ಪರಿಶಿಷ್ಟ
ತಲೆಗೆ ಮುಸುಕುಹಾಕಿಕೊಳ್ಳುವುದು—ಯಾವಾಗ ಮತ್ತು ಏಕೆ?
ಒಬ್ಬ ಕ್ರೈಸ್ತ ಸ್ತ್ರೀಯು ತನ್ನ ಆರಾಧನೆಯ ಸಂಬಂಧದಲ್ಲಿ ಯಾವಾಗ ಮತ್ತು ಏಕೆ ತಲೆಗೆ ಮುಸುಕನ್ನು ಹಾಕಿಕೊಳ್ಳಬೇಕು? ಈ ವಿಷಯದ ಕುರಿತಾದ ಪೌಲನ ಪ್ರೇರಿತ ಚರ್ಚೆಯನ್ನು ನಾವೀಗ ಪರಿಗಣಿಸೋಣ. ಒಳ್ಳೆಯ ನಿರ್ಣಯಗಳನ್ನು, ದೇವರಿಗೆ ಗೌರವವನ್ನು ತರುವಂಥ ನಿರ್ಣಯಗಳನ್ನು ಮಾಡಲು ನಮಗೆ ಬೇಕಾಗಿರುವ ಮಾರ್ಗದರ್ಶನವನ್ನು ಅವನು ಒದಗಿಸುತ್ತಾನೆ. 1 ಕೊರಿಂಥ 11:3-16ರಲ್ಲಿ ಪೌಲನು ತೂಗಿನೋಡಬೇಕಾದ ಮೂರು ಅಂಶಗಳನ್ನು ತಿಳಿಯಪಡಿಸುತ್ತಾನೆ: (1) ಒಬ್ಬ ಸ್ತ್ರೀಯು ಮುಸುಕನ್ನು ಹಾಕಿಕೊಳ್ಳುವುದನ್ನು ಅಗತ್ಯಪಡಿಸುವ ಚಟುವಟಿಕೆಗಳು, (2) ಅವಳು ಮುಸುಕನ್ನು ಹಾಕಿಕೊಳ್ಳಬೇಕಾದ ಸನ್ನಿವೇಶಗಳು ಮತ್ತು (3) ಈ ಮಟ್ಟವನ್ನು ಅನ್ವಯಿಸಲು ಅವಳಿಗಿರುವ ಹೇತುಗಳು.
ಚಟುವಟಿಕೆಗಳು. ಪೌಲನು ಎರಡು ಚಟುವಟಿಕೆಗಳನ್ನು ತಿಳಿಸುತ್ತಾನೆ: ಪ್ರಾರ್ಥಿಸುವುದು ಮತ್ತು ಪ್ರವಾದಿಸುವುದು. (ವಚನಗಳು 4, 5) ಪ್ರಾರ್ಥನೆಯು ಆರಾಧನೀಯ ಭಾವದಿಂದ ಯೆಹೋವನೊಂದಿಗೆ ಮಾತಾಡುವುದಾಗಿದೆ. ಇಂದು, ಪ್ರವಾದಿಸುವುದು ಒಬ್ಬ ಕ್ರೈಸ್ತ ಶುಶ್ರೂಷಕನು ಮಾಡುವಂಥ ಯಾವುದೇ ಬೈಬಲ್ ಆಧಾರಿತ ಬೋಧಿಸುವಿಕೆಗೆ ಅನ್ವಯಿಸಬಲ್ಲದು. ಹಾಗಾದರೆ ಒಬ್ಬ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಬೈಬಲ್ ಸತ್ಯವನ್ನು ಬೋಧಿಸುವಾಗೆಲ್ಲಾ ತನ್ನ ತಲೆಯನ್ನು ಮುಚ್ಚಿಕೊಳ್ಳಬೇಕು ಎಂದು ಪೌಲನು ಸೂಚಿಸುತ್ತಿದ್ದಾನೊ? ಇಲ್ಲ. ಒಬ್ಬ ಸ್ತ್ರೀಯು ತಲೆಗೆ ಮುಸುಕುಹಾಕಿಕೊಳ್ಳುವಳೋ ಇಲ್ಲವೋ ಎಂಬುದು ಅವಳು ಪ್ರಾರ್ಥಿಸುವ ಅಥವಾ ಬೋಧಿಸುವ ಸನ್ನಿವೇಶದ ಮೇಲೆ ಹೊಂದಿಕೊಂಡಿರುವುದು.
ಸನ್ನಿವೇಶಗಳು. ಪೌಲನ ಮಾತುಗಳು ಎರಡು ಸನ್ನಿವೇಶಗಳನ್ನು ಅಥವಾ ಚಟುವಟಿಕೆಯ ಕ್ಷೇತ್ರಗಳನ್ನು ಸೂಚಿಸುತ್ತವೆ—ಅದು ಕುಟುಂಬ ಮತ್ತು ಸಭೆಯೇ. ಅವನು ಹೇಳುವುದು: “ಸ್ತ್ರೀಗೆ ಪುರುಷನು ತಲೆ . . . ತನ್ನ ತಲೆಯ ಮೇಲೆ ಮುಸುಕನ್ನು ಹಾಕಿಕೊಳ್ಳದೆ ಪ್ರಾರ್ಥನೆಮಾಡುವ ಅಥವಾ ಪ್ರವಾದಿಸುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ.” (ವಚನಗಳು 3, 5) ಕುಟುಂಬ ಏರ್ಪಾಡಿನಲ್ಲಿ, ಒಬ್ಬ ಸ್ತ್ರೀಯ ಗಂಡನನ್ನು ಯೆಹೋವನು ಅವಳ ತಲೆಯಾಗಿ ನೇಮಿಸುತ್ತಾನೆ. ಯೆಹೋವನು ಪುರುಷನಿಗೆ ನೇಮಿಸುವಂಥ ಜವಾಬ್ದಾರಿಗಳನ್ನು ಅವಳು ನಿರ್ವಹಿಸುವಾಗ ತನ್ನ ಗಂಡನ ಅಧಿಕಾರಕ್ಕೆ ಯೋಗ್ಯವಾದ ಮಾನ್ಯತೆಯನ್ನು ಕೊಡದಿದ್ದಲ್ಲಿ ತನ್ನ ಗಂಡನನ್ನು ಅವಮಾನಪಡಿಸುವಳು. ಉದಾಹರಣೆಗೆ, ತನ್ನ ಗಂಡನು ಉಪಸ್ಥಿತನಿರುವಾಗ ಅವಳು ಒಂದು ಬೈಬಲ್ ಅಧ್ಯಯನವನ್ನು ನಡೆಸಬೇಕಾಗಿ ಬಂದಲ್ಲಿ ತಲೆಗೆ ಮುಸುಕನ್ನು ಹಾಕಿಕೊಳ್ಳುವ ಮೂಲಕ ಅವಳು ಅವನ ಅಧಿಕಾರಕ್ಕೆ ಮನ್ನಣೆಯನ್ನು ತೋರಿಸುತ್ತಾಳೆ. ಅವನಿಗೆ ದೀಕ್ಷಾಸ್ನಾನವಾಗಿರಲಿ ಇಲ್ಲದಿರಲಿ ಅವನು ಕುಟುಂಬದ ತಲೆಯಾಗಿರುವುದರಿಂದ ಅವಳು ಹೀಗೆ ಮಾಡುತ್ತಾಳೆ. * ದೀಕ್ಷಾಸ್ನಾನ ಪಡೆದುಕೊಂಡಿರುವ ತನ್ನ ಅಪ್ರಾಪ್ತ ವಯಸ್ಸಿನ ಮಗನು ಉಪಸ್ಥಿತನಿರುವಾಗ ಅವಳು ಪ್ರಾರ್ಥನೆಯನ್ನು ಮಾಡಬೇಕಾಗಿರುವಲ್ಲಿ ಅಥವಾ ಬೋಧಿಸಬೇಕಾಗಿರುವಲ್ಲಿ ಆಗಲೂ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುವಳು; ಅವನು ಕುಟುಂಬದ ತಲೆಯಾಗಿದ್ದಾನೆ ಎಂದಲ್ಲ ಬದಲಿಗೆ ಕ್ರೈಸ್ತ ಸಭೆಯ ಸ್ನಾತ ಪುರುಷ ಸದಸ್ಯರಿಗೆ ಕೊಡಲ್ಪಟ್ಟಿರುವ ಅಧಿಕಾರದಿಂದಾಗಿ ಹೀಗೆ ಮಾಡುವಳು.
ವಚನ 16) ಕ್ರೈಸ್ತ ಸಭೆಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ಪುರುಷರಿಗೆ ತಲೆತನವು ಕೊಡಲ್ಪಟ್ಟಿದೆ. (1 ತಿಮೊಥೆಯ 2:11-14; ಇಬ್ರಿಯ 13:17) ಪುರುಷರು ಮಾತ್ರ ಹಿರಿಯರಾಗಿ ಮತ್ತು ಶುಶ್ರೂಷಾ ಸೇವಕರಾಗಿ ನೇಮಿಸಲ್ಪಡುತ್ತಾರೆ. ಅವರಿಗೆ ದೇವರ ಮಂದೆಯ ಆರೈಕೆಮಾಡುವ ದೇವದತ್ತ ಜವಾಬ್ದಾರಿಯು ಕೊಡಲ್ಪಡುತ್ತದೆ. (ಅಪೊಸ್ತಲರ ಕಾರ್ಯಗಳು 20:28) ಆದರೆ ಕೆಲವೊಮ್ಮೆ ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಅರ್ಹ ಪುರುಷನು ಸಾಮಾನ್ಯವಾಗಿ ನಿರ್ವಹಿಸುವಂಥ ಕರ್ತವ್ಯವನ್ನು ಒಬ್ಬ ಕ್ರೈಸ್ತ ಸ್ತ್ರೀ ನಿರ್ವಹಿಸಬೇಕಾದ ಸನ್ನಿವೇಶಗಳು ಏಳಬಹುದು. ಉದಾಹರಣೆಗೆ, ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಅರ್ಹ ಪುರುಷನು ಲಭ್ಯವಿಲ್ಲದಿರುವುದರಿಂದ ಅಥವಾ ಹಾಜರಿಲ್ಲದಿರುವುದರಿಂದ ಅವಳು ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸಬೇಕಾಗಿ ಬರಬಹುದು. ಅಥವಾ ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಪುರುಷನು ಉಪಸ್ಥಿತನಿರುವಾಗ ಅವಳು ಮುಂಚೆಯೇ ಏರ್ಪಾಡು ಮಾಡಲ್ಪಟ್ಟ ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸಬಹುದು. * ಇಂಥ ಚಟುವಟಿಕೆಗಳು ವಾಸ್ತವದಲ್ಲಿ ಕ್ರೈಸ್ತ ಸಭೆಯ ಕಾರ್ಯನಿರ್ವಹಣೆಯ ಭಾಗವಾಗಿರುವುದರಿಂದ, ಒಬ್ಬ ಪುರುಷನಿಗೆ ಸಾಮಾನ್ಯವಾಗಿ ನೇಮಿಸಲ್ಪಡುವ ಕರ್ತವ್ಯವನ್ನು ತಾನು ನಿರ್ವಹಿಸುತ್ತಿದ್ದೇನೆ ಎಂಬುದನ್ನು ಅಂಗೀಕರಿಸುವ ಸಲುವಾಗಿ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುತ್ತಾಳೆ.
ಪೌಲನು ಸಭೆಯ ಸನ್ನಿವೇಶದ ಕುರಿತು ಮಾತಾಡುತ್ತಾ, “ಯಾವನಾದರೂ ಇನ್ನಿತರ ಪದ್ಧತಿಗಾಗಿ ವಾದಿಸುವವನಾಗಿ ಕಂಡುಬಂದರೆ, ನಮ್ಮಲ್ಲಿಯಾಗಲಿ ದೇವರ ಸಭೆಗಳಲ್ಲಿಯಾಗಲಿ ಬೇರೆ ಯಾವುದೇ ಪದ್ಧತಿಯಿಲ್ಲ” ಎಂದು ಹೇಳುತ್ತಾನೆ. (ಮತ್ತೊಂದು ಬದಿಯಲ್ಲಿ, ಒಬ್ಬ ಸಹೋದರಿಯು ಆರಾಧನೆಯ ಇತರ ಅನೇಕ ಅಂಶಗಳಲ್ಲಿ ತೊಡಗುವಾಗ ತಲೆಗೆ ಮುಸುಕನ್ನು ಹಾಕಿಕೊಳ್ಳುವ ಆವಶ್ಯಕತೆಯಿರುವುದಿಲ್ಲ. ಉದಾಹರಣೆಗೆ, ಕ್ರೈಸ್ತ ಕೂಟಗಳಲ್ಲಿ ಉತ್ತರ ಕೊಡುವಾಗ, ತನ್ನ ಗಂಡನೊಂದಿಗೆ ಅಥವಾ ಇನ್ನೊಬ್ಬ ಸ್ನಾತ ಪುರುಷನೊಂದಿಗೆ ಮನೆಮನೆಯ ಶುಶ್ರೂಷೆಯಲ್ಲಿ ತೊಡಗಿರುವಾಗ ಅಥವಾ ತನ್ನ ಅಸ್ನಾತ ಮಕ್ಕಳೊಂದಿಗೆ ಅಧ್ಯಯನ ಮಾಡುತ್ತಿರುವಾಗ ಇಲ್ಲವೆ ಪ್ರಾರ್ಥನೆ ಮಾಡುತ್ತಿರುವಾಗ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುವ ಆವಶ್ಯಕತೆಯಿಲ್ಲ. ಆದರೆ ಈ ವಿಷಯದಲ್ಲಿ ಬೇರೆ ಪ್ರಶ್ನೆಗಳು ಏಳಬಹುದು ನಿಜ ಮತ್ತು ಒಬ್ಬ ಸಹೋದರಿಗೆ ಒಂದು ವಿಷಯದ ಕುರಿತು ಅನಿಶ್ಚಿತತೆ ಇರುವಲ್ಲಿ ಅವಳು ಹೆಚ್ಚಿನ * ಸಂಶೋಧನೆ ಮಾಡಿದ ಮೇಲೂ ಅನಿಶ್ಚಿತತೆ ಇರುವಲ್ಲಿ ಮತ್ತು ಅವಳ ಮನಸ್ಸಾಕ್ಷಿ ಅವಳನ್ನು ಪ್ರಚೋದಿಸುವುದಾದರೆ, ಹಿಂದಿನ ಪುಟದಲ್ಲಿರುವ ಚಿತ್ರದಲ್ಲಿ ತೋರಿಸಲಾಗಿರುವಂತೆ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳುವುದರಲ್ಲಿ ತಪ್ಪೇನಿಲ್ಲ.
ಸಂಶೋಧನೆಯನ್ನು ಮಾಡಬಹುದು.ಹೇತುಗಳು. ಒಬ್ಬ ಕ್ರೈಸ್ತ ಸ್ತ್ರೀಯು ಈ ಆವಶ್ಯಕತೆಯನ್ನು ಏಕೆ ಪೂರೈಸಬೇಕು ಎಂಬುದಕ್ಕೆ 10ನೇ ವಚನದಲ್ಲಿ ನಾವು ಎರಡು ಕಾರಣಗಳನ್ನು ಕಂಡುಕೊಳ್ಳುತ್ತೇವೆ: “ದೇವದೂತರ ನಿಮಿತ್ತವಾಗಿ ಸ್ತ್ರೀಯು ತನ್ನ ತಲೆಯ ಮೇಲೆ ಅಧಿಕಾರವನ್ನು ಸೂಚಿಸುವ ಮುಸುಕನ್ನು ಹಾಕಿಕೊಳ್ಳಬೇಕು.” ಮೊದಲಾಗಿ, “ಅಧಿಕಾರವನ್ನು ಸೂಚಿಸುವ” ಎಂಬ ಅಭಿವ್ಯಕ್ತಿಯನ್ನು ಗಮನಿಸಿ. ತಲೆಗೆ ಮುಸುಕನ್ನು ಹಾಕಿಕೊಳ್ಳುವುದು, ಯೆಹೋವನು ಸಭೆಯಲ್ಲಿ ಸ್ನಾತ ಪುರುಷರಿಗೆ ಕೊಟ್ಟಿರುವ ಅಧಿಕಾರವನ್ನು ತಾನು ಮಾನ್ಯಮಾಡುತ್ತೇನೆ ಎಂಬುದನ್ನು ಒಬ್ಬ ಸ್ತ್ರೀಯು ತೋರಿಸುವ ಒಂದು ವಿಧವಾಗಿದೆ. ಹೀಗೆ ಅವಳು ಯೆಹೋವ ದೇವರಿಗಾಗಿರುವ ಪ್ರೀತಿಯನ್ನು ಮತ್ತು ಆತನಿಗಾಗಿರುವ ನಿಷ್ಠೆಯನ್ನು ವ್ಯಕ್ತಪಡಿಸುತ್ತಾಳೆ. ಎರಡನೆಯ ಕಾರಣವು, “ದೇವದೂತರ ನಿಮಿತ್ತವಾಗಿ” ಎಂಬ ಮಾತುಗಳಲ್ಲಿ ಕಂಡುಬರುತ್ತದೆ. ಒಬ್ಬ ಸ್ತ್ರೀ ತಲೆಗೆ ಮುಸುಕನ್ನು ಹಾಕಿಕೊಳ್ಳುವ ಮೂಲಕ ಹೇಗೆ ಆ ಬಲಾಢ್ಯ ಆತ್ಮಜೀವಿಗಳ ಮೇಲೆ ಪ್ರಭಾವ ಬೀರುತ್ತಾಳೆ?
ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಯೆಹೋವನ ಸಂಘಟನೆಯಾದ್ಯಂತ ದೈವಿಕ ಅಧಿಕಾರವು ಮಾನ್ಯಮಾಡಲ್ಪಡುವುದನ್ನು ನೋಡುವುದರಲ್ಲಿ ದೇವದೂತರು ಆಸಕ್ತರಾಗಿದ್ದಾರೆ. ಈ ವಿಷಯದಲ್ಲಿ ಅಪರಿಪೂರ್ಣ ಮಾನವರ ಮಾದರಿಗಳಿಂದಲೂ ಅವರು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಎಷ್ಟೆಂದರೂ ಅವರು ಸಹ ಯೆಹೋವನ ಏರ್ಪಾಡಿಗೆ ಅಧೀನರಾಗಿರಬೇಕಾಗಿದೆ; ಗತಕಾಲದಲ್ಲಿ ಈ ಪರೀಕ್ಷೆಯಲ್ಲಿ ಅನೇಕ ಮಂದಿ ದೇವದೂತರು ವಿಫಲರಾದರು. (ಯೂದ 6) ಈಗ, ಒಬ್ಬ ಕ್ರೈಸ್ತ ಸ್ತ್ರೀಯು ಸಭೆಯಲ್ಲಿರುವ ಒಬ್ಬ ಸ್ನಾತ ಪುರುಷನಿಗಿಂತ ಹೆಚ್ಚು ಅನುಭವಸ್ಥಳು, ಹೆಚ್ಚು ಜ್ಞಾನವಂತಳು ಮತ್ತು ಹೆಚ್ಚು ಬುದ್ಧಿಶಾಲಿಯಾಗಿರುವುದಾದರೂ ಅವಳು ಮನಃಪೂರ್ವಕವಾಗಿ ಅವನ ಅಧಿಕಾರಕ್ಕೆ ಅಧೀನತೆ ತೋರಿಸುವುದನ್ನು ಅವರು ಗಮನಿಸಬಹುದು. ಕೆಲವು ವಿದ್ಯಮಾನಗಳಲ್ಲಿ, ಒಬ್ಬ ಸ್ತ್ರೀಯು ಸಮಯಾನಂತರ ಕ್ರಿಸ್ತನ ಜೊತೆ ಬಾಧ್ಯಸ್ಥರಲ್ಲಿ ಒಬ್ಬಳಾಗಲಿರುವ ಅಭಿಷಿಕ್ತ ಕ್ರೈಸ್ತಳಾಗಿದ್ದಾಳೆ. ಇಂಥ ಸ್ತ್ರೀಯು ಕಾಲಕ್ರಮೇಣ ದೇವದೂತರಿಗಿಂತಲೂ ಉನ್ನತವಾದ ಸ್ಥಾನದಲ್ಲಿ ಸೇವೆ ಸಲ್ಲಿಸುವವಳಾಗಿ ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳಲಿಕ್ಕಿದ್ದಾಳೆ. ಈಗ ದೇವದೂತರು ಅವಲೋಕಿಸಲು ಎಂಥ ಉತ್ತಮವಾದ ಮಾದರಿ! ಕೋಟ್ಯಂತರ ನಂಬಿಗಸ್ತ ದೇವದೂತರ ದೃಷ್ಟಿಯಲ್ಲಿ ತಮ್ಮ ನಿಷ್ಠೆ ಮತ್ತು ಅಧೀನ ನಡತೆಯ ಮೂಲಕ ನಮ್ರ ವಿಧೇಯತೆಯನ್ನು ತೋರಿಸುವ ಎಂಥ ಸುಯೋಗವು ಎಲ್ಲ ಸಹೋದರಿಯರಿಗಿದೆ!
^ ಪ್ಯಾರ. 2 ಅಸಾಮಾನ್ಯವಾದ ಪರಿಸ್ಥಿತಿಗಳು ಅಂದರೆ ಯಾವುದೋ ಅಸ್ವಸ್ಥತೆಯಿಂದಾಗಿ ವಿಶ್ವಾಸಿ ಗಂಡನಿಗೆ ಮಾತಾಡಲು ಸಾಧ್ಯವಿಲ್ಲದಿರುವಂಥ ಪರಿಸ್ಥಿತಿಯನ್ನು ಹೊರತುಪಡಿಸಿ ಒಬ್ಬ ಕ್ರೈಸ್ತ ಹೆಂಡತಿಯು ಅವನು ಉಪಸ್ಥಿತನಿರುವಾಗ ಸಾಮಾನ್ಯವಾಗಿ ಗಟ್ಟಿಯಾಗಿ ಪ್ರಾರ್ಥಿಸುವುದಿಲ್ಲ.
^ ಪ್ಯಾರ. 3 ಸಹೋದರಿಯೊಬ್ಬಳು ಮುಂಚೆಯೇ ಏರ್ಪಾಡು ಮಾಡಲ್ಪಟ್ಟ ಬೈಬಲ್ ಅಧ್ಯಯನವನ್ನು ದೀಕ್ಷಾಸ್ನಾನ ಪಡೆದಿಲ್ಲದ ಪ್ರಚಾರಕನೊಬ್ಬನ ಉಪಸ್ಥಿತಿಯಲ್ಲಿ ನಡೆಸುತ್ತಿರುವಾಗ ತಲೆಗೆ ಮುಸುಕು ಹಾಕಿಕೊಳ್ಳಬೇಕಾಗಿಲ್ಲ. ಆದರೆ ಆ ಪ್ರಚಾರಕ ಆಕೆಯ ಗಂಡನಾಗಿರುವಲ್ಲಿ ಆಕೆ ತಲೆಗೆ ಮುಸುಕು ಹಾಕಿಕೊಳ್ಳಬೇಕು.
^ ಪ್ಯಾರ. 1 ಹೆಚ್ಚಿನ ಮಾಹಿತಿಗಾಗಿ, ಕಾವಲಿನಬುರುಜು 2015 ಫೆಬ್ರವರಿ 15ರ ಪುಟ 30 ಮತ್ತು 2002 ಜುಲೈ 15ರ ಪುಟಗಳು 26-27ನ್ನು ಮತ್ತು 1977 ಫೆಬ್ರವರಿ 15ರ (ಇಂಗ್ಲಿಷ್) ಪತ್ರಿಕೆಯ ಪುಟಗಳು 125-128ನ್ನು ನೋಡಿ.