು ಗಮನಾರ್ಹ ಅಭಿವ್ಯಕ್ತಿಯಾಗಿದೆ. ಅನೇಕ ಬಾರಿ, ಶೋಧನೆಗಳನ್ನು ಎದುರಿಸುವುದರಲ್ಲಿ ಅಥವಾ ಕೆಲವೊಂದು ಬಲಹೀನತೆಗಳನ್ನು ಜಯಿಸುವುದರಲ್ಲಿ ನಾವು ಯಶಸ್ವಿಯಾಗಲು ಬಯಸುವುದಾದರೆ, ಅದಕ್ಕೋಸ್ಕರ ಸತತ ಪ್ರಯತ್ನವನ್ನು ಮಾಡಬೇಕಾಗುತ್ತದೆ.—ಗಲಾತ್ಯ 6:9.
21 ದಾನಿಯೇಲನ ವಿಷಯದಲ್ಲಿ ನೋಡುವುದಾದರೆ, ಸತತ ಪ್ರಯತ್ನಕ್ಕೆ ಪ್ರತಿಫಲ ದೊರಕಿತು. “ದೇವರು ಕಂಚುಕಿಯರ ಅಧ್ಯಕ್ಷನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ ದಯೆಯನ್ನೂ ಹುಟ್ಟಿಸಿದನು.” (ದಾನಿಯೇಲ 1:9) ದಾನಿಯೇಲನು ಹಾಗೂ ಅವನ ಸಂಗಡಿಗರು ತುಂಬ ಸುಂದರರೂ ವಿದ್ಯಾನಿಪುಣರೂ ಆಗಿದ್ದುದರಿಂದ ಅವರ ಬೇಡಿಕೆಗಳೆಲ್ಲವೂ ನೆರವೇರಿದವು ಎಂದು ಇದರ ಅರ್ಥವಲ್ಲ. ಬದಲಾಗಿ, ಯೆಹೋವನ ಆಶೀರ್ವಾದದಿಂದಲೇ ಅವರ ಬೇಡಿಕೆಗಳು ಪೂರೈಸಲ್ಪಟ್ಟವು. ಖಂಡಿತವಾಗಿಯೂ ದಾನಿಯೇಲನು ಈ ಕೆಳಗಿನ ಹೀಬ್ರು ಜ್ಞಾನೋಕ್ತಿಯನ್ನು ಜ್ಞಾಪಿಸಿಕೊಂಡನು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಈ ಸಲಹೆಯನ್ನು ಅನುಸರಿಸಿದ್ದು ನಿಜವಾಗಿಯೂ ಪ್ರತಿಫಲದಾಯಕವಾಗಿತ್ತು.
22. ಕಂಚುಕಿಯರ ಅಧ್ಯಕ್ಷನು ಯಾವ ನ್ಯಾಯಸಮ್ಮತ ಆಕ್ಷೇಪಣೆಗಳನ್ನು ಎಬ್ಬಿಸಿದನು?
22 ಆರಂಭದಲ್ಲಿ ಆ ಕಂಚುಕಿಯರ ಅಧ್ಯಕ್ಷನು ಇವರ ಬೇಡಿಕೆಗೆ ಅಸಮ್ಮತಿಸಿದನು: “ನಿಮಗೆ ಆಹಾರ ಪಾನಗಳನ್ನು ಏರ್ಪಡಿಸಿದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವದನ್ನು ನೋಡುವನೆಂದು ಭಯಪಡುತ್ತೇನೆ; ರಾಜನು ನನ್ನ ತಲೆಯನ್ನು ತೆಗಿಸಲು ಕಾರಣರಾದೀರಿ.” (ದಾನಿಯೇಲ 1:10) ಇವು ನ್ಯಾಯಸಮ್ಮತವಾದ ಆಕ್ಷೇಪಣೆಗಳು ಹಾಗೂ ಭಯಗಳಾಗಿದ್ದವು. ಅರಸನಾದ ನೆಬೂಕದ್ನೆಚ್ಚರನಿಗೆ ಯಾರೂ ಅವಿಧೇಯತೆ ತೋರಿಸುವಂತಿರಲಿಲ್ಲ, ಮತ್ತು ರಾಜನ ಅಪ್ಪಣೆಗಳಿಗೆ ವಿರುದ್ಧವಾಗಿ ಕಾರ್ಯನಡಿಸುವುದಾದರೆ, ತನ್ನ “ತಲೆ”ಯು ಅಪಾಯಕ್ಕೆ ಒಳಗಾಗುತ್ತದೆ ಎಂಬುದನ್ನು ಆ ಅಧ್ಯಕ್ಷನು ಮನಗಂಡಿದ್ದನು. ದಾನಿಯೇಲನು ಏನು ಮಾಡಲಿದ್ದನು?
23. ತಾನು ಆಯ್ಕೆಮಾಡಿದ ಮಾರ್ಗಕ್ರಮದ ಮೂಲಕ ದಾನಿಯೇಲನು ಸೂಕ್ಷ್ಮಪರಿಜ್ಞಾನ ಹಾಗೂ ವಿವೇಕವನ್ನು ಹೇಗೆ ತೋರಿಸಿದನು?
23 ಸೂಕ್ಷ್ಮಪರಿಜ್ಞಾನ ಹಾಗೂ ವಿವೇಕಗಳು ಈಗ ಉಪಯೋಗಕ್ಕೆ ಬಂದವು. ಯುವಕನಾದ ದಾನಿಯೇಲನು ಈ ಜ್ಞಾನೋಕ್ತಿಯನ್ನು ಜ್ಞಾಪಿಸಿಕೊಂಡಿದ್ದಿರಬಹುದು: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಈ ಬೇಡಿಕೆಯನ್ನು ಪೂರೈಸಬೇಕೆಂದು ಹಟಮಾರಿತನದಿಂದ ಒತ್ತಾಯಿಸುವಲ್ಲಿ, ಇತರರು ತನ್ನನ್ನು ಕೊಂದು ಒಬ್ಬ ಹುತಾತ್ಮನನ್ನಾಗಿ ಮಾಡುವಂತೆ ತಾನೇ ಪ್ರಚೋದಿಸಿದಂತಾಗುತ್ತದೆ ಎಂದು ನೆನಸಿದ ದಾನಿಯೇಲನು, ಆ ವಿಚಾರವನ್ನು ಅಲ್ಲಿಗೇ ಬಿಟ್ಟನು. ಒಳ್ಳೆಯ ಅವಕಾಶ ಸಿಕ್ಕಿದಾಗ, “ಅಧ್ಯಕ್ಷನು ನೇಮಿಸಿದ್ದ ವಿಚಾರಕನ” ಬಳಿಗೆ ಹೋಗಿ ಇದರ ಬಗ್ಗೆ ದಾನಿಯೇಲನು ಮಾತಾಡಿದನು. ಈ ವಿಚಾರಕನು ನೇರವಾಗಿ ಅರಸನಿಗೆ ಇವರ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರಲಿಲ್ಲವಾದ್ದರಿಂದ, ಸ್ವಲ್ಪಮಟ್ಟಿಗೆ ಇವರ ಬೇಡಿಕೆಯನ್ನು ಪೂರೈಸುವ ಮನಸ್ಸುಳ್ಳವನಾಗಿದ್ದಿರಬಹುದು.—ದಾನಿಯೇಲ 1:11.
ಹತ್ತು ದಿನಗಳ ಪರೀಕ್ಷೆಯು ಪ್ರಸ್ತಾಪಿಸಲ್ಪಟ್ಟದ್ದು
24. ದಾನಿಯೇಲನು ಯಾವ ಪರೀಕ್ಷೆಯನ್ನು ಪ್ರಸ್ತಾಪಿಸಿದನು?
24 ಆ ವಿಚಾರಕನಿಗೆ ದಾನಿಯೇಲನು ಒಂದು ಪರೀಕ್ಷೆಯನ್ನು ನಡೆಸುವ ಪ್ರಸ್ತಾಪ ದಾನಿಯೇಲ 1:12, 13.
ಮಾಡಿದನು. ಅವನು ಹೇಳಿದ್ದು: “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಿನ್ನ ಸೇವಕರಾದ ನಮ್ಮನ್ನು ಪರೀಕ್ಷಿಸು; ಆಹಾರಕ್ಕೆ ಕಾಯಿಪಲ್ಯ, ಪಾನಕ್ಕೆ ನೀರು ನಮಗೆ ಒದಗಲಿ; ಆ ಮೇಲೆ ನಮ್ಮ ಮುಖಗಳನ್ನೂ ರಾಜನ ಆಹಾರವನ್ನು ಉಣ್ಣುವ ಯುವಕರ ಮುಖಗಳನ್ನೂ ಹೋಲಿಸಿನೋಡು; ನೋಡಿದ್ದಕ್ಕೆ ತಕ್ಕ ಹಾಗೆ ನಿನ್ನ ಸೇವಕರಿಗೆ ನಡಿಸು.”—25. ದಾನಿಯೇಲನಿಗೆ ಹಾಗೂ ಅವನ ಮೂವರು ಸ್ನೇಹಿತರಿಗೆ ಒದಗಿಸಲ್ಪಟ್ಟ “ಕಾಯಿಪಲ್ಯ”ದಲ್ಲಿ ಏನೆಲ್ಲ ಒಳಗೂಡಿದ್ದಿರಬಹುದು?
25 ಹತ್ತು ದಿನಗಳ ವರೆಗೆ ‘ಕಾಯಿಪಲ್ಯ ಮತ್ತು ನೀರ’ನ್ನು ಮಾತ್ರ ಉಪಯೋಗಿಸುವಲ್ಲಿ, ಬೇರೆ ಯುವಕರೊಂದಿಗೆ ಹೋಲಿಸುವಾಗ ಇವರ “ಮುಖವು ಬಾಡಿರ”ಸಾಧ್ಯವಿತ್ತೊ? “ಕಾಯಿಪಲ್ಯ” ಎಂಬುದು ಒಂದು ಹೀಬ್ರು ಶಬ್ದದಿಂದ ಭಾಷಾಂತರಿಸಲ್ಪಟ್ಟಿದ್ದು, ಇದರ ಮೂಲ ಅರ್ಥ “ಕಾಳುಗಳು” ಎಂದಾಗಿದೆ. ಕೆಲವು ಬೈಬಲ್ ಭಾಷಾಂತರಗಳು ಇದನ್ನು “ದ್ವಿದಳ ಧಾನ್ಯ” ಎಂದು ತರ್ಜುಮೆಮಾಡುತ್ತವೆ. “ಬೇರೆ ಬೇರೆ ದ್ವಿದಳ ಧಾನ್ಯಗಳ (ಬಟಾಣಿಕಾಳು, ಹುರುಳಿ, ಅಥವಾ ಅವರೆ) ಆಹಾರಯೋಗ್ಯ ಕಾಳುಗಳು” ಎಂದು ಇದನ್ನು ಅರ್ಥೈಸಸಾಧ್ಯವಿದೆ. ಕೇವಲ ಆಹಾರಯೋಗ್ಯ ಕಾಳುಗಳಿಗಿಂತಲೂ ಹೆಚ್ಚಿನದ್ದು ಈ ಆಹಾರಪಥ್ಯದಲ್ಲಿ ಸೇರಿರುವುದನ್ನು ಪೂರ್ವಾಪರ ಭಾಗವು ಸೂಚಿಸುತ್ತದೆ ಎಂಬುದು ಕೆಲವು ಪಂಡಿತರ ಅನಿಸಿಕೆ. ಒಂದು ಪ್ರಮಾಣ ಗ್ರಂಥವು ಹೀಗೆ ಹೇಳುತ್ತದೆ: “ರಾಜವೈಭವದ ಪುಷ್ಟಿಕರವಾದ ಮಾಂಸಾಹಾರಕ್ಕೆ ಬದಲಾಗಿ, ಸಾಮಾನ್ಯ ಜನರ ಆಹಾರಪಥ್ಯವಾದ ಕಾಯಿಪಲ್ಯವನ್ನು ಒದಗಿಸುವಂತೆ ದಾನಿಯೇಲನು ಹಾಗೂ ಅವನ ಸಂಗಡಿಗರು ಕೇಳಿಕೊಂಡಿದ್ದರು.” ಹೀಗೆ, ಕಾಯಿಪಲ್ಯಗಳಲ್ಲಿ ಹುರುಳಿ, ಸೌತೇಕಾಯಿಗಳು, ಬೆಳ್ಳುಳ್ಳಿ, ಲೀಕ್ ಗಡ್ಡೆ, ಅವರೆ, ಕಲ್ಲಂಗಡಿ, ಮತ್ತು ಈರುಳ್ಳಿ, ಹಾಗೂ ಬೇರೆ ಬೇರೆ ಕಾಳುಗಳಿಂದ ಮಾಡಲ್ಪಟ್ಟ ಬ್ರೆಡ್ ಸಹ ಸೇರಿದ್ದಿರಬಹುದು. ಅದನ್ನು ಯಾರೂ ಹೊಟ್ಟೆಗಿಲ್ಲದೆ ಸಾಯಿಸುವ ಆಹಾರಪಥ್ಯ ಎಂದು ಪರಿಗಣಿಸಸಾಧ್ಯವಿರಲಿಲ್ಲ ಎಂಬುದಂತೂ ಖಂಡಿತ. ಇದು ಆ ವಿಚಾರಕನಿಗೆ ಚೆನ್ನಾಗಿ ಅರ್ಥವಾಯಿತು. “ಅವನು ಅವರ ಬಿನ್ನಹಕ್ಕೆ ಒಪ್ಪಿ ಹತ್ತು ದಿನ ಪರೀಕ್ಷಿಸಿದನು.” (ದಾನಿಯೇಲ 1:14) ಫಲಿತಾಂಶವೇನಾಗಿತ್ತು?
26. ಹತ್ತು ದಿನಗಳ ಪರೀಕ್ಷೆಯ ಫಲಿತಾಂಶವೇನಾಗಿತ್ತು, ಮತ್ತು ಆ ಎಲ್ಲ ಬದಲಾವಣೆಗಳು ಹೇಗೆ ಸಂಭವಿಸಿದವು?
26 “ಅವರು ಹತ್ತು ದಿನಗಳ ಮೇಲೆ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ ಪುಷ್ಟರಾಗಿಯೂ ಕಾಣಿಸಿದರು.” (ದಾನಿಯೇಲ 1:15) ಪುಷ್ಟಿಕರವಾದ ಮಾಂಸಾಹಾರಕ್ಕಿಂತಲೂ, ಕಾಯಿಪಲ್ಯದ ಆಹಾರಪಥ್ಯವು ಶ್ರೇಷ್ಠವಾಗಿದೆ ಎಂಬುದಕ್ಕೆ ಇದನ್ನು ಒಂದು ಪುರಾವೆಯಾಗಿ ಪರಿಗಣಿಸಬಾರದು. ಯಾವುದೇ ರೀತಿಯ ಆಹಾರಪಥ್ಯವು ಶಾರೀರಿಕ ಫಲಿತಾಂಶಗಳನ್ನು ಉತ್ಪಾದಿಸಬೇಕಾದರೆ ಹತ್ತು ದಿನಗಳು ಸಾಕಾಗುವುದಿಲ್ಲವಾದರೂ, ಯೆಹೋವನಿಗೆ ತನ್ನ ಉದ್ದೇಶವನ್ನು ಪೂರೈಸಲು ಬಹಳಷ್ಟು ಸಮಯಾವಧಿಯ ಅಗತ್ಯವಿಲ್ಲ. “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂದು ಆತನ ವಾಕ್ಯವು ಹೇಳುತ್ತದೆ. (ಜ್ಞಾನೋಕ್ತಿ 10:22) ಈ ನಾಲ್ಕು ಮಂದಿ ಇಬ್ರಿಯ ಯುವಕರು ಯೆಹೋವನಲ್ಲಿ ನಂಬಿಕೆ ಹಾಗೂ ಭರವಸೆಯನ್ನು ಇಟ್ಟಿದ್ದರು, ಮತ್ತು ಆತನು ಅವರ ಕೈಬಿಡಲಿಲ್ಲ. ಶತಮಾನಗಳ ಬಳಿಕ, ಯೇಸು ಕ್ರಿಸ್ತನು 40 ದಿನಗಳ ವರೆಗೆ ಯಾವುದೇ ಆಹಾರವಿಲ್ಲದೆ ಬದುಕಿ ಉಳಿದನು. ಈ ವಿಷಯಕ್ಕೆ ಸಂಬಂಧಿಸಿ, ಅವನು ಧರ್ಮೋಪದೇಶಕಾಂಡ 8:3ರಲ್ಲಿ ಕಂಡುಬರುವ ಮಾತುಗಳನ್ನು ಆಧಾರವಾಗಿ ಉಪಯೋಗಿಸಿದನು. ಅಲ್ಲಿ ನಾವು ಹೀಗೆ ಓದುತ್ತೇವೆ: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ.” ದಾನಿಯೇಲನ ಹಾಗೂ ಅವನ ಸ್ನೇಹಿತರ ಅನುಭವವು ಇದಕ್ಕೆ ಅತ್ಯುತ್ತಮ ಉದಾಹರಣೆ.
ಭೋಜನಪದಾರ್ಥಗಳು ಹಾಗೂ ದ್ರಾಕ್ಷಾರಸಕ್ಕೆ ಬದಲಾಗಿ ಸೂಕ್ಷ್ಮಪರಿಜ್ಞಾನ ಮತ್ತು ವಿವೇಕ
27, 28. ದಾನಿಯೇಲನೂ ಅವನ ಮೂವರು ಸಂಗಡಿಗರೂ ಆಹಾರಪಥ್ಯಕ್ಕೆ ತಮ್ಮನ್ನು ಒಗ್ಗಿಸಿಕೊಂಡ ವಿಧವು, ಯಾವ ರೀತಿಯಲ್ಲಿ ಮುಂದೆ ಸಂಭವಿಸಲಿಕ್ಕಿದ್ದ ಸಂಗತಿಗಳಿಗೆ ಒಂದು ಸಿದ್ಧತೆಯಾಗಿತ್ತು?
27 ಹತ್ತು ದಿನಗಳು ಕೇವಲ ಪರೀಕ್ಷೆಯ ದಿನಗಳಾಗಿದ್ದವು, ಆದರೆ ಫಲಿತಾಂಶವು ಮನಸ್ಸಿಗೆ ಹಿಡಿಸುವಂತಹದ್ದಾಗಿತ್ತು. “ಅಂದಿನಿಂದ ವಿಚಾರಕನು ಅವರಿಗೆ ನೇಮಕವಾದ ಭೋಜನಪದಾರ್ಥಗಳನ್ನೂ ಅವರು ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದಿಟ್ಟು ಕಾಯಿಪಲ್ಯಗಳನ್ನು ಕೊಡುತ್ತಾ ಬಂದನು.” (ದಾನಿಯೇಲ 1:16) ತರಬೇತಿ ಪಡೆದುಕೊಳ್ಳಲಿಕ್ಕಾಗಿ ಆಯ್ಕೆಯಾಗಿದ್ದ ಇತರ ಯುವಕರಿಗೆ, ದಾನಿಯೇಲ ಹಾಗೂ ಅವನ ಸಂಗಡಿಗರ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಕರವೇನಲ್ಲ. ಅವರು ರಾಜನು ಏರ್ಪಡಿಸಿದ್ದ ಔತಣವನ್ನು ನಿರಾಕರಿಸಿ, ಪ್ರತಿ ದಿನ ಕಾಯಿಪಲ್ಯವನ್ನು ಸೇವಿಸುವುದು ಈ ಯುವಕರಿಗೆ ಹುಚ್ಚುತನವಾಗಿ ಕಂಡಿದ್ದಿರಬೇಕು. ಸದ್ಯದಲ್ಲೇ ದೊಡ್ಡ ಪರೀಕ್ಷೆಗಳು ಹಾಗೂ ಶೋಧನೆಗಳು ಅವರ ಮೇಲೆ ಬರಲಿದ್ದವು, ಮತ್ತು ಅವುಗಳನ್ನು ಎದುರಿಸಲು ಸಾಧ್ಯವಿರುವಷ್ಟು ಎಚ್ಚರಿಕೆ ಹಾಗೂ ಸ್ತಿಮಿತತೆಯ ಅಗತ್ಯ ಅವರಿಗಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ, ಯೆಹೋವನಲ್ಲಿ ಅವರಿಟ್ಟಿದ್ದಂತಹ ನಂಬಿಕೆ ಹಾಗೂ ಭರವಸೆಯು, ನಂಬಿಕೆಯ ಪರೀಕ್ಷೆಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡಿತು.—ಯೆಹೋಶುವ 1:7ನ್ನು ಹೋಲಿಸಿರಿ.
28 ಯೆಹೋವನು ಈ ಯುವಕರೊಂದಿಗಿದ್ದನು ಎಂಬ ಪುರಾವೆಯನ್ನು, ಮುಂದಿನ ವಚನದಲ್ಲಿ ಹೇಳಲ್ಪಟ್ಟಿರುವ ವಿಷಯದಿಂದ ಗ್ರಹಿಸಸಾಧ್ಯವಿದೆ: “ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲಶಾಸ್ತ್ರಗಳಲ್ಲಿಯೂ ವಿದ್ಯೆಗಳಲ್ಲಿಯೂ ಜ್ಞಾನವಿವೇಕಗಳನ್ನು ದಯಪಾಲಿಸಿದನು; ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸುವದರಲ್ಲಿ ಪ್ರವೀಣನಾದನು.” (ದಾನಿಯೇಲ 1:17) ಮುಂದೆ ಬರಲಿಕ್ಕಿದ್ದ ಕಷ್ಟಕರ ಸಮಯಗಳನ್ನು ನಿಭಾಯಿಸಲಿಕ್ಕಾಗಿ, ಶಾರೀರಿಕ ಬಲ ಹಾಗೂ ಒಳ್ಳೆಯ ಆರೋಗ್ಯಕ್ಕಿಂತಲೂ ಹೆಚ್ಚಿನದ್ದರ ಅಗತ್ಯ ಅವರಿಗಿತ್ತು. “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.” (ಜ್ಞಾನೋಕ್ತಿ 2:10-12) ಮುಂದೆ ಏನು ಸಂಭವಿಸಲಿಕ್ಕಿತ್ತೋ ಅದಕ್ಕಾಗಿ ಈ ನಾಲ್ಕು ಮಂದಿ ನಂಬಿಗಸ್ತ ಯುವಕರನ್ನು ಸಿದ್ಧಪಡಿಸಲು, ಯೆಹೋವನು ಅವರಿಗೆ ಇದೆಲ್ಲವನ್ನೂ ದಯಪಾಲಿಸಿದನು.
29. ದಾನಿಯೇಲನು ‘ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಅರ್ಥಮಾಡಿಕೊಳ್ಳಲು’ ಏಕೆ ಶಕ್ತನಾಗಿದ್ದನು?
29 ದಾನಿಯೇಲನು “ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸುವದರಲ್ಲಿ ಪ್ರವೀಣನಾದನು” ಎಂದು ಹೇಳಲಾಗಿದೆ. ಇದು ಅವನು ಒಬ್ಬ ಅಭೌತಪ್ರಭಾವ ವಾಹಕನಾಗಿದ್ದನು ಎಂಬರ್ಥವನ್ನು ಕೊಡುವುದಿಲ್ಲ. ಪ್ರಮುಖರಾದ ಇಬ್ರಿಯ ಪ್ರವಾದಿಗಳಲ್ಲಿ ದಾನಿಯೇಲನು ಒಬ್ಬನಾಗಿ ಪರಿಗಣಿಸಲ್ಪಟ್ಟಿರುವುದಾದರೂ, “ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ” ಅಥವಾ “ಸೇನಾಧೀಶ್ವರನಾದ ಯೆಹೋವನು ಹೀಗನ್ನುತ್ತಾನೆ” ಎಂಬಂತಹ ಪ್ರಕಟನೆಗಳನ್ನು ಹೇಳುವಂತೆ ಅವನೆಂದೂ ಪ್ರೇರಿಸಲ್ಪಡಲಿಲ್ಲ ಎಂಬುದು ಆಸಕ್ತಿಕರ ವಿಷಯವಾಗಿದೆ. (ಯೆಶಾಯ 28:16; ಯೆರೆಮೀಯ 6:9) ಆದರೂ, ದೇವರ ಪವಿತ್ರಾತ್ಮದ ಸಹಾಯದಿಂದಲೇ, ಯೆಹೋವನ ಉದ್ದೇಶಗಳನ್ನು ಪ್ರಕಟಪಡಿಸಿದ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸಲು ಹಾಗೂ ಅವುಗಳ ಅರ್ಥವನ್ನು ವಿವರಿಸಲು ದಾನಿಯೇಲನು ಶಕ್ತನಾಗಿದ್ದನು.
ಕಟ್ಟಕಡೆಗೆ, ನಿರ್ಣಾಯಕ ಪರೀಕ್ಷೆ
30, 31. ದಾನಿಯೇಲನು ಹಾಗೂ ಅವನ ಸಂಗಡಿಗರು ಆಯ್ದುಕೊಂಡ ಜೀವನಮಾರ್ಗವು, ಹೇಗೆ ಅವರಿಗೆ ಪ್ರಯೋಜನಾರ್ಹವಾಗಿ ಪರಿಣಮಿಸಿತು?
30 ಮೂರು ವರ್ಷಗಳ ಪುನರ್‌ಶಿಕ್ಷಣ ಹಾಗೂ ಪೋಷಣ ಕಾರ್ಯಗಳು ಕೊನೆಗೊಂಡವು. ತದನಂತರ ನಿರ್ಣಾಯಕ ಪರೀಕ್ಷೆಯ ಸಮಯವು ಬಂತು—ಅರಸನೊಂದಿಗೆ ಒಂದು ವೈಯಕ್ತಿಕ ಸಂದರ್ಶನವೇ ಅದಾಗಿತ್ತು. “ರಾಜನು ನೇಮಿಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರತಂದನು.” (ದಾನಿಯೇಲ 1:18) ಇದು, ಈ ನಾಲ್ಕು ಮಂದಿ ಯುವಕರು ತಮ್ಮ ಬಗ್ಗೆ ಲೆಕ್ಕವೊಪ್ಪಿಸಬೇಕಾದ ಸಮಯವಾಗಿತ್ತು. ಬಾಬೆಲಿನ ಜೀವನ ರೀತಿಗೆ ಹೊಂದಿಕೊಳ್ಳುವುದಕ್ಕೆ ಬದಲಾಗಿ ಯೆಹೋವನ ನಿಯಮಗಳಿಗೆ ಅಂಟಿಕೊಂಡದ್ದರಿಂದ ಅವರಿಗೆ ಏನಾದರೂ ಪ್ರಯೋಜನ ದೊರಕಿತೊ?
31 “ರಾಜನು ಅವರ ಸಂಗಡ ಮಾತಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮಿಶಾಯೇಲ, ಅಜರ್ಯ, ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು.” (ದಾನಿಯೇಲ 1:19) ಇದು ಅವರ ಹಿಂದಿನ ಮೂರು ವರ್ಷಗಳ ನಡತೆಗೆ ಎಂತಹ ಒಂದು ಸಮರ್ಥನೆಯಾಗಿತ್ತು! ತಮ್ಮ ನಂಬಿಕೆ ಹಾಗೂ ಮನಸ್ಸಾಕ್ಷಿಯು ಮಾರ್ಗದರ್ಶಿಸಿದ ಆಹಾರಪಥ್ಯಕ್ಕೆ ಅಂಟಿಕೊಳ್ಳುವುದು ಅವರಿಗೆ ಹುಚ್ಚುತನವಾಗಿರಲಿಲ್ಲ. ಅತಿ ಕ್ಷುಲ್ಲಕವಾಗಿ ಕಂಡುಬಂದಿರಬಹುದಾದ ಸಂಗತಿಯಲ್ಲಿ ನಂಬಿಗಸ್ತರಾಗಿರುವ ಮೂಲಕ, ದಾನಿಯೇಲನಿಗೂ ಅವನ ಸ್ನೇಹಿತರಿಗೂ ಬಹಳಷ್ಟು ಆಶೀರ್ವಾದಗಳು ದೊರೆತವು. ತರಬೇತಿಯನ್ನು ಪಡೆದುಕೊಳ್ಳುವ ಕಾರ್ಯಕ್ರಮದಲ್ಲಿ ಒಳಗೂಡಿದ್ದ ಎಲ್ಲ ಯುವಕರ ಗುರಿಯು, “ರಾಜನ ಸನ್ನಿಧಿಸೇವಕ”ರಾಗುವಂತಹ ಸುಯೋಗವನ್ನು ಪಡೆದುಕೊಳ್ಳುವುದೇ ಆಗಿತ್ತು. ಇವರಲ್ಲಿ ಕೇವಲ ನಾಲ್ಕು ಮಂದಿ ಇಬ್ರಿಯ ಯುವಕರನ್ನು ಮಾತ್ರ ಆಯ್ಕೆಮಾಡಲಾಯಿತೋ ಅಥವಾ ಇನ್ನೂ ಹೆಚ್ಚಿನವರನ್ನು ಆಯ್ಕೆಮಾಡಲಾಯಿತೋ ಎಂಬುದನ್ನು ಬೈಬಲು ವಿವರಿಸುವುದಿಲ್ಲ. ಏನೇ ಆಗಲಿ, ಈ ನಾಲ್ಕು ಮಂದಿ ಯುವಕರ ನಂಬಿಗಸ್ತ ಜೀವನಮಾರ್ಗವು, “ಬಹಳ ಫಲವನ್ನು” ಉತ್ಪಾದಿಸಿತು.—ಕೀರ್ತನೆ 19:11.
32. ದಾನಿಯೇಲ, ಹನನ್ಯ, ಮಿಶಾಯೇಲ, ಹಾಗೂ ಅಜರ್ಯರು, ಅರಸನ ಆಸ್ಥಾನದಲ್ಲಿ ಇರುವುದಕ್ಕಿಂತಲೂ ಹೆಚ್ಚು ಮಹತ್ತಾದ ಸುಯೋಗದಲ್ಲಿ ಆನಂದಿಸಿದರೆಂದು ಏಕೆ ಹೇಳಸಾಧ್ಯವಿದೆ?
32 “ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡಿ; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ” ಎಂದು ಶಾಸ್ತ್ರವಚನವು ಹೇಳುತ್ತದೆ. (ಜ್ಞಾನೋಕ್ತಿ 22:29) ಹೀಗೆ, ಅರಸನ ಸನ್ನಿಧಿಸೇವಕರಾಗಲಿಕ್ಕಾಗಿ, ಅಂದರೆ ರಾಜನ ಆಸ್ಥಾನದ ಒಂದು ಭಾಗವಾಗಿರಲಿಕ್ಕಾಗಿ, ದಾನಿಯೇಲ, ಹನನ್ಯ, ಮಿಶಾಯೇಲ, ಹಾಗೂ ಅಜರ್ಯರನ್ನು ನೆಬೂಕದ್ನೆಚ್ಚರನು ಆಯ್ಕೆಮಾಡಿದನು. ಈ ಯುವಕರ ಮೂಲಕ, ವಿಶೇಷವಾಗಿ ದಾನಿಯೇಲನ ಮೂಲಕ, ದೈವಿಕ ಉದ್ದೇಶದ ಪ್ರಮುಖ ಅಂಶಗಳು ಎಲ್ಲರಿಗೂ ಗೊತ್ತಾಗಸಾಧ್ಯವಾಗುವಂತೆ ಯೆಹೋವನ ಹಸ್ತವು ಕಾರ್ಯನಡಿಸುತ್ತಿತ್ತು ಎಂಬುದು ಈ ಎಲ್ಲ ಘಟನೆಗಳಿಂದ ವ್ಯಕ್ತವಾಗುತ್ತದೆ. ನೆಬೂಕದ್ನೆಚ್ಚರನ ಆಸ್ಥಾನದ ಭಾಗವಾಗಿರಲಿಕ್ಕಾಗಿ ಆಯ್ಕೆಯಾದುದು ಹೆಮ್ಮೆಯ ಸಂಗತಿಯಾಗಿತ್ತಾದರೂ, ಇಡೀ ವಿಶ್ವದ ಅರಸನಾದ ಯೆಹೋವನಿಂದ ಇಷ್ಟೊಂದು ಅದ್ಭುತಕರ ರೀತಿಯಲ್ಲಿ ಉಪಯೋಗಿಸಲ್ಪಡುವುದು ಇನ್ನೂ ಹೆಚ್ಚು ಹೆಮ್ಮೆಯ ಸಂಗತಿಯಾಗಿತ್ತು.
33, 34. (ಎ) ಇಬ್ರಿಯ ಯುವಕರನ್ನು ನೋಡಿ ಅರಸನು ಏಕೆ ಪ್ರಭಾವಿತನಾದನು? (ಬಿ) ನಾಲ್ಕು ಮಂದಿ ಇಬ್ರಿಯರ ಅನುಭವದಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?
33 ಯೆಹೋವನು ಈ ನಾಲ್ಕು ಮಂದಿ ಇಬ್ರಿಯ ಯುವಕರಿಗೆ ಕೊಟ್ಟಿದ್ದ ವಿವೇಕ ಹಾಗೂ ಸೂಕ್ಷ್ಮಪರಿಜ್ಞಾನವು, ತನ್ನ ಆಸ್ಥಾನದಲ್ಲಿರುವ ಎಲ್ಲ ಸಲಹೆಗಾರರು ಹಾಗೂ ಪಂಡಿತರ ಬಳಿಯಿರುವ ಜ್ಞಾನಕ್ಕಿಂತ ಅತ್ಯಧಿಕವಾಗಿತ್ತು ಎಂಬುದನ್ನು ನೆಬೂಕದ್ನೆಚ್ಚರನು ಅತಿ ಬೇಗನೆ ಕಂಡುಕೊಂಡನು. “ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಸರ್ವವಿಷಯಗಳಲ್ಲಿ ಅವರನ್ನು ವಿಚಾರಮಾಡಲು ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.” (ದಾನಿಯೇಲ 1:20) ಈ ರೀತಿಯ ವ್ಯತ್ಯಾಸ ಏಕಿದ್ದಿರಸಾಧ್ಯವಿದೆ? “ಜೋಯಿಸರು” ಹಾಗೂ “ಮಂತ್ರವಾದಿಗಳು” ಬಾಬೆಲಿನ ಐಹಿಕ ಹಾಗೂ ಮೂಢನಂಬಿಕೆಯ ಜ್ಞಾನದ ಮೇಲೆ ಅವಲಂಬಿಸಿದ್ದರು, ಆದರೆ ದಾನಿಯೇಲನು ಹಾಗೂ ಅವನ ಸ್ನೇಹಿತರು ಸ್ವರ್ಗೀಯ ವಿವೇಕದಲ್ಲಿ ತಮ್ಮ ಭರವಸೆಯನ್ನು ಇಟ್ಟಿದ್ದರು. ಇದು ಹೋಲಿಕೆಗೆ ಮೀರಿದ್ದಾಗಿದೆ, ಇದರೊಂದಿಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲ!
34 ಯುಗಗಳು ಕಳೆದಿವೆಯಾದರೂ, ಸಂಗತಿಗಳು ಒಂದಿಷ್ಟೂ ಬದಲಾಗಿಲ್ಲ. ಸಾ.ಶ. ಒಂದನೆಯ ಶತಮಾನದಲ್ಲಿ, ಅಂದರೆ ಗ್ರೀಕ್ ತತ್ವಜ್ಞಾನ ಹಾಗೂ ರೋಮನ್ ನಿಯಮಗಳು ಹೆಚ್ಚು ಜನಪ್ರಿಯವಾಗಿದ್ದ ಸಮಯದಲ್ಲಿ, ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡುಕೊಳ್ಳುತ್ತಾನೆಂತಲೂ ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಯೆಹೋವನು ತಿಳುಕೊಳ್ಳುತ್ತಾನೆಂತಲೂ ಬರೆದದೆಯಲ್ಲಾ. ಆದಕಾರಣ ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ.” (1 ಕೊರಿಂಥ 3:19-21) ಇಂದು, ಯೆಹೋವನು ನಮಗೆ ಏನನ್ನು ಕಲಿಸಿದ್ದಾನೋ ಅದಕ್ಕೆ ನಾವು ದೃಢವಾಗಿ ಅಂಟಿಕೊಳ್ಳುವ ಅಗತ್ಯವಿದೆ ಮತ್ತು ಈ ಲೋಕದ ಥಳುಕುಬಳುಕಿನ ಜೀವನ ಶೈಲಿಯ ಪ್ರಭಾವಕ್ಕೆ ಸುಲಭವಾಗಿ ಒಳಗಾಗದಂತೆ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆ.—1 ಯೋಹಾನ 2:15-17.
ಕೊನೆಯ ತನಕ ನಂಬಿಗಸ್ತರು
35. ದಾನಿಯೇಲನ ಮೂವರು ಸಂಗಡಿಗರ ಬಗ್ಗೆ ನಮಗೆ ಎಷ್ಟರ ಮಟ್ಟಿಗೆ ತಿಳಿಸಲಾಗಿದೆ?
35 ದೂರಾ ಬಯಲಿನಲ್ಲಿ ನೆಬೂಕದ್ನೆಚ್ಚರನು ಸ್ಥಾಪಿಸಿದ ಬಂಗಾರದ ಪ್ರತಿಮೆ ಹಾಗೂ ಧಗಧಗನೆ ಉರಿಯುವ ಆವಿಗೆಯ ಪರೀಕ್ಷೆಯ ಸಂಬಂಧದಲ್ಲಿ, ಹನನ್ಯ, ಮಿಶಾಯೇಲ, ಹಾಗೂ ಅಜರ್ಯರ ದೃಢವಾದ ನಂಬಿಕೆಯು, ದಾನಿಯೇಲ 3ನೆಯ ಅಧ್ಯಾಯದಲ್ಲಿ ನಾಟಕೀಯವಾಗಿ ದೃಷ್ಟಾಂತಿಸಲ್ಪಟ್ಟಿದೆ. ದೇವಭಯವುಳ್ಳ ಈ ಇಬ್ರಿಯರು ತಮ್ಮ ಮರಣದ ತನಕವೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರು ಎಂಬುದರಲ್ಲಿ ಸಂಶಯವೇ ಇಲ್ಲ. ಇದು ನಮಗೆ ಹೇಗೆ ತಿಳಿದಿದೆಯೆಂದರೆ, “ನಂಬಿಕೆಯ ಮೂಲಕ . . . ಬೆಂಕಿಯ ಬಲವನ್ನು ಆರಿಸಿದವರು” ಎಂದು ಅಪೊಸ್ತಲ ಪೌಲನು ಬರೆದಾಗ, ಅವನು ಈ ಇಬ್ರಿಯ ಯುವಕರನ್ನೇ ಸೂಚಿಸಿ ಬರೆದಿದ್ದನು. (ಇಬ್ರಿಯ 11:33, 34) ಯೆಹೋವನ ಎಲ್ಲ ಸೇವಕರಿಗೆ ಇವರು ಅತ್ಯುತ್ತಮ ಮಾದರಿಯಾಗಿದ್ದಾರೆ.
36. ದಾನಿಯೇಲನು ಗಮನಾರ್ಹವಾದ ಯಾವ ಕಾರ್ಯಗತಿಯಲ್ಲಿ ಮುಂದುವರಿದನು?
36 ದಾನಿಯೇಲನ ಬಗ್ಗೆಯಾದರೋ, 1ನೆಯ ಅಧ್ಯಾಯದ ಕೊನೆಯ ವಚನವು ಹೀಗೆ ಹೇಳುತ್ತದೆ: “ದಾನಿಯೇಲನು ರಾಜನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.” ಸಾ.ಶ.ಪೂ. 539ರಲ್ಲಿ, ಒಂದೇ ರಾತ್ರಿಯಲ್ಲಿ ಕೋರೆಷನು ಬಾಬೆಲನ್ನು ಸೋಲಿಸಿಬಿಟ್ಟನು ಎಂದು ಇತಿಹಾಸವು ತಿಳಿಯಪಡಿಸುತ್ತದೆ. ತನ್ನ ಸತ್ಕೀರ್ತಿ ಹಾಗೂ ಸ್ಥಾನದ ಕಾರಣ, ದಾನಿಯೇಲನು ಕೋರೆಷನ ಆಸ್ಥಾನದಲ್ಲಿ ಸೇವೆಮಾಡುವುದನ್ನು ಮುಂದುವರಿಸಿದನು. ಅಷ್ಟುಮಾತ್ರವಲ್ಲ, “ಪಾರಸಿಯ ರಾಜನಾದ ದಾನಿಯೇಲ 10:1 ವಿವರಿಸುತ್ತದೆ. ಸಾ.ಶ.ಪೂ. 617ರಲ್ಲಿ ದಾನಿಯೇಲನು ಬಾಬೆಲಿಗೆ ತರಲ್ಪಟ್ಟಾಗ ಒಂದುವೇಳೆ ಅವನು ಹದಿವಯಸ್ಕನಾಗಿದ್ದಲ್ಲಿ, ಈ ಕೊನೆಯ ದರ್ಶನವನ್ನು ಪಡೆದುಕೊಂಡಾಗ ಅವನು ಸುಮಾರು 100 ವರ್ಷ ಪ್ರಾಯದವನಾಗಿದ್ದಿರಬಹುದು. ಯೆಹೋವನ ನಂಬಿಗಸ್ತ ಸೇವೆಯಲ್ಲಿ ಅವನ ಕಾರ್ಯಗತಿಯು ಎಷ್ಟು ದೀರ್ಘವಾದದ್ದೂ ಆಶೀರ್ವಾದಭರಿತವೂ ಆದದ್ದಾಗಿತ್ತು!
ಕೋರೆಷನ ಆಳಿಕೆಯ ಮೂರನೆಯ ವರುಷದಲ್ಲಿ,” ಒಂದು ಗಮನಾರ್ಹವಾದ ಸಂಗತಿಯನ್ನು ಯೆಹೋವನು ದಾನಿಯೇಲನಿಗೆ ತಿಳಿಯಪಡಿಸಿದನು ಎಂದು37. ದಾನಿಯೇಲ 1ನೆಯ ಅಧ್ಯಾಯವನ್ನು ಪರಿಗಣಿಸುವ ಮೂಲಕ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ?
37 ದಾನಿಯೇಲ ಪುಸ್ತಕದ ಮೊದಲನೆಯ ಅಧ್ಯಾಯವು, ನಾಲ್ಕು ಮಂದಿ ನಂಬಿಗಸ್ತ ಯುವಕರು ಅನುಕ್ರಮವಾಗಿ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಿದ ಕಥೆಗಿಂತಲೂ ಹೆಚ್ಚಿನ ವಿಷಯವನ್ನು ನಮಗೆ ತಿಳಿಸುತ್ತದೆ. ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ, ಯೆಹೋವನು ತನ್ನ ಇಷ್ಟದ ಪ್ರಕಾರ ಯಾವುದೇ ವ್ಯಕ್ತಿಯನ್ನು ಹೇಗೆ ಉಪಯೋಗಿಸಬಲ್ಲನು ಎಂಬುದನ್ನು ಅದು ತೋರಿಸುತ್ತದೆ. ಯಾವುದು ಒಂದು ವಿಪತ್ತಾಗಿ ಕಂಡುಬರಬಹುದೋ ಅದನ್ನು ಒಂದುವೇಳೆ ಯೆಹೋವನು ಅನುಮತಿಸುವುದಾದರೆ, ಅದು ಉಪಯುಕ್ತವಾದ ಉದ್ದೇಶವನ್ನು ಪೂರೈಸಬಲ್ಲದು ಎಂಬುದನ್ನು ಈ ವೃತ್ತಾಂತವು ರುಜುಪಡಿಸುತ್ತದೆ. ಚಿಕ್ಕಪುಟ್ಟ ಸಂಗತಿಗಳಲ್ಲಿ ನಂಬಿಗಸ್ತರಾಗಿರುವುದರಿಂದ ಅತ್ಯಧಿಕ ಪ್ರತಿಫಲಗಳು ದೊರಕುತ್ತವೆ ಎಂಬುದನ್ನೂ ಅದು ತಿಳಿಯಪಡಿಸುತ್ತದೆ.
ನೀವೇನನ್ನು ಗ್ರಹಿಸಿದಿರಿ?
• ದಾನಿಯೇಲ ಹಾಗೂ ಅವನ ಮೂವರು ಯುವ ಸ್ನೇಹಿತರ ಹಿನ್ನೆಲೆಯ ಕುರಿತು ಏನು ಹೇಳಸಾಧ್ಯವಿದೆ?
• ಆ ನಾಲ್ಕು ಮಂದಿ ಇಬ್ರಿಯ ಯುವಕರಿಗೆ ಹೆತ್ತವರಿಂದ ದೊರಕಿದ್ದ ಅತ್ಯುತ್ತಮ ತರಬೇತಿಯು, ಬಾಬೆಲಿನಲ್ಲಿ ಹೇಗೆ ಪರೀಕ್ಷೆಗೊಳಗಾಯಿತು?
• ಈ ನಾಲ್ಕು ಮಂದಿ ಇಬ್ರಿಯರು ಧೈರ್ಯದಿಂದ ನಿಲುವನ್ನು ತೆಗೆದುಕೊಂಡದ್ದಕ್ಕಾಗಿ ಯೆಹೋವನು ಅವರನ್ನು ಹೇಗೆ ಆಶೀರ್ವದಿಸಿದನು?
• ಯೆಹೋವನ ಆಧುನಿಕ ದಿನದ ಸೇವಕರು, ದಾನಿಯೇಲನಿಂದ ಹಾಗೂ ಅವನ ಮೂವರು ಸಂಗಡಿಗರಿಂದ ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 41 ರಲ್ಲಿ ಇಡೀ ಪುಟದ ಚಿತ್ರ]