ಯೆಹೋವನ ಸಾಕ್ಷಿಗಳು ಸಂಘಟಿತರಾಗಿರುವ ವಿಧ
ಪಾಠ 14
ಯೆಹೋವನ ಸಾಕ್ಷಿಗಳು ಸಂಘಟಿತರಾಗಿರುವ ವಿಧ
ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಆರಂಭವು ಯಾವಾಗ ಆಯಿತು? (1)
ಯೆಹೋವನ ಸಾಕ್ಷಿಗಳ ಕೂಟಗಳು ಹೇಗೆ ನಡೆಸಲ್ಪಡುತ್ತವೆ? (2)
ವೆಚ್ಚಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ? (3)
ಪ್ರತಿಯೊಂದು ಸಭೆಯಲ್ಲಿ ನಾಯಕತ್ವವನ್ನು ವಹಿಸುವವರು ಯಾರು? (4)
ಪ್ರತಿ ವರ್ಷ ಯಾವ ದೊಡ್ಡ ಕೂಟಗಳು ನಡೆಸಲ್ಪಡುತ್ತವೆ? (5)
ಅವರ ಮುಖ್ಯ ಕಾರ್ಯಾಲಯಗಳಲ್ಲಿ ಮತ್ತು ಬ್ರಾಂಚ್ ಆಫೀಸುಗಳಲ್ಲಿ ಯಾವ ಕೆಲಸವು ಮಾಡಲ್ಪಡುತ್ತದೆ? (6)
1. ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಆರಂಭವು 1870ಗಳಲ್ಲಾಯಿತು. ಆದಿಯಲ್ಲಿ, ಅವರು ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಟ್ಟಿದ್ದರು. ಆದರೆ 1931ರಲ್ಲಿ, ಯೆಹೋವನ ಸಾಕ್ಷಿಗಳು ಎಂಬ ಶಾಸ್ತ್ರೀಯ ಹೆಸರನ್ನು ಅವರು ಸ್ವೀಕರಿಸಿಕೊಂಡರು. (ಯೆಶಾಯ 43:10) ಚಿಕ್ಕ ಆರಂಭಗಳಿಂದ ಸಂಸ್ಥೆಯು, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸಾರುವುದರಲ್ಲಿ ಕಾರ್ಯಮಗ್ನರಾಗಿರುವ ಲಕ್ಷಾಂತರ ಸಾಕ್ಷಿಗಳ ಸಂಖ್ಯೆಗೆ ಬೆಳೆದಿದೆ.
2. ಯೆಹೋವನ ಸಾಕ್ಷಿಗಳ ಹೆಚ್ಚಿನ ಸಭೆಗಳಲ್ಲಿ ಪ್ರತಿ ವಾರ ಮೂರು ಬಾರಿ ಕೂಟಗಳಿರುತ್ತವೆ. ಇವುಗಳಲ್ಲಿ ಯಾವುದೇ ಕೂಟವನ್ನು ಹಾಜರಾಗುವಂತೆ ನಿಮ್ಮನ್ನು ಆಮಂತ್ರಿಸಲಾಗುತ್ತದೆ. (ಇಬ್ರಿಯ 10:24, 25) ಕಲಿಸಲ್ಪಡುವ ವಿಷಯಕ್ಕೆ ಆಧಾರವು ಬೈಬಲಾಗಿದೆ. ಕೂಟಗಳು ಪ್ರಾರ್ಥನೆಯಿಂದ ಆರಂಭಿಸಲ್ಪಟ್ಟು, ಮುಕ್ತಾಯಗೊಳಿಸಲ್ಪಡುತ್ತವೆ. ಹೆಚ್ಚಿನ ಕೂಟಗಳಲ್ಲಿ ಹೃತ್ಪೂರ್ವಕ “ಆತ್ಮಿಕ ಸಂಗೀತಗಳು” (NW) ಸಹ ಹಾಡಲ್ಪಡುತ್ತವೆ. (ಎಫೆಸ 5:18, 19) ಪ್ರವೇಶವು ಉಚಿತವಾಗಿದೆ, ಮತ್ತು ಯಾವ ಹಣವೆತ್ತುವಿಕೆಯನ್ನೂ ಮಾಡಲಾಗುವುದಿಲ್ಲ.—ಮತ್ತಾಯ 10:8.
3. ಹೆಚ್ಚಿನ ಸಭೆಗಳು ಕೂಟಗಳನ್ನು ಒಂದು ರಾಜ್ಯ ಸಭಾಗೃಹದಲ್ಲಿ ನಡೆಸುತ್ತವೆ. ಇವು ಸಾಮಾನ್ಯವಾಗಿ ಸಾಕ್ಷಿ ಸ್ವಯಂಸೇವಕರಿಂದ ಕಟ್ಟಲ್ಪಟ್ಟ ಸರಳವಾದ ಕಟ್ಟಡಗಳಾಗಿವೆ. ಈ ರಾಜ್ಯ ಸಭಾಗೃಹದಲ್ಲಿ ನೀವು ಯಾವುದೇ ಮೂರ್ತಿಗಳನ್ನು, ಶಿಲುಬೆಗಳನ್ನು, ಅಥವಾ ಇವುಗಳಂತಹ ವಸ್ತುಗಳನ್ನು ನೋಡುವುದಿಲ್ಲ. ವೆಚ್ಚಗಳು ಸ್ವಇಚ್ಛೆಯ ದಾನಗಳಿಂದ ನೋಡಿಕೊಳ್ಳಲ್ಪಡುತ್ತವೆ. 2 ಕೊರಿಂಥ 9:7.
ದಾನವನ್ನು ಮಾಡಬಯಸುವವರಿಗಾಗಿ ಕಾಣಿಕೆ ಪೆಟ್ಟಿಗೆಯೊಂದಿದೆ.—4. ಪ್ರತಿಯೊಂದು ಸಭೆಯಲ್ಲಿ, ಹಿರಿಯರು ಅಥವಾ ಮೇಲ್ವಿಚಾರಕರಿದ್ದಾರೆ. ಅವರು ಸಭೆಯಲ್ಲಿ ಬೋಧಿಸುವುದರಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. (1 ತಿಮೊಥೆಯ 3:1-7; 5:17) ಅವರು ಶುಶ್ರೂಷಾ ಸೇವಕರಿಂದ ಸಹಾಯಿಸಲ್ಪಡುತ್ತಾರೆ. (1 ತಿಮೊಥೆಯ 3:8-10, 12, 13) ಈ ಪುರುಷರು ಸಭೆಯಲ್ಲಿರುವ ಉಳಿದವರಿಗಿಂತ ಮೇಲೆತ್ತರಿಸಲ್ಪಡುವುದಿಲ್ಲ. (2 ಕೊರಿಂಥ 1:24) ಅವರಿಗೆ ವಿಶೇಷ ಬಿರುದುಗಳನ್ನು ಕೊಡಲಾಗುವುದಿಲ್ಲ. (ಮತ್ತಾಯ 23:8-10) ಅವರು ಇತರರಿಂದ ಭಿನ್ನವಾಗಿ ಉಡುಪು ಧರಿಸುವುದಿಲ್ಲ. ತಮ್ಮ ಕೆಲಸಕ್ಕಾಗಿ ಅವರಿಗೆ ಸಂಬಳವನ್ನೂ ಕೊಡಲಾಗುವುದಿಲ್ಲ. ಹಿರಿಯರು ಸಭೆಯ ಆತ್ಮಿಕ ಅಗತ್ಯಗಳನ್ನು ಸ್ವಇಚ್ಛೆಯಿಂದ ನೋಡಿಕೊಳ್ಳುತ್ತಾರೆ. ತೊಂದರೆಯ ಸಮಯಗಳಲ್ಲಿ ಅವರು ಸಾಂತ್ವನ ಹಾಗೂ ಮಾರ್ಗದರ್ಶನವನ್ನು ಒದಗಿಸಬಲ್ಲರು.—ಯಾಕೋಬ 5:14-16; 1 ಪೇತ್ರ 5:2, 3.
5. ಯೆಹೋವನ ಸಾಕ್ಷಿಗಳು ಪ್ರತಿ ವರ್ಷ ದೊಡ್ಡ ಸಮ್ಮೇಳನಗಳನ್ನು ಅಥವಾ ಅಧಿವೇಶನಗಳನ್ನೂ ನಡೆಸುತ್ತಾರೆ. ಇಂತಹ ಸಮಯಗಳಲ್ಲಿ ಬೈಬಲ್ ಉಪದೇಶದ ಒಂದು ವಿಶೇಷ ಕಾರ್ಯಕ್ರಮಕ್ಕಾಗಿ ಅನೇಕ ಸಭೆಗಳು ಒಟ್ಟಿಗೆ ಕೂಡಿಬರುತ್ತವೆ. ಹೊಸ ಶಿಷ್ಯರ ದೀಕ್ಷಾಸ್ನಾನವು ಪ್ರತಿಯೊಂದು ಸಮ್ಮೇಳನ ಅಥವಾ ಅಧಿವೇಶನದ ಕಾರ್ಯಕ್ರಮದ ಸಾಮಾನ್ಯ ಭಾಗವಾಗಿದೆ.—ಮತ್ತಾಯ 3:13-17; 28:19, 20.
6. ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯವು ನ್ಯೂ ಯಾರ್ಕ್ನಲ್ಲಿದೆ. ಅಲ್ಲಿ ಆಡಳಿತ ಮಂಡಲಿಯು—ಲೋಕವ್ಯಾಪಕ ಸಭೆಯ ಮೇಲ್ವಿಚಾರಣೆ ಮಾಡುವ ಅನುಭವಸ್ಥ ಹಿರಿಯರ ಒಂದು ಕೇಂದ್ರೀಯ ಗುಂಪು—ನೆಲಸಿದೆ. ಲೋಕದ ಸುತ್ತಲೂ 100ಕ್ಕಿಂತ ಹೆಚ್ಚು ಬ್ರಾಂಚ್ ಆಫೀಸುಗಳು ಸಹ ಇವೆ. ಈ ಸ್ಥಳಗಳಲ್ಲಿ, ಸ್ವಯಂಸೇವಕರು ಬೈಬಲ್ ಸಾಹಿತ್ಯವನ್ನು ಮುದ್ರಿಸಲು ಮತ್ತು ರವಾನಿಸಲು ಸಹಾಯ ಮಾಡುತ್ತಾರೆ. ಸಾರುವ ಕೆಲಸದ ಸಂಘಟನೆಯ ಕುರಿತೂ ನಿರ್ದೇಶನವು ಕೊಡಲ್ಪಡುತ್ತದೆ. ನಿಮಗೆ ಹತ್ತಿರವಿರುವ ಬ್ರಾಂಚ್ ಆಫೀಸಿಗೆ ಒಂದು ಸಂದರ್ಶನವನ್ನು ನೀಡಲು ಏಕೆ ಯೋಜಿಸಬಾರದು?